ಹೊಸ ವರ್ಷಕ್ಕೆ ಜಿಯೋ ಭರ್ಜರಿ ಗಿಫ್ಟ್​: ಇಂದಿನಿಂದ 5 ವರ್ಷ ಗ್ರಾಹಕರಿಗಿಲ್ಲ ಚಿಂತೆ!!

  |

  ಹೊಸ ವರ್ಷದ ಆರಂಭದಲ್ಲೇ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ದೊಡ್ಡ ಉಡುಗೊರೆಗಳನ್ನು ನೀಡಲು ಮುಂದಾಗಿದೆ. ಇತ್ತೀಚಿಗಷ್ಟೇ 100 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಆಫರ್ ಮತ್ತು 200 ರೂ. ಒಳಗಿನ ಹೊಸ ಐದು ರೀಚಾರ್ಜ್ ಪ್ಯಾಕ್‌ಗಳನ್ನು ಪರಿಚಯಿಸಿದ್ದ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ಮಟ್ಟದ ಆಫರ್ ಅನ್ನು ನೀಡಿ ಗ್ರಾಹಕರ ಗಮನಸೆಳೆದಿದೆ.

  ದೇಶದ ಟೆಲಿಕಾಂ ಮಾರುಕಟ್ಟೆಯಲ್ಲೇ ದೊಡ್ಡ 4G ನೆಟ್‌ವರ್ಕ್ ಹೊಂದಿರುವ ರಿಲಾಯನ್ಸ್ ಜಿಯೋ, ತನ್ನ ಬಳಕೆದಾರರಿಗೆ ಟೆಲಿಕಾಂ ಹೊರತುಪಡಿಸಿ ಬೇರೆ ವಲಯಗಳಲ್ಲೂ ಕೂಡ ಹೆಚ್ಚಿನ ಆಯ್ಕೆಗಳನ್ನು ತಂದಿದೆ. ಭಾರತದಂತಹ ಕ್ರಿಕೆಟ್ ಪ್ರಿಯ ರಾಷ್ಟ್ರದಲ್ಲಿ ಇನ್ಮುಂದೆ ಜಿಯೋ ಬಳಕೆದಾರು 5 ವರ್ಷಗಳ ಕಾಲ ಯಾವುದೇ ಹಣ ತೆರದೆ ಉಚಿತವಾಗಿ ಕ್ರಿಕೆಟ್ ವೀಕ್ಷಿಸಬಹುದಾಗಿದೆ.

  ಹೊಸ ವರ್ಷಕ್ಕೆ ಜಿಯೋ ಭರ್ಜರಿ ಗಿಫ್ಟ್​: ಇಂದಿನಿಂದ 5 ವರ್ಷ ಗ್ರಾಹಕರಿಗಿಲ್ಲ ಚಿಂತೆ!

  ಹೌದು, ಜಿಯೋ ಟಿವಿ ಆಪ್‌ ಬಳಕೆದಾರರಿಗೆ ಮುಂದಿನ ಐದು ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಮ್ಯಾಚ್ ನಡೆದರು ಅದನ್ನು ಮಿಸ್ ಮಾಡಿಕೊಳ್ಳಬಾರದು ಎಂದು ಜಿಯೋ ಈ ಭರ್ಜರಿ ಸುದ್ದಿಯನ್ನು ನೀಡಿದೆ. ಹಾಗಾದರೆ, ಈ ವರ್ಷದಲ್ಲಿ ಆರಂಭವಾಗಿರುವ ಜಿಯೋ ಉಚಿತ ಕ್ರಿಕೆಟ್ ಚಂದಾದಾರಿಕೆಯ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೊಸ ವರ್ಷಕ್ಕೆ ಇದು ಭರ್ಜರಿ ಕೊಡುಗೆ!

  ಹೊಸ ವರ್ಷದ ಆರಂಭದಲ್ಲೇ ರಿಲಯನ್ಸ್​ ಜಿಯೋ ತನ್ನ ಬಳಕೆದಾರರಿಗೆ ಭರ್ಜರಿ ಉಡುಗೊರೆ ನೀಡಿದೆ. ಜಿಯೋ ಬಳಕೆದಾರರು ಮುಂದಿನ 5 ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ವೀಕ್ಷಿಸಬಹುದಾಗಿದ್ದು, 2019 ರಿಂದ ಆರಂಭವಾಗಲಿರುವ ಈ ವಿಶೇಷ ಸೇವೆಯ ಮೂಲಕ ಕ್ರಿಕೆಟ್​ ಪ್ರೇಮಿಗಳು ಜಿಯೋ ಟಿವಿಯಲ್ಲಿ ಲೈವ್​ ಆಗಿ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆದಿದ್ದಾರೆ.

  ಸ್ಟಾರ್​ ಇಂಡಿಯಾ ಜತೆಗೆ ಒಪ್ಪಂದ

  ದೇಶದ ಪ್ರಮುಖ ಕ್ರೀಡಾ ಟಿವಿ ಚಾನೆಲ್ ಸಂಸ್ಥೆ ಸ್ಟಾರ್​ ಇಂಡಿಯಾದೊಂದಿಗೆ ಜಿಯೋ ಒಪ್ಪಂದ ಮಾಡಿಕೊಂಡಿದೆ. ಟೀಮ್ ಇಂಡಿಯಾ ಭಾಗವಹಿಸುವ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ನೇರವಾಗಿ ಪ್ರಸಾರ ಮಾಡುವ ಹಕ್ಕನ್ನು ಸ್ಟಾರ್ ಇಂಡಿಯಾ ಹೊಂದಿದ್ದು, ಒಪ್ಪಂದದ ಪ್ರಕಾರ, ಮುಂದಿನ 5 ವರ್ಷಗಳ ಎಲ್ಲಾ ಕ್ರಿಕೆಟ್​ ಪಂದ್ಯಗಳ ಉಚಿತ ನೇರ ಪ್ರಸಾರ ಸೇವೆ ಸಿಗಲಿದೆ.

  ಎಲ್ಲಾ ಮಾದರಿಯ ಕ್ರಿಕೆಟ್

  ಸ್ಟಾರ್ ಇಂಡಿಯಾ ಟಿವಿ ಪ್ರಸಾರ ಹಕ್ಕನ್ನು ಹೊಂದಿರುವ ಟೀಮ್ ಇಂಡಿಯಾ ಆಡುವ ಎಲ್ಲಾ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಜಿಯೋ ಗ್ರಾಹಕರು ಉಚಿತವಾಗಿ ನೋಡಬಹುದಾಗಿದೆ. ಅಂತರಾಷ್ಟ್ರೀಯ T20, ODI ಮತ್ತು ಟೆಸ್ಟ್‌ ಪಂದ್ಯಗಳನ್ನು ಮಾತ್ರವಲ್ಲದೇ, ದೇಶದಲ್ಲಿ ಆಡುವ ರಣಜಿ ಪಂದ್ಯಗಳನ್ನು ಜಿಯೋದಲ್ಲಿಯೇ ನೋಡುವ ಅವಕಾಶವನ್ನು ಸಹ ಮಾಡಿಕೊಡಲಾಗಿದೆ.

  ನಾನ್‌ಸ್ಟಾಪ್ ಕ್ರಿಕೆಟ್ ವೀಕ್ಷಣೆ!

