ಹೊಸ ಜಿಯೋ ಫೋನ್ ನೆಕ್ಸ್ಟ್‌ನ ಬೆಲೆ ಮತ್ತು ಫೀಚರ್ಸ್‌ ಲೀಕ್!

|

ಜನಪ್ರಿಯ ಜಿಯೋ ಕಂಪನಿಯು ಇತ್ತೀಚಿಗೆ ನಡೆದ ತನ್ನ AGM 2021 ಕಾರ್ಯಕ್ರಮದಲ್ಲಿ ಹೊಸ ಜಿಯೋ ಫೋನ್ ನೆಕ್ಸ್ಟ್‌ ಫೋನ್‌ ಅನ್ನು ಘೋಷಿಸಿತ್ತು. ಗೂಗಲ್ ಜೊತೆಗೂಡಿ ಈ ಫೋನ್‌ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಜಿಯೋ ಕಂಪನಿಯ ಫೋನ್‌ಗಳು ಈಗಾಗಲೇ ಜನಪ್ರಿಯವಾಗಿವೆ. ಅದೇ ರೀತಿ ಬರಲಿರುವ ಹೊಸ ಜಿಯೋ ಫೋನ್ ನೆಕ್ಸ್ಟ್‌ ಫೋನ್ ಗ್ರಾಹಕರಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ಮೂಡಿದೆ. ಆದರೆ ಇದೀಗ ಜಿಯೋ ಫೋನ್ ನೆಕ್ಸ್ಟ್ ಫೋನಿನ ಫೀಚರ್ಸ್‌ಗಳು ಲೀಕ್ ಆಗಿದ್ದು, ಗ್ರಾಹಕರಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿವೆ.

ಹೊಸ ಜಿಯೋ ಫೋನ್ ನೆಕ್ಸ್ಟ್‌ನ ಬೆಲೆ ಮತ್ತು ಫೀಚರ್ಸ್‌ ಲೀಕ್!

ಹೌದು, ಜಿಯೋ ಕಂಪನಿಯ ಹೊಸ ಜಿಯೋ ಫೋನ್ ನೆಕ್ಸ್ಟ್ ಗಣೇಶನ ಹಬ್ಬದಂದು (ಸೆ.10) ಅಧಿಕೃತವಾಗಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಈ ಫೋನಿನ ಲೀಕ್ ಮಾಹಿತಿಗಳು ಈಗ ಅಚ್ಚರಿ ತಂದಿದೆ. ಜಿಯೋದ ಹೊಸ ಫೋನ್ ಗೂಗಲ್‌ ಸಪೋರ್ಟ್‌ ಇರುವುದು ಈ ಫೋನಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ. ಹಾಗೆಯೇ ಲೀಕ್ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸುಮಾರು 3,499ರೂ.ಗಳ ದರದ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಜಿಯೋ ಫೋನ್ ನೆಕ್ಸ್ಟ್‌ನ ಬೆಲೆ ಮತ್ತು ಫೀಚರ್ಸ್‌ ಲೀಕ್!

