Subscribe to Gizbot

ಜಿಯೋಯಿಂದಾಗಿ ಟೆಲಿಕಾಂ ಎಷ್ಟೆಲ್ಲಾ ಬದಲಾಗಿದೆ?..ಇಲ್ಲಿದೆ ಅಂಕಿಅಂಶಗಳು!!

Written By:

ಜಿಯೋ ಆರಂಭವಾದ ಬಳಿಕ ಒಂದೇ ಒಂದು ವರ್ಷದಲ್ಲಿ ಭಾರತೀಯ ಟೆಲಿಕಾಂನಲ್ಲಿ ಆದ ಬದಲಾವಣೆಯನ್ನು ಯಾವೊರ್ವ ಭಾರತೀಯ ಪ್ರಜೆ ಕೂಡ ಕನಸಲ್ಲೂ ಊಹಿಸಿರಲಿಲ್ಲ ಎನ್ನಬಹುದು. ಅತ್ಯಂತ ಕಡಿಮೆ ಬೆಲೆಗೆ ಸೇವೆಯನ್ನು ನೀಡಿ ಗ್ರಾಹಕರನ್ನು ಸೆಳೆದ ಜಿಯೋಯಿಂದಾಗಿ ಇಂದು ಎಷ್ಟೂ ಭಾರತೀಯರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.!!

ಹಾಗಾಗಿ, ಇಂದಿನ ಲೇಖನದಲ್ಲಿ ಒಂದು ವರ್ಷದ ಮೊದಲಿದ್ದ ಭಾರತೀಯ ಟೆಲಿಕಾಂ ಪ್ರಪಂಚಕ್ಕೂ ಹಾಗೂ ಪ್ರಸ್ತುತ ಇರುವ ಟೆಲಿಕಾಂ ಪ್ರಪಂಚಕ್ಕೂ ಎಷ್ಟೆಲ್ಲಾ ಬದಲಾವಣೆಯಾಗಿದೆ ಎಂಬುದನ್ನು ನಿಮಗೆ ಅಂಕಿಅಂಶಗಳ ಮೂಲಕ ನೀಡುತ್ತೇವೆ.!! ಆ ಬದಲಾವಣೆಯ ಅಂಶಗಳು ಮತ್ತು ಸಂಖ್ಯೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1. ಮೊಬೈಲ್ ಡೇಟಾ ಬಳಕೆ:

1. ಮೊಬೈಲ್ ಡೇಟಾ ಬಳಕೆ:

ವಿಶ್ವದಲ್ಲೇ ಅತ್ಯಂತ ಕಡಿಮೆ ಡೇಟಾ ಬಳಕೆ ರಾಷ್ಟ್ರಗಳ ಸಾಲಿನಲ್ಲಿದ್ದ ಭಾರತ ಇಂದು ವಿಶ್ವದಲ್ಲಿಯೇ ಹೆಚ್ಚು ಡೇಟಾ ಬಳಕೆ ಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ಜಿಯೋ.!! ಆಗಸ್ಟ್ 2016ರಲ್ಲಿ 1 ಜಿಬಿ ಡೇಟಾಗೆ 250 ರೂ.ಗೂ ಹೆಚ್ಚು ಪಾವತಿಸುವಾಗ ತಿಂಗಳಿಗೆ 20 ಕೋಟಿ ಜಿಬಿ ಬಳಕೆ ಮಾಡುತ್ತಿದ್ದರೆ, ಇಂದು ತಿಂಗಳಿಗೆ 150 ಕೋಟಿ ಜಿಬಿಗೂ ಹೆಚ್ಚು ಡೇಟಾ ಬಳಕೆಯಾಗುತ್ತಿದೆ.!!

2 ಬಳಕೆದಾರರಿಂದ ಸರಾಸರಿ ಆದಾಯ!?

2 ಬಳಕೆದಾರರಿಂದ ಸರಾಸರಿ ಆದಾಯ!?

2016 ಆಗಸ್ಟ್ ತಿಂಗಳಿನಲ್ಲಿ ಟೆಲಿಕಾಂ ಆದಾಯ ಪ್ರತಿವ್ಯಕ್ತಿಯಿಂದ ಸರಾಸರಿ 180 ರೂ. ಆಗಿದ್ದರೆ ಆಗಸ್ಟ್ 2017 ರಲ್ಲಿ ಪ್ರತಿವ್ಯಕ್ತಿಯಿಂದ ಟೆಲಿಕಾಂಗೆ ಕೇವಲ 68 ರೂಪಾಯಿಗಳು ಲಭ್ಯವಾಗುತ್ತಿದೆ.!! ಕೇವಲ ಒಂದು ವರ್ಷದಲ್ಲಿ ಮೂರನೇ ಎರಡು ಭಾಗದಷ್ಟು ಹಣ ಗ್ರಾಹಕರಲ್ಲಿಯೇ ಉಳಿದಿದೆ.!!

