ಅಗ್ರಸ್ಥಾನ ಕಾಯ್ದುಕೊಂಡ ಜಿಯೋ! ವಿ ಟೆಲಿಕಾಂ ಕಳೆದುಕೊಂಡಿದ್ದು ಎಷ್ಟು?

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇವುಗಳ ನಡುವೆ ಪರಸ್ಪರ ಪೈಪೋಟಿ ನಡೆಯುತ್ತಿದ್ದು, ಇದರಲ್ಲಿ ಜಿಯೋ ಟೆಲಿಕಾಂ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಆಕರ್ಷಕ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ಇನ್ನು ಇದೇ ಸಮಯದಲ್ಲಿ ಏರ್‌ಟೆಲ್‌ ಜಿಯೋ ಟೆಲಿಕಾಂಗೆ ಪೈಪೋಟಿ ನೀಡುತ್ತಾ ಬಂದಿದೆ. ಇದೀಗ ಏಪ್ರಿಲ್‌ ತಿಂಗಳಿನಲ್ಲಿ ಯಾವ ಟೆಲಿಕಾಂ ಅಗ್ರಸ್ಥಾನ ಪಡೆದಿದೆ ಎನ್ನುವ ವರದಿ ಬಹಿರಂಗವಾಗಿದೆ.

ಅಥಾರಿಟಿ

ಹೌದು, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ ಏಪ್ರಿಲ್‌ ತಿಂಗಳಿನಲ್ಲಿ ಜಿಯೋ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದೇ ಅವಧಿಯಲ್ಲಿ ಹೊಸದಾಗಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಜಿಯೋ ಗಳಿಸಿದೆ ಎನ್ನಲಾಗಿದೆ. ಆದರೆ ಭಾರ್ತಿ ಏರ್‌ಟೆಲ್ 8.1 ಲಕ್ಷ ಬಳಕೆದಾರರನ್ನು ಸೇರಿಸಿದೆ ಎಂದು ಟ್ರಾಯ್‌ ಡೇಟಾ ತಿಳಿಸಿದೆ. ಆದರೆ ಮೂರನೇ ಸ್ಥಾನದಲ್ಲಿರುವ ವೊಡಾಫೋನ್ ಐಡಿಯಾ ಏಪ್ರಿಲ್ 2022 ರಲ್ಲಿ ಸುಮಾರು 15.7 ಲಕ್ಷ ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಹಾಗಾದ್ರೆ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಕಾಂ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಡೇಟಾ ಪ್ರಕಾರ ಜಿಯೋ ಟೆಲಿಕಾಂ ಏಪ್ರಿಲ್‌ ತಿಂಗಳಿನಲ್ಲಿ 16.8 ಲಕ್ಷ ಬಳಕೆದಾರರನ್ನು ಹೊಸದಾಗಿ ಪಡೆದುಕೊಂಡಿದೆ. ಇದರಿಂದ ಮೊಬೈಲ್ ಬಳಕೆದಾರರ ಸಂಖ್ಯೆಯನ್ನು 40.5 ಕೋಟಿಗೆ ಏರಿಕೆ ಮಾಡಿಕೊಂಡಿದೆ. ಆದರೆ ಭಾರ್ತಿ ಏರ್‌ಟೆಲ್‌ ಟೆಲಿಕಾಂ ಏಪ್ರಿಲ್‌ ಅವಧಿಯಲ್ಲಿ 8.1 ಲಕ್ಷ ಮೊಬೈಲ್ ಚಂದಾದಾರರನ್ನು ಹೊಸದಾಗಿ ಪಡೆದುಕೊಂಡಿದ್ದು, ಏಪ್ರಿಲ್‌ನಲ್ಲಿ ನಿವ್ವಳ ಲಾಭ ಗಳಿಸಿದೆ. ಇದರಿಂದ ಏರ್‌ಟೆಲ್‌ನ ಮೊಬೈಲ್ ಚಂದಾದಾರರ ಸಂಖ್ಯೆ 36.11 ಕೋಟಿಗೆ ಏರಿದೆ.

