TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸದಾ ಒಂದಿಲ್ಲೊಂದು ಸೇವೆಗಳನ್ನು ಪರಿಚಯಿಸುತ್ತಿರುವ ಭಾರತದ ಜನಪ್ರಿಯ ಟೆಲಿಕಾಂ ರಿಲಾಯನ್ಸ್ ಜಿಯೋ ಇದೀಗ ಪ್ರಪಂಚದ ಪ್ರಥಮ ಬ್ರಾಂಡ್ಎಂಗೇಜ್‌ಮೆಂಟ್ ವೀಡಿಯೋ ವೇದಿಕೆಯನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಆಧರಿತ 'ಜಿಯೋ ಇಂಟರಾಕ್ಟ್' ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. ('ಜಿಯೋ') ಘೋಷಿಸಿದೆ.
186 ಮಿಲಿಯನ್ ಜಿಯೋ ಗ್ರಾಹಕರು ಹಾಗೂ ಇತರ 150 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪಬಲ್ಲ ಜಿಯೋ ಇಂಟರಾಕ್ಟ್, ಚಲನಚಿತ್ರ ಪ್ರಚಾರ ಹಾಗೂ ಬ್ರಾಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳ ಅತಿದೊಡ್ಡ ವೇದಿಕೆಯಾಗಿ ಬೆಳೆಯುವ ನಿರೀಕ್ಷೆಯನ್ನು ಹೊತ್ತು ಮುಂದಿನ ಕೆಲ ವಾರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಜಿಯೋ ತಿಳಿಸಿದೆ.
ವೀಡಿಯೋ ಕಾಲ್ ಸೆಂಟರ್, ವೀಡಿಯೋ ಕೆಟಲಾಗ್ ಹಾಗೂ ವರ್ಚುಯಲ್ ಶೋರೂಮ್‌ನಂತಹ ಸೇವೆಗಳನ್ನು ಈ ವೇದಿಕೆಯಲ್ಲಿ ಪರಿಚಯಿಸಲಿರುವ ಜಿಯೋ, ಗ್ರಾಹಕರಿಗೆ ವಿನೂತನ ಅನುಭವ ಕಟ್ಟಿಕೊಡಲಿದೆ. ಹಾಗಾದರೆ, ವಿಶ್ವದಲ್ಲಿಯೇ ಮೊದಲ 'ಜಿಯೋ ಇಂಟರಾಕ್ಟ್' ಸೇವೆ ಹೇಗಿರಲಿದೆ? ಈ ಸೇವೆಯನ್ನು ಬಳಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.
ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್!!
ಕೃತಕ ಬುದ್ಧಿಮತ್ತೆ (ಎಐ) ಆಧರಿತ 'ಜಿಯೋ ಇಂಟರಾಕ್ಟ್' ಮೂಲಕ ಭಾರತದ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ಹಲವು ವಿಶಿಷ್ಟ ಸೇವೆಗಳನ್ನು ಈ ವೇದಿಕೆಯ ಮೂಲಕ ಒದಗಿಸಲಾಗುವುದು ಎಂದು ಜಿಯೋ ತಿಳಿಸಿದೆ. ಜಿಯೋಇಂಟರಾಕ್ಟ್‌ನ ಪ್ರಥಮ ಕೊಡುಗೆಯಾದ 'ಲೈವ್ ವೀಡಿಯೋ ಕಾಲ್' ಸೇವೆ ಬಳಸಿ ಜಿಯೋ ಗ್ರಾಹಕರು ಅಮಿತಾಭ್ ಬಚ್ಚನ್‌ರಿಗೆ ನೇರ ವೀಡಿಯೋ ಕಾಲ್ ಮಾಡಬಹುದಾಗಿದ್ದು ಈ ಸೌಲಭ್ಯ ಮೇ 4ರಿಂದ ಆರಂಭವಾಗಿದೆ.
ಬ್ರಾಂಡ್ ಎಂಗೇಜ್‌ಮೆಂಟ್!!