  ದೇಶದಲ್ಲಿ ಕ್ರಿಕೆಟ್ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಯಾಗಿದ್ದು, ನಾವು ಜಿಯೋ ಗ್ರಾಹಕರಿಗೆ ನಾನ್‌ಸ್ಟಾಪ್ ಕ್ರಿಕೆಟ್ ವೀಕ್ಷಣೆ ಮಾಡಲು ಅನುಮತಿಸುತ್ತಿದ್ದೇವೆ. ಮುಂದಿನ 5 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಮ್ಯಾಚ್ ನಡೆದರು ಅದನ್ನು ಜಿಯೋ ಬಳಕೆದಾರ ಕ್ರಿಕೆಟ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಬಾರದು ಎಂದು ಈ ಸೇವೆ ತಂದಿದ್ದಾಗಿ ಜಿಯೋ ತಿಳಿಸಿದೆ.

  ಇನ್ನು ಸಿಗಲಿವೆ ಅನೇಕ ಸೇವೆ

  ಜಿಯೋ ಕೇವಲ ಟೆಲಿಕಾಂ ಸೇವೆಗಳ ಮೇಲೆ ಮಾತ್ರವೇ ಹೆಚ್ಚಿನ ಗಮನವನ್ನು ಹರಿಸದೆ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅಗತ್ಯ ಎಂದು ಕಾಣಿಸಿಸುವ ಎಲ್ಲಾ ಹೊಸ ಮಾದರಿಯ ಸೇವೆಗಳನ್ನು ತನ್ನ ಗ್ರಾಹಕರಿಗೆ ನೀಡುವ ಪ್ರಯತ್ನವನ್ನು ಮಾಡುತ್ತಿದೆ. 2019 ರಲ್ಲಿ ಜಿಯೋ ತರಲು ಹೊರಟಿರುವ ಪ್ಲಾನ್‌ಗಳು ಮಾರುಕಟ್ಟೆಯಲ್ಲಿ ಎಲ್ಲವೂ ಜಿಯೋಮಯವಾಗುವ ನಿರೀಕ್ಷೆಯನ್ನು ಮೂಡಿಸಿದೆ.

  ಯಾರೂ ತಿಳಿಯದ 5 ರಹಸ್ಯ 'ಯೂಟ್ಯೂಬ್' ಟ್ರಿಕ್ಸ್!!

  ಪ್ರತಿದಿನ ಯುಟ್ಯೂಬ್ ಓಪನ್‌ ಮಾಡಿ, ವಿಡಿಯೋಗಳನ್ನು ವೀಕ್ಷಿಸುವ ನಾವು ಯೂಟ್ಯೂಬ್ ನೀಡಿರುವ ಕೆಲವು ಸವಲತ್ತುಗಳನ್ನು ಬಳಸಿಕೊಳ್ಳುವುದೇ ಇಲ್ಲ ಎಂದರೆ ನಿಮಗೆ ನಂಬಿಕೆ ಬರದಿರಬಹುದು. ಆದರೆ, ನಿಜವಾಗಿಯೂ ನಮಗೆ ಯೂಟ್ಯೂಬ್‌ನಲ್ಲಿರುವ ಹಲವು ವಿಷಯಗಳ ಬಗ್ಗೆ ಈ ವರೆಗೂ ತಿಳಿದೇ ಇಲ್ಲ ಎಂದರೆ ಖಂಡಿತಾ ಆಶ್ಚರ್ಯವೇನಿಲ್ಲ.

  ಹೌದು, ಯೂಟ್ಯೂಬ್ ತೆರೆದ ನಂತರ ವಿಡಿಯೊ ವೀಕ್ಷಣೆ ಮಾಡುವುದಷ್ಟೆ, ಅದರಲ್ಲಿ ಮತ್ತೇನನ್ನು ತಿಳಿದುಕೊಳ್ಳುವುದು ಇದೆ ಎಂದು ನೀವು ಪ್ರಶ್ನಿಸಬಹುದು. ಆದರೆ, ಯೂಟ್ಯೂಬ್‌ನಲ್ಲಿ ನೀವು ತಿಳಿಯದೇ ಇರಬಹುದಾದ ಹಲವು ಸೇವೆಗಳು ಲಭ್ಯವಿವೆ. ಜಿಐಎಫ್ ಕ್ರಿಯೇಟ್, ಸುಲಭ ವಿಡಿಯೋ ಡೌನ್‌ಲೋಡ್‌ನಂತಹ ಹಲವು ವಿಶೇಷ ಸೌಲಭ್ಯಗಳು ಕೆಲವರಿಂದ ಮರೆಮಾಚಿವೆ.

  ಹಾಗಾಗಿ, ಇಂದಿನ ಲೇಖನದಲ್ಲಿ ಜನಪ್ರಿಯ ವಿಡಿಯೋ ಜಾಲತಾಣ ಯೂಟ್ಯೂಬ್‌ನಲ್ಲಿರುವ ನೀವು ತಿಳಿಯದೇ ಇರಬಹುದಾದ ಕೆಲವು ಸೌಲಭ್ಯಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಕೆಳಗಿನ ಸ್ಲೈಡರ್‌ಗಳಲ್ಲಿ ಯೂಟ್ಯೂಬ್ ಬಳಕೆ ಮಾಡುವ ಎಲ್ಲಾ ಬಳಕೆದಾರರಿಗೂ ಖಂಡಿತವಾಗಿ ಸಹಾಯವಾಗುವಂತಹ ಮಾಹಿತಿಗಳು ಇವಾಗಿವೆ ಎಂದು ತಿಳಿದಿದ್ದೇವೆ.

  ಯೂಟ್ಯೂಬ್‌ನಲ್ಲಿ ಜಿಐಎಫ್ ಕ್ರಿಯೇಟ್.!

  ಈಗೆಲ್ಲಾ ಜಿಫ್‌ಗಳು ಫೇಮಸ್ ಆಗುತ್ತಿರುವುದು ನಿಮಗೆಲ್ಲಾ ಗೊತ್ತು ಅಲ್ಲವೇ? ಅಂತಹ ಜಿಫ್ ಅನ್ನು ಯೂಟ್ಯೂಬ್‌ನಲ್ಲಿಯೇ ಕ್ರಿಯೇಟ್ ಮಾಡಬಹುದು. ಬ್ರೌಸರ್‌ಟ್ಯಾಬ್‌ನಲ್ಲಿ ಯುಟ್ಯೂಬ್ ಮುಂಚೆ ಜಿಐಎಫ್ ಎಂಬ ಪದ ಸೇರಿಸಿ (gifyoutube) ವೆಬ್‌ಸೈಟ್ ತೆರೆದರೆ ಜಿಫ್ ಕ್ರಿಯೇಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಇಲ್ಲಿ ಯಾವುದೇ ವಿಡಿಯೋದಿಂದ 15 ಸೆಕೆಂಡ್‌ ಭಾಗವನ್ನು ಸೆಲೆಕ್ಟ್ ಮಾಡಿ ಅದನ್ನು ಜಿಐಎಫ್ ಪರಿವರ್ತಿಸಬಹುದು!

  ಕರೋಕೆಯನ್ನು ನೇರವಾಗಿ ಹುಡುಕಿ.

  ಮ್ಯೂಸಿಕ್ ಇದ್ದರೆ ನಾವು ಹಾಡಿದರೆ ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುತ್ತದೆಯೇ? ಹಾಗಾದರೆ, ನಿಮಗೆ ಯಾವ ಹಾಡಿನ ಮ್ಯೂಸಿಕ್ ಬೇಕು ಅದನ್ನು ಪಡೆಯಲು ಸಿಂಪಲ್ ಟ್ರಿಕ್ಸ್ ಇದೆ. ಯೂಟ್ಯೂಬ್‌ನ ಸರ್ಚ್ ಬಾಕ್ಸ್‌ನಲ್ಲಿ ಕರೋಕೆ (karaoke) ಅಂತ ಟೈಪ್‌ ಮಾಡಿ ಬಳಿಕ ನಿಮಗೆ ಬೇಕಾದ ಹಾಡಿನ ಹೆಸರನ್ನು ಟೈಪ್‌ ಮಾಡಿದರೆ ಸಾಕು. ಮಾಡಿದರೆ ಸಾಕು. ನಿಮಗೆ ಕರೋಕೆ ಸಾಂಗ್‌ ಸಿಕ್ಕು ಬಿಡುತ್ತದೆ.!