ಜಿಯೋ ಫೋನ್ ನೆಕ್ಸ್ಟ್‌ ಫೋನ್‌ ಪ್ರಿ-ಇನ್‌ಸ್ಟಾಲ್ಡ್‌ ಸ್ನ್ಯಾಪ್‌ಚಾಟ್‌ ಆಪ್‌ ಹೊಂದಿರಲಿದ್ದು, ವಿಡಿಯೋ ಕಾಲಿಂಗ್‌ ಗಾಗಿ ಗೂಗಲ್‌ ಡ್ಯೂ ಸಹ ಇರಲಿದೆ. ಇದರೊಂದಿಗೆ ಗೂಗಲ್ ಕ್ಯಾಮೆರಾ ಗೋ ಸಹ ಇನ್‌ಬಿಲ್ಟ್‌ ಆಗಿ ಇರಲಿದೆ. ಜೊತೆಗೆ ಗೂಗಲ್‌ನ ಕೆಲವು ಆಪ್‌ಗಳ ಬೆಂಬಲ ಪಡೆದಿರಲಿದೆ. ಹಾಗೆಯೇ ಜಿಯೋ ಫೋನ್ ನೆಕ್ಟ್ಸ್‌ ಫೋನ್ ಕ್ವಾಲ್ಕಮ್ 215 ಸಾಮರ್ಥ್ಯದೊಂದಿಗೆ ಇದು 1.3GHz ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ. 4G VoLTE ಡ್ಯುಯಲ್ ಸಿಮ್ ಆಯ್ಕೆ ಪಡೆದಿರಲಿದೆ. ಇದರೊಂದಿಗೆ 2500mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಜಿಯೋ ಫೋನ್ ನೆಕ್ಸ್ಟ್‌ 1440×720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಸ್ಕ್ರೀನ್ ಕಂಫರ್ಟ್‌ ಗಾತ್ರದಲ್ಲಿ ಇರಲಿದ್ದು, ಹೆಚ್‌ಡಿ ಪ್ಲಸ್‌ ಮಾದರಿಯನ್ನು ಹೊಂದಿರಲಿದೆ. ಈ ಫೋನಿನಲ್ಲಿ ಆಂಡ್ರಾಯ್ಡ್‌ 11 ಗೋ ಎಡಿಷನ್ ಓಎಸ್‌ ಸಪೋರ್ಟ್‌ ಇರಲಿದ್ದು, 3GB RAM ಮತ್ತು 32GB ಸ್ಟೋರೇಜ್ ವೇರಿಯಂಟ್ ಆಯ್ಕೆ ಇರಲಿದೆ ಎನ್ನಲಾಗಿದೆ. ಇದರೊಂದಿಗೆ ಕೆಲವು ನೂತನ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ. ವಾಯಿಸ್‌ ಅಸಿಸ್ಟಂಟ್, ಲಾಂಗ್ವೇಜ್ ಟ್ರಾನ್ಸ್‌ಲೇಟ್‌, ಸ್ಮಾರ್ಟ್‌ ಕ್ಯಾಮೆರಾ ಮತ್ತು ಎಆರ್‌ ಫಿಲ್ಟರ್ ಸೇರಿದಂತೆ ಇನ್ನಷ್ಟು ಆಕರ್ಷಕ ಫೀಚರ್ಸ್‌ಗಳು ಇರಲಿವೆ.

ಹೊಸ ಜಿಯೋ ಫೋನ್ ನೆಕ್ಸ್ಟ್‌ನ ಬೆಲೆ ಮತ್ತು ಫೀಚರ್ಸ್‌ ಲೀಕ್!

ಇನ್ನು ಈ ಫೋನ್‌ ಹಿಂದಿನ ಪ್ಯಾನೆಲ್‌ನಲ್ಲಿ 13 ಮೆಗಾ ಪಿಕ್ಸೆಲ್ ಸೆನ್ಸರ್‌ನ ಒಂದೇ ಕ್ಯಾಮೆರಾ ರಚನೆಯನ್ನು ಹೊಂದಿರಲಿದೆ. ಹಾಗೆಯೇ ಮುಂಭಾಗದಲ್ಲಿರುವಾಗ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇನ್ನು ಜಿಯೋ ಫೋನ್ ನೆಕ್ಸ್ಟ್‌ ಗಣೇಶ ಚರ್ತುರ್ಥಿಯಂದು ಲಭ್ಯವಾಗಲಿದೆ. ಈ ಫೋನ್ ಸುಮಾರು 3000ರೂ.ಗಳ ಪ್ರೈಸ್‌ ಟ್ಯಾಗ್‌ನ ಆಸುಪಾಸಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಫೋನಿನ ಬೆಲೆಯನ್ನು ಕಂಪನಿಯು ಅಧಿಕೃತವಾಗಿ ಇನ್ನೂ ಬಹಿರಂಗಪಡಿಸಿಲ್ಲ.

Most Read Articles
Best Mobiles in India

English summary
Jio Phone Next Price In India Leaked; May launch in India With Rs 3,499 Price Tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X