ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್‌: ಮೈಸೂರಿನಲ್ಲಿ ಜಿಯೋ ಟ್ರೂ 5G ಪ್ರಾರಂಭ!

|

ರಿಲಯನ್ಸ್ ಜಿಯೋ ಇಂದು (ಡಿಸೆಂಬರ್ 28) ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಮೈಸೂರಿನಲ್ಲಿರುವ

ಇಂದಿನಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಪ್ರತಿಕ್ರಿಯಿಸಿದ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, 'ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

ದೂರಸಂಪರ್ಕ

'ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ.

ಡಿಜಿಟಲೈಸ್

'ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ' ಎಂದು ಅವರು ಹೇಳಿದರು.

ಜಿಯೋ ಟ್ರೂ 5G ಸೇವೆ ಪಡೆದ ನಗರಗಳ ಲಿಸ್ಟ್‌ ಇಲ್ಲಿದೆ

ಜಿಯೋ ಟ್ರೂ 5G ಸೇವೆ ಪಡೆದ ನಗರಗಳ ಲಿಸ್ಟ್‌ ಇಲ್ಲಿದೆ

* ದೆಹಲಿ
* ಬೆಂಗಳೂರು
* ಮುಂಬೈ
* ವಾರಣಾಸಿ
* ಕೋಲ್ಕತ್ತಾ
* ಹೈದರಾಬಾದ್
* ಚೆನ್ನೈ
* ನಾಥದ್ವಾರ

ಗುರುಗ್ರಾಮ

* ಪುಣೆ
* ಗುರುಗ್ರಾಮ
* ನೋಯ್ಡಾ
* ಘಾಜಿಯಾಬಾದ್
* ಫರಿದಾಬಾದ್
* ಗುಜರಾತ್‌ನ 33 ಜಿಲ್ಲಾ ಕೇಂದ್ರಗಳಲ್ಲಿ.

ಪ್ಯಾನ್‌ ಇಂಡಿಯಾ ಕವರೇಜ್‌

ಪ್ಯಾನ್‌ ಇಂಡಿಯಾ ಕವರೇಜ್‌

ಇತ್ತೀಚಿಗೆ ನಡೆದ ರಿಲಯನ್ಸ್ ಜಿಯೋ ಟೆಲಿಕಾಂನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಜಿಯೋ, 2022 ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5G ಅನ್ನು ನಿಯೋಜಿಸುವುದಾಗಿ ಘೋಷಿಸಿತು. ಇದಲ್ಲದೆ, ಡಿಸೆಂಬರ್ 2023 ರ ವೇಳೆಗೆ ಜಿಯೋ ಟ್ರೂ 5G (Jio True 5G) ಸೇವೆಯನ್ನು ಪ್ಯಾನ್‌ ಇಂಡಿಯಾ ಕವರೇಜ್ ಮಾಡುವ ಗುರಿಯನ್ನು ಒಳಗೊಂಡಿದೆ.

ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

ಜಿಯೋ ಟ್ರೂ 5G ಆಕ್ಟಿವ್ ಮಾಡುವುದು ಹೇಗೆ?

- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 'ಸೆಟ್ಟಿಂಗ್ಸ್' ಆಪ್ ತೆರೆಯಿರಿ.
- 'ಮೊಬೈಲ್ ನೆಟ್‌ವರ್ಕ್‌' ಗೆ ಆಯ್ಕೆಗೆ ಹೋಗಿ.
- ಈಗ ಜಿಯೋ ಸಿಮ್ ಆಯ್ಕೆ ಮಾಡಿ.
- ಈಗ 'ಆದ್ಯತೆಯ ನೆಟ್‌ವರ್ಕ್ ಪ್ರಕಾರ' ಆಯ್ಕೆಯನ್ನು ಟ್ಯಾಪ್ ಮಾಡಿ.
- ಬಳಿಕ, 5G ನೆಟ್‌ವರ್ಕ್‌ ಪ್ರಕಾರವನ್ನು ಆಯ್ಕೆ ಮಾಡಿ.

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ - NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ.

Best Mobiles in India

English summary
JIO LAUNCHES TRUE 5G SERVICES IN MYSURU AND 10 OTHER CITIES AS A NEW YEAR TRIBUTE TO JIO USERS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X