ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ 1.5ಜಿಬಿ ಡಾಟಾ ಪ್ರತಿದಿನ ಕೇವಲ 299 ರುಪಾಯಿಗೆ ಲಭ್ಯ

|

ಮೊಬೈಲ್ ಡಾಟಾ ಪ್ಲಾನ್ ಗಳ ಬೆಲೆಯು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಇದಕ್ಕಾಗಿ ನಾವು ಖಂಡಿತ ರಿಲಯನ್ಸ್ ಜಿಯೋಗೆ ಧನ್ಯವಾದ ತಿಳಿಸಲೇ ಬೇಕು. ಹಾಗಾಗಿ ವಯರ್ಡ್ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೇವೆ- ಅದುವೇ ಜಿಯೋ ಗಿಗಾಫೈಬರ್ ಗಾಗಿ ದೇಶದ ಹಲವು ಮಂದಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಕಡಿಮೆ ಬೆಲೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆ:

ಕಡಿಮೆ ಬೆಲೆಯಲ್ಲಿ ಬ್ರಾಡ್ ಬ್ಯಾಂಡ್ ಸೇವೆ:

ಇದೇ ಕಾರಣಕ್ಕೆ ಸದ್ಯ ಲಭ್ಯವಿರುವ ಇತರೆ ಬ್ರಾಡ್ ಬ್ಯಾಂಡ್ ಪ್ರೊವೈಡರ್ ಗಳಾದ ಬಿಎಸ್ಎನ್ಎಲ್, ಹ್ಯಾಥ್ ವೇ ಮತ್ತು ಏರ್ ಟೆಲ್ ತಮ್ಮ ಗ್ರಾಹಕರನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ತಮ್ಮ ಪ್ಲಾನ್ ಗಳಲ್ಲಿ ಆಗಾಗ ಬದಲಾವಣೆಯನ್ನು ಮಾಡುತ್ತಲೇ ಇದ್ದಾರೆ. ಬಿಎಸ್ಎನ್ಎಲ್ ಬಗ್ಗೆಯೇ ಹೇಳುವುದಾದರೆ, ಬ್ರಾಡ್ ಬ್ಯಾಂಡ್ ಸೇವೆಯ ಆರಂಭಿಕ ಬೆಲೆ ರುಪಾಯಿ 299 ರಿಂದ ಶುರುವಾಗಿ ರುಪಾಯಿ 2,295 ರುಪಾಯಿವರೆಗೂ ಲಭ್ಯವಿದೆ.ತನ್ನ ಡೈಲಿ ಡಾಟಾ ಲಿಮಿಟ್ ನ ಜೊತೆಗೆ ಇದೀಗ ಬಿಎಸ್ಎನ್ಎಲ್ ಅನಿಯಮಿತ ಡೌನ್ ಲೋಡ್ ನ್ನು ಕೂಡ ಆಫರ್ ಮಾಡುತ್ತಿದೆ.

ಬಿಎಸ್ಎನ್ಎಲ್ ರೂ.299 ಬ್ರಾಡ್ ಬ್ಯಾಂಡ್ ಪ್ಲಾನ್:

ಬಿಎಸ್ಎನ್ಎಲ್ ರೂ.299 ಬ್ರಾಡ್ ಬ್ಯಾಂಡ್ ಪ್ಲಾನ್:

Rs. 299ರ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ 1.5ಜಿಬಿ ಡಾಟಾ ಪ್ರತಿದಿನ ಗರಿಷ್ಟ 8Mbps ವೇಗದಲ್ಲಿ ನೀಡುತ್ತದೆ.ಡಾಟಾ ಲಿಮಿಟ್ ಮುಗಿದ ನಂತರ ಬ್ರಾಡ್ ಬ್ಯಾಂಡ್ ಬಳಕೆದಾರರು ಅನಿಯಮಿತ ಡೌನ್ ಲೋಡ್ ನ್ನು ಎಂಜಾಯ್ ಮಾಡಬಹುದು ಆದರೆ ಅದರ ಡಾಟಾ ಸ್ಪೀಡ್ 1Mbpsಗೆ ಇಳಿಕೆಯಾಗಿರುತ್ತದೆ.

ಅಂಡಮಾನ್ ಮತ್ತು ನಿಕೋಬಾರ್ ಹೊರತುಪಡಿಸಿದರೆ ಉಳಿದೆಲ್ಲ ಬಿಎಸ್ಎನ್ಎಲ್ ಸರ್ಕಲ್ ನಲ್ಲಿ ಈ ಬ್ರಾಡ್ ಬ್ಯಾಂಡ್ ಸೇವೆಯ ಪ್ಲಾನ್ ಲಭ್ಯವಿರುತ್ತದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಒಂದು ಇ-ಮೇಲ್ ಐಡಿ ಜೊತೆಗೆ 1 ಜಿಬಿ ಸ್ಟೋರೇಜ್ ಜಾಗ ಕೂಡ ಲಭ್ಯವಾಗುತ್ತದೆ.

ಈ ಬ್ರಾಡ್ ಬ್ಯಾಂಡ್ ಪ್ಲಾನ್ ಅನಿಯಮಿತ ವಾಯ್ಸ್ ಕರೆಗಳು ಅದರಲ್ಲಿ ಸ್ಥಳೀಯ ಮತ್ತು ನ್ಯಾಷನಲ್ ರೋಮಿಂಗ್ ಬಿಎಸ್ಎನ್ಎಲ್ ನೆಟ್ ವರ್ಕ್ ನ ಕರೆಗಳು ಕೂಡ ಲಭ್ಯವಿರುತ್ತದೆ. ಭಾನುವಾರ ಮತ್ತು ಪ್ರತಿದಿನ ರಾತ್ರಿ 10.30 ರಿಂದ ಬೆಳಿಗ್ಗೆ 6 ಘಂಟೆಯ ವರೆಗೆ ಯಾವುದೇ ನೆಟ್ ವರ್ಕ್ ಗೆ ಉಚಿತವಾಗಿ ಅನಿಯಮಿತ ಕರೆಗಳ ಬೆನಿಫಿಟ್ ಕೂಡ ಇದರಲ್ಲಿ ಲಭ್ಯವಾಗುತ್ತದೆ.