ಏರ್‌ಟೆಲ್‌

ಇನ್ನು ಏರ್‌ಟೆಲ್‌ ಮತ್ತು ಜಿಯೋ ಲಾಭ ಗಳಿಸಿದರೆ ವಿ ಟೆಲಿಕಾಂ ಮತ್ತೆ ನಷ್ಟದ ಹಾದಿಯನ್ನು ಹಿಡಿದಿದೆ. ಏಪ್ರಿಲ್‌ ತಿಂಗಳಿನಲ್ಲಿ 15.68 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಇದರಿಂದ ಅದರ ಒಟ್ಟು ಬಳಕೆದಾರರ ಸಂಖ್ಯೆ 25.9 ಕೋಟಿಗೆ ಕುಸಿದಿದೆ. ಒಟ್ಟಾರೆಯಾಗಿ, ಏಪ್ರಿಲ್ 2022 ರ ಅಂತ್ಯದ ವೇಳೆಗೆ ಭಾರತದ ಒಟ್ಟು ವಾಯರ್‌ಲೆಸ್ ಚಂದಾದಾರರ ಸಂಖ್ಯೆ 114.3 ಕೋಟಿಗೆ ಏರಿದೆ ಎಂದು TRAI ನ ಡೇಟಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಏಪ್ರಿಲ್‌ ತಿಂಗಳ ಅಂತ್ಯದ ವೇಳೆಗೆ ದೇಶದ ನಗರ ಪ್ರದೇಶಗಳಲ್ಲಿ ವಾಯರ್‌ಲೆಸ್ ಚಂದಾದಾರಿಕೆಗಳು 62.4 ಕೋಟಿಗೆ ಇಳಿದಿದ್ದರೆ, ಗ್ರಾಮೀಣ ಮಾರುಕಟ್ಟೆಗಳಲ್ಲಿನ ಚಂದಾದಾರಿಕೆಗಳು 51.8 ಕೋಟಿಗೆ ತಲುಪಿದೆ.

ಚಂದಾದಾರಿಕೆಯ

ಸದ್ಯ ನಗರ ಚಂದಾದಾರಿಕೆಯ ಮಾಸಿಕ ಬೆಳವಣಿಗೆ ದರ -0.07% ಇದ್ದರೆ, ಗ್ರಾಮೀಣ ವಾಯರ್‌ಲೆಸ್ 0.20% ಹೊಂದಿರುವುದಾಗಿ TRAIನ ವರದಿ ಹೇಳಿದೆ. ಅಂದರೆ ಮಾಸಿಕ ವರದಿಯ ಆಧಾರದ ಮೇಲೆ, ಒಟ್ಟು ಬ್ರಾಡ್‌ಬ್ಯಾಂಡ್ ಚಂದಾದಾರರು ಏಪ್ರಿಲ್ ಅಂತ್ಯದ ವೇಳೆಗೆ 78.87 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಬಹುದಾಗಿದೆ. ಈ ಸೇವಾ ಪೂರೈಕೆದಾರರಲ್ಲಿ ರಿಲಯನ್ಸ್ ಜಿಯೋ (41.1 ಕೋಟಿ), ಭಾರ್ತಿ ಏರ್‌ಟೆಲ್ (21.5 ಕೋಟಿ), ಮತ್ತು ವೊಡಾಫೋನ್ ಐಡಿಯಾ (12.2 ಕೋಟಿ) ಹೊಂದಿವೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಜಿಯೋ ಟೆಲಿಕಾಂ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದ್ದರೆ ಏರ್‌ಟೆಲ್‌ ಅದರ ಹಿಂದೆ ಸಾಗುತ್ತಿದೆ. ಆದರೆ ವಿ ಟೆಲಿಕಾಂ ಮಾತ್ರ ಪ್ರತಿ ತಿಂಗಳು ತನ್ನ ಬಳಕೆದಾರರ ಸಂಖ್ಯೆಯನ್ನು ಕಳೆದುಕೊಳ್ಳುತ್ತಾ ಸಾಗಿದೆ.

ಜಿಯೋ

ಇದಲ್ಲದೆ ಜಿಯೋ ಟೆಲಿಕಾಂ ಏಪ್ರಿಲ್‌ ತಿಂಗಳಿನಲ್ಲಿ 4G ಡೌನ್‌ಲೋಡ್ ವೇಗದಲ್ಲಿ ಕೂಡ ಮುಂಚೂಣಿಯಲ್ಲಿದೆ. 2 Mbps ಜಿಗಿತದೊಂದಿಗೆ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗ 23.1 Mbps ಆಗಿದೆ. ಆದರೆ ಇದೇ ಸಮಯದಲ್ಲಿ ವಿ ಟೆಲಿಕಾಂನ 4G ಡೌನ್‌ಲೋಡ್ ವೇಗವು ಸತತ ಎರಡನೇ ತಿಂಗಳು ಕಡಿಮೆಯಾಗಿದೆ ಎಂದು ಡೇಟಾ ತೋರಿಸುತ್ತದೆ. ಫೆಬ್ರವರಿಯಲ್ಲಿ 18.4 Mbps ಡೌನ್‌ಲೋಡ್ ವೇಗ ಹೊಂದಿದ್ದ ವಿ ಟೆಲಿಕಾಂ ಏಪ್ರಿಲ್‌ನಲ್ಲಿ 17.7 Mbps ಗೆ ಇಳಿದಿದೆ.