3 4ಜಿ ಫೋನ್ ಸಂಖ್ಯೆ ಹೆಚ್ಚಳ!!

3 4ಜಿ ಫೋನ್ ಸಂಖ್ಯೆ ಹೆಚ್ಚಳ!!

ಜಿಯೋ ಬರುವುದಕ್ಕಿಂತ ಮುಂಚೆ ಭಾರತದಲ್ಲಿ 4G ಫೋನ್ ಖರೀದಿಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ, ಜಿಯೋ ನೀಡಿದ ಉಚಿತ ಸೇವೆಗೆ 4G ಪೋನ್‌ಗಳು ಬಿಸಿತುಪ್ಪದಂತೆ ಖರ್ಚಾಗಿದ್ದು, 2016ರ ಪ್ರಥಮ ತ್ರೈಮಾಸಿಕದಲ್ಲಿ ಶೇ.66 ಬೆಳವಣಿಗೆ ಹೊಂದಿದ್ದ 4ಜಿ ಫೋನ್ ಮಾರಾಟ ದರ 2017ರ ಪ್ರಥಮ ತ್ರೈಮಾಸಿಕದ ವೇಳೆಗೆ ಶೇ.95ರಷ್ಟಾಗಿತ್ತು.!!

4 ಪಾತಾಳಕ್ಕಿಳಿದ ಪೋಸ್ಟ್‌ಪೇಡ್ ಗ್ರಾಹಕರು!!

4 ಪಾತಾಳಕ್ಕಿಳಿದ ಪೋಸ್ಟ್‌ಪೇಡ್ ಗ್ರಾಹಕರು!!

ಜಿಯೋ ಟೆಲಿಕಾಂಗೆ ಬಂದ ನಂತರ ಇತರ ಟೆಲಿಕಾಂ ಕಂಪೆನಿಗಳ ಪೋಸ್ಟ್‌ಪೇಡ್ ಗ್ರಾಹಕರ ಸಂಖ್ಯೆ ಪಾತಾಳಕ್ಕಿಳಿದಿದೆ.! 500 ರುಪಾಯಿಗಳಿಂದ 250 ರೂ. ವರೆಗೆ ಪೋಸ್ಟ್ಪೇಡ್ ಬೆಲೆ ಇಳಿದರೂ ಸಹ ಕೋಟಿಗಳ ಲೆಕ್ಕದಲ್ಲಿದ್ದ ಪೋಸ್ಟ್‌ಪೇಡ್ ಬಳಕೆದಾರರ ಸಂಖ್ಯೆ ಇದೀಗ ಲಕ್ಷಗಳಿಗೆ ಇಳಿದಿದೆ ಎನ್ನಲಾಗಿದೆ.!!

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
5 ಮುರಿದ ಏಕಸ್ವಾಮ್ಯತೆ!!

5 ಮುರಿದ ಏಕಸ್ವಾಮ್ಯತೆ!!

ಜಿಯೋ ಬರುವುದಕ್ಕೂ ಮೊದಲು ಏರ್‌ಟೆಲ್ ಆಡಿಸಿದಂತೆ ಇತರ ಟೆಲಿಕಾಂಗಳು ಆಡುತ್ತಿದ್ದವು. ಆದರೆ, ಜಿಯೋ ಬಂದನಂತರ ಜಿಯೋ ಆಡಿಸಿದಂತೆ ಇತರ ಟೆಲಿಕಾಂಗಳು ಆಡುತ್ತಿವೆ.!! ಇಲ್ಲಿಯವರೆಗೂ ರಾಜನಂತಿದ್ದ ಏರ್‌ಟೆಲ್ ಇದೀಗ ಜಿಯೋಗೆ ಸೆಡ್ಡುಹೊಡೆಯಲು ಸಾಧ್ಯವಾಗದೇ ಸೋಲು ಒಪ್ಪಿಕೊಂಡಿದೆ.!!

ಓದಿರಿ:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
No one can say for certainty that a change is going to be good or bad.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot