'ಜಿಯೋ ಫೈಬರ್' ವೆಲ್ಕಮ್ ಆಫರ್ ಪಡೆಯುವ ಮುನ್ನ ಈ ಶಾಕಿಂಗ್ ಸುದ್ದಿ ನೋಡಿ!

|

ಸೆಪ್ಟೆಂಬರ್ 5, 2019 ರಂದು ಅನಾವರಣಗೊಂಡಿರುವ ರಿಲಯನ್ಸ್ ''ಜಿಯೋ ಫೈಬರ್'' ಬ್ರಾಡ್‌ಬ್ಯಾಂಡ್ ಯೋಜನೆಗಳು ಪ್ರಾರಂಭವಾಗಿವೆ. 699 ರೂಪಾಯಿಗಳ 'ಜಿಯೋ ಫೈಬರ್''ಮೂಲ ಯೋಜನೆಕಂಚು 100Mbps ವೇಗದಲ್ಲಿ ಒಟ್ಟು 150GB ಡೇಟಾದಿಂದ ಆರಂಭವಾಗಿದ್ದರೆ, 8,499 ರೂಪಾಯಿಗಳ ಅತ್ಯಂತ ದುಬಾರಿ ಯೋಜನೆ ಟೈಟಾನಿಯಂ 1000Mbps ನಲ್ಲಿ 5000GB ಡೇಟಾವನ್ನು ನೀಡುತ್ತದೆ. ಇವುಗಳ ಮೊತ್ತದ ಡೇಡಾ ಬಳಕೆ ಮುಗಿದ ನಂತರ ಇವುಗಳ ಎಫ್‌ಯುಪಿ ಡೇಟಾ ವೇಗವನ್ನು 1 ಎಮ್‌ಬಿಪಿಎಸ್‌ಗೆ ಕಡಿತಮಾಡಲಾಗುತ್ತದೆ.

ವೆಲ್ಕಮ್ ಆಫರ್

ಮೂರು ವರ್ಷಗಳ ಹಿಂದೆ ಜಿಯೋ 4ಜಿ ನೆಟ್‌ವರ್ಕ್ ಅನ್ನು ಪ್ರಾರಂಭಿಸಿದಾಗ ಕಂಪೆನಿಯು ವೆಲ್ಕಮ್ ಆಫರ್ ರೀತಿಯ ಹೆಚ್ಚುವರಿ ವಿಶ್ವಾಸಗಳನ್ನು ನೀಡಿತ್ತು. ಇದೇ ರೀತಿಯಲ್ಲಿ ಜಿಯೋ ಫೈಬರ್ ಪರಿಚಯಾತ್ಮಕ ಯೋಜನೆಗಳೊಂದಿಗೆ ವೆಲ್ಕಮ್ ಆಫರ್ ಒಂದನ್ನು ನೀಡಿರುವುದನ್ನು ನಾವು ಕಾಣಬಹುದು. ಆದರೆ, ನೀವು ಈ 'ಜಿಯೋ ಫೈಬರ್ ವೆಲ್ಕಮ್ ಆಫರ್ ಅನ್ನು ಪಡೆದರೆ ಖಂಡಿತವಾಗಿಯೂ ಬೇಸರಪಟ್ಟುಕೊಳ್ಳಬಹುದು. ಏಕೆಂದರೆ, ವಾರ್ಷಿಕ ಯೋಜನೆಗಳಿಗೆ ಲಭ್ಯವಿರುವ ಹೆಚ್ಚುವರಿ ಡೇಟಾವು ಕೇವಲ ಮೊದಲ ಆರು ತಿಂಗಳವರೆಗೆ ಮಾತ್ರ ಲಭ್ಯವಿರರಲಿದೆ.

