ಜಿಯೋಫೈಬರ್‌ ಫೋಸ್ಟ್‌ಪೇಯ್ಡ್‌ ಆರಂಭಿಕ ಬೆಲೆ 399ರೂ; ಇನ್‌ಸ್ಟಾಲೇಷನ್‌ ಶುಲ್ಕ ಇಲ್ಲ!

|

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಮಾಡಿರುವ ಜಿಯೋ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದೆ. ಇದೆ ಮೊದಲ ಬಾರಿಗೆ ಪೋಸ್ಟ್ ಪೇಡ್ ಜಿಯೋ ಫೈಬರ್ ಸೇವೆಯನ್ನು ಆರಂಭಿಸಿದೆ. ಶೂನ್ಯ ಮುಂಗಡ ಪ್ರವೇಶ ವೆಚ್ಚ (ಇಂಟರ್ನೆಟ್ ಬಾಕ್ಸ್‌ಗೆ ಯಾವುದೇ ಭದ್ರತಾ ಠೇವಣಿ ಇಲ್ಲ ಮತ್ತು ಇನ್ಸ್ಟಲೇಷನ್ ಗೆ ಯಾವುದೇ ಶುಲ್ಕಗಳಿಲ್ಲ) ಇಲ್ಲದೇ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ಗ್ರಾಹಕರು ರೂ.1,500 ಉಳಿತಾಯ ಮಾಡಬಹುದು.

ಜಿಯೋಫೈಬರ್‌ ಫೋಸ್ಟ್‌ಪೇಯ್ಡ್‌ ಆರಂಭಿಕ ಬೆಲೆ 399ರೂ; ಇನ್‌ಸ್ಟಾಲೇಷನ್‌ ಶುಲ್ಕ ಇಲ್ಲ

ಪ್ರತಿ ತಿಂಗಳಿಗೆ ರೂ. 399 ಗಳಿಂದ ಪ್ರಾರಂಭವಾಗುವ ಯೋಜನೆಗಳು ಮಾರುಕಟ್ಟಯಲ್ಲೇ ಅತಿ ಕಡಿಮೆ ಶುಲ್ಕವಾಗಿದೆ. 6 ಮತ್ತು 12 ತಿಂಗಳ ಯೋಜನೆ ಆಯ್ಕೆಗಳನ್ನು ಆಯ್ಕೆ ಮಾಡಬಹುದಾಗಿದೆ. ಅಲ್ಲದೇ ಸಿಮೆಟ್ರಿಕ್ ಯೋಜನೆಗಳು (ಡೌನ್‌ಲೋಡ್ ವೇಗ = ಅಪ್‌ಲೋಡ್ ವೇಗ) ದೊರೆಯಲಿದೆ. ಸೆಟ್ ಟಾಪ್ ಬಾಕ್ಸ್ ಗಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 4K ಸೆಟ್ ಟಾಪ್ ಬಾಕ್ಸ್ ಒಟಿಟಿ ಅಪ್ಲಿಕೇಶನ್‌ಗಳಿಗೆ ರೂ.1,000 ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ನೀಡಬೇಕಾಗಿದೆ.

ಜಿಯೋಫೈಬರ್‌ ಫೋಸ್ಟ್‌ಪೇಯ್ಡ್‌ ಆರಂಭಿಕ ಬೆಲೆ 399ರೂ; ಇನ್‌ಸ್ಟಾಲೇಷನ್‌ ಶುಲ್ಕ ಇಲ್ಲ

999ರೂ. ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಪಡೆದರೆ ಸುಮಾರು 15 ಪಾವತಿಸಿದ ಒಟಿಟಿ ಅಪ್ಲಿಕೇಶನ್‌ಗಳಾದ ಸನ್‌ನೆಕ್ಸ್ಟ್, ಹೋಯ್‌ಚಾಯ್, ಇತ್ಯಾದಿ ವೇದಿಕೆಗಳನ್ನು ಬಳಕೆ ಮಾಡಬಹುದಾಗಿದೆ. ರೀಚಾರ್ಜ್ ಮಾಡದಿದ್ದರೂ ಯಾವುದೇ ಸೇವಾ ಅಡೆತಡೆಗಳಿಲ್ಲದೆ 24 * 7 * 365 ಸಂಪರ್ಕದಲ್ಲಿ ಇರಬಹುದಾಗಿದೆ. 99.9% ಅತ್ಯುನ್ನತ ಗುಣಮಟ್ಟದ ಸೇವೆ ಯಾವುದೇ ಕಿರಿ ಕಿರಿ ಇಲ್ಲದ ಸ್ವಯಂ ಪಾವತಿ ಸೌಲಭ್ಯವು ದೊರೆಯಲಿದೆ.

ಜಿಯೋಫೈಬರ್‌ ಫೋಸ್ಟ್‌ಪೇಯ್ಡ್‌ ಆರಂಭಿಕ ಬೆಲೆ 399ರೂ; ಇನ್‌ಸ್ಟಾಲೇಷನ್‌ ಶುಲ್ಕ ಇಲ್ಲ

ಜಿಯೋಫೈಬರ್ ಪೋಸ್ಟ್‌ಪೇಡ್ ಪಡೆಯುವುದು ಹೇಗೆ:
ಕಂಪನಿಯ ಅಧಿಕೃತ jio.com/fiber ಸೈಟ್‌ ನಲ್ಲಿ ಲಾಗ್ ಇನ್ ಮಾಡುವ ಮೂಲಕ ಗ್ರಾಹಕರು ಸೇವೆಯನ್ನು ಪಡೆಯಬಹುದು. ನಿಮ್ಮ ಪ್ರದೇಶವು ಜಿಯೋ ಫೈಬರ್ ಸಿದ್ಧವಾದ ತಕ್ಷಣ, ನಮ್ಮ ಕಾರ್ಯನಿರ್ವಾಹಕರು ನಿಮ್ಮನ್ನು ಸಂಪರ್ಕಿಸಿ, ಪೋಸ್ಟ್ ಪೇಡ್ ಕನೆಕ್ಷನ್ ನೀಡುತ್ತಾರೆ. ಇದೇ ಜೂನ್ 17, ಗುರುವಾರದಿಂದ ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಸೇವೆ ಲಭ್ಯವಿರುತ್ತದೆ. ಹೊಸ ಯೋಜನೆಗಳ ಪ್ರಯೋಜನಗಳ ಮಾಹಿತಿ ನೀಡಲಿದೆ.

ಇದಲ್ಲದೆ, ಜಿಯೋ ಕಂಪನಿಯು ಇತ್ತೀಚೆಗೆ 127ರೂ. ಪ್ರೈಸ್‌ನಿಂದ ರಿಂದ 2,397ರೂ.ಗಳವರೆಗಿನ ಐದು ಹೊಸ 'ಜಿಯೋ ಫ್ರೀಡಂ' ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಎಲ್ಲಾ ಜಿಯೋ ಫ್ರೀಡಂ ಪ್ರೀಪೇಯ್ಡ್‌ ಯೋಜನೆಗಳು ಭಿನ್ನ ವ್ಯಾಲಿಡಿಟಿ ಸೌಲಭ್ಯ ಪಡೆದಿವೆ. ಹಾಗೆಯೇ ದೈನಂದಿನ ಡೇಟಾ ಬಳಕೆಗೆ ಯಾವುದು ಮಿತಿ ಹೊಂದಿಲ್ಲ.

Best Mobiles in India

English summary
Jio launches JioFiber Postpaid with plans starting from Rs 399 per month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X