ಮಾರ್ಚ್ 31ಕ್ಕೆ ಜಿಯೋ ಪ್ರೈಮ್ ಸದಸ್ಯತ್ವ ಅಂತ್ಯ: ಮುಂದಿರುವುದು ಮೂರೇ ದಾರಿ..!

|

ದೇಶಿಯ ಮಾರುಕಟ್ಟೆಯಲ್ಲಿ ಎರಡು ವರ್ಷದ ಪೂರೈಸಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಇಂದು ಟೆಲಿಕಾಂ ಮಾರುಕಟ್ಟೆಯ ಹಿಡಿತವನ್ನು ತನ್ನಲ್ಲಿ ಇಟ್ಟುಕೊಂಡಿದೆ. ಮೊದಲ ಆರು ತಿಂಗಳ ಸೇವೆಯ ನಂತರ ತನ್ನ ಬಳಕೆದಾರರಿಗೆ ಹೊಸ ಮಾದರಿಯಲ್ಲಿ ಆಫರ್ ಗಳನ್ನು ನೀಡುವ ಸಲುವಾಗಿ ಟೆಲಿಕಾಂ ಮಾರುಕಟ್ಟೆಯಲ್ಲಿಯೇ ಮೊದಲಿಗನಾಗಿ ಪ್ರೈಮ್ ಸದಸ್ಯತ್ವವನ್ನು ಘೋಷಣೆ ಮಾಡಿತ್ತು. ಅದರಂತೆ ಶೇ.80 ಹೆಚ್ಚು ಮಂದಿ ಜಿಯೋ ಬಳಕೆದಾರರು ಪ್ರೈಮ್ ಸದಸ್ಯತ್ಬವನ್ನು ಬಳಕೆ ಮಾಡಿಕೊಳ್ಳಲು ಮುಂದಾದರು.

ಮಾರ್ಚ್ 31ಕ್ಕೆ ಜಿಯೋ ಪ್ರೈಮ್ ಸದಸ್ಯತ್ವ ಅಂತ್ಯ: ಮುಂದಿರುವುದು ಮೂರೇ ದಾರಿ..!

ಇದೇ ಮಾದರಿಯಲ್ಲಿ ರೂ.99 ಪಾವತಿ ಮಾಡಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಹಲವು ಮಂದಿ ಪಡೆದುಕೊಂಡರು. ಈ ಪ್ರೈಮ್ ಸದಸ್ಯತ್ವವೂ ಒಂದು ವರ್ಷದ ಅವಧಿಗಾಗಿ ಘೋಷಣೆ ಮಾಡಿದ್ದಾಗಿದ್ದು, ಇದೇ ಮಾರ್ಚ್ 31ಕ್ಕೆ ಜಿಯೋ ಪ್ರೈಮ್ ಸದಸತ್ವದ ಅವಧಿಯೂ ಮುಗಿಯಲಿದೆ. ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರು ಅಂಬಾನಿ ನೀಡುವ ಹೊಸಪ್ಲಾನ್ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಜಿಯೋ ನಡೆ ಭಾರಿ ಕುತೂಹಲವನ್ನು ಕೆರಳಿಸಿದೆ.

ಏಪ್ರಿಲ್ ನಿಂದ ಜಾರಿ:

ಏಪ್ರಿಲ್ ನಿಂದ ಜಾರಿ:

2017ರ ಏಪ್ರಿಲ್‌ 1 ರಂದು ಜಾರಿಗೆ ಬಂದ ಜಿಯೋ ಪ್ರೈಮ್ ಇದೇ ಮಾರ್ಚ್ 31ರಂದು ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯತ್ವನ್ನು ಪಡೆದುಕೊಂಡು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿದ್ದವರಿಗೆ ಮುಂದೇನಾಗುತ್ತದೆ ಎನ್ನುವ ಕಾತುರ ಇದೆ. ಈ ಹಿನ್ನಲೆಯಲ್ಲಿ ಜಿಯೋ ಏನು ಮಾಡಬಹುದು ಎನ್ನುವ ನಿರೀಕ್ಷೆಗಳು ಈ ಮುಂದಿನಂತಿದೆ.

ಜಿಯೋ ಸದಸ್ಯತ್ವ ಅವಧಿ ವಿಸ್ತರಣೆ:

ಜಿಯೋ ಸದಸ್ಯತ್ವ ಅವಧಿ ವಿಸ್ತರಣೆ:

ಜಿಯೋ ಪ್ರೈಮ್ ಸದಸ್ಯತ್ವದ ಅವಧಿಯನ್ನು ವಿಸ್ತರಣೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಒಂದು ವೇಳ ಜಿಯೋ ಈ ನಿರ್ಧಾರವನ್ನು ಕೈಗೊಂಡರೆ ಬಳಕೆದಾರರು ಇನಷ್ಟು ದಿನ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಸದಸ್ಯತ್ವ:

ಹೊಸ ಸದಸ್ಯತ್ವ:

ಇದಲ್ಲದೇ ಮತ್ತೆ ರೂ.99 ಪಾವತಿ ಮಾಡಿ ಜಿಯೋ ಸದಸ್ಯತ್ವವನ್ನು ಮತ್ತೆ ಒಂದು ವರ್ಷದ ಕಾಲ ನವೀಕರಣ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ಮಾಡಿಕೊಡಬಹುದು, ಇದರಿಂದಲೂ ಸಹ ಬಳಕೆದಾರರಿಗೆ ಹೆಚ್ಚಿನ ನಷ್ಟವಾಗುವುದಿಲ್ಲ.

Jio Free Caller Tune ! ಜಿಯೋ ಉಚಿತ ಕಾಲರ್‌ಟೂನ್ ಬಳಕೆ ಹೇಗೆ..?
ಹೊಸ ಪ್ಲಾನ್:

ಹೊಸ ಪ್ಲಾನ್:

ಇದಲ್ಲದೇ ಜಿಯೋ ತನ್ನ ಪ್ರೈಮ್ ಸದಸ್ಯರಿಗೆ ಹೊಸ ಮಾದರಿಯ ಪ್ಲಾನ್ ವೊಂದನ್ನು ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಮಗನ ಮದುವೆಯ ಸಂಭ್ರಮದಲ್ಲಿರುವ ಅಂಬಾನಿ ಬಳಕೆದಾರರಿಗೆ ಹೊಸ ಗಿಫ್ಟ್ ಏನನ್ನು ಕೊಡಬಹುದು ಎಂಬುದು ಸರ್ಪೈಸ್ ಆಗಿದೆ.

Best Mobiles in India

English summary
Jio Prime ends on March 31: Will it be extended or will its price increase?. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X