ಜಿಯೋವಿನ ನೂತನ ಆಫರ್ ನಿಷೇಧ ಸಾಧ್ಯತೆ!..ಶೀಘ್ರವೇ ರೀಚಾರ್ಜ್ ಮಾಡಿಸಲು 5 ಕಾರಣಗಳು!!

|

ಭಾರತದ ಟೆಲಿಕಾಂನಲ್ಲಿ ಜಿಯೋ ನಡೆಸುತ್ತಿರುವ ದರಸಮರಕ್ಕೆ ಜಿಯೋ ಕಂಪೆನಿಗೆ ಶೀಘ್ರದಲ್ಲಿಯೇ ಏಟು ಬೀಳುವ ಲಕ್ಷಣಗಳು ಕಾಣುತ್ತಿವೆ. ಇತರೆ ಟೆಲಿಕಾಂ ಬಳಕೆದಾರರನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಜಿಯೋ ಆಕ್ರಮಣಕಾರಿ ವಿಧಾನ ಅನುಸರಿಸುತ್ತಿರುವುದನ್ನು ಇತರೆ ಟೆಲಿಕಾಂ ಕಂಪೆನಿಗಳು ವಿರೋಧಿಸಿ ಒಗ್ಗಟ್ಟಾಗಿ ಹೋರಾಡಲು ಮುಂದಾಗಿವೆ.

ಜಿಯೋ ಇತ್ತೀಚಿಗೆ ಪ್ರಕಟಿಸಿದ ಆಕ್ರಮಣಕಾರಿ ಡಬಲ್ ಡೇಟಾ ಯೋಜನೆಯನ್ನು ಭಾರತದ ಇತರೆ ಟೆಲಿಕಾಂ ಕಂಪೆನಿಗಳು ವಿರೋಧಿಸಿವೆ. ಗ್ರಾಹಕರಿಗೆ ಭಾರೀ ವಿಭಿನ್ನ ದರಗಳಲ್ಲಿ ಜಿಯೋ ಸೇವೆಗಳನ್ನು ಒದಗಿಸಲು ಮುಂದಾಗಿದೆ. ಸೀಮಿತ ಅವಧಿಯಲ್ಲಿ ಇಂತಹ ಆಕ್ರಮಣಕಾರಿ ದರಗಳನ್ನು ಪ್ರಕಟಿಸುವುದು ಏಕಸ್ವಾಮ್ಯವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿವೆ.

ಜಿಯೋವಿನ ನೂತನ ಆಫರ್ ನಿಷೇಧ ಸಾಧ್ಯತೆ!..ಶೀಘ್ರವೇ ರೀಚಾರ್ಜ್ ಮಾಡಿಸಲು 5 ಕಾರಣಗಳು!!

ಎಲ್‌ಟಿಇ ತಂತ್ರಜ್ಞಾನದ ಸಹಾಯದಿಂದ ಅತ್ಯಂತ ಕಡಿಮೆ ಬೆಲೆಗೆ ಜಿಯೋ 4G ದರಗಳನ್ನು ವಿಧಿಸುತ್ತಿದೆ. ಇಷ್ಟು ಮಾತ್ರವಲ್ಲದೇ, ಇಂತಹ ಅನಾರೋಗ್ಯಕರ ದರಸಮರ ಟೆಲಿಕಾಂ ವ್ಯವಸ್ಥೆಗೆ ತಕ್ಕುದಾದುದ್ದಲ್ಲ ಎಂದು ಟೆಲಿಕಾಂ ತಜ್ಞರು ಸಹ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ, ಜಿಯೋ ಪ್ರಕಟಿಸಿರುವ ನೂತನ 'ಡಬಲ್ ಧಮಾಕ' ಆಫರ್ ಜಿಯೋಗೆ ಮುಳುವಾಗಬಹುದು ಎನ್ನಲಾಗಿದೆ.

ಏನಿದು ಜಿಯೋ 'ಡಬಲ್ ಧಮಾಕ' ಆಫರ್!

ಏನಿದು ಜಿಯೋ 'ಡಬಲ್ ಧಮಾಕ' ಆಫರ್!

