Subscribe to Gizbot

ಉಚಿತವಾಗಿ ಜಿಯೋ ಫೋನ್ ನೀಡಲು ಕಾರಣ ಏನು?.ಅಂಬಾನಿ ಮಾಡಿರುವ ಪ್ಲಾನ್ ಇಲ್ಲಿದೆ!!

Written By:

ಆಗಸ್ಟ್‌ 15 ರಿಂದ ಜಿಯೋ ಫೋನ್‌ ಟೆಸ್ಟಿಂಗ್ ಆರಂಭವಾಗಲಿದ್ದು, ಆಗಸ್ಟ್‌ 24 ರಿಂದ ಫ್ರೀ ಬುಕ್ಕಿಂಗ್ ಆರಂಭವಾಗಲಿದೆ. ಸೆಪ್ಟಂಬರ್‌ ವೇಳೆಗೆ ಉಚಿತ ಜಿಯೋ ಫೋನ್ ಗ್ರಾಹಕರ ಕೈ ಸೇರಲಿದೆ.! ನಂತರ ಕೇವಲ 153 ರೂ.ಗೆ ಅನ್‌ಲಿಮಿಟೆಡ್‌ 4ಜಿ ಡಾಟಾ ಹಾಗೂ ಉಚಿತ ಕರೆ, ಎಸ್‌ಎಂಎಸ್‌ ಸೇವೆ ಸಿಗಲಿದೆ.!!

ಹೌದು, ಪ್ರಸ್ತುತ ಭಾರತದ ಟೆಲಿಕಾಂನಲ್ಲಿ ಇದಕ್ಕಿಂತ ಬಿಗ್‌ನ್ಯೂಸ್ ಮತ್ತೋಂದಿಲ್ಲ ಎನ್ನಬಹುದು.! ಯಾರೂ ಊಹಿಸದ ಹಾಗೆ ಒಂದೇ ಒಂದು ಕ್ಷಣದಲ್ಲಿ ಇಡೀ ಪ್ರಪಂಚಕ್ಕೆ ಒಮ್ಮೆ ಶಾಕ್ ನೀಡಿದ ಅಂಬಾನಿ, ಉಚಿತವಾಗಿ ಫೋನ್‌ ನೀಡುವ ಮೂಲಕ ಮತ್ತೊಮ್ಮೆ ನಾನು ಭಾರತದಲ್ಲಿ ಉದ್ಯಮದ ಮಹಾರಾಜ ಎಂದು ಸಾಬೀತು ಮಾಡಿದ್ದಾರೆ.!!

ಹಾಗಾಗಿ, ಇಂದಿನ ಲೇಖನದಲ್ಲಿ ಅಂಬಾನಿ ಉಚಿತವಾಗಿ ಜಿಯೋ ಫೋನ್ ನೀಡಲು ಕಾರಣ ಏನು? ಅಂಬಾನಿಗೆ ಏನು ಲಾಭ? ಇದರಿಂದ ಜನರಿಗೆ ಏನು ಲಾಭ? ಮತ್ತು ಇತರ ಟೆಲಿಕಾಂ ಮತ್ತು ಮೊಬೈಲ್ ಕಂಪೆನಿಗಳಿಗೆ ನಡುಕ ಏಕೆ? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಿಸಲು!!

4G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಿಸಲು!!

ಜಿಯೋ ಮೇಲೆ 2 ಲಕ್ಷ ಕೋಟಿ ಬಂಡವಾಳ ಹೂಡಿರುವ ಅಂಬಾನಿಗೆ ಬಹುದೊಡ್ಡ ತೊಂದರೆಯೇ ಭಾರತದಲ್ಲಿ 4G ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಕಡಿಮೆ ಇರುವುದು.! ಇದರಿಂದಾಗಿಯೇ ಅಂಬಾನಿ ಎಲ್ಲಾ ಜನರಿಗೂ 4G ಫೋನ್ ತಲುಪುವಂತೆ ಮಾಡಲು ಉದ್ದೇಶಿಸಿ ಇಂತಹದೊಂದು ಬಹುದೊಡ್ಡ ಪ್ಲಾನ್ ಮಾಡಿ ಬಿಡುಗಡೆ ಮಾಡಿದ್ದು!!

ಇನ್ನು ಜಿಯೋ ಆಟ!!

ಇನ್ನು ಜಿಯೋ ಆಟ!!

ಜಿಯೋಗಿರುವ ಕೊರತೆ ಎಂದರೆ ಜಿಯೋ ಕೇವಲ 4G ಗ್ರಾಹಕರಿಗೆ ಮಾತ್ರ ಸೇವೆ ನೀಡಲು ಸಾಧ್ಯ.!! ಆದ್ರೆ ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದ ಇತರ ಟೆಲಿಕಾಂ ಕಂಪೆನಿಗಳು ಜಿಯೋ 4G ಡೇಟಾಗೆ ಭಾರಿ ಸೆಡ್ಡು ಹೊಡೆಯುತ್ತಿದ್ದವು. ಆದರೆ, ಈಗ ಅಂಬಾನಿ ಕಡಿಮೆಬೆಲೆಯಲ್ಲಿ ಮೊಬೈಲ್ ನೀಡುವ ಮೂಲಕ ಅವುಗಳಿಗೆ ಎದುರೇಟು ನೀಡುತ್ತಿದ್ದಾರೆ.

ಗ್ರಾಮೀಣ ಪ್ರದೇಶಕ್ಕೆ ಲಗ್ಗೆ!!

ಗ್ರಾಮೀಣ ಪ್ರದೇಶಕ್ಕೆ ಲಗ್ಗೆ!!

ಈಗಲೂ ಗ್ರಾಮೀಣ ಜನರನ್ನು ಸುಲಿಗೆ ಮಾಡುತ್ತಿರುವ ಇತರ ಟೆಲಿಕಾಂಗಳಿಗೆ ಸೆಡ್ಡುಹೊಡೆಯಲು ಅಂಬಾನಿ ಮುಂದಾಗಿದ್ದಾರೆ! ಗ್ರಾಮೀಣ ಭಾಗ ಜನರು ಇನ್ನು 4G ಯುಗಕ್ಕೆ ಕಾಲಿಟ್ಟಿರಲಿಲ್ಲ.!! ಅಂತವರಿಗೆ ಜಿಯೋ ಸೇವೆಯನ್ನು ನೀಡಬೇಕು ಎಂದು ಅಂಬಾನಿ ಪ್ಲಾನ್ ಮಾಡಿ ಈ ಆಫರ್ ಬಿಡುಗಡೆ ಮಾಡಿದ್ದಾರೆ.!!

83% ಜನರು 4G ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿಲ್ಲ.!!

83% ಜನರು 4G ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿಲ್ಲ.!!

ದೇಶದಲ್ಲಿರುವ ಮೊಬೈಲ್‌ ಫೋನ್‌ಗಳಲ್ಲಿ 50 ಕೋಟಿಯಷ್ಟು ಫೋನ್‌ಗಳಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲ ಎಂದರೆ ನೀವು ನಂಬಲೇಬೇಕು.! ಅದರಲ್ಲಿಯೂ 4G ಗ್ರಾಹಕರ ಸಂಖ್ಯೆ 20 ಕೋಟಿ ದಾಟಿಲ್ಲ.! ಹಾಗಾಗಿ, ಎಲ್ಲರಿಗೂ ಡೇಟಾ ಪ್ರಪಂಚಕ್ಕೆ ಕಾಲಿಡುವಂತೆ ಮಾಡಲು ಅಂಬಾನಿ ಈ ರಗೀತಿಯ ಪ್ಲಾನ್ ಮಾಡಿದ್ದಾರೆ.!!

50 ಕೋಟಿ ಗ್ರಾಹಕರ ಗುರಿ.!!

50 ಕೋಟಿ ಗ್ರಾಹಕರ ಗುರಿ.!!

ಪ್ರಸ್ತುತ ಜಿಯೋ ಗ್ರಾಹಕರ ಸಂಖ್ಯೆ 10 ರಿಂದ 12 ಕೋಟಿಯಷ್ಟಿದ್ದು, 50 ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಜಿಯೋ ಮುಂದಾಗಿದೆ.! ಹಾಗಾಗಿ, 4G ಗ್ರಾಹಕರನ್ನು ಹೆಚ್ಚಿಸಿಕೊಂಡು ಟೆಲಿಕಾಂನಲ್ಲಿ ಮತ್ತಷ್ಟು ಹೆಚ್ಚು ಗ್ರಾಹಕರನ್ನು ಸೆಳೆಯಲು ಜಿಯೋ ಮುಂದಾಗಿದೆ.!!

