ಜಿಯೋ ಗ್ರಾಹಕರಿಗೆ ಗುಡ್‌ನ್ಯೂಸ್‌; ಸಿಗುತ್ತೆ 1,500ರೂ.ಗಳ ಭಾರೀ ಕೊಡುಗೆ!

|

ಭಾರತದ ಮೂಂಚೂಣಿಯ ಟೆಲಿಕಾಂ ಆಪರೇಟರ್ ಆಗಿರುವ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರು ಇದೀಗ ಭರ್ಜರಿ ಕೊಡುಗೆ ತಿಳಿಸಿದೆ. ಗ್ರಾಹಕರು ಜಿಯೋ JioFi ಡಿವೈಸ್‌ ಅನ್ನು ಖರೀದಿಸಿದಾಗ ಬಿಗ್ ಕ್ಯಾಶ್‌ಬ್ಯಾಕ್ ಅನ್ನು ಘೋಷಿಸಿದೆ. ಇನ್ನು ಜಿಯೋ JioFi ಸಾಧನವು 4G ನೆಟ್‌ವರ್ಕ್‌ನಲ್ಲಿ ಕಾರ್ಯ ನಿರ್ವಹಿಸುವ ವೈ-ಫೈ ಹಾಟ್‌ಸ್ಪಾಟ್ ಸಾಧನವಾಗಿದೆ.

ಜಿಯೋಫೈ

ಜಿಯೋ ಟೆಲಿಕಾಂನ JioFi ಜಿಯೋಫೈ ಡಿವೈಸ್‌ ಅನ್ನು ಖರೀದಿಸಿದಾಗ ಗ್ರಾಹಕರಿಗೆ ಈಗ 1,500 ರೂ. ಗಳ ಕ್ಯಾಶ್‌ಬ್ಯಾಕ್‌ ಅನ್ನು ತಿಳಿಸಿದೆ. ಪ್ರಸ್ತುತ ಇದು ಹೆಚ್ಚು ಬೇಡಿಕೆಯಲ್ಲಿರುವ ಸಾಧನವಾಗಿದ್ದರೂ, ಇದು ಗಮನ ಸೆಳೆದಿದೆ. ಒಂದೇ ನೆಟ್‌ವರ್ಕ್‌ನೊಂದಿಗೆ ಹಲವಾರು ಸಾಧನಗಳನ್ನು ಸಂಪರ್ಕಿಸಲು ಈ ಡಿವೈಸ್ ಸಾಕಷ್ಟು ಉಪಯುಕ್ತ ಎನಿಸಿದೆ. ಇದರಲ್ಲಿ ಜಿಯೋ ಸಿಮ್‌ ಕಾರ್ಡ್‌ ಇದೆ ಮತ್ತು ಡೇಟಾ ಆಕ್ಸಸ್ ಮಾಡಲು ಅನುಕೂಲವಾಗಿದೆ.

ಕ್ಯಾಶ್‌ಬ್ಯಾಕ್

ಗ್ರಾಹಕರು 2,800 ರೂ. ಮೌಲ್ಯದ JioFi ಜಿಯೋಫೈ ಸಾಧನವನ್ನು ಖರೀದಿಸುತ್ತಿದ್ದರೆ, ಖರೀದಿಯ ಮೇಲೆ 1,500 ರೂ. ಕ್ಯಾಶ್‌ಬ್ಯಾಕ್ ಪಡೆಯಲು ನೀವು ಅರ್ಹರಾಗುತ್ತೀರಿ ಎಂದು ಜಿಯೋ ಹೇಳಿದೆ. ಇದು ಖರೀದಿ ಮೊತ್ತದ ಮೇಲೆ 50% ಕ್ಕಿಂತ ಹೆಚ್ಚು ಕ್ಯಾಶ್‌ಬ್ಯಾಕ್ ಆಗಿದೆ. ಗ್ರಾಹಕರು ಹತ್ತಿರದ ಯಾವುದೇ ಜಿಯೋ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಸಬಹುದು ಎಂದು ಜಿಯೋ ಹೇಳಿದೆ. ಇನ್ನು ನಿಮ್ಮ ಹತ್ತಿರದ ಜಿಯೋ ಸ್ಟೋರ್ ತಿಳಿಯಲು, ಜಿಯೋದ ಅಧಿಕೃತ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು ಅಥವಾ ಆಪ್‌ ಅನ್ನು ಡೌನ್‌ಲೋಡ್ ಮಾಡಬಹುದು. ಅಥವಾ ಗೂಗಲ್‌ನಲ್ಲಿ ಸರ್ಚ್ ಮಾಡಬಹುದು.