  ಡೌನ್‌ಲೋಡ್ ಮಾಡಬಹದು!

  ಯುಟ್ಯೂಬ್ ವಿಡಿಯೋ ಡೌನ್‌ಲೋಡ್‌ ಮಾಡಿಕೊಳ್ಳುವ ತೀರಾ ಸರಳ ಟ್ರಿಕ್ಸ್ ಒಂದು ಬಹುತೇಕರಿಗೆ ಇನ್ನು ಗೊತ್ತಿಲ್ಲ ಎನ್ನಬಹುದು. ನಿಮಗೆ ಬೇಕಾದ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಯೂಟ್ಯೂಬ್ ಲಿಂಕ್‌ನಲ್ಲಿ youtube ಮುಂದೆ ss ಸೇರಿಸಿದರೆ (www.ssyoutube.com) ಸಾಕು. ವಿಡಿಯೋ ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಗೆ ನೇರವಾಗಿ ತೆರಳುತ್ತೀರಾ. ಅಲ್ಲಿ ನಿಮಗೆ ಬೇಕಾದ ಫಾರ್ಮೆಟ್‌ಗಳಲ್ಲಿ ವಿಡಿಯೋ ಡೌನ್‌ಲೋಡ್ ಮಾಡಬಹುದು.

  ಜಾಹಿರಾತು ನಿಯಂತ್ರಿಸಿ!

  ಯುಟ್ಯೂಬ್‌ನಲ್ಲಿ ಬರುವ ಜಾಹೀರಾತುಗಳು ನಿಮಗೆ ಸಾಕಷ್ಟು ಕಿರಿಕಿರಿ ಎನಿಸುತ್ತದೆ ಎಲ್ಲವೇ? ಚಿಂತಿಸಬೇಡಿ. ಅವುಗಳನ್ನು ನಿಯಂತ್ರಿಸಬಹುದು. ಗೂಗಲ್‌ನಲ್ಲಿ ಆಡ್‌ ಪ್ರಿಫರೆನ್ಸ್‌ಗೆ ಹೋಗಿ ಮತ್ತು ಯಾವ ರೀತಿ ಜಾಹೀರಾತುಗಳು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಯ್ಕೆಗೆ ಅನುಸಾರವಾಗಿ ಆ ಜಾಹೀರಾತುಗಳು ನಿಮಗೆ ಕಾಣಿಸುವುದಿಲ್ಲ.

  ಸ್ಪೀಡ್ ಹೊಂದಿಸಿಕೊಳ್ಳಬಹುದು!

  ಯಾವುದೇ ವಿಡಿಯೋ ನೋಡುವಾಗ ಅದು ನಿಧಾನವಾಗಿ ಅಥವಾ ಫಾಸ್ಟ್ ಆಗಿ ನೋಡಬೇಕು ಎಂದೆನಿಸಿದರೆ ಅದಕ್ಕೂ ಯೂಟ್ಯೂಬ್ ಸಹಾಯ ಮಾಡುತ್ತದೆ. ಯುಟ್ಯೂಬ್ ಸೆಟ್ಟಿಂಗ್ಸ್‌ಗೆ ಹೋಗಿ ಅಲ್ಲಿರುವ ಸ್ಪೀಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡರೆ, ವಿಡಿಯೋ ಅನ್ನು ಶೇ.50 ಇಲ್ಲವೇ ಶೇ.25ರಷ್ಟು ಸ್ಲೋ ಅಥವಾ ಸ್ಪೀಡ್ ಮಾಡಿಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Reliance Jio, Star sign 5 yr deal to offer India cricket matches on JioTV. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more