ಆನ್ಲೈನ್ ಪ್ರಿಯರಿಗೆ ಗೇಮ್‌ಗಳ ಸುಗ್ಗಿ: ಜಿಯೋದಿಂದ 'ಗೇಮಿಂಗ್ ಮಾಸ್ಟರ್ಸ್ 2.0' ಟೂರ್ನಮೆಂಟ್!

|

ಭಾರತದಲ್ಲಿ ಈಗಾಗಲೇ ಆಡುತ್ತಿರುವ ಗೇಮರುಗಳು ಮತ್ತು ನೂತನ ಆನ್‌ಲೈನ್ ಗೇಮಿಂಗ್ ಉತ್ಸಾಹಿಗಳು, ವೃತ್ತಿಪರ ಗೇಮರುಗಳಿಗೆ ಜಿಯೋ ಮತ್ತು ಮೆಡಿಯಾಟೆಕ್ ಒಗ್ಗೂಡಿ ಸ್ಪರ್ಧೆಯನ್ನು ನಡೆಸುತ್ತಿವೆ. ಈ ಅತ್ಯಂತ ಜನಪ್ರಿಯ ಆಟದ ಶೀರ್ಷಿಕೆಗಳಲ್ಲಿ ಒಂದಾದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಜೊತೆಗೆ 'ಗೇಮಿಂಗ್ ಮಾಸ್ಟರ್ಸ್ 2.0' ಅನ್ನು ಪ್ರಾರಂಭಿಸಲು ಜಿಯೋ ಮತ್ತು ಮೆಡಿಯಾಟೆಕ್ ಕೈಜೋಡಿಸಿವೆ.

ಆನ್ಲೈನ್ ಪ್ರಿಯರಿಗೆ ಗೇಮ್‌ಗಳ ಸುಗ್ಗಿ: ಜಿಯೋದಿಂದ 'ಗೇಮಿಂಗ್ ಮಾಸ್ಟರ್ಸ್ 2.0'!

12.5 ಲಕ್ಷ ರುಪಾಯಿ ಮೌಲ್ಯದ ಬಹುಮಾನಗಳನ್ನು ಪಡೆಯಲು ಉತ್ಸಾಹಿ ಮತ್ತು ವೃತ್ತಿಪರ ಗೇಮರ್ ಗಳಿಗೆ ಸುವರ್ಣಾವಕಾಶ ಕಲ್ಪಿಸಿವೆ. ಗೇಮಿಂಗ್ ಮಾಸ್ಟರ್ಸ್‌ನ ಎರಡನೇ ಸೀಸನ್ ನವೆಂಬರ್ 23 ರಂದು ಪ್ರಾರಂಭವಾಗಲಿದೆ. ಸ್ಪರ್ಧೆಯಲ್ಲಿ ಭಾಗಿಯಾಗಲು ಯಾವುದೇ ಪ್ರವೇಶ ಶುಲ್ಕ ಇಲ್ಲ. ಅಲ್ಲದೇ ಪ್ರತಿ ಗೇಮರ್ ಗಳಿಗೆ 'ಆಟ ಆಡಿ ಮತ್ತು ಪ್ರತಿದಿನ ಗೆಲ್ಲಿರಿ' ಸರಣಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಫ್ರೀ ಫೈರ್‌ ಮೊದಲ ಸೀಸನ್‌ನಲ್ಲಿ ಅಭೂತಪೂರ್ವ ಯಶಸ್ಸು ದಕ್ಕಿತ್ತು. 14,000 ತಂಡಗಳು ಪಾಲ್ಗೊಂಡಿದ್ದವು.