JioFi ಜಿಯೋಫೈ ಸಾಧನ

JioFi ಜಿಯೋಫೈ ಸಾಧನ

ಜಿಯೋ JioFi ಜಿಯೋಫೈ ಸಾಧನವು ಸಾಕಷ್ಟು ಚಿಕ್ಕದಾದ ರಚನೆಯನ್ನು ಹೊಂದಿದೆ. ಈ ಸಾಧನವನ್ನು ಸುಲಭಾವಗಿ ಮೊಬೈಲ್‌ನಂತೆ ಪ್ಯಾಂಟ್‌ನ ಪಾಕೆಟ್ ಅಥವಾ ಬ್ಯಾಗ್‌ನಲ್ಲಿ ಕೊಂಡೊಯ್ಯಬಹುದು. ಇದರಲ್ಲಿ ಬ್ಯಾಟರಿ ಸೌಲಭ್ಯ ಪಡೆದಿದ್ದು, ಚಾರ್ಜಿಂಗ್ ಮಾಡಬೇಕಿರುತ್ತದೆ.

JioFi ಜಿಯೋಫೈ ರೀಚಾರ್ಜ್‌ ಪ್ಲ್ಯಾನ್‌

JioFi ಜಿಯೋಫೈ ರೀಚಾರ್ಜ್‌ ಪ್ಲ್ಯಾನ್‌

ಜಿಯೋ ಟೆಲಿಕಾಂ JioFi ಯೋಜನೆಗಳು ಮಾಸಿಕ 30GB ಡೇಟಾವನ್ನು ವಿತರಿಸುವ 249 ರೂ. ಆಯ್ಕೆಯನ್ನು ಒಳಗೊಂಡಿವೆ. 40GB ಡೇಟಾದೊಂದಿಗೆ 299 ರೂ. ಯೋಜನೆ ಮತ್ತು 50GB ಡೇಟಾವನ್ನು ನೀಡುವ 349 ರೂ. ಯೋಜನೆ ಒಂದು ತಿಂಗಳ ವ್ಯಾಲಿಡಿಟಿ ಪಡೆದಿವೆ. ಒಮ್ಮೆ ತಿಂಗಳ ನಿಗದಿತ ಡೇಟಾ ಮಿತಿಯನ್ನು ಬಳಕೆ ಮಾಡಿದ ಬಳಿಕೆ, ಇಂಟರ್ನೆಟ್ ವೇಗವು 64Kbps ಗೆ ಕಡಿಮೆಯಾಗುತ್ತದೆ. ಇನ್ನು ಈ ರೀಚಾರ್ಜ್ ಆಯ್ಕೆಗಳು ಯಾವುದೇ ಧ್ವನಿ ಅಥವಾ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಹೊಂದಿಲ್ಲ.

ಜಿಯೋದ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 666ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 666 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋದ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 719ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋದ 1199ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 1199ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 1199ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋದ 1066ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋದ 1066ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 1066ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 173GB ಡೇಟಾ ದೊರೆಯಲಿದೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆಯ ಸಹ ದೊರೆಯಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 5GB ಡೇಟಾ ಲಭ್ಯವಾಗಲಿದೆ.

ಜಿಯೋ 299ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ 299ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ 299ರೂ. ಪ್ರಿಪೇಯ್ಡ್ ಯೋಜನೆಯು ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ದೈನಂದಿನ ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 56GB ಪ್ರಯೋಜನ ಸಿಗಲಿದೆ. ಜೊತೆಗೆ ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ ದೊರೆಯುತ್ತದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಮೂವಿಸ್, ಜಿಯೋ ನ್ಯೂಸ್ ಹಾಗೂ ಇತರೆ ಸೇವೆಗಳು ಸಿಗಲಿವೆ.

ಜಿಯೋ 333ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ಜಿಯೋ 333ರೂ. ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳು

ರಿಲಯನ್ಸ್ ಜಿಯೋದ 333 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು ದಿನಕ್ಕೆ 1.5 ಜಿಬಿ ಡೇಟಾ ಮತ್ತು 28 ದಿನಗಳವರೆಗೆ 100 ಫ್ರೀ ಎಸ್ಎಂಎಸ್/ ದಿನದೊಂದಿಗೆ ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಜಿಯೋ ಅಪ್ಲಿಕೇಶನ್‌ಗಳನ್ನು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್‌ಗೆ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಜೋಡಿಸಲಾಗುತ್ತದೆ. ಈ ಯೋಜನೆಯೊಂದಿಗೆ, ಹೊಸ ಗ್ರಾಹಕರಿಗೆ ಪ್ರೈಮ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ.

Best Mobiles in India

English summary
Jio Offering JioFi with Rs 1500 Benefit to Customers: Offer Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X