ಮೂರು ವರ್ಷದಲ್ಲಿ ನಿಮ್ಮ ಹಣ ವಾಪಸ್!!

ಮೂರು ವರ್ಷದಲ್ಲಿ ನಿಮ್ಮ ಹಣ ವಾಪಸ್!!

ಉಚಿತವಾಗಿ ಮೊಬೈಲ್ ಪಡೆಯಲು ಮೊದಲು 1500ರೂ. ಡೇಪಾಸಿಟ್ ಹಣವನ್ನು ಪಾವತಿಸಬೇಕು.! ನಂತರದ ಮೂರು ವರ್ಷದಲ್ಲಿ ನಿಮ್ಮ ಹಣ ವಾಪಸ್ ನೀಡಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಅಂದರೆ, ಮೂರು ವರ್ಷದಲ್ಲಿ ನಿಮ್ಮ ಹಣ ವಾಪಸ್ ಬರುವುದು ಖಂಡಿತ. ಹಾಗೆಯೇ ಜಿಯೋ ಕೂಡ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತದೆ.!!

ಟೆಲಿಕಾಂ ಸೇವೆಗಳು ಭಾರಿ ಕಡಿಮೆ ದರದಲ್ಲಿ!!

ಟೆಲಿಕಾಂ ಸೇವೆಗಳು ಭಾರಿ ಕಡಿಮೆ ದರದಲ್ಲಿ!!

ಜಿಯೋ ಬಂದ ನಂತರ ಕೇವಲ 4G ಡೇಟಾದಿಂದಾಗಿಯೇ ಟೆಲಿಕಾಂನಲ್ಲಿ ಇಷ್ಟು ದರಸಮರ ಉಂಟಾಗಿದೆ. ಇನ್ನು ಜಿಯೋ ಫೀಚರ್‌ಫೋನ್ ಮಾರುಕಟ್ಟೆಗೆ ಬಂದರೆ ಟೆಲಿಕಾಂನಲ್ಲಿ ಮತ್ತಷ್ಟು ದರಸಮರ ಹೆಚ್ಚಾಗುವುದು ಖಂಡಿತ. ಹಾಗಾಗಿ, ಜನರಿಗೆ ಟೆಲಿಕಾಂ ಸೇವೆಗಳು ಭಾರಿ ಕಡಿಮೆ ದರದಲ್ಲಿ ದೊರೆಯುತ್ತವೆ.!!

5 ಮಿಲಿಯನ್ ಮೊಬೈಲ್ ಉತ್ಪಾದನೆ!!

5 ಮಿಲಿಯನ್ ಮೊಬೈಲ್ ಉತ್ಪಾದನೆ!!

ಜಿಯೋ ಫೋನ್‌ನಿಂದ ಎಲ್ಲರಿಗೂ ಕಡಿಮೆ ದರದಲ್ಲಿ ಡೇಟಾ ದೊರೆಯಲಿದ್ದು, ಪ್ರತಿ ತಿಂಗಳು 5 ಮಿಲಿಯನ್ ಮೊಬೈಲ್ ಉತ್ಪಾದಿಸುವ ಯೋಜನೆ ಇದೆ ಎಂದು ಅಂಬಾನಿ ತಿಳಿಸಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ LYF ಸ್ಮಾರ್ಟ್‌ಫೋನ್‌ಗಳಿಂದ ಹೊಡೆತತಿಂದಿರುವ ಜಿಯೋ ಮತ್ತೆ ಈ ಫೋನ್‌ನಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಮುಂದಾಗಿದೆ.!!

ಓದಿರಿ: ಭಾರತದಲ್ಲಿ ವಾಟ್ಸ್ಆಪ್, ಫೇಸ್‌ಬುಕ್‌ಗೆ ನಿಷೇಧ ಹೇರುವ ಸಾಧ್ಯತೆ!!?..ಏಕೆ..ಏನಾಯ್ತು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jio Phone, Free With Rs. 1,500 Deposit, Unlimited 4G Data, Launched by Mukesh Ambani at Reliance AGM
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot