ಜಿಯೋ ಉಚಿತ ಫೋನ್ ಜಿಯೋಗೆ ಮಾತ್ರ ಸಪೋರ್ಟ್ ಆಗುತ್ತಾ?..ಇಲ್ಲಿದೆ ಉತ್ತರ!!!

ಪ್ರಸ್ತುತ ಜಿಯೋ ಪೋನ್ ಖರೀದಿಸಿದರೆ ಬೇರೆ ಯಾವುದೇ ಟೆಲಿಕಾಂಗೆ ಈ ಫೋನ್ ಸಪೋರ್ಟ್ ಮಾಡುವುದಿಲ್ಲ.!!

|

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಹವಾ ಎಬ್ಬಿಸಿರುವ ಉಚಿತ ಮೊಬೈಲ್ ಜಿಯೋ ಫೋನ್ ಬಗ್ಗೆ ಮತ್ತಷ್ಟು ಸುದ್ದಿಗಳು ಹೊರಬಿದ್ದಿದೆ!..4G ಸಪೋರ್ಟ್ ಆಗುವ ಮೊಬೈಲ್ ಬಗ್ಗೆ ಇದೀಗ ವೈರಲ್ ಆದ ಸುದ್ದಿಯೊಂದು ಹೊರಬಿದ್ದಿದ್ದು, ಈ ಫೋನ್ ಒಂದೇ ಸಿಮ್ ಹೊಂದಿದ್ದು, ಪ್ರಸ್ತುತ ಜಿಯೋಗೆ ಮಾತ್ರ ಸಪೋರ್ಟ್ ಆಗುತ್ತದೆ.!!

ಹೌದು, ಇದೀಗ ಬಿಡುಗಡೆಯಾಗುತ್ತಿರುವ ಜಿಜೋ ಫೋನ್ ಕೇವಲ 4G ವೋಲ್ಟ್ ಹೊಂದಿರುವ ನೆಟ್‌ವರ್ಕ್‌ಗೆ ಮಾತ್ರ ಸಪೋರ್ಟ್ ಮಾಡಲಿದ್ದು, ಪ್ರಸ್ತುತ 4G ವೋಲ್ಟ್ ಸೇವೆಯನ್ನು ಹೊಂದಿರುವ ಏಕೈಕ ಟೆಲಿಕಾಂ ಜಿಯೋ ಆಗಿದೆ.!! ಹಾಗಾಗಿ, ಪ್ರಸ್ತುತ ಜಿಯೋ ಪೋನ್ ಖರೀದಿಸಿದರೆ ಬೇರೆ ಯಾವುದೇ ಟೆಲಿಕಾಂಗೆ ಈ ಫೋನ್ ಸಪೋರ್ಟ್ ಮಾಡುವುದಿಲ್ಲ.!!

ಅಂಬಾನಿ ತನ್ನ ಜಿಯೋ ನೆಟ್‌ವರ್ಕ್ ಅಭಿವೃದ್ದಿಪಡಿಸಲು ಈ ಮೊಬೈಲ್ ಬಿಡುಗಡೆ ಮಾಡುತ್ತಿದ್ದು, ಅದನ್ನು ಉಚಿತವಾಗಿಯೂ ನೀಡುತ್ತಿದ್ದಾರೆ. ಇಷ್ಟು ದಿವಸ ಕೇವಲ ಜಿಯೋ ಫೋನಿನ ಫೀಚರ್ಸ್ ಮಾತ್ರ ಬಿಡುಗಡೆಯಾಗಿದ್ದು, ಇದೀಗ ಜಿಯೋ ಫೋನ್‌ ಕಾರ್ಯನಿರ್ವಹಣೆ ಬಗ್ಗೆಯೂ ಮಾಹಿತಿ ಸಿಕ್ಕಿದೆ.!! ಹಾಗಾದರೆ ಅವು ಯಾವುವು? ವಿಶೆಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜಿಯೋ ಫೋನ್ ಬೆಲೆ:

ಜಿಯೋ ಫೋನ್ ಬೆಲೆ:

ಬೆಲೆ ರೂ.0 ಸಂಪೂರ್ಣ ಸೋನ್ನೆ, ಜಿಯೋ ಬಳಕೆದಾರರಿಗೆ ಫ್ರೀ. ಆದರೆ ಇದಕ್ಕಾಗಿ ರೂ.1,500 ಡೆಪಾಸಿಟ್ ಇಡಬೇಕಾಗಿದೆ. ಇದನ್ನು ಮೂರು ವರ್ಷದ ನಂತರ ನೀವು ಇದನ್ನು ವಾಪಸ್ ಪಡೆಯಬಹುದಾಗಿದೆ. ಇದು ಜಿಯೋ ಗುಣಮಟ್ಟಕ್ಕೆ ನೀಡುತ್ತಿರುವ ಖಾತರಿಯಾಗಿದೆ.

