ಜಿಯೋ ಟೆಲಿಕಾಂನ ಈ ಪ್ಯಾಕ್ ಬೆಲೆಯಲ್ಲಿ ಹೆಚ್ಚಳ; ಗ್ರಾಹಕರಿಗೆ ಶಾಕ್!

|

ಭಾರತದ ಟೆಲಿಕಾಂ ವಲಯದಲ್ಲಿ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹಲವು ಅತ್ಯುತ್ತಮ ಡೇಟಾ ಆಫರ್‌ಗಳನ್ನು ನೀಡಿದೆ. ಹಾಗೆಯೇ ಕೆಲವು ಪ್ರೀಪೇಯ್ಡ್‌ ಯೋಜನೆಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಸದಸ್ಯತ್ವದ ಸೌಲಭ್ಯವನ್ನು ಪಡೆದಿದ್ದು, IPL ಮ್ಯಾಚ್ ವೀಕ್ಷಣೆಗೆ ಬೆಸ್ಟ್‌ ಅನಿಸಿದೆ. ಆದರೆ ಇದೀಗ ಜಿಯೋ ಸಡನ್ ಶಾಕ್ ನೀಡಿದೆ.

ಟೆಲಿಕಾಂ

ಹೌದು, ರಿಲಾಯನ್ಸ್‌ ಜಿಯೋ ಟೆಲಿಕಾಂ ತನ್ನ ಜನಪ್ರಿಯ 222ರೂ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ VIP ಪ್ಯಾಕ್‌ ದರದಲ್ಲಿ ಹೆಚ್ಚಳ ಮಾಡಿದೆ. ಜೂನ್ ತಿಂಗಳಿನಲ್ಲಿ ಸಂಸ್ಥೆಯು 222ರೂ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ವಿಐಪಿ ಪ್ಯಾಕ್ ಅನ್ನು ಪರಿಚಯಿಸಿತ್ತು. ಈಗ ಈ ಪ್ಯಾಕ್‌ ಬೆಲೆಯಲ್ಲಿ 33 ರೂ. ಏರಿಕೆ ಮಾಡಿದ್ದು, ಹೀಗಾಗಿ ಈ ಪ್ಯಾಕ್‌ ಈಗ 255ರೂ.ಗಳಿಗೆ ಲಭ್ಯವಾಗಲಿದೆ. ಮೈ ಜಿಯೋ ಆಪ್‌ನಲ್ಲಿ 'ಎಕ್ಸ್‌ಕ್ಲೂಸಿವ್ ಲಿಮಿಟೆಡ್ ಪೀರಿಯಡ್ ಅಪ್‌ಗ್ರೇಡ್ ಆಫರ್' ಅಡಿಯಲ್ಲಿ ಬಳಕೆದಾರರಿಗೆ ಬೆಲೆಯಲ್ಲಿನ ಬದಲಾವಣೆ ಕಾಣಿಸಲಿದೆ.

ಡಿಸ್ನಿ + ಹಾಟ್‌ಸ್ಟಾರ್

ಜಿಯೋ ಟೆಲಿಕಾಂನ 255ರೂ. ಪ್ಯಾಕ್ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯ ಪ್ರಯೋಜನವನ್ನು ಪಡೆದಿದೆ. ಈ ಯೋಜನೆಯೊಂದಿಗೆ ಯಾವುದೇ ವಾಯಿಸ್‌ ಕರೆ ಪ್ರಯೋಜನವನ್ನು ಹೊಂದಿಲ್ಲ. ಹಾಗೆಯೇ ವ್ಯಾಲಿಡಿಟಿಯು ಬಳಕೆದಾರರ ಮೂಲ ವಾಯಿಸ್‌ ಕರೆಯ ಯೋಜನೆಯಂತೆಯೇ ಇರುತ್ತದೆ. ಹೀಗಾಗಿ, ಈ ಯೋಜನೆಯನ್ನು ಬಳಸಲು, ಬಳಕೆದಾರರು ಈ ಮೊದಲೇ ಸಕ್ರಿಯ ಧ್ವನಿ ಕರೆ ಪ್ಯಾಕ್‌ಗೆ ಚಂದಾದಾರರಾಗಬೇಕು.

ಸ್ಟಾರ್‌

ಹಾಗೆಯೇ ಈ ಯೋಜನೆಯು 15GB (FUP) ಡೇಟಾದೊಂದಿಗೆ ಸೌಲಭ್ಯ ಪಡೆದಿದೆ. ನಿಗದಿತ 15 GB ಡೇಟಾವನ್ನು ಬಳಕೆಯಾದ ನಂತರ ಇಂಟರ್ನೆಟ್ ವೇಗವು 64 kbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವವು ಒಂದು ವರ್ಷದ ಮಾನ್ಯತೆಯನ್ನು ಹೊಂದಿರುತ್ತದೆ. ಹಾಗೆಯೇ ಜಿಯೋ ಇತರೆ ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಸೌಲಭ್ಯದ ಜಿಯೋದ ಪ್ಯಾಕ್‌ಗಳ ಆಯ್ಕೆ ಹೊಂದಿವೆ.

ಜಿಯೋ 401ರೂ. ಪ್ಲ್ಯಾನ್ ಪ್ರಯೋಜನಗಳು

ಜಿಯೋ 401ರೂ. ಪ್ಲ್ಯಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 90GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 1000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಜಿಯೋ 777ರೂ. ಪ್ಲ್ಯಾನ್

ಜಿಯೋ 777ರೂ. ಪ್ಲ್ಯಾನ್

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 131GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 3000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ 399ರೂ ಶುಲ್ಕದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP ಸದಸ್ಯತ್ವ ಸಹ ಲಭ್ಯವಾಗುತ್ತದೆ.

ಜಿಯೋ 598ರೂ. ಪ್ಲ್ಯಾನ್

ಜಿಯೋ 598ರೂ. ಪ್ಲ್ಯಾನ್

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ ಒಟ್ಟು 112GB ಡೇಟಾ ಪ್ರಯೋಜನವನ್ನು ಒಳಗೊಂಡಿದೆ. ಜಿಯೋ ಟು ಜಿಯೋ ಉಚಿತ ವಾಯಿಸ್ ಕರೆ ಹಾಗೂ ಜಿಯೋ ಟು ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಕರೆ ಮಿತಿ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಇದೆ. ಹಾಗೆಯೇ ಇದರೊಂದಿಗೆ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸದಸ್ಯತ್ವ ಸಹ ಲಭ್ಯವಾಗುತ್ತದೆ.

Most Read Articles
Best Mobiles in India

English summary
Jio has hiked the price of Rs 222 plan and is now offering it for Rs 255 with unchanged benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X