ಅನಗತ್ಯ ವಿಷಯಗಳು

ಹೌದು, ಈಗಾಗಲೇ ಸ್ವಲ್ಪ ದುಬಾರಿ ಎನಿಸಿರುವ ಜಿಯೋ ಫೈಬರ್ ಸೇವೆಯಲ್ಲಿ ಕೆಲವೊಂದು ಅನಗತ್ಯ ವಿಷಯಗಳು ಸಹ ಸೇರಿಕೊಂಡಿವೆ. ಜಿಯೋ ಫೈಬರ್ ನೀಡುತ್ತಿರುವ ಕಂಚು, ಬೆಳ್ಳಿ, ಚಿನ್ನ ಮತ್ತು ವಜ್ರ ಯೋಜನೆಗಳಿಗೆ ಲಭ್ಯವಿರುವ ಹೆಚ್ಚುವರಿ ಡೇಟಾವು ಮೊದಲ ಆರು ತಿಂಗಳವರೆಗೆ ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿ ಉಲ್ಲೇಖಿಸಿದೆ. ಕಂಪನಿಯು ಈ ಹೆಚ್ಚುವರಿ ಡೇಟಾ ಪ್ಯಾಕ್‌ಗಳನ್ನು ಪರಿಚಯಾತ್ಮಕ ಪ್ರಯೋಜನಗಳೆಂದು ಕರೆಯುತ್ತದೆ. ಹಾಗಾಗಿ, ಈ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಬೇಕಿರುವುದು ಕೂಡ ಅಷ್ಟೇ ಮುಖ್ಯ

ಕಂಚಿನ ಯೋಜನೆ

ಕಂಚಿನ ಯೋಜನೆಯಲ್ಲಿ (ಬ್ರೋನ್ಜ್) 699 ರೂ.ಗಳಿಗೆ (100 ಎಂಬಿಪಿಎಸ್) 100 ಜಿಬಿ+50 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. ಜಿಯೋ ಫೈಬರ್ ವೆಲ್ಕಮ್ ಆಫರ್‌ನಲ್ಲಿ ಕಂಚಿನ ಯೋಜನೆ ಬಳಕೆದಾರರಿಗೆ ಮೊದಲ ಆರು ತಿಂಗಳು 150 ಜಿಬಿ ಇಂಟರ್ನೆಟ್ ಸಿಗುತ್ತದೆ. ಅದರ ನಂತರ, ಹೈಸ್ಪೀಡ್ ಡೇಟಾ ಮಿತಿಯನ್ನು 100 ಜಿಬಿಗೆ ಇಳಿಸಲಾಗುತ್ತದೆ.

ಬೆಳ್ಳಿ ಯೋಜನೆ

ಬೆಳ್ಳಿ ಯೋಜನೆಯಲ್ಲಿ (ಸಿಲ್ವರ್) 849 ರೂ.ಗಳಿಗೆ (100 ಎಂಬಿಪಿಎಸ್) 200 ಜಿಬಿ + 200 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. . ಜಿಯೋ ಫೈಬರ್ ವೆಲ್ಕಮ್ ಆಫರ್‌ನಲ್ಲಿ ಬೆಳ್ಳಿ ಯೋಜನೆ ಚಂದಾದಾರರು 100Mbps ನಲ್ಲಿ 400GB ಹೈಸ್ಪೀಡ್ ಡೇಟಾವನ್ನು ಆನಂದಿಸಬಹುದು, ಏಳನೇ ತಿಂಗಳಿನಿಂದ ಡೇಟಾ ಮಿತಿಯನ್ನು 200GB ಗೆ ಇಳಿಸಲಾಗುತ್ತದೆ.

ಚಿನ್ನದ ಯೋಜನೆ

ಚಿನ್ನದ ಯೋಜನೆಯಲ್ಲಿ (ಗೋಲ್ಡ್) -1,299 ರೂ.ಗಳಿಗೆ (250 ಎಂಬಿಪಿಎಸ್) 500 ಜಿಬಿ +250 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. ಜಿಯೋ ಫೈಬರ್ ವೆಲ್ಕಮ್ ಆಫರ್‌ನಲ್ಲಿ ಚಿನ್ನದ ಯೋಜನೆ ಚಂದಾದಾರರು ಮೊದಲ ಆರು ತಿಂಗಳವರೆಗೆ 250 ಜಿಬಿಪಿಎಸ್ ವೇಗದಲ್ಲಿ 750 ಜಿಬಿ ಡೇಟಾವನ್ನು ಪಡೆಯುತ್ತಾರೆ ನಂತರ, ಡೇಟಾವನ್ನು 500 ಜಿಬಿಗೆ ಸೀಮಿತಗೊಳಿಸಲಾಗುತ್ತದೆ.

ವಜ್ರ ಯೋಜನೆ

ವಜ್ರ ಯೋಜನೆಯಲ್ಲಿ (ಡೈಮಂಡ್) -2,499 ರೂ.ಗಳಿಗೆ (500 ಎಂಬಿಪಿಎಸ್) 1250 ಜಿಬಿ +250 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. ವೆಲ್ಕಮ್ ಆಫರ್‌ನಲ್ಲಿ ವಜ್ರ ಯೋಜನೆ ಬಳಕೆದಾರರು ಮೊದಲ ಆರು ತಿಂಗಳವರೆಗೆ 500 ಎಂಬಿಪಿಎಸ್ ವೇಗದೊಂದಿಗೆ 1500 ಜಿಬಿ ಡೇಟಾದ ಲಾಭವನ್ನು ಪಡೆಯುತ್ತಾರೆ. ನಂತರ, ಡೇಟಾವನ್ನು 1250GB ಗೆ ಸೀಮಿತಗೊಳಿಸಲಾಗುತ್ತದೆ.

ಪ್ಲಾಟಿನಂ ಯೋಜನೆ

ಪ್ಲಾಟಿನಂ ಯೋಜನೆಯಲ್ಲಿ (ಪ್ಲಾಟಿನಮ್) - 3,999 ರೂ.ಗಳಿಗೆ (1 ಜಿಬಿಪಿಎಸ್) 2500 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. ಜಿಯೋ ಫೈಬರ್ ವೆಲ್ಕಮ್ ಆಫರ್‌ನಲ್ಲಿ ಪ್ಲಾಟಿನಂ ಯೋಜನೆ ಚಂದಾದಾರರು ಮೊದಲ ಆರು ತಿಂಗಳ ನಂತರವೂ 1 ಜಿಬಿಪಿಎಸ್ ಡೌನ್‌ಲೋಡ್ ವೇಗದೊಂದಿಗೆ 2500 ಜಿಬಿ ಡೇಟಾವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ.

ಟೈಟಾನಿಯಂ ಯೋಜನೆ

ಟೈಟಾನಿಯಂ ಯೋಜನೆಯಲ್ಲಿ - 8,499 ರೂ.ಗಳಿಗೆ (1 ಜಿಬಿಪಿಎಸ್) 5000 ಜಿಬಿ ಡೇಟಾ ಉಚಿತವಾಗಿ ಲಭ್ಯವಿದೆ. ಜಿಯೋ ಫೈಬರ್ ವೆಲ್ಕಮ್ ಆಫರ್ ಪರಿಚಯಾತ್ಮಕ ಪ್ರಯೋಜನಗಳನ್ನು ಪೂರ್ಣಗೊಳಿಸಿದ ನಂತರವೂ ಟೈಟಾನಿಯಂ ಯೋಜನೆ ಚಂದಾದಾರರು 5000 ಜಿಬಿ ವರೆಗೆ 1 ಜಿಬಿಪಿಎಸ್ ಹೈಸ್ಪೀಡ್ ಡೇಟಾವನ್ನು ಸ್ವೀಕರಿಸುತ್ತಾರೆ.

Best Mobiles in India

Read more about:
English summary
jio mentions that the additional data available for the Bronze, Silver, Gold, and Diamond plans will only available for the first six months. The company calls these additional data packs as introductory benefits. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X