ಜಿಯೋ ಫೈಬರ್, ಜಿಯೋ ಗಿಗಾ ಟಿವಿ, ಜಿಯೋ ಪೋನ್ 2 ಬಿಡುಗಡೆ!..ಮತ್ತೆ ಬೆಚ್ಚಿತು ಭಾರತ!!

|
41st Reliance AGM: WhatsApp for JioPhone, JioPhone 2, and Jio Giga Fiber

ಇಂದು ನಡೆಯುತ್ತಿರುವ 41 ನೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಹಲವು ಅದ್ಬುತ ಸೇವೆಗಳನ್ನು ಘೋಷಣೆ ಮಾಡುವ ಮೂಲಕ ಎರಡು ವರ್ಷಗಳ ನಂತರ ಟೆಲಿಕಾಂಗೆ ಮತ್ತೆ ಶಾಕ್ ನೀಡಿದೆ. ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಲಾಂಚ್ ಆಗಲಿದೆ ಎಂದು ಊಹಿಸಿದ್ದ ಎಲ್ಲರಿಗೂ ಜಿಯೋ ಮತ್ತೆ ಬೆಚ್ಚಿ ಬೀಳಿಸಿದೆ.

ಹೌದು, ಜಿಯೋ ಫೋನ್ 2, ಜಿಯೋ ವಾಯ್ಸ್ ಓವರ್ ವೈಫೈ ಹಾಗೂ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಅನ್ನು ಜಿಯೋ ಇಂದು ಪ್ರಕಟಿಸಿದೆ. ಜಿಯೋ ಫೋನಿನಲ್ಲಿ ಆಗಸ್ಟ್ 15 ನೇ ತಾರೀಖಿನಿಂದ ಫೇಸ್‌ಬುಕ್, ವಾಟ್ಸ್‌ಆಪ್, ಯೂಟ್ಯೂಬ್ ಅನ್ನು ಬಳಸಲು ಜಿಯೋ ಅನುಮತಿ ನೀಡುತ್ತಿದೆ. ಜೊತೆಗೆ ಜುಲೈ 21 ರಿಂದ ಜಿಯೋ ಮಾನ್ಸೂನ್ ಹಂಗಾಮ ಪ್ರಾರಂಭವಾಗುತ್ತಿದೆ.

ಜಿಯೋ ಫೈಬರ್,  ಜಿಯೋ ಗಿಗಾ ಟಿವಿ, ಜಿಯೋ ಪೋನ್ 2 ಬಿಡುಗಡೆ!.ಮತ್ತೆ ಬೆಚ್ಚಿತು ಭಾರತ!

ಈ ರೀತಿಯ ಹತ್ತು ಹಲವು ಸೇವೆಗಳನ್ನು ಜಿಯೋ ಇಂದು ಏಕಕಾಲದಲ್ಲಿ ಪ್ರಕಟಿಸಿ ಟೆಲಿಕಾಂ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ. ಯಾರೂ ಕೂಡ ಊಹೆ ಮಾಡದ ಜಿಯೋ ಗಿಗಾರೂಟರ್ ಅನ್ನು ಸಹ ಜಿಯೋ ಪ್ರಕಟಿಸಿಸಿರುವುದು ಭಾರತಕ್ಕೆ ಶಾಕ್ ನೀಡಿದಂತಿದೆ. ಹಾಗಾದರೆ, ಜಿಯೋ ಇಂದು ಲಾಂಚ್ ಮಾಡಿರುವ ಎಲ್ಲಾ ಸೇವೆಗಳ ಫುಲ್ ಡೀಟೇಲ್ಸ್ ಅನ್ನು ಮುಂದೆ ತಿಳಿಯಿರಿ.

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್!

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್!

