ಜಿಯೋ ಮಾನ್ಸೂನ್ ಆಫರ್: ಕೇವಲ 501 ರೂ.ಗೆ 'ಜಿಯೋ ಫೋನ್ 2' ಪಡೆಯುವುದು ಹೇಗೆ?

|

ಮುಂಬೈನಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್‌ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋಗೆ ಸಂಬಂಧಿಸಿದಂತೆ ಹಲವು ಘೋಷಣೆಗಳ ಜತೆಗೆ ಜಿಯೋಫೋನ್ 2 ಕೂಡ ಲಾಂಚ್ ಆಗಿರುವ ವಿಷಯ ನಿಮಗೆಲ್ಲಾ ಈಗಾಗಲೇ ತಿಳಿದಿದೆ ಎನ್ನಬಹುದು. ಸ್ಮಾರ್ಟ್‌ಫೀಚರ್ ಹೊಂದಿರುವ ಈ ಹೊಸ 'ಜಿಯೋ ಫೋನ್ 2 'ಹಿಂದಿನ ಜಿಯೋ ಫೋನ್‌ಗಿಂತ ವಿಭಿನ್ನವಾಗಿದ್ದು, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿ ಸೃಷ್ಟಿಸಲು ತಯಾರಾಗಿದೆ.

ಟೆಲಿಕಾಂ ಆಪರೇಟರ್‌ಗಳಿಗಷ್ಟೇ ಅಲ್ಲದೇ ಮೊಬೈಲ್ ತಯಾರಿಕಾ ಕಂಪನಿಗಳಿಗೂ ಸ್ಪರ್ಧೆ ನೀಡುವ ತವಕದಲ್ಲಿ ಮಾರುಕಟ್ಟೆಗೆ ಬರುತ್ತಿರುವ 'ಜಿಯೋ ಫೋನ್ 2' ಇದೇ ಆಗಸ್ಟ್ 15 ರಿಂದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. 2.5 ಕೋಟಿ ಬಳಕೆದಾರರನ್ನು ಹೊಂದಿರುವ ಜಿಯೋ ಫೋನ್‌ಗೆ ಪ್ರತಿಯಾಗಿ ಜಿಯೋಫೋನ್ 2 ಲಾಂಚ್ ಆಗಿದ್ದು, ಹಳೆಯ ಜಿಯೋ ಫೋನ್ ಅನ್ನು ಜಿಯೋ ಫೋನ್‌ 2 ಗೆ ಅಪ್‌ಗ್ರೇಡ್ ಮಾಡಿಕೊಳ್ಳುವ ಆಯ್ಕೆಯನ್ನು ಸಹ ಜಿಯೋ ಪ್ರಕಟಿಸಿದೆ.!

ಜಿಯೋ ಮಾನ್ಸೂನ್ ಆಫರ್: ಕೇವಲ 501 ರೂ.ಗೆ 'ಜಿಯೋ ಫೋನ್ 2' ಪಡೆಯುವುದು ಹೇಗೆ?

ಜೊತೆಗೆ ಮಾನ್ಸೂನ್ ಹಂಗಾಮಾ ಆಫರ್‌ನೊಂದಿಗೆ ಹಳೆಯ ಜಿಯೋ ಫೋನ್‌ ಅನ್ನು ನೂತನ ಜಿಯೋ ಫೋನ್‌ 2ಗೆ ಕೇವಲ 501 ರೂಪಾಯಿಗಳಲ್ಲಿ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಸಹ ಜಿಯೋ ನೀಡಿದೆ. ಹಾಗಾದರೆ, ಜಿಯೋ ಫೋನ್‌ ಅನ್ನು ನೂತನ ಜಿಯೋ ಫೋನ್‌ 2ಗೆ ಕೇವಲ 501 ರೂಪಾಯಿಗಳಲ್ಲಿ ಬದಲಾಯಿಸಿಕೊಳ್ಳುವುದು ಹೇಗೆ?, ಜಿಯೋ ಫೋನ್ 2 ಸ್ಮಾರ್ಟ್‌ಫೋನ್ ಹೊಂದಿರುವ ಎಲ್ಲಾ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಹೊಸ ಜಿಯೋ ಫೋನ್ 2 ವಿನ್ಯಾಸ ಮತ್ತು ಡಿಸ್‌ಪ್ಲೇನಲ್ಲಿ ಜಿಯೋ ಫೋನ್‌ಗಿಂತಲೂ ವಿಭಿನ್ನವಾಗಿದೆ. QWERTY ಕೀಪ್ಯಾಡ್‌ ಜತೆಗೆ 4 ವೇ ನ್ಯಾವಿಗೇಷನ್ ಪ್ಯಾಡ್‌ನ್ನು ಜಿಯೋ ಫೋನ್ 2 ಹೊಂದಿದೆ. ಆದರೆ, ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು 2.4 ಇಂಚ್ ಡಿಸ್‌ಪ್ಲೇ ಹೊಂದಿವೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಜಿಯೋ ಫೋನ್ 2 ಜಿಯೋ ಫೋನ್‌ನಂತೆಯೇ ಕ್ಯಾಮೆರಾ ಫೀಚರ್‌ ಹೊಂದಿದ್ದು, 2 MP ಹಿಂಬದಿ ಕ್ಯಾಮೆರಾ ಮತ್ತು 0.3 MP (VGA) ಕ್ಯಾಮೆರಾವನ್ನು ಮುಂಬದಿಯಲ್ಲಿ ಹೊಂದಿದೆ. ಎರಡು ಫೋನ್‌ಗಳು ವಿಡಿಯೋ ರೆಕಾರ್ಡಿಂಗ್ ಮಾಡುವ ಸೌಲಭ್ಯ ಹೊಂದಿದ್ದು, ಫೀಚರ್ ಫೋನ್‌ಗಳಲ್ಲಿ ಉತ್ತಮ ಫೀಚರ್ಸ್‌ ಅನ್ನು ಹೊಂದಿದೆ.

