ಇಡೀ ದೇಶವೇ ಎದುರುನೋಡುತ್ತಿರುವ 'ಜಿಯೋ ಗಿಗಾಫೈಬರ್' ರಿಲೀಸ್ ಡೇಟ್ ಫಿಕ್ಸ್!

|

ಇಡೀ ಭಾರತವೇ ಎದುರುನೋಡುತ್ತಿರುವ ಜಿಯೋ ಗಿಗಾಫೈಬರ್ ಸೇವೆಗಳು ಇದೇ ಆಗಸ್ಟ್ 12ರಂದು ಆರಂಭವಾಗಲಿದೆ ಎಂಬ ಸಿಹಿಸುದ್ದಿ ಹೊರಬಿದ್ದಿದೆ. ಆಗಸ್ಟ್ 12ರಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಜಿಯೋ ಗಿಗಾಫೈಬರ್ ಸೇವೆಗಳು ಕೂಡ ಆರಂಭವಾಗಲಿದೆ ಮತ್ತು ಜಿಯೋ ಪ್ರಸ್ತುತ ಗಿಗಾಫೈಬರ್ ಬ್ರಾಡ್‌ಬ್ಯಾಂಡ್ ಅನ್ನು ಪರಿಶೀಲನಾ ಬಳಕೆಗೆ ಉಚಿತವಾಗಿ ನೀಡುತ್ತಿದೆ ಎಂದು ಪ್ರಮುಖ ಮಾಧ್ಯಮ ವರದಿಗಳು ತಿಳಿಸಿವೆ.

ಇಡೀ ದೇಶವೇ ಎದುರುನೋಡುತ್ತಿರುವ 'ಜಿಯೋ ಗಿಗಾಫೈಬರ್' ರಿಲೀಸ್ ಡೇಟ್ ಫಿಕ್ಸ್!

ಸುಮಾರು ಒಂದು ವರ್ಷದ ಹಿಂದೆ, ಗಿಗಾ ಫೈಬರ್‌ನೊಂದಿಗೆ ಭಾರತದ ಬ್ರಾಡ್‌ಬ್ಯಾಂಡ್ ಮತ್ತು ಡಿಟಿಎಚ್ ಟಿವಿ ಕ್ಷೇತ್ರಗಳಿಗೆ ತನ್ನ ಪ್ರವೇಶವನ್ನು ರಿಲಯನ್ಸ್ ಜಿಯೋ ಘೋಷಿಸಿತು. ಅಂದಿನಿಂದ, ಈ ಸೇವೆಯು ಪೂರ್ವವೀಕ್ಷಣೆ ಪ್ರಸ್ತಾಪದಡಿಯಲ್ಲಿ ವಿವಿಧ ನಗರಗಳಲ್ಲಿ ಒಂದು ರೀತಿಯ ಉಚಿತ ಸಾರ್ವಜನಿಕ ಸೇವೆಯಲ್ಲಿದೆ. ಪರಿಶೀಲನಾ ಬಳಕೆಯಲ್ಲಿರುವ ರಿಲಯನ್ಸ್ ಗಿಗಾಫೈಬರ್‌ ಅನ್ನು ಇದೀಗ ವಾಣಿಜ್ಯ ಬಳಕೆಗೆ ಒದಗಿಸಲು ರಿಲಯನ್ಸ್ ಜಿಯೋ ಇದೀಗ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಜಿಯೋ ಗಿಗಾ ಫೈಬರ್ ಜೊತೆಗೆ, ರಿಲಯನ್ಸ್ ತನ್ನ ಗಿಗಾ ಟಿವಿ ಅಥವಾ ಜಿಯೋ ಹೋಮ್ ಟಿವಿಯೊಂದಿಗೆ ಟಿವಿ ವಲಯಕ್ಕೆ ತನ್ನ ಪ್ರವೇಶವನ್ನು ಘೋಷಿಸಬಹುದು. ಆದರೆ, ಈ ವರೆಗೂ ಅವುಗಳ ಹೆಸರನ್ನು ಸಹ ಜಿಯೋ ಸ್ಪಷ್ಟವಾಗಿ ತಿಳಿಸಿಲ್ಲ. ಒಟ್ಟಿನಲ್ಲಿ ಮುಂದಿನ ತಿಂಗಳು ದೇಶದಲ್ಲಿ ಜಿಯೋ ಗಿಗಾ ಫೈಬರ್‌ ಸೇವೆ ಆರಮಭವಾಗುವ ನಿರೀಕ್ಷೆಗಳು ಇವೆ. ಕಳೆದ ಒಂದು ವರ್ಷದಿಂದ ದೇಶವೇ ಕಾತುರವಾಗಿ ಜಿಯೋ ಗೀಗಾಫೈಬರ್ ತನ್ನ ಬೆಲೆಗಳಿಂದಲೇ ಗಮನಸೆಳೆದಿದೆ.

2 ಸಾವಿರಕ್ಕೆ ಗಿಗಾ ಫೈಬರ್ ಡಿವೈಸ್?

2 ಸಾವಿರಕ್ಕೆ ಗಿಗಾ ಫೈಬರ್ ಡಿವೈಸ್?