VCBaaS (ವೀಡಿಯೋ ಕಾಲ್ ಬಾಟ್ ಆಸ್ ಅ ಸರ್ವಿಸ್) ಎಂದು ಗುರುತಿಸಲಾಗಿರುವ ಜಿಯೋಇಂಟರಾಕ್ಟ್ ವೇದಿಕೆಯು ಕೃತಕ ಬುದ್ಧಿಮತ್ತೆ ಹಾಗೂ ವೀಡಿಯೋ ಕಾಲ್ ತಂತ್ರಜ್ಞಾನಗಳನ್ನು ಎಲ್ಲರಿಗೂ ಸರಳವಾಗಿ ತಲುಪಿಸುವ ಮೂಲಕ ಪರಿಣಾಮಕಾರಿ ಬ್ರಾಂಡ್ ಎಂಗೇಜ್‌ಮೆಂಟ್ ಚಟುವಟಿಕೆಗಳನ್ನು ಸಾಧ್ಯವಾಗಿಸಲಿದೆ. ಕೃತಕ ಬುದ್ಧಿಮತ್ತೆಯನ್ನು ಈ ಬಗೆಯಲ್ಲಿ ಬಳಸುತ್ತಿರುವುದು ಪ್ರಪಂಚದಲ್ಲೇ ಇದು ಮೊದಲ ಸಲವಾಗಿದ್ದು ಈ ಪ್ರಯತ್ನ ಬ್ರಾಂಡ್‌ಗಳು ಹಾಗೂ ಗ್ರಾಹಕರ ನಡುವಿನ ಒಡನಾಟಕ್ಕೆ ಹೊಸ ಆಯಾಮ ನೀಡಲಿದೆ.
ಇ-ಕಾಮರ್ಸ್ ಆರ್ಡರಿಂಗ್ ಕಾರ್ಟ್!
'ಜಿಯೋ ಇಂಟರಾಕ್ಟ್' ಮೂಲಕ ಉದ್ದಿಮೆಗಳು ಹಾಗೂ ಗ್ರಾಹಕರ ನಡುವಿನ ಸಂವಹನದಲ್ಲಿ (B2C) ಈ ತಂತ್ರಜ್ಞಾನ ದೊಡ್ಡಪ್ರಮಾಣದಲ್ಲಿ ಪ್ರಯೋಜನಕ್ಕೆ ಬರುವ ನಿರೀಕ್ಷೆಯಿದೆ. ಈ ವೇದಿಕೆಯನ್ನು ಬಳಸಿ ವರ್ಚುಯಲ್ ಶೋರೂಮ್, ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇ ಕಾಮರ್ಸ್ ಆರ್ಡರಿಂಗ್ ಕಾರ್ಟ್ ನಂತಹ ಅನ್ವಯಗಳನ್ನು ರೂಪಿಸುವ ಹೊಸ ಅವಕಾಶವೂ ತಂತ್ರಜ್ಞರಿಗೆ ದೊರಕಲಿದೆ ಎಂದು ಜಿಯೋ ತಿಳಿಸಿದೆ.
ಬಳಕೆದಾರರಿಗೆ ಸಮರ್ಪಕ ಉತ್ತರ!!
ವಿಶಿಷ್ಟ ಹಾಗೂ ವಿನೂತನವಾದ ಈ ಸೇವೆ ಶಕ್ತಿಶಾಲಿಯಾದ ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯ ಮೂಲಕ ಬಳಕೆದಾರರ ಪ್ರಶ್ನೆಗಳನ್ನು ಕೇಳಿಸಿಕೊಂಡು ಅವರಿಗೆ ಸಮರ್ಪಕ ಉತ್ತರಗಳನ್ನು ಲ 'ಜಿಯೋ ಇಂಟರಾಕ್ಟ್' ನೀಡುತ್ತದೆ. ಸ್ವಯಂಕಲಿಕೆಯಂತಹ (ಮಶೀನ್ ಲರ್ನಿಂಗ್) ಹೊಸ ತಂತ್ರಜ್ಞಾನಗಳೊಡನೆ ಪರಿಣಾಮಕಾರಿಯಾಗಿ ಬಳಸುವ ಮೂಲಕ ಜಿಯೋ ಇಂಟರಾಕ್ಟ್ ಉದ್ದಿಮೆಗಳಿಗಾಗಿ ಬ್ರಾಂಡ್ ಎಂಗೇಜ್‌ಮೆಂಟ್‌ನ ವಿಶಿಷ್ಟ ಮಾರ್ಗವೊಂದನ್ನು ಒದಗಿಸಿದೆ.
ಜಿಯೋ ಇಂಟರಾಕ್ಟ್ ಅನುಭವ ಪಡೆಯುವುದು ಹೇಗೆ?
1. ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ
2. ಆಪ್ ತೆರೆದು ಜಿಯೋಇಂಟರಾಕ್ಟ್ ಐಕನ್ ಮೇಲೆ ಕ್ಲಿಕ್ ಮಾಡಿ
3. ವೀಡಿಯೋ ಕಾಲ್ ಪ್ರಾರಂಭಿಸಿ ಅಮಿತಾಭ್ ಬಚ್ಚನ್‌ರೊಡನೆ ಮಾತನಾಡಿ
4. 'ಶೇರ್' ಆಯ್ಕೆ ಬಳಸಿ ವೀಡಿಯೋ ಕಾಲ್ ಅನುಭವವನ್ನು ಮನೆಯವರು ಹಾಗೂ ಮಿತ್ರರೊಡನೆ ಹಂಚಿಕೊಳ್ಳಿ.