ಹಬ್ಬದ ಪ್ರಯುಕ್ತ ಜಿಯೋದಿಂದ ಬಿಗ್‌ ಆಫರ್‌!..ಸಿಗುತ್ತೆ 6,500ರೂ. ಮೌಲ್ಯದ ಕೊಡುಗೆ!

|

ಹಬ್ಬದ ಪ್ರಯುಕ್ತ ರಿಲಯನ್ಸ್‌ ಜಿಯೋ ಇದೀಗ ಜಿಯೋಫೈಬರ್‌ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ. ಈ ಆಫರ್ ಅನ್ನು ಜಿಯೋಫೈಬರ್‌ (JioFiber) ಡಬಲ್ ಫೆಸ್ಟಿವಲ್ ಬೊನಾನ್ಜಾ ಆಫರ್ 2022 (Jio Fiber Double Bonanza offer) ಎಂದು ಹೇಳಿದೆ. ಇನ್ನು ಈ ಆಫರ್‌ನಲ್ಲಿ ಗ್ರಾಹಕರಿಗೆ ಸುಮಾರು 6,500ರೂ. ಮೌಲ್ಯದ ಕೊಡುಗೆಗಳು ಲಭ್ಯವಾಗಲಿವೆ.

ಜಿಯೋ ಡಬಲ್ ಫೆಸ್ಟಿವಲ್ ಬೊನಾನ್ಜಾ ಆಫರ್

ಹೌದು, ಜಿಯೋ ಟೆಲಿಕಾಂ ಜಿಯೋ ಡಬಲ್ ಫೆಸ್ಟಿವಲ್ ಬೊನಾನ್ಜಾ ಆಫರ್ 2022 ಆಫರ್‌ ಅನ್ನು ಪ್ರಾರಂಭಿಸಿದೆ. ಇಂದು ಶುರುವಾಗಿರುವ (ಅ.18) ಈ ಕೊಡುಗೆಯು ಹತ್ತು ದಿನಗಳ ಕಾಲ ಮುಂದುವರೆಯಲಿದ್ದು, ಇದೇ ಅಕ್ಟೋಬರ್‌ 28 ರಂದು ಮುಕ್ತಾಯವಾಗಲಿದೆ. ಪ್ರಮುಖ ಹೈಲೈಟ್‌ ಎಂದರೇ ಗ್ರಾಹಕರು 100% ವ್ಯಾಲ್ಯೂ ಬ್ಯಾಕ್‌ ಮತ್ತು 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಸೌಲಭ್ಯ ಪಡೆಯಲಿದ್ದಾರೆ.

ಫೈಬರ್ ಡಬಲ್ ಬೊನಾನ್ಜಾ ಆಫರ್‌

ಜಿಯೋ ಫೈಬರ್ ಡಬಲ್ ಬೊನಾನ್ಜಾ ಆಫರ್‌ನಲ್ಲಿ ಎರಡು ಪ್ಲಾನ್‌ಗಳು ಒಳಗೊಂಡಿದ್ದು, ಅವುಗಳು ಕ್ರಮವಾಗಿ 599ರೂ. ಮತ್ತು 899ರೂ. ಆಗಿವೆ. ಇನ್ನು ಈ ಎರಡು ಪ್ಲ್ಯಾನ್‌ಗಳು ಆರು ತಿಂಗಳ ಯೋಜನೆಗಳಾಗಿದ್ದು, ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಪ್ರತಿ ತಿಂಗಳು ರೀಚಾರ್ಜ್ ಮಾಡಿಸಬೇಕಿರುತ್ತದೆ. ಜಿಯೋ ಈ ಯೋಜನೆಗಳಲ್ಲಿ ಬಳಕೆದಾರರಿಗೆ 100% ಮೌಲ್ಯವನ್ನು ಮತ್ತು 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಒದಗಿಸುತ್ತಿದೆ ಎಂದು ಹೇಳಿದೆ.

ಜಿಯೋ ಫೈಬರ್ 599ರೂ. ಪ್ಲಾನ್‌ ಪ್ರಯೋಜನ

ಜಿಯೋ ಫೈಬರ್ 599ರೂ. ಪ್ಲಾನ್‌ ಪ್ರಯೋಜನ

ಜಿಯೋದ ಈ ಯೋಜನೆಯಲ್ಲಿ ಗ್ರಾಹಕರು ಆರು ತಿಂಗಳವರೆಗೆ 599ರೂ. ಪ್ಲಾನ್‌ಗೆ ಚಂದಾದಾರರಾಗಬೇಕಾಗುತ್ತದೆ. ಆರು ತಿಂಗಳಿಗೆ ಒಟ್ಟಾರೇ 4,241ರೂ. ಪಾವತಿಸಬೇಕಾಗುತ್ತದೆ. ಇನ್ನು ಈ ಯೋಜನೆಯು 30Mbps ವೇಗವನ್ನು ನೀಡುತ್ತದೆ ಜೊತೆಗೆ 14 OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಮತ್ತು 550+ ಬೇಡಿಕೆಯ ಚಾನೆಲ್‌ಗಳನ್ನು ನೀಡುತ್ತದೆ. ಹಾಗೆಯೇ ಕೊಡುಗೆಯಲ್ಲಿ 4,500 ರೂ. ಗಳ ಮೌಲ್ಯದ ವೋಚರ್‌ಗಳು ಲಭ್ಯವಾಗಲಿವೆ.

