ವಿದ್ಯಾರ್ಥಿಗಳಿಗೆ ಬಂಪರ್: ಜಿಯೋದಲ್ಲಿ ಇಂಟರ್ನ್‌ಷಿಪ್..! ಸೇರುವುದು ಹೇಗೆ..?

|

ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಕಂಪನಿಗಳಲ್ಲಿ ಒಂದಾಗಿರುವ ಜಿಯೋ, ಹೊಸಾಗಿ ಡಿಜಿಟಲ್ ಚಾಂಪಿಯನ್ಸ್' ಸೇವೆಯನ್ನು ಪರಿಚಯಿಸಿದ್ದು. ಇದೊಂದು 5 - ವಾರಗಳ ವಿದ್ಯಾರ್ಥಿ ಕಲಿಕಾ ಕಾರ್ಯಕ್ರಮವಾಗಿದೆ. ಡಿಜಿಟಲ್ ಯುಗದಲ್ಲಿ ಉದ್ಯಮಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ಯುವಕರನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಇದಾಗಿದೆ.

ವಿದ್ಯಾರ್ಥಿಗಳಿಗೆ ಬಂಪರ್: ಜಿಯೋದಲ್ಲಿ ಇಂಟರ್ನ್‌ಷಿಪ್..! ಸೇರುವುದು ಹೇಗೆ..?

ಈ ಕಾರ್ಯಕ್ರಮವು ಡಿಜಿಟಲ್ ಸೊಲ್ಯೂಶನ್ಸ್ ಕುರಿತ ಜ್ಞಾನವನ್ನು ದೇಶದ ಯುವಕರೊಂದಿಗೆ ಹಂಚಿಕೊಂಡು, ಅವರನ್ನು ಡಿಜಿಟಲ್ ಚಾಂಪಿಯನ್‍ಗಳನ್ನಾಗಿಸುವ ಹಾಗೂ ಅವರ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಿದ್ದು, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

 ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಅರಿವು:

ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಅರಿವು:

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನಗಳ ಕುರಿತು ಮತ್ತು ಡಿಜಿಟಲ್ ಹೇಗೆ ಧನಾತ್ಮಕವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಭವಿಷ್ಯದಲ್ಲಿ ಧನಾತ್ಮಕ ಪರಿಣಮ ಬೀರಲಿದೆ ಎಂಬುದನ್ನು ಕಲಿತುಕೊಳ್ಳಬಹುದಾಗಿದೆ. .

ವಿದ್ಯಾರ್ಥಿಗಳಿಗೆ ಡಿಜಿಟಲ್ ಟೂಲ್ ಕಿಟ್:

ವಿದ್ಯಾರ್ಥಿಗಳಿಗೆ ಡಿಜಿಟಲ್ ಟೂಲ್ ಕಿಟ್:

ವಿದ್ಯಾರ್ಥಿಗಳಿಗೆ ಡಿಜಿಟಲ್ ಟೂಲ್ ಕಿಟ್ ಮೂಲಕ ಹೊಸ ಯುಗದ ಸಮಸ್ಯೆ ಪರಿಹಾರದ ಮಾರ್ಗದರ್ಶನ ಮಾಡಲಾಗುತ್ತದೆ. ಈ ವಿಧಾನಶಾಸ್ತ್ರದ ಪ್ರಾಯೋಗಿಕ ಅನ್ವಯಿಸುವಿಕೆಯು ವಿದ್ಯಾರ್ಥಿಗಳು ನೈಜ ಜಗತ್ತಿನ ಪರಿಹಾರಗಳತ್ತ ತೆರೆದುಕೊಳ್ಳುತ್ತಾ, ನಿರ್ಣಾಯಕ ಕೌಶಲ್ಯಗಳ ಕಲಿತುಕೊಳ್ಳುವಲ್ಲಿ ಇದು ನೆರವಾಗಲಿದೆ.

800 ವಿದ್ಯಾರ್ಥಿಗಳಿಗೆ ಅವಕಾಶ:

800 ವಿದ್ಯಾರ್ಥಿಗಳಿಗೆ ಅವಕಾಶ:

ಈ ಡಿಜಿಟಲ್ ಚಾಂಪಿಯನ್ಸ್ ಕಾರ್ಯಕ್ರಮದ ಅಡಿಯಲ್ಲಿ 4 ಬ್ಯಾಚ್ಗಳನ್ನು ದೇಶಾದ್ಯಂತ ನಡೆಸಲಿದ್ದು, ಮೊದಲ ಬ್ಯಾಚ್ ಮೇ 21ರಿಂದ ಆರಂಭಗೊಳ್ಳಲಿದೆ. ಪ್ರತಿ ಇಂಟರ್ನ್‍ಶಿಪ್ 5 ವಾರಗಳ ಕಾಲ ಇರಲಿದ್ದು, 800 ನಗರಗಳ ಪದವಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಬ್ಯಾಚ್‍ಗಳಿಗೆ ನೋಂದಣಿ ಮಾಡಿಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗ https://careers.jio.com/Champions.aspx ಗೆ ಭೇಟಿ ನೀಡಿ ಡಿಜಿಟಲ್ ಚಾಂಪಿಯನ್ಸ್ ಗಾಗಿ ನೋಂದಣಿ ಮಾಡಿಕೊಳ್ಳಬಹುದು.

ಡಿಜಿಟಲ್ ಇಂಡಿಯಾ:

ಡಿಜಿಟಲ್ ಇಂಡಿಯಾ:

ತಂತ್ರಜ್ಞಾನ ಕಂಪನಿಯಾಗಿರುವ ಜಿಯೋ, ಹೊರಹೊಮ್ಮುತ್ತಿರುವ ಡಿಜಿಟಲ್ ತಂತ್ರಜ್ಞಾನಗಳಲ್ಲಿ ಅತ್ಯಾಕರ್ಷಕ ಅವಕಾಶಗಳನ್ನು ಉದ್ಯಮಗಳು ಅನ್ವೇಷಿಸುತ್ತಿರುವುದನ್ನು ಗುರುತಿಸಿದೆ. ಸಾವಿರಾರು ಪದವಿ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಒದಗಿಸುವ ಮೂಲಕ, ಜಿಯೋ ಪ್ರತಿಭಾವಂತರ ಕೂಟವನ್ನು ಸೃಷ್ಟಿಸಲಿದೆ. ನಾಳೆಯ ಡಿಜಿಟಲ್ ಇಂಡಿಯಾದ ಪ್ರಗತಿ ಆಂದೋಲನಕ್ಕೆ ಇದು ಅಗತ್ಯವಾಗಿದೆ.

Best Mobiles in India

English summary
Jio learning program - Digital Champions. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X