ವಿಶ್ವ ಪ್ರಸಿದ್ಧ ಹಂಪಿಯನ್ನು ನೈಜ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!

|

ಜಿಯೋ ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕ. ತನ್ನ ಸೇವೆಗಳನ್ನು ಆರಂಭಿಸಿದ ದಿನದಿಂದಲೇ, ಜಿಯೋ ಡಿಜಿಟಲ್ ಕ್ರಾಂತಿಯನ್ನು ಉಂಟುಮಾಡಿತು ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಡೇಟಾ ಕೈಗೆಟಕುವಂತೆ ಮಾಡಿತು. ಈ ಡಿಜಿಟಲ್ ಕ್ರಾಂತಿಯು ಈಗ ನಮ್ಮ ದೇಶದ ದೂರದ ಪ್ರದೇಶಗಳಿಗೂ ಪ್ರವೇಶಿಸುತ್ತಿದೆ.

ವಿಶ್ವ ಪ್ರಸಿದ್ಧ ಹಂಪಿಯನ್ನು ನೈಜ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!

ಜಿಯೋ ಇತ್ತೀಚೆಗೆ ಹಂಪಿಯನ್ನು ಟ್ರೂ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ್ದು, ಎಲ್ಲಾ ಪ್ರವಾಸಿಗರಿಗೆ ಡಿಜಿಟಲ್ ಸಂಪರ್ಕವನ್ನು ಪಡೆಯಲು ಪ್ರೇರೇಪಣೆ ನೀಡುತ್ತಿದೆ. ಸ್ಥಳೀಯ ಕುಟುಂಬಗಳು ಮತ್ತು ಇಡೀ ಸಮುದಾಯವು ಈ ಸೇವೆಯಿಂದ ಸಂತೋಷ ಪಡೆದಿವೆ. ನೆಟ್‌ವರ್ಕ್‌ ಲಭ್ಯತೆಗಾಗಿ ಪ್ರತಿದಿನ ಹಲವು ಕಿಲೋಮೀಟರ್‌ ದೂರ ಪ್ರಯಾಣಿಸದೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಯುವಜನತೆ ಸುರಕ್ಷಿತ ವಾತಾವರಣದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಪೋಷಕರು ಜಿಯೋಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ವಿಶ್ವ ಪ್ರಸಿದ್ಧ ಹಂಪಿಯನ್ನು ನೈಜ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!

ಕರ್ನಾಟಕದಲ್ಲಿ ಜಿಯೋ ನ ಹೊಸ ಮುಂದಾಳತ್ವವು ಜಿಯೋ ನ ಕೊಡುಗೆಗಳ ಗುಚ್ಛವನ್ನು ಹೈಲೈಟ್ ಮಾಡುತ್ತದೆ ಮತ್ತು ಜಿಯೋ ಡಿಜಿಟಲ್ ಲೈಫ್ ರಾಜ್ಯದ ಚಂದಾದಾರರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಈ ಲಾಭಗಳು ಹೀಗಿವೆ:

i) ಜಿಯೋ ಮೂಲಕ ಕರ್ನಾಟಕದಾದ್ಯಂತ ತಡೆರಹಿತ ಸಂಪರ್ಕ, ದೃಢವಾದ ಮತ್ತು ವ್ಯಾಪಕವಾದ 4G ನೆಟ್‌ವರ್ಕ್

ii) ಜಿಯೋದ ಅನಿಯಮಿತ ಕರೆ ಮತ್ತು ಡೇಟಾ ಪ್ರಯೋಜನಗಳು

iii) ಜಿಯೋಟಿವಿ (ಪ್ರಯಾಣದಲ್ಲಿ ಹೆಚ್ಚು ಜನಪ್ರಿಯವಾಗಿರುವ, ಕ್ಯಾಚ್-ಅಪ್ ಟಿವಿ ಅಪ್ಲಿಕೇಶನ್), ಜಿಯೋಸಿನಿಮಾ ಮತ್ತು ಇನ್ನಿತರ ವಿಷಯಗಳನ್ನು ಒಳಗೊಂಡಿರುವ ಜಿಯೋ ಪ್ರೀಮಿಯಂ ಅಪ್ಲಿಕೇಶನ್‌ಗಳ ಪ್ರವೇಶ.

iv) ಕರ್ನಾಟಕದಾದ್ಯಂತ ಜಿಯೋ ಸಿಮ್‌ಗಳು ಸುಲಭವಾಗಿ ಲಭ್ಯ

v) ಸರಳ ಮತ್ತು ಅನುಕೂಲಕರ ಆನ್‌ಬೋರ್ಡಿಂಗ್ ಅನುಭವ

ವಿಶ್ವ ಪ್ರಸಿದ್ಧ ಹಂಪಿಯನ್ನು ನೈಜ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ!

ಗ್ರಾಹಕರ ತೃಪ್ತಿ ಜಿಯೋ ಅನುಭವದ ಮೂಲಾಧಾರವಾಗಿದೆ. ಈ ಮುಂದಾಳತ್ವವು ಜಿಯೋ ತನ್ನ ದೃಢವಾದ ನೆಟ್‌ವರ್ಕ್ ಮತ್ತು ಜಿಲ್ಲೆಯಾದ್ಯಂತ ವ್ಯಾಪಕವಾದ ಲಭ್ಯತೆಯ ಮೂಲಕ ಹಂಪಿ ನಿವಾಸಿಗಳಿಗೆ ಸರ್ವತ್ರ ಮತ್ತು ತಡೆರಹಿತ ಅನುಭವವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಹಂಪಿಯ ನಿವಾಸಿಗಳು ಈಗ ಜಿಯೋ ಡಿಜಿಟಲ್ ಲೈಫ್ ಅನ್ನು ಇನ್ನಷ್ಟು ಅನುಕೂಲಕರವಾಗಿ ಅನುಭವಿಸಬಹುದು ಮತ್ತು ಜಿಯೋದ ಕೈಗೆಟುಕುವ ದರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು. ಚಂದಾದಾರರು ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವಂತೆ ಹಲವು ಟ್ಯಾರಿಫ್ ಪ್ಲಾನ್ ಗಳಿಂದ ಆಯ್ಕೆ ಮಾಡಬಹುದು.

Best Mobiles in India

English summary
JIO INTRODUCES HAMPI IN KARNATAKA TO TRUE 4G DIGITAL LIFE.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X