ಗೇಮಿಂಗ್ ಮಾಸ್ಟರ್ಸ್ ವಿವರ:
ಆನ್‌ಲೈನ್ ಗೇಮಿಂಗ್ ನಲ್ಲಿ ಕ್ರಾಂತಿತರಲು ಭಾರತದ ಅತಿದೊಡ್ಡ ಡಿಜಿಟಲ್ ಸೇವೆ ಒದಗಿಸುತ್ತಿರುವ ಜಿಯೋ ಮತ್ತು ವಿಶ್ವದ ನಾಲ್ಕನೇ-ಅತಿದೊಡ್ಡ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಕಂಪನಿಯಾದ ಮೀಡಿಯಾ ಟೆಕ್ ಒಗ್ಗೂಡಿ ರೂಪಿಸಿರುವ ಉಪಕ್ರಮವೇ ಇ ಸ್ಪೋರ್ಟ್ಸ್ ಗೇಮಿಂಗ್. ಪ್ರಸ್ತುತ ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ನಲ್ಲಿ ಮೀಡಿಯಾ ಟೆಕ್ ಮುಂಚೂಣಿಯಲ್ಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 5 ಜಿ ಸಿರೀಸ್ ಮತ್ತು ಮೀಡಿಯಾ ಟೆಕ್ ಹೆಲಿಯೊ ಜಿ ಸಿರೀಸ್ ಚಿಪ್‌ಸೆಟ್‌ಗಳೊಂದಿಗೆ ಭಾರತೀಯ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ವಿಸ್ಮಯಕಾರಿ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಇದು ಸುಧಾರಿತ ಮೀಡಿಯಾ ಟೆಕ್ ಹೈಪರ್‌ಇಂಜಿನ್ ಗೇಮಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ಗೇಮಿಂಗ್ ಮಾಸ್ಟರ್ಸ್ ಕ್ರಾಫ್ಟನ್‌ನ ಹಿಟ್ ಬ್ಯಾಟಲ್ ರಾಯಲ್ ಗೇಮ್ ಒಳಗೊಂಡಿರುತ್ತದೆ, ಇದು ಜಿಯೋಗೇಮ್ಸ್ ಪ್ಲಾಟ್‌ಫಾರ್ಮ್ ಮೂಲಕ ಜಿಯೋ ಮತ್ತು ಜಿಯೋಯೇತರ ಬಳಕೆದಾರರಿಗೆ ಲಭ್ಯವಾಗಲಿದೆ.

ಪಂದ್ಯಾವಳಿಯು ವರ್ಚುವಲ್ ಗೇಮಿಂಗ್ ಅಖಾಡದಲ್ಲಿ ಆಟಗಾರರ ಕೌಶಲ್ಯ, ತಂಡದ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸುತ್ತದೆ. ಗೆದ್ದವರಿಗೆ ₹12,50,000 ಮೌಲ್ಯದ ಬಹುಮಾನ.

'ಪ್ಲೇ & ವಿನ್ ಡೈಲಿ' ಸರಣಿಯಡಿ ಗೇಮರುಗಳು ನಿತ್ಯವೂ ಆಡಿ ಗೆಲ್ಲಬಹುದು. ಗೆದ್ದವರಿಗೆ ಅಂತಿಮ ಚಾಂಪಿಯನ್‌ಶಿಪ್‌ಗಾಗಿ ವೃತ್ತಿಪರ ತಂಡಗಳೊಂದಿಗೆ ಸ್ಪರ್ಧಿಸುವ ಅವಕಾಶವೂ ಲಭ್ಯವಾಗಲಿದೆ.

12ನೇ ನವೆಂಬರ್ 2021 ರಿಂದ ನೋಂದಣಿ ಆರಂಭ. 23ನೇ ನವೆಂಬರ್ 2021 ರಿಂದ 10ನೇ ಜನವರಿ 2022ರವರೆಗೆ ಪಂದ್ಯಾವಳಿ ನಡೆಯಲಿದೆ. JioGames Watch, JioTV HD Esports Channel, Facebook Gaming ಮತ್ತು JioGames YouTube ಚಾನೆಲ್ ಗಳಲ್ಲಿ ಲೈವ್ ಆಗಿ ಪಂದ್ಯಾವಳಿಗಳನ್ನು ವೀಕ್ಷಿಸಬಹುದು.

ನೋಂದಣಿ ವಿವರ:
https://play.jiogames.com ನಲ್ಲಿ ನೋಂದಾಯಿಸಿ.
Jio ಮತ್ತು Jio ಅಲ್ಲದ ಬಳಕೆದಾರರಿಗೆ ನೋಂದಣಿ ಉಚಿತ,
ಯಾವುದೇ ಶುಲ್ಕವಿಲ್ಲ.
ಹೆಚ್ಚಿನ ಮಾಹಿತಿಗಾಗಿ https://play.jiogames.com ಗೆ ಭೇಟಿ ನೀಡಿ.

Best Mobiles in India

English summary
Jio, MediaTek Launch ‘Gaming Masters 2.0’ BGMI Tournament: All Details Here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X