ಆಗಸ್ಟ್ 15ರಿಂದ ಉಚಿತ ಕರೆ-ಡೇಟಾ:

ಆಗಸ್ಟ್ 15ರಿಂದ ಉಚಿತ ಕರೆ-ಡೇಟಾ:

ಇದಲ್ಲದೇ ಫೀಚರ್ ಫೋನ್ ಬಳಕೆದಾರರಿಗೆ ವಾಯ್ಸ್ ಕಾಲ್ ಸಂಪೂರ್ಣ ಉಚಿತ ನೀಡಲು ಮುಖೇಶ್ ಅಂಬಾನಿ ಮುಂದಾಗಿದ್ದಾರೆ. ಫೋನ್ ಇರುವವರೆಗೆ ಉಚಿತ ಕರೆ ಮಾಡಬಹುದು. ಅದುವೇ ಯಾವುದೇ ಟ್ಯಾರಿಫ್ ಇಲ್ಲದೆ!! .ಜೊತೆಗೆ ರೂ.24 ಮತ್ತು ರೂ.54 ಪ್ಲಾನ್ ಇದರಲ್ಲಿ ರೂ.24 ಒಂದು ದಿನ ಮತ್ತು ರೂ.54ಕ್ಕೆ ಒಂದು ವಾರ ವ್ಯಾಲಿಡಿಟಿಯನ್ನು ಹೊಂದಿರಲಿದೆ.

ಜಿಯೋ ಪೋನಿನಿಂದ ಟಿವಿ ಕನೆಕ್ಟ್ ಮಾಡಿಕೊಳ್ಳಬಹುದು:

ಜಿಯೋ ಪೋನಿನಿಂದ ಟಿವಿ ಕನೆಕ್ಟ್ ಮಾಡಿಕೊಳ್ಳಬಹುದು:

ಈ ಸಣ್ಣ ಫೋನಿನಲ್ಲಿ ಟಿವಿ ಕೇಬಲ್ ಆಯ್ಕೆಯನ್ನು ನೀಡಿದ್ದು, ಇದಕ್ಕೆ ಯಾವುದೇ ಟಿವಿಯನ್ನು ಬೇಕಾದರು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ಹಳೇ ಟಿವಿಯನ್ನು ಕನೆಕ್ಟ್ ಮಾಡಿಕೊಂಡು ಟಿವಿ ನೋಡಬಹುದು.

ವಾಯ್ಸ್ ಕಮಾಂಡಿಗ್ ಲಭ್ಯವಿದೆ.

ವಾಯ್ಸ್ ಕಮಾಂಡಿಗ್ ಲಭ್ಯವಿದೆ.

ಜಿಯೋ ತನ್ನ ಬಳಕೆದಾರಿಗೆ ಅತ್ಯಂತ ವಿಶಿಷ್ಠ ಫೋನ್ ನೀಡಿದೆ. ಇದು ನಿಮ್ಮ ಮೇಸೆಜ್ ಗಳನ್ನು ವಾಯ್ಸ್ ಮೂಲಕವೇ ಕಳುಹಿಸಬಹುದಾಗಿದ್ದು, ಆಪಲ್ ಸಿರಿಗೆ ಸ್ಪರ್ಧೆ ನೀಡುವಮಾದರಿಯಲ್ಲಿದೆ. ಇಂಟರ್ನೆಟ್ ನಲ್ಲಿಯೂ ವಾಯ್ಸ್ ಕಮಾಂಡಿಂಗ್ ಮೂಲಕ ಸರ್ಚ್ ಮಾಡಬಹುದಾಗಿದೆ.

ಜಿಯೋ ಆಪ್ ಬಳಕೆ:

ಜಿಯೋ ಆಪ್ ಬಳಕೆ:

ಈ ಜಿಯೋ ಫೀಚರ್ ಫೋನಿನಲ್ಲಿ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ ಜಿಯೋ ಆಪ್‌ಗಳು ಇರಲಿದೆ. ಜಿಯೋ ಸಿನಿಮಾ, ಜಿಯೋ ಮನಿಯಂತಹ ಎಲ್ಲಾ ಆಪ್‌ಗಳನ್ನು ಈ ಫೋನ್‌ ಮೂಲಕವೇ ಬಳಕೆ ಮಾಡಬಹುದಾಗಿದೆ.!!

 ಮೋದಿ ಆಪ್ ಮತ್ತು ಡಿಜಿಟಲ್ ಪೇಮೆಂಟ್:

ಮೋದಿ ಆಪ್ ಮತ್ತು ಡಿಜಿಟಲ್ ಪೇಮೆಂಟ್:

ಜಿಯೋ ಫೀಚರ್ ಫೋನಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ ಅನ್ನು ನೀಡಲಾಗಿದ್ದು, ಇದರಲ್ಲಿ ಅವರ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಜೊತೆಗೆ ಕೇವಲ ಒಂದೇ ಒಂದು ಬಟನ್ ಒತ್ತುವ ಮೂಲಕ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ. ಇದು ಸಂಪೂರ್ಣ ಸುರಕ್ಷಿತವಾಗಿದೆ.

<strong>ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ?..ಈ ಸ್ಟೋರಿ ನೋಡಿ!!</strong>ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ?..ಈ ಸ್ಟೋರಿ ನೋಡಿ!!

Best Mobiles in India

English summary
Jio Phone will come with single SIM support. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X