ಮೆಮೊರಿ ಮತ್ತು ಒಎಸ್

ಮೆಮೊರಿ ಮತ್ತು ಒಎಸ್

ಜಿಯೋ ಫೋನ್ 2 ಮೆಮೊರಿ ವಿಚಾರದಲ್ಲೂ ವಿಭಿನ್ನವಾಗಿಲ್ಲ. ಜಿಯೋ ಫೋನ್‌ನಂತೆಯೇ 512MB RAM ಮತ್ತು 4GB ಆಂತರಿಕ ಸ್ಟೊರೇಜ್ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿ ನೋಡುವುದಾದರೆ ಎರಡು ಫೋನ್‌ಗಳು KaiOS ಹೊಂದಿವೆ.

ಸಂಪರ್ಕ ಮತ್ತು ಬ್ಯಾಟರಿ

ಸಂಪರ್ಕ ಮತ್ತು ಬ್ಯಾಟರಿ

ಸಂಪರ್ಕದ ವಿಚಾರಕ್ಕೆ ಬಂದರೆ ಜಿಯೋ ಫೋನ್ 2 ವಿಭಿನ್ನವಾಗಿದ್ದು, ಡ್ಯುಯಲ್ ಸಿಮ್‌ಗೆ ಬೆಂಬಲ ಮತ್ತು ವೋವೈ-ಫೈ ಫೀಚರ್ ಹೊಂದಿದೆ. ಜಿಯೋ ಫೋನ್‌ನ ಉಳಿದ ಫೀಚರ್‌ಗಳಾದ 4G ವೋಲ್ಟ್ ಬೆಂಬಲ, ಎಫ್‌ಎಂ ರೇಡಿಯೋ, ವೈ-ಫೈ, ಜಿಪಿಎಸ್ ಮತ್ತು ಎನ್‌ಎಫ್‌ಸಿ ಫೀಚರ್‌ಗಳನ್ನು ಹೊಂದಿದೆ. ಇನ್ನು 2000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಆಪ್‌ಗಳು

ಆಪ್‌ಗಳು

ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಎರಡು ಮೊಬೈಲ್‌ಗಳು ಜಿಯೋ ಆಪ್‌ಗಳಾದ ಮೈ ಜಿಯೋ, ಜಿಯೋ ಮ್ಯೂಸಿಕ್, ಜಿಯೋ ಟಿವಿಯಂತಹ ಆಪ್‌ಗಳನ್ನು ಒಳಗೊಳ್ಳಲಿವೆ. ಆದರೆ ಜಿಯೋ ಫೋನ್‌ 2 ರಲ್ಲಿ ಈ ಆಪ್‌ಗಳನ್ನು ಹೊರತುಪಡಿಸಿ ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ನಂತಹ ಆಪ್‌ಗಳು ಇರಲಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ಎಕ್ಸ್‌ಚೇಂಜ್ ಸೀಕ್ರೇಟ್ಸ್!

ಎಕ್ಸ್‌ಚೇಂಜ್ ಸೀಕ್ರೇಟ್ಸ್!

ಜಿಯೋ ಫೋನ್ 2 ಮೊಬೈಲ್‌ನ ಆರಂಭಿಕ ಬೆಲೆ 2,999 ರೂ.ಇದ್ದು, ಕೇವಲ 501 ರೂಪಾಯಿಗಳನ್ನು ಪಾವತಿಸಿ ಈ ಮೊದಲಿನ ರಿಲಾಯನ್ಸ್ ಜಿಯೋ ಪೋನ್ ಅನ್ನು ನೂತನ ಫೋನ್‌ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಇದೇ ತಿಂಗಳ 21 ರಿಂದ ಎಕ್ಸ್‌ಚೇಂಜ್ ಸೇವೆಯನ್ನು ಜಾರಿಗೊಳಿಸುವುದಾಗಿ ಜಿಯೋ ತಿಳಿಸಿದೆ. ಹಾಗಾಗಿ, ಜಿಯೋ ಅಫಿಷಿಯಲ್ ವೆಬ್‌ಸೈಟ್ ಮೂಲಕ ಪ್ರಸ್ತುತ ಜಿಯೋ ಬಳಕೆದಾರರು ಹೊಸ ಫೋನ್ ಬದಲಾವಣೆಗೆ ರಿಜಿಸ್ಟರ್ ಆಗಬೇಕು ಎಂದು ಕೆಲವು ಮಾಧ್ಯಮಗಳು ತಿಳಿಸಿವೆ.

Best Mobiles in India

English summary
Chairman Mukesh Ambani on Thursday at Reliance Industries' 41st annual general meeting announced the launch of new JioPhone 2. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X