ಇತರೆ ನೆಟ್ ವರ್ಕ್ ಗಳಿಗೆ ವಾಯ್ಸ್ ಕರೆಗಳನ್ನು ಗಮನಿಸಿದಾಗ ಉಚಿತ ವಾಯ್ಸ್ ಕರೆಗಳ ಸೌಲಭ್ಯವು 300 ನಿಮಿಷಕ್ಕೆ ಸೀಮಿತವಾಗಿರುತ್ತದೆ.

299 ರುಪಾಯಿಯನ್ನು ಈ ಪ್ಲಾನ್ ಮೂಲಕ ಉಳಿತಾಯ ಮಾಡಿ:

299 ರುಪಾಯಿಯನ್ನು ಈ ಪ್ಲಾನ್ ಮೂಲಕ ಉಳಿತಾಯ ಮಾಡಿ:

ವಾರ್ಷಿಕವಾಗಿ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಚಂದಾದಾರಿಕೆ ಪಡೆದಾಗ ನಿಮಗೆ ರುಪಾಯಿ 299 ರ ರಿಯಾಯಿತಿ ಲಭ್ಯವಾಗುತ್ತದೆ ಮತ್ತು ನೀವು ಕೇವಲ Rs. 3,289 ನ್ನು ಪಾವತಿಸಬೇಕಾಗುತ್ತದೆಯೇ ಹೊರತು Rs. 3,588 ಅಲ್ಲ. ಅಂದರೆ ನೀವು ಕೇವಲ 11 ತಿಂಗಳ ಚಂದಾದಾರಿಕೆಗೆ ಪಾವತಿ ಮಾಡಿರುತ್ತೀರಿ ಮತ್ತು ಒಂದು ತಿಂಗಳ ಸೇವೆಯು ನಿಮಗೆ ಉಚಿತವಾಗಿ ಲಭ್ಯವಾಗುತ್ತದೆ.

ಇತರೆ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಪ್ಲಾನ್ ಗಳು

ಇತರೆ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಪ್ಲಾನ್ ಗಳು

ಒಂದು ವೇಳೆ ನಿಮಗೆ ಹೆಚ್ಚು ಡಾಟಾದ ಅಗತ್ಯತೆ ಇದ್ದಲ್ಲಿ, ನೀವು ಸ್ವಲ್ಪ ಅಧಿಕವಾಗಿರುವ ಪ್ಲಾನ್ ಗಳಿಗೆ ಮೊರೆ ಹೋಗಬಹುದು ಅದರಲ್ಲಿ Rs. 549 ಪ್ಲಾನ್ ಇದ್ದು ದಿನಕ್ಕೆ 3ಜಿಬಿ ಡಾಟಾವನ್ನು ಉಚಿವಾಗಿ ಇದು ನೀಡುತ್ತದೆ.ಹೊಸದಾಗಿ ಪರಿಚಯಿಸಿರುವ Rs. 675 ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ಪ್ರತಿದಿನ ನಿಮಗೆ 5ಜಿಬಿ ಡಾಟಾ ಲಭ್ಯವಾಗುತ್ತದೆ. ಇನ್ನು Rs. 845 ಪ್ಲಾನ್ ನಲ್ಲಿ 10ಜಿಬಿ ಡಾಟಾ ಪ್ರತಿದಿನ ಉಚಿತವಾಗಿ ಲಭ್ಯವಾಗುತ್ತದೆ. ಹೀಗೆ ಪ್ಲಾನ್ ಗಳ ದರದಲ್ಲಿ ಏರಿಕೆಯಾಗುತ್ತಾ ಸಾಗಿದಂತೆ ಲಭ್ಯವಾಗುವ ಡಾಟಾವು ಅಧಿಕವಿರುತ್ತದೆ. ಇತ್ತೀಚೆಗೆ ಕಂಪೆನಿಯು ಹೊಸದಾಗಿ ರುಪಾಯಿ 1,495 ರುಪಾಯಿಯ ಬ್ರಾಡ್ ಬ್ಯಾಂಡ್ ಪ್ಲಾನ್ ನ್ನು ಕೂಡ ಪರಿಚಯಿಸಿದ್ದು ಇದರಲ್ಲಿ 25ಜಿಬಿ ಡಾಟಾ ಪ್ರತಿದಿನ ಲಭ್ಯವಾಗುತ್ತದೆ. ಇನ್ನು ಅಧಿಕ ಮೊತ್ತದ ಅಂದರೆ 2,295 ರುಪಾಯಿ ಬ್ರಾಡ್ ಬ್ಯಾಂಡ್ ಸೇವೆಯಲ್ಲಿ 35ಜಿಬಿ ಡಾಟಾವು 24Mbps ಸ್ಪೀಡ್ ನಲ್ಲಿ ಪ್ರತಿದಿನ ಸಿಗುತ್ತದೆ. ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.

Best Mobiles in India

Read more about:
English summary
Jio GigaFiber effect: BSNL offers 1.5GB data per day with Rs. 299 broadband plan

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X