ವೋಚರ್‌ ವಿವರ

ವೋಚರ್‌ ವಿವರ

ಅಜಿಯೋ (AJIO) 1,000ರೂ. ವೋಚರ್
ರಿಲಯನ್ಸ್ ಡಿಜಿಟಲ್ 1,000ರೂ. ವೋಚರ್
NetMeds 1,000ರೂ. ವೋಚರ್
IXIGO 1,500ರೂ. ವೋಚರ್

ಜಿಯೋ ಫೈಬರ್ 899ರೂ. ಪ್ಲಾನ್‌ ಪ್ರಯೋಜನ

ಜಿಯೋ ಫೈಬರ್ 899ರೂ. ಪ್ಲಾನ್‌ ಪ್ರಯೋಜನ

ಜಿಯೋದ ಈ ಯೋಜನೆಯಲ್ಲಿ ಗ್ರಾಹಕರು ಆರು ತಿಂಗಳವರೆಗೆ 899ರೂ. ಪ್ಲಾನ್‌ಗೆ ಚಂದಾದಾರರಾಗಬೇಕಾಗುತ್ತದೆ. ಆರು ತಿಂಗಳಿಗೆ ಒಟ್ಟಾರೇ 6,365ರೂ. ಪಾವತಿಸಬೇಕಾಗುತ್ತದೆ. ಇನ್ನು ಈ ಯೋಜನೆಯು 100Mbps ವೇಗವನ್ನು ನೀಡುತ್ತದೆ ಜೊತೆಗೆ 14 OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಮತ್ತು 550+ ಬೇಡಿಕೆಯ ಚಾನೆಲ್‌ಗಳನ್ನು ನೀಡುತ್ತದೆ. ಹಾಗೆಯೇ ಕೊಡುಗೆಯಲ್ಲಿ 6,500ರೂ. ಗಳ ಮೌಲ್ಯದ ವೋಚರ್‌ಗಳು ಲಭ್ಯವಾಗಲಿವೆ.

ವೋಚರ್‌ ವಿವರ

ವೋಚರ್‌ ವಿವರ

ಅಜಿಯೋ (AJIO) 2,000 ರೂ. ವೋಚರ್
ರಿಲಯನ್ಸ್ ಡಿಜಿಟಲ್ 1,000ರೂ. ವೋಚರ್
NetMeds 500ರೂ. ವೋಚರ್
IXIGO 3,000ರೂ. ವೋಚರ್

ಕೆಲವು ಪ್ರಮುಖ ಜಿಯೋ ಫೈಬರ್ ಯೋಜನೆಗಳು:

ಕೆಲವು ಪ್ರಮುಖ ಜಿಯೋ ಫೈಬರ್ ಯೋಜನೆಗಳು:

ಜಿಯೋ ಫೈಬರ್‌ 399ರೂ. ಪ್ಲಾನ್‌
ಜಿಯೋ ಫೈಬರ್‌ 399ರೂ. ಪ್ಲಾನ್‌ 30mbps ವೇಗದ ಅನಿಯಮಿತ ಇಂಟರ್‌ನೆಟ್ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಹೆಚ್ಚುವರಿ ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಜೊತೆಗೆ ಗ್ರಾಹಕರು ತಿಂಗಳಿಗೆ 200ರೂ. ಹೆಚ್ಚುವರಿ ಪಾವತಿಸಿ ಮಾಡುವ ಮೂಲಕ ಎಂಟರ್‌ಟೈನ್‌ಮೆಂಟ್‌ ಪ್ಲಾನ್‌ನಲ್ಲಿ 14 ಅಪ್ಲಿಕೇಶನ್‌ಗಳಿಗೆ ಆಕ್ಸಸ್‌ ಪಡೆದುಕೊಳ್ಳಬಹುದಾಗಿದೆ.

ಜಿಯೋ ಫೈಬರ್‌ 699ರೂ. ಪ್ಲಾನ್‌

ಜಿಯೋ ಫೈಬರ್‌ 699ರೂ. ಪ್ಲಾನ್‌

ಜಿಯೋ ಫೈಬರ್‌ 699ರೂ. ಪ್ಲಾನ್‌ ನಿಮಗೆ 100mbps ವೇಗದ ಅನಿಯಮಿತ ಇಂಟರ್ನೆಟ್ ಪ್ರಯೋಜನ ನೀಡಲಿದೆ. ಹಾಗೆಯೇ ಈ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ, ಬಳಕೆದಾರರು ತಿಂಗಳಿಗೆ 100ರೂ. ಪಾವತಿಸುವ ಮೂಲಕ 6 ಮನರಂಜನಾ ಅಪ್ಲಿಕೇಶನ್‌ಗಳಿಗೆ ಮತ್ತು ಪ್ರತಿ ತಿಂಗಳು 200ರೂ. ಹೆಚ್ಚುವರಿ ಪಾವತಿಸುವ ಮೂಲಕ 14 ಅಪ್ಲಿಕೇಶನ್‌ಗಳಿಗೆ ಆಕ್ಸಸ್‌ ಪಡೆಯಬಹುದಾಗಿದೆ.

ಜಿಯೋ ಫೈಬರ್‌ 999ರೂ. ಪ್ಲಾನ್‌

ಜಿಯೋ ಫೈಬರ್‌ 999ರೂ. ಪ್ಲಾನ್‌

ಜಿಯೋ ಫೈಬರ್‌ 999ರೂ.ಪ್ಲಾನ್‌ನಲ್ಲಿ ನೀವು 150mbps ವೇಗದ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಪ್ಲಾನ್‌ ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ಕಟೆಂಟ್‌ಗಳಿಗೆ ಆಕ್ಸಸ್‌ ನೀಡುತ್ತದೆ.

Best Mobiles in India

English summary
Jio Fiber Double Festival Bonanza Offer 2022: Free vouchers worth Rs 6,500.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X