ವಿ ಟೆಲಿಕಾಂ

ವಿ ಟೆಲಿಕಾಂ ಜೊತೆಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ವೇಗವು 5.9 Mbps ಗೆ ಇಳಿದಿದೆ. ಆದರೆ ಮಾರ್ಚ್‌ನಲ್ಲಿ, ಏರ್‌ಟೆಲ್‌ನ ಡೌನ್‌ಲೋಡ್ ವೇಗವು ಏಪ್ರಿಲ್‌ನಲ್ಲಿ ವೇಗವು 14.1 ಎಂಬಿಪಿಎಸ್‌ಗೆ ಏರಿಕೆಯಾಗಿದ್ದರೂ, ಫೆಬ್ರವರಿಯಲ್ಲಿ ಅದರ 15 Mbps ವೇಗಕ್ಕೆ ಹೋಲಿಸಿದರೆ ಇನ್ನು ಹಿಂದುಳಿದಿದೆ ಎಂದು ಹೇಳಲಾಗಿದೆ. ಸದ್ಯ ಟೆಲಿಕಾಂ ವಲಯದಲ್;ಲಿ ಪ್ರತಿಭಾರಿಯಂತೆ ಈ ಭಾರಿಯೂ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಏರ್‌ಟೆಲ್ ಮತ್ತು ವಿ ಅನ್ನು ಹಿಂದಿಕ್ಕಿದೆ. ರಿಲಯನ್ಸ್ ಜಿಯೋ ಕಳೆದ ಹಲವಾರು ವರ್ಷಗಳಿಂದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ ಸತತವಾಗಿ ಮೊದಲ ಸ್ಥಾನವನ್ನು ಹೊಂದಿದೆ. ವಿ ಇಂಡಿಯಾ ಎರಡನೇ ಸ್ಥಾನವನ್ನು ಮುಂದುವರೆಸಿದೆ ಮತ್ತು ಭಾರ್ತಿ ಏರ್‌ಟೆಲ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

ವೇಗದೊಂದಿಗೆ

ಇನ್ನು ವಿ ಇಂಡಿಯಾ 8.2 Mbps ನೊಂದಿಗೆ ಸರಾಸರಿ 4G ಅಪ್‌ಲೋಡ್ ವೇಗದೊಂದಿಗೆ ಚಾರ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ರಿಲಯನ್ಸ್ ಜಿಯೋ ತನ್ನ ಅಪ್‌ಲೋಡ್ ವೇಗ 7.6 ಎಂಬಿಪಿಎಸ್‌ನೊಂದಿಗೆ ಎರಡನೇ ಸಂಖ್ಯೆಯನ್ನು ಪಡೆದಿದೆ. ರಿಲಯನ್ಸ್ ಜಿಯೋ ಮಾತ್ರ ಅಪ್‌ಲೋಡ್ ವೇಗವನ್ನು ಹೆಚ್ಚಿಸಿಕೊಂಡ ಕಂಪನಿಯಾಗಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ವಿ ಇಂಡಿಯಾ ಮತ್ತು ಏರ್‌ಟೆಲ್‌ ಅಪ್‌ಲೋಡ್ ವೇಗದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ಸಮಯದಲ್ಲಿ, ಬಿಎಸ್‌ಎನ್‌ಎಲ್‌ ಅಪ್‌ಲೋಡ್ ವೇಗವು 5 Mbps ಗೆ ಇಳಿದಿದೆ. ಭಾರ್ತಿ ಏರ್‌ಟೆಲ್ ಸರಾಸರಿ 4G ಅಪ್‌ಲೋಡ್ ವೇಗದಲ್ಲಿ ಮೂರನೇ ಸ್ಥಾನದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸರಾಸರಿ 6.1 Mbps ಅಪ್‌ಲೋಡ್ ವೇಗವನ್ನು ದಾಖಲಿಸಿದೆ.

Best Mobiles in India

English summary
Jio gets 16.8 lakh new subscribers in April 2022, Airtel also adds over 8 lakh subscribers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X