ಈ ತಿಂಗಳ 30 ನೇ ತಾರೀಖಿನವರೆಗೂ ಜಿಯೋ ರೀಚಾರ್ಜ್ ಆಫರ್‌ಗಳ ಮೇಲೆ ಡಬಲ್ ಧಮಾಕ ಆಫರ್ ಅನ್ನು ಘೋಷಿಸಿದೆ. ತನ್ನ ಬಹುತೇಕ ರೀಚಾರ್ಜ್ ಆಫರ್‌ಗಳ ಮೇಲೆ ಜಿಯೋ ಎರಡು ಪಟ್ಟು ಡೇಟಾವನ್ನು ಮೊದಲ ಬೆಲೆಯಲ್ಲಿಯೇ ನೀಡುತ್ತಿದೆ. ಉದಾಹರಣೆಗೆ, ಈಗ 1.5GB ಡೇಟಾ ಹೊಂದಿದ್ದ ಆಫರ್ 3 GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಶೀಘ್ರವೇ ಆಫರ್ ನಿಷೇಧ ಸಾಧ್ಯತೆ!!

ಶೀಘ್ರವೇ ಆಫರ್ ನಿಷೇಧ ಸಾಧ್ಯತೆ!!

ಇತರೆ ಟೆಲಿಕಾಂ ಬಳಕೆದಾರರನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ ಜಿಯೋ ಆಕ್ರಮಣಕಾರಿ ಡಬಲ್ ಧಮಾಕ ಆಫರ್ ಇತರೆ ಟೆಲಿಕಾಂ ಕಂಪೆನಿಗಳು ವಿರೋಧಿಸಿ ಒಗ್ಗಟ್ಟಾಗಿ ಹೋರಾಡಲು ಮುಂದಾಗಿವೆ. ಜಿಯೋ ವಿರುದ್ದ ಸೆಟೆದು ನಿಂತುವ ಇತರೆ ಟೆಲಿಕಾಂ ಕಂಪೆನಿಗಳ ಮನವಿಗೆ ಟ್ರಾಯ್ ಕೂಡ ಬೆಂಬಲ ನೀಡಲಿದೆ ಎಂಬ ಸುದ್ದಿ ಟೆಲಿಕಾಂನಲ್ಲಿ ಹರಿದಾಡಿದೆ.

ಜಿಯೋ ಮೇಲೆ ಸಿಟ್ಟಾಯ್ತ ಟ್ರಾಯ್?

ಜಿಯೋ ಮೇಲೆ ಸಿಟ್ಟಾಯ್ತ ಟ್ರಾಯ್?

ಜಿಯೋ ಆಕ್ರಮಣಕಾರಿ ಡಬಲ್ ಧಮಾಕ ಆಫರ್ ಪ್ರಕಟಿಸಿದ ನಂತರ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಕೂಡ ಅಸಮಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಭಾಋತದ ಟೆಲಿಕಾಂ ಈಗಲೇ ನಷ್ಟವನ್ನು ಎದುರಿಸುತ್ತಿರುವುದರಿಂದ ಜಿಯೋವಿನ ಆಕ್ರಮಣಕಾರಿ ಬೆಲೆಗಳು ಇದಕ್ಕೆ ಮಗ್ಗಲಮುಳ್ಳಾಗಬಹುದು ಎಂದು ಟ್ರಾಯ್ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಈಗಲೇ ರೀಚಾರ್ಜ್ ಮಾಡಿಸಿ!!

ಈಗಲೇ ರೀಚಾರ್ಜ್ ಮಾಡಿಸಿ!!

ಸೀಮಿತ ಅವಧಿಯಲ್ಲಿ ಇಂತಹ ಆಕ್ರಮಣಕಾರಿ ದರಗಳನ್ನು ಪ್ರಕಟಿಸುವುದು ಏಕಸ್ವಾಮ್ಯವಾಗಬಹುದು ಎಂಬ ಆತಂಕದಿಂದ ಜಿಯೋವಿನ ಹೊಸ ಡಬಲ್ ಧಮಾಕ ಆಫರ್ ಅನ್ನು ನಿಷೇಧಿಸುವ ಸಾಧ್ಯತೆ ಬಲವಾಗಿದೆ. ಆದರೆ, ಜಿಯೋವಿನ ಈ ಆಫರ್ ಅನ್ನು ಒಮ್ಮೆ ಪಡೆದುಕೊಂಡವರಿಗೆ ಈ ಆಫರ್ ಅನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ಈಗಲೇ ರೀಚಾರ್ಜ್ ಮಾಡಿಸಿ!