ಅತ್ಯಾಧುನಿಕ ಫೈಬರ್ ಆಧಾರಿತ ಜಿಯೋ ಗೀಗಾ ಫೈಬರ್ ಡಿವೈಸ್ ಬೆಲೆ 2,000 ರೂಪಾಯಿಗಳಾಗಿರಲಿದೆ .ಜಿಯೋ ಹೋಮ್ ಟಿವಿ ಸೇರಿದರೆ 4,000 ಗಳಾಗಬಹುದು ಎಂ ಹೇಳಲಾಗಿದೆ. ಒಟ್ಟು 4,000 ರೂಪಾಯಿಗಳನ್ನು ಪಾವತಿಸಿ ಜಿಯೋ ಗೀಗಾ ಫೈಬರ್ ಡಿವೈಸ್ ಅನ್ನು ಖರೀದಿಸಿದರೆ, ಜಿಯೋ ಉಚಿತವಾಗಿ ಮನೆಗೆ ಕನೆಕ್ಷನ್ ಅನ್ನು ನೀಡಲಿದೆ. ಈ ಹಣವನ್ನು ಸಹ ಜಿಯೋ ವಾಪಸ್ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೆ, ಇದು ಈ ವರೆಗೂ ಸ್ಪಷ್ಟವಾಗಿಲ್ಲ.

500 ರೂ. ಜಿಯೋ ಗಿಗಾಫೈಬರ್ ಪ್ಲಾನ್!

500 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಜಿಯೋ ಗೀಗಾ ಫೈಬರ್ ಸೇವೆಯ ಆರಂಭಿಕ ರೀಚಾರ್ಜ್ ಬೆಲೆಗಳು 500 ರೂಪಾಯಿಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ. ಈ ಕನಿಷ್ಟ ರೀಚಾರ್ಜ್ ಪ್ಲಾನ್‌ನಲ್ಲಿ 500 ರೂ.ಗಳಿಗೆ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 300GB ಡೇಟಾವನ್ನು ಸಿಗಲಿದೆ. ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

750 ರೂ. ಜಿಯೋ ಗಿಗಾಫೈಬರ್ ಪ್ಲಾನ್!

750 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಜಿಯೋ ಗೀಗಾ ಫೈಬರ್ ಸೇವೆಯ ಎರಡನೇ ರೀಚಾರ್ಜ್ ಪ್ಲಾನ್ 750 ರೂಪಾಯಿಗಳಾಗಿವೆ. 750 ರೂಪಾಯಿಗಳ ಈ ಜಿಯೋ ಗೀಗಾ ಫೈಬರ್ ರೀಚಾರ್ಜ್ ಪ್ಲಾನ್‌ನಲ್ಲಿ ಒಂದು ತಿಂಗಳ ಅವಧಿಯವರೆಗೆ 50ಎಂಬಿಪಿಎಸ್ ವೇಗದಲ್ಲಿ 450GB ಡೇಟಾವನ್ನು ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

999 ರೂ. ಜಿಯೋ ಗಿಗಾಫೈಬರ್ ಪ್ಲಾನ್!

999 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಜಿಯೋ ಗೀಗಾ ಫೈಬರ್‌ನ ಮೊದಲ 100 ಎಂಬಿಪಿಎಸ್ ವೇಗದ ಡೇಟಾ ಪ್ಲಾನ್ ಇದಾಗಿದೆ. 999 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 600 ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

1,299 ರೂ. ಜಿಯೋ ಗಿಗಾಫೈಬರ್ ಪ್ಲಾನ್!

1,299 ರೂ. ಜಿಯೋ ಗಿಗಾಫೈಬರ್ ಪ್ಲಾನ್!

ಪ್ರತಿ ತಿಂಗಳು 900GB ಡೇಟಾವನ್ನು ಹೊಂದಿರುವ ಗೀಗಾ ಫೈಬರ್‌ನ ಬಿಗ್ ಡೇಟಾ ಪ್ಲಾನ್ ಇದಾಗಿದೆ. 1,299 ರೂಪಾಯಿಗಳ ಜಿಯೋ ಗಿಗಾಫೈಬರ್ ಪ್ಲಾನ್ ರೀಚಾರ್ಜ್ ಮಾಡಿಸಿದರೆ, 30 ದಿನಗಳ ಅವಧಿಯವರೆಗೆ 100 ಎಂಬಿಪಿಎಸ್ ವೇಗದಲ್ಲಿ ಒಟ್ಟು 900ಜಿಬಿ ಡೇಟಾ ಸಿಗಲಿದೆ. ಡೇಟಾ ಮಿತಿ ದಾಟಿದ ನಂತರ ಡೇಟಾ ವೇಗವನ್ನು 100kB/sಗೆ ಕಡಿತಗೊಳಿಸಲಾಗುತ್ತದೆ.

ಮೂರು ತಿಂಗಳು ಉಚಿತ?

ಮೂರು ತಿಂಗಳು ಉಚಿತ?

ಜಿಯೋ ಗೀಗಾ ಫೈಬರ್ ಹೊಂದಿರುವ ಬೆಲೆ ಮತ್ತು ರೀಚಾರ್ಜ್ ಪ್ಲಾನ್‌ಗಳು ಯಾವುವು ಎಂಬ ಮಾಹಿತಿಗಳು ಖಚಿತ ಮೂಲಗಳಿಂದ ದೊರೆತಿದೆ. ಇದರ ಜೊತೆಗೆ ಲೀಕ್ ಆಗಿರುವ ಸುದ್ದಿಯ ಗಳನ್ನು ಸಹ ಪ್ರಮುಖ ಮಾಧ್ಯಮಗಳು ಪ್ರಕಟಿಸಿವೆ. ಜಿಯೋ 4G ಟೆಲಿಕಾಂ ಸೇವೆಯಂತೆಯೇ ಜಿಯೋ ಗೀಗಾಫೈಬರ್' ಕೂಡ ಮೂರು ತಿಂಗಳು ಉಚಿತ ಸೇವೆಯನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಇದೆಷ್ಟು ಸತ್ಯ ಎಂಬುದನ್ನು ದೃಢೀಕರಿಸಲು ಸಾಧ್ಯವಿಲ್ಲ.

Best Mobiles in India

English summary
Jio GigaFiber, GigaTV could launch on August 12: Here's what we can expect about pricing and other features. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X