ಟೆಲಿಕಾಂ ಪ್ರಪಂಚದ ನಿರೀಕ್ಷೆಯಂತೆಯೇ ಜಿಯೋ ಇಂದು 1ಜಿಬಿಪಿಎಸ್ ವೇಗದ ಜಿಯೋ ಫೈಬರ್ ರೂಟರ್ ಅನ್ನು ಬಿಡುಗಡೆ ಮಾಡಿದೆ. 4k ಗುಣಮಟ್ಟದಲ್ಲಿ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ದೊರೆಯಲಿದೆ. ಸಂಪೂರ್ಣ ಉಚಿತ ವಾಯಿಸ್ ಕಾಲಿಂಗ್ ಸೌಲಭ್ಯವನ್ನು ಹೊಂದಿರುವ ಜಿಯೋ ಫೈಬರ್ ಮೂಲಕ ಜಿಯೋ ಗಿಗಾರೂಟರ್ ಸಂಪರ್ಕವನ್ನು ಸಾಧಿಸಬಹುದಾಗಿದೆ. ಜೊತೆಗೆ ಸ್ಮಾರ್ಟ್‌ ಹೋಮ್ ಕನೆಕ್ಟಿವಿಟಿಯನ್ನು ಜಿಯೋ ಫೈಬರ್ ನೀಡಲಿದೆ.

ಜಿಯೋಫೋನ್ 2

ಜಿಯೋಫೋನ್ 2

2016ರಲ್ಲಿ ಜಿಯೋ ಫೋನ್ ಲಾಂಚ್ ಮಾಡಿದ್ದ ರಿಲಾಯನ್ಸ್‌ ಜಿಯೋ, ಅದರ ಯಶಸ್ಸಿನ ಮುಂದಿನ ಭಾಗವಾಗಿ ಜಿಯೋ ಫೋನ್ 2 ಲಾಂಚ್ ಮಾಡುತ್ತಿದೆ. ಆಗಸ್ಟ್ 15ರಿಂದ ಬಳಕೆದಾರರಿಗೆ ಲಭ್ಯವಿರುವ ಈ ಫೋನ್‌ನ ಆರಂಭಿಕ ಬೆಲೆ 2,999 ರೂ. ಆಗಿದೆ. ಅದಲ್ಲದೆ ಜಿಯೋ ಫೋನ್ 2 ಹೈ ಎಂಡ್ ಫೀಚರ್‌ಗಳನ್ನು ಹೊಂದಿದ್ದು, ಹಾರಿಜೋಂಟಾಲ್ ಸ್ಕ್ರೀನ್ ವೀವಿಂಗ್ ಅನುಭವದೊಂದಿಗೆ ಫೂರ್ಣ ಕೀಬೋರ್ಡ್ ಹೊಂದಿರುವುದರ ಜತೆಗೆ ಅನೇಕ ಹೊಸ ಫೀಚರ್‌ಗಳನ್ನು ಒಳಗೊಂಡಿದೆ.

2.5 ಕೋಟಿ ಗ್ರಾಹಕರನ್ನು ಹೊಂದಿದ ಜಿಯೋ ಫೋನ್

2.5 ಕೋಟಿ ಗ್ರಾಹಕರನ್ನು ಹೊಂದಿದ ಜಿಯೋ ಫೋನ್

2016ರಲ್ಲಿ ಬಿಡುಗಡೆಯಾಗಿ ಟೆಲಿಕಾಂ ಲೋಕವನ್ನು ಅಲುಗಾಡಿಸಿದ್ದ ಜಿಯೋ ಫೋನ್ ಪ್ರಸ್ತುತ 2.5 ಕೋಟಿ ಗ್ರಾಹಕರನ್ನು ಹೊಂದಿದ್ದು, ಅಲ್ಪಾವಧಿಯಲ್ಲಿಯೇ ಅದ್ಭುತ ಪ್ರಗತಿಯನ್ನು ಕಂಡಿದೆ. ಆದ್ದರಿಂದ ಜಿಯೋ ಫೋನ್‌ನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತೇವೆ ಎಂದು ಅಂಬಾನಿ ಹೇಳಿದ್ದಾರೆ.

