4G ಡೌನ್‌ಲೋಡ್ ವೇಗದಲ್ಲಿ ಮತ್ತೆ ಜಿಯೋ ನಂಬರ್ ಒನ್!

|

ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿ ಭಾರ್ತಿ ಏರ್‌ಟೆಲ್‌ ಗಿಂತಲೂ ಉತ್ತಮ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಟಿಸಿರುವ ಸೆಪ್ಟೆಂಬರ್ ತಿಂಗಳ 4G ಡೌನ್‌ಲೋಡ್ ವೇಗದಲ್ಲಿ ಜಿಯೋ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೆಕೆಂಡಿಗೆ ಸರಾಸರಿ 21 ಮೆಗಾಬೈಟ್ ವೇಗದ 4G ಡೌನ್‌ಲೋಡ್ ಇಂಟರ್ನೆಟ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡುವ ಮೂಲಕ ಮತ್ತೆ ತಾನು ದಿಗ್ಗಜನಾಗಿರುವುದಾಗಿ ತೋರಿಸಿದೆ.

ಡೌನ್‌ಲೋಡ್ ವೇಗ

ಡೌನ್‌ಲೋಡ್ ವೇಗದಲ್ಲಿ ಜಿಯೋ ಏರ್‌ಟೆಲ್‌ಗಿಂತಲೂ 2.5 ಪಟ್ಟು ಅಧಿಕ ವೇಗವಾಗಿದೆ ಎಂಬುದು ಟ್ರಾಯ್ ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದ್ದು, ಸೆಪ್ಟೆಂಬರ್‌ನಲ್ಲಿ ಭಾರ್ತಿ ಏರ್‌ಟೆಲ್ ನೆಟ್‌ವರ್ಕ್ ಸರಾಸರಿ ಡೌನ್‌ಲೋಡ್ ವೇಗ 8.3 ಮೆಗಾಬೈಟ್ ಆಗಿದೆ. ಇದರ ನಂತರ ವೊಡಾಫೋನ್ 6.9 MBPS ವೇಗದಲ್ಲಿ ಮತ್ತು ಐಡಿಯಾ ಸೆಲ್ಯುಲಾರ್ 6.4 MBPS ಡೌನ್‌ಲೋಡ್ ವೇಗದಲ್ಲಿ ಡೇಟಾ ನೀಡುತ್ತಿವೆ. ಆದರೆ, ಐಡಿಯಾ ಸೆಲ್ಯುಲಾರ್ ಸೆಪ್ಟೆಂಬರ್‌ನಲ್ಲಿ 5.4 MBPS ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಟ್ರಾಯ್

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು (ಟ್ರಾಯ್) ನೈಜ ಸಮಯದ ಆಧಾರದ ಮೇಲೆ ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಡೇಟಾದ ಆಧಾರದ ಮೇಲೆ ಸರಾಸರಿ ವೇಗವನ್ನು ಲೆಕ್ಕಾಚಾರ ಹಾಕುತ್ತದೆ. ಟ್ರಾಯ್ ಪ್ರಕಟಿಸಿದ ದತ್ತಾಂಶವು ಓಪನ್‌ಸಿಗ್ನಲ್ ಸಮೀಕ್ಷೆಯ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಜಿಯೋ ಡೌನ್‌ಲೋಡ್ ವೇಗದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತೋರಿಸಿದೆ. ಆದರೆ, ಅಪ್‌ಲೋಡ್ ವಿಭಾಗದಲ್ಲಿ ಜಿಯೋ ಮೂರನೇ ಸ್ಥಾನಕ್ಕೆ ಇಳಿದಿದೆ ಎಂದು ನಾವು ಪಟ್ಟಿಯಿಂದ ತಿಳಿಯಬಹುದು.

ಆಗಸ್ಟ್‌

ಆದಾಗ್ಯೂ, ಆಗಸ್ಟ್‌ನಲ್ಲಿ 21.3Mbps ವೇಗಕ್ಕೆ ಹೋಲಿಸಿದರೆ ಜಿಯೋ ತನ್ನ 4 ಜಿ ಡೌನ್‌ಲೋಡ್ ವೇಗದಲ್ಲಿ ಕುಸಿತ ಕಂಡಿದೆ. ಏರ್‌ಟೆಲ್ ಸೆಪ್ಟೆಂಬರ್‌ನಲ್ಲಿ 8.2 Mbps ನಿಂದ 8.3 Mbps ವೇಗದಲ್ಲಿ ಸ್ವಲ್ಪ ಸುಧಾರಣೆಯನ್ನು ತೋರಿಸಿದೆ. ವೊಡಾಫೋನ್ ಡೌನ್‌ಲೋಡ್ ವೇಗವು ಆಗಸ್ಟ್‌ನಲ್ಲಿ 7.7 ಎಮ್‌ಬಿಪಿಎಸ್‌ನಿಂದ ಸೆಪ್ಟೆಂಬರ್‌ನಲ್ಲಿ 6.9 ಎಮ್‌ಬಿಪಿಎಸ್‌ಗೆ ಇಳಿದಿದೆ.ಮತ್ತೊಂದೆಡೆ, ಐಡಿಯಾ ಅಪ್‌ಲೋಡ್ ವೇಗವನ್ನು 5.4Mbps ನೊಂದಿಗೆ ಮುನ್ನಡೆಸುತ್ತಿದೆ, ಅದೇ ತಿಂಗಳಲ್ಲಿ ವೊಡಾಫೋನ್ 5.2Mbps ವೇಗದಲ್ಲಿದೆ.

3G

ಇನ್ನು 3G ವಿಷಯಕ್ಕೆ ಬಂದರೆ, ಕೇವಲ 3G ನೆಟ್‌ವರ್ಕ್ ಹೊಂದಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಗಿಂತಲೂ ಉತ್ತಮವಾಗಿದ್ದು, ಸರ್ಕಾರಿ ಟೆಲಿಕಾಂ ಆಪರೇಟರ್ ಬಿಎಸ್ಎನ್ಎಲ್ ಸೆಪ್ಟೆಂಬರ್‌ನಲ್ಲಿ 2.6 MBPS ಡೌನ್‌ಲೋಡ್ ವೇಗವನ್ನು ಮತ್ತು 1.3 MBPS ಅಪ್‌ಲೋಡ್ ವೇಗವನ್ನು ಹೊಂದಿದೆ. ಬಿಎಸ್‌ಎನ್‌ಎಲ್ ನಂತರ ವೊಡಾಫೋನ್ ಐಡಿಯಾ 1.9 ಎಮ್‌ಬಿಪಿಎಸ್, ಮತ್ತು ಏರ್‌ಟೆಲ್ ನೆಟ್‌ವರ್ಕ್ 3 ಜಿ ಡೌನ್‌ಲೋಡ್ ವೇಗವನ್ನು 1.5 ಎಮ್‌ಬಿಪಿಎಸ್ ದಾಖಲಿಸಿದೆ.

Best Mobiles in India

English summary
According to data released by the Telecom Regulatory Authority of India (TRAI), Reliance Jio has posted the highest average download speed in September at 21Mbps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X