ಜಿಯೋ ಗಿಗಾಫೈಬರ್‌ನಲ್ಲಿರುವ ವೈಶಿಷ್ಟ್ಯಗಳು ಬೇರೆ ಎಲ್ಲೂ ಸಿಗಲ್ಲ..!

|

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಅಲೆಯನ್ನು ಹುಟ್ಟಿ ಹಾಕಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಶೀಘ್ರವೇ ಮಾರುಕಟ್ಟೆಯಲ್ಲಿ ಫೂರ್ಣ ಪ್ರಮಾಣದಲ್ಲಿ ತನ್ನ ಗಿಗಾ ಫೈಬರ್ ಸೇವೆಯನ್ನು ಆರಂಭಿಸಲಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನವು ಶುರುವಾಗಿದ್ದು, ಬೇರೆ ಬ್ರಾಂಡ್ ಬಾಂಡ್ ಸೇವಾ ಪೂರೈಕೆದಾರರಿಗೆ ತಲೆ ನೋವು ಶುರುವಾಗಿದೆ.

ಮಾರುಕಟ್ಟೆಯಲ್ಲಿ ಗಿಗಾ ಫೈಬರ್ ನೊಂದಿಗೆ ಜಿಯೋ ನೀಡಲು ಮುಂದಾಗಿರುವ ಸೇವೆಯಿಂದಾಗಿ ಕೇವಲ ಟೆಲಿಕಾಂ ಮಾರುಕಟ್ಟೆ ಮಾತ್ರವಲ್ಲ, ಬ್ರಾಂಡ್ ಬ್ಯಾಂಡ್, ಡಿಟಿಹೆಚ್, ಕೇಬಲ್ ಸೇರಿದಂತೆ ಎಲ್ಲಾ ವಲಯಗಳು ಹೊಡೆತವನ್ನು ತಿನ್ನಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಜಿಯೋ ಹೆಸರು ಕೇಳುವಂತೆ ಆಗಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೈಬರ್ ಸೇವೆಯಿಂದಾಗಿ ಬಳಕೆದಾರರಿಗೆ ಯಾವ ಹೊಸ ಮಾದರಿಯ ಸೇವೆಯನ್ನು ಪಡೆಯಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಜಿಯೋ ಗಿಗಾಫೈಬರ್‌ನಲ್ಲಿರುವ ವೈಶಿಷ್ಟ್ಯಗಳು ಬೇರೆ ಎಲ್ಲೂ ಸಿಗಲ್ಲ..!

ಜಿಯೋ ದೇಶದಲ್ಲಿ ಆರಂಭಿಸುವ ಜಿಯೋ ಫೈಬರ್ ಸೇವೆಯೊಂದಿಗೆ ಕೇಬಲ್ ಟಿವಿ ಸೇವೆಯನ್ನು ನೀಡಲಿದ್ದು, ಇದರಿಂದಾಗಿ ಬಳಕೆದಾರರಿಗೆ ಯಾವುದೇ ಡಿಶ್ ಇಲ್ಲವೇ ಕೇಬಲ್ ಅಗತ್ಯತೆ ಇಲ್ಲ. ಬದಲಾಗಿ ಬ್ರಾಡ್ ಬ್ಯಾಂಡ್ ಸೇವೆಯೊಂದಿಗೆ ಕೇವಲ್ ಟಿವಿ ವ್ಯವಸ್ಥೆಯೂ ದೊರೆಯಲಿದ್ದು, ಬಳಕೆದಾರರಿಗೆ ಡಬಲ್ ಲಾಭವಾಗಲಿದೆ. ಇದರಿಂದಗಿ ಡಿಟಿಹೆಚ್ ಮತ್ತು ಕೇಬಲ್ ವ್ಯವಸ್ಥೆ ನೆಲಕಚ್ಚಲಿದೆ.

ಇದೆ ಮಾದರಿಯಲ್ಲಿ ಮನೆಯನ್ನು ಸ್ಮಾರ್ಟ್ ಮಾಡಲು ಜಿಯೋ ಮುಂದಾಗಿದೆ, ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುವುದರಿಂದಾಗಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಗಳನ್ನು ನೀವು ಸ್ಮಾರ್ಟ್ ಮಾಡಿಕೊಳ್ಳಬಹುದಾಗಿದೆ. ಎಲ್ಲವನ್ನು ಇಂಟರ್ನೆಟ್ ಮೂಲಕವೇ ನಿರ್ವಹಿಸುವ ವ್ಯವಸ್ಥೆಯನ್ನು ಜಿಯೋ ಮಾಡಿಕೊಡಲಿದೆ.

ಈ ಹಿನ್ನಲೆಯಲ್ಲಿ ಜಿಯೋ ಲಾಂಚ್ ಮಾಡಲಿರುವ ಫೈಬರ್ ಸೇವೆಯೂ ಭಾರತದ ಭವಿಷ್ಯವನ್ನು ಬದಲಾಯಿಸಲಿದೆ ಎನ್ನಲಾಗಿದೆ. ಮನೆಯಲ್ಲಿ ಇರುವ ಫ್ಯಾನ್, ಕಿಟಕಿ ಬಾಗಿಲು, ಕಿಚನ್, ಬಾತ್ ರೂಮ್ ಸೇರಿದಂತೆ ಎಲ್ಲಾ ವಸ್ತುಗಳು ಸ್ಮಾರ್ಟ್ ಆಗಲಿದ್ದು, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಎಲ್ಲಾ ವಸ್ತುಗಳು ಜಿಯೋ ದಿಂದಲೇ ಕಾರ್ಯನಿರ್ವಹಿಸುವಂತೆ ಆಗಲಿದೆ.

ಈಗಾಗಲೇ ಜಿಯೋ ಗಿಗಾ ಫೈಬರ್ ಲಾಂಚ್ ಆಗಿದ್ದು, ಒಂದೊಂದೇ ನಗರದಲ್ಲಿ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆದಿದೆ, ಶೀಘ್ರವೇ ದೇಶದ ಎಲ್ಲಾ ನಗರಗಳಲ್ಲಿಯೂ ಈ ಸೇವೆಯೂ ಕಾಣಿಸಿಕೊಳ್ಳಲಿದೆ.

Best Mobiles in India

English summary
Jio GigaFiber: Here’s How Reliance Jio is Planning to Create a Smart Ecosystem for Your Home. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X