ಜಿಯೋದಿಂದ ಅಗ್ಗದ ಬೆಲೆಯಲ್ಲಿ 'ಜಿಯೋಬುಕ್' ಲ್ಯಾಪ್‌ಟಾಪ್‌ ಲಾಂಚ್‌ಗೆ ಸಿದ್ಧತೆ!

|

ದೇಶದ ಟೆಲಿಕಾಂ ವಲಯದಲ್ಲಿ ರಿಲಾಯನ್ಸ್‌ ಜಿಯೋ ಸಂಸ್ಥೆಯು ಹಲವು ಆಕರ್ಷಕ ಯೋಜನೆಗಳು ಮತ್ತು ಡಿವೈಸ್‌ಗಳ ಮೂಲಕ ಮುಂಚೂಣಿಯಲ್ಲಿರುವ ಕಾಣಿಸಿಕೊಂಡಿದೆ. ಅಗ್ಗದ ದರದಲ್ಲಿ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಕಡಿಮೆ ಪ್ರೈಸ್‌ನಲ್ಲಿ ಗ್ರಾಹಕರಿಗೆ ಜಿಯೋ ಫೋನ್ ಲಭ್ಯ ಮಾಡಿದೆ. ಇದಲ್ಲದೇ ಆಕರ್ಷಕ ದರದಲ್ಲಿ ಜಿಯೋಫೈಬರ್ ಯೋಜನೆಗಳ ಮೂಲಕ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಇದೀಗ ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಲಾಂಚ್ ಮಾಡುವ ತಯಾರಿಯಲ್ಲಿದೆ.

ಜಿಯೋ

ಹೌದು, ರಿಲಾಯನ್ಸ್ ಜಿಯೋ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಪರಿಚಯಿಸಲಿದ್ದು, ಜಿಯೋ ತನ್ನ ಲ್ಯಾಪ್‌ಟಾಪ್‌ಗಳಿಗೆ ಜಿಯೋಬುಕ್ ಎಂದು ಕರೆಯುವ ಸಾಧ್ಯತೆಗಳಿವೆ ಎಂದು XDA ಡೆವಲರ್ಪಸ್‌ ತಾಣವು ವರದಿ ಮಾಡಿದೆ. ಸಂಸ್ಥೆಯು ಕ್ವಾಲ್ಕಾಮ್ ಯಂತ್ರಾಂಶವನ್ನು ಆಧರಿಸಿದ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತೋರುತ್ತದೆ. ಲ್ಯಾಪ್‌ಟಾಪ್‌ ತಯಾರಿಸುವ ಕುರಿತು ಅಮೆರಿಕದ ಚಿಪ್‌ಮೇಕರ್ ರಿಲಯನ್ಸ್ ಜಿಯೋ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಆಂಡ್ರಾಯ್ಡ್

ನಿರೀಕ್ಷಿತ ಜಿಯೋಬುಕ್ ಲ್ಯಾಪ್‌ಟಾಪ್‌ ವಿಂಡೋಸ್ 10 ಓಎಸ್‌ನ ಬದಲಾಗಿ ಜಿಯೋಬುಕ್ ಗೂಗಲ್‌ನ ಆಂಡ್ರಾಯ್ಡ್ ಓಎಸ್ ಅನ್ನು ಪರಿಚಯಿಸಲಿದೆ. XDA ಪ್ರಕಾರ, ಜಿಯೋ ತನ್ನ ಆಂಡ್ರಾಯ್ಡ್‌ನ ಫೋರ್ಕ್ ಅನ್ನು 'ಜಿಯೋಓಎಸ್' ಎಂದು ಕರೆಯಲಿದೆ. ಜಿಯೋಬುಕ್ ಲ್ಯಾಪ್‌ಟಾಪ್‌ಗಳಲ್ಲಿ ಸ್ನ್ಯಾಪ್‌ಡ್ರಾಗನ್ ಎಕ್ಸ್ 12 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಗಳಿದ್ದು, ಬಿಲ್ಟ್‌-ಇನ್ 4G LTE ಮೋಡೆಮ್ ಅನ್ನು ಹೊಂದಿರಲಿದೆ.

ಸ್ನ್ಯಾಪ್‌ಡ್ರಾಗನ್

ಇನ್ನು ಲ್ಯಾಪ್‌ಟಾಪ್‌ಗಳು ಸ್ಕ್ರೀನ್‌ ಗಾತ್ರ ಎಷ್ಟು ಎಂದು ಸ್ಪಷ್ಟವಾಗಿಲ್ಲ. ಆದರೆ ಲ್ಯಾಪ್‌ಟಾಪ್‌ಗಳ ಸ್ಕ್ರೀನ್‌ 1366 × 768 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರಲಿವೆ ಎನ್ನಲಾಗಿದೆ. ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಇರಲಿದ್ದು, ಇದಕ್ಕೆ ಪೋರಕವಾಗಿ 2GB RAM ಮತ್ತು 32GB ಆಂತರೀಕ ಸ್ಟೋರೇಜ್ ಹಾಗೂ 4GB RAM ಮತ್ತು 64 GB ಸ್ಟೋರೇಜ್ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಜೊತೆಗೆ eMMC 5.1 ಸಂಗ್ರಹವನ್ನು ಹೊಂದಿರಲಿದೆ.

ಜಿಯೋಮೀಟ್

ಲ್ಯಾಪ್‌ಟಾಪ್‌ನಲ್ಲಿ ಜಿಯೋಸ್ಟೋರ್, ಜಿಯೋಮೀಟ್, ಜಿಯೋ ಪೇಜಸ್ ಮತ್ತು ಜಿಯೋ ಜಾಹೀರಾತು ಸೇವೆಗಳು ಸೇರಿದಂತೆ ಹಲವಾರು ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಇನ್‌ಬಿಲ್ಟ್‌ ಸೇರಿರಲಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮಿನಿ HDMI ಪಡೆದಿರಲಿದ್ದು, ವೈ-ಫೈ, ಬ್ಲೂಟೂತ್, ಆಂಡ್ರಾಯ್ಡ್‌ 10 ಹಾಗೂ ಇತ್ತೀಚಿಗಿನ ಸೌಲಭ್ಯಗಳು ಸೇರಿರಲಿವೆ ಎಂದು ಹೇಳಲಾಗಿದೆ.

XDA

ಅಂದಹಾಗೇ ರಿಲಾಯನ್ಸ್ ಜಿಯೋ ಕಂಪನಿಯ ಜಿಯೋಬುಕ್ ಲ್ಯಾಪ್‌ಟಾಪ್‌ ಸರಣಿಯು ಯಾವಾಗ ಅಧಿಕೃತವಾಗಿ ಲಾಂಚ್ ಆಗಲಿದೆ ಎಂದು ಸ್ಪಷ್ಟವಿಲ್ಲ. ಆದರೆ ಮೇ ಅಂತ್ಯದೊಳಗೆ ಅನಾವರಣ ಆಗಲಿದೆ ಎಂದು XDA ಸೈಟ್ ವರದಿಯಲ್ಲಿ ಹೇಳಿದೆ.

Best Mobiles in India

English summary
Jio developing a new product tentatively called the JioBook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X