ಮುಂದುವರೆದ ದರ ಸಮರ

ಮುಂದುವರೆದ ದರ ಸಮರ

ಇತ್ತೀಚೆಗೆ ತಾನೇ ಬಿಎಸ್ಎನ್ಎಲ್ ಜಿಯೋದ ಫೈಬರ್ ನೆಟ್ ಗೆ ಸೆಡ್ಡು ಹೊಡೆಯಲು ಹೋಗಿ ಹೊಸ FTTH ಪ್ಲಾನ್ ಅನ್ನು ಅತಿ ಕಡಿಮೆ ದರದಲ್ಲಿ ಪರಿಚಯಿಸಿತ್ತು. ನಂತರ ಏರ್ ಟೇಲ್ ಸಹ ಡೇಟಾ ಆಫರ್ ಗಳನ್ನು ಪರಿಷ್ಕರಿಸಿ ಜಿಯೋಗಿಂತ ಉತ್ತಮ ಡೇಟಾ ಆಫರ್ ಗ್ರಾಹಕರಿಗೆ ನೀಡಿತ್ತು. ಹಾಗಾಗಿ, ಈಗ ಜಿಯೋ ಸಹ ಹೆಚ್ಚುವರಿಯಾಗಿ 1.5 GB ಡೇಟಾ ಘೋಷಿಸಿದೆ.!

ಟೆಲಿಕಾಂ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ಟೆಲಿಕಾಂ ಮಾರುಕಟ್ಟೆ ಅಲ್ಲೋಲ-ಕಲ್ಲೋಲ

ರಿಲಾಯನ್ಸ್ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತನ್ನ ಆಯ್ದ ರಿಚಾರ್ಜ್ ಪ್ಯಾಕ್ ಗಳ ಮೇಲೆ ದಿನಕ್ಕೆ 1.5 GB ಡೇಟಾವನ್ನು ಹೆಚ್ಚುವರಿಯಾಗಿ ನೀಡುತ್ತೇವೆ ಎಂದಿರುವುದು ಇತರೆ ಟೆಲಿಕಾಂ ಆಪರೇಟರ್ ಗಳಿಗೆ ನುಂಗಲಾರದ ತುತ್ತಾಗಿದರೆ, ಡೇಟಾ ಬಳಕೆದಾರರಿಗಂತೂ ಹಬ್ಬವೋ ಹಬ್ಬವಾಗಿದೆ.

ಧಮಾಕಾದಿಂದ ದಿನಕ್ಕೆ 3GB ಡೇಟಾ

ಧಮಾಕಾದಿಂದ ದಿನಕ್ಕೆ 3GB ಡೇಟಾ

ಜಿಯೋ ಘೋಷಿಸಿರುವ ಹೊಸ ಪ್ಲಾನ್‌ಗಳಲ್ಲಿ ದಿನಕ್ಕೆ ಹೆಚ್ಚುವರಿಯಾಗಿ 1.5GB ಡೇಟಾವನ್ನು ಗ್ರಾಹಕರು ಉಚಿತವಾಗಿ ಪಡೆಯಲಿದ್ದಾರೆ. ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಎಲ್ಲ ಟೆಲಿಕಾಂ ವಲಯಗಳಿಗೂ ಲಭ್ಯವಿದ್ದು, ಎಲ್ಲಾ ಗ್ರಾಹಕರು ಬಳಸಬಹುದಾಗಿದೆ. ಆದರೆ, ಈ ಡಬಲ್ ಆಫರ್ ಮೇಲೆ ತಿಳಿಸಿದ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ.

ಸೀಮಿತ ಅವಧಿಗೆ ಮಾತ್ರ!

ಸೀಮಿತ ಅವಧಿಗೆ ಮಾತ್ರ!

ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ಜಿಯೋವಿನ ಕೆಲ ಆಯ್ದ ರೀಚಾರ್ಜ್ ಪ್ಯಾಕ್ ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಆಫರ್‌ಗಳಿಗೆ ಜೂನ್ 12 ರಿಂದ ಜೂನ್ 30ರವರೆಗೆ ಮಾತ್ರ ರೀಚಾರ್ಜ್ ಮಾಡಿಸಿಬಹುದಾಗಿದ್ದು, ಈ ದಿನಾಂಕದ ಒಳಗೆ ಈ ಕೆಳಗಿನ ಜಿಯೋ ಡೇಟಾ ಪ್ಲಾನ್‌ಗಳಿಗೆ ರೀಚಾರ್ಜ್ ಮಾಡಿಸಿದವರಿಗೆ ಡಬಲ್ ಧಮಾಕಾ ಸಿಗಲಿದೆ.

499 ರೂ. ಹೊಸ ಆಫರ್

499 ರೂ. ಹೊಸ ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 499 ರೂ. ರಿಚಾರ್ಜ್ ಪ್ಲಾನ್ ಘೋಷಣೆಯಾಗಿದೆ. 91 ದಿನಗಳ ವ್ಯಾಲಿಡಿಟಿ ಹೊಂದಿರಲಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ 318GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಕಳೆದ ವರ್ಷದ ಕೊನೆಯಲ್ಲಿ ಈ 499 ರೂ. ಪ್ಲಾನ್ ಅನ್ನು ಜಿಯೋ 449 ರೂಪಾಯಿಗಳಿಗೆ ಇಳಿಸಿತ್ತು .

ಜಿಯೋ 149 ರೂ. ಆಫರ್

ಜಿಯೋ 149 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ ಜಿಯೋ 198 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 98GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 349 ರೂ. ಆಫರ್

ಜಿಯೋ 349 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 349 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 70 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 245GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 399ರೂ. ಆಫರ್

ಜಿಯೋ 399ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 399 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 84 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 3.5GB ಡೇಟಾದಂತೆ ಒಟ್ಟು 294GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 299 ರೂ. ಆಫರ್

ಜಿಯೋ 299 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 299 ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 4.5GB ಡೇಟಾದಂತೆ ಒಟ್ಟು 126GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 509 ರೂ. ಆಫರ್

ಜಿಯೋ 509 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 509ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 5.5GB ಡೇಟಾದಂತೆ ಒಟ್ಟು 154GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

ಜಿಯೋ 799 ರೂ. ಆಫರ್

ಜಿಯೋ 799 ರೂ. ಆಫರ್

ಜಿಯೋ ಡಬಲ್ ಧಮಾಕಾ ಆಫರ್ ನೊಂದಿಗೆ ಹೊಸ 799ರೂ. ರೀಚಾರ್ಜ್ ಪ್ಲಾನ್ ಈಗ ಡಬಲ್ ಡೇಟಾವನ್ನು ಹೊಂದಿದೆ. ಅಂದರೆ, 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಆಫರ್ ದಿನಕ್ಕೆ 6.5GB ಡೇಟಾದಂತೆ ಒಟ್ಟು 182GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

300 ರೂ.ಗೆ 100 ರೂ. ಡಿಸ್ಕೌಂಟ್.!

300 ರೂ.ಗೆ 100 ರೂ. ಡಿಸ್ಕೌಂಟ್.!

ಜಿಯೋ ಡಬಲ್ ಧಮಾಕಾ ಆಫರ್ ನಲ್ಲಿ ಅನಿಯಮಿತ ಕರೆ, ದಿನಕ್ಕೆ 100 ಉಚಿತ SMS ಮತ್ತು ಡೇಟಾ ಇರಲಿದ್ದು, ಡೇಟಾ ಬ್ಯಾಲೆನ್ಸ್ ಮುಗಿದ ನಂತರ 64KBps ವೇಗದಲ್ಲಿ ಡೇಟಾ ಸಿಗಲಿದೆ.100 ರೂ. ರಿಯಾಯಿತಿ ಜಿಯೋ ಘೋಷಿಸಿರುವ ಡಬಲ್ ಧಮಾಕಾ ಆಫರ್ ನಲ್ಲಿ 300 ರೂ. ಮತ್ತು ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಿಕೊಂಡರೆ 100 ರೂ. ಡಿಸ್ಕೌಂಟ್ ಸಿಗಲಿದೆ.

ಏರ್‌ಟೆಲ್‌ಗೆ ಗುದ್ದು!

ಏರ್‌ಟೆಲ್‌ಗೆ ಗುದ್ದು!

ಏರ್ ಟೇಲ್ ತನ್ನ 149 ರೂ. ಮತ್ತು 399 ರೂ. ಪ್ಯಾಕ್ ಗಳನ್ನು ಪರಿಷಷ್ಕರಿಸಿ ತನ್ನ ಗ್ರಾಹಕರಿಗೆ ಉಚಿತ ಡೇಟಾವನ್ನು ಹೆಚ್ಚಿಸಿತ್ತು. ಈ ಆಫರ್ ಜಿಯೋ ನೀಡಿದ್ದ 149 ರೂ. ಮತ್ತು 399 ರೂ.ಗಳ ಆಫರ್ ಗಿಂತ ಉತ್ತಮವಾಗಿದ್ದು, ಹಾಗಾಗಿ, ಏರ್‌ಟೆಲ್‌ಗೆ ಗುದ್ದು ನೀಡುವ ಸಲುವಾಗಿ ಜಿಯೋ ತನ್ನ ಆಫರ್‌ಗಳನ್ನು ಬದಲಾಯಿಸಿದೆ.

Best Mobiles in India

English summary
About 10 million smartphones are being sold in India each month, and we estimate Jio adds 6 million smartphone users monthly. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X