ವಾಟ್ಸ್‌ಆಪ್, ಫೇಸ್‌ಬುಕ್, ಯೂಟ್ಯೂಬ್

ವಾಟ್ಸ್‌ಆಪ್, ಫೇಸ್‌ಬುಕ್, ಯೂಟ್ಯೂಬ್

ಜಿಯೋಫೋನ್‌ನಲ್ಲಿ ವಾಟ್ಸ್‌ಆಪ್, ಫೇಸ್‌ಬುಕ್, ಯೂಟ್ಯೂಬ್ ಆಪ್‌ಗಳು ಬಳಕೆದಾರರಿಗೆ ಮುಂದೆ ಲಭ್ಯವಾಗಲಿವೆ ಎಂದು 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಗಿದೆ. ಈ ಆಪ್‌ಗಳು ವಾಯ್ಸ್‌ ಕಮಾಂಡ್‌ ಮೂಲಕವು ಬಳಸಬಹುದಾಗಿದ್ದು, ಅಧಿಕೃತವಾಗಿ ಆಗಸ್ಟ್‌ 15ರ ನಂತರ ಬಳಕೆದಾರರಿಗೆ ಲಭ್ಯವಾಗಲಿವೆ. ಜಿಯೋ ಫೋನ್‌ನಲ್ಲಿ ವಾಯ್ಸ್‌ ಕಮಾಂಡ್ ವೈಶಿಷ್ಟ್ಯ ನೀಡಲಾಗಿದ್ದು, ತಿಂಗಳಿಗೆ 20 ಕೋಟಿ ವಾಯ್ಸ್‌ ಕಮಾಂಡ್‌ಗಳು ಸೃಷ್ಟಿಯಾಗುತ್ತಿವೆ ಎಂದು ರಿಲಾಯನ್ಸ್ ಹೇಳಿಕೊಂಡಿದೆ.

ಮಾನ್ಸೂನ್ ಹಂಗಾಮಾ

ಮಾನ್ಸೂನ್ ಹಂಗಾಮಾ

ರಿಲಾಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾನ್ಸೂನ್ ಹಂಗಾಮಾ ಆಫರ್‌ ಘೋಷಿಸಿದ್ದು, ಜುಲೈ 21ರಿಂದ ಬಳಕೆದಾರರು ತಮ್ಮಲ್ಲಿರುವ ಯಾವುದೇ ಫೀಚರ್ ಫೋನ್‌ನ್ನು ಜಿಯೋ ಫೋನ್‌ನೊಂದಿಗೆ ಕೇವಲ 501 ರೂ.ಗೆ ಪಡೆಯಬಹುದಾಗಿದೆ. ಅದಲ್ಲದೇ ಆಗಸ್ಟ್‌ 15ರಂದು ಜಿಯೋಫೋನ್ 2 ಮೊಬೈಲ್‌ನ್ನು ಬಿಡುಗಡೆ ಮಾಡಲಿದ್ದು, ಆರಂಭಿಕ ಬೆಲೆ 2,999 ರೂ. ಹೊಂದಿದೆ.

ಫೈಬರ್‌ಗೆ ನೊಂದಾಯಿಸಿ

ಫೈಬರ್‌ಗೆ ನೊಂದಾಯಿಸಿ

ಇದೇ ಮಾನ್ಸೂನ್ ಆಫರ್‌ನಲ್ಲಿ ಆಗಸ್ಟ್‌ 15ರಿಂದ ಜಿಯೋ ಗಿಗಾ ಫೈಬರ್‌ಗೆ ಆಸಕ್ತ ಬಳಕೆದಾರರು ನೊಂದಾಯಿಸಿಕೊಳ್ಳಬಹುದಾಗಿದೆ. ಹೀಗಾಗಲೇ ಜಿಯೋಫೈಬರ್ ಬೇಟಾ ಟ್ರೈಯಲ್ ಕಾರ್ಯನಿರ್ವಹಿಸುತ್ತಿದೆ. ಎಲ್ಲಿ ಫೈಬರ್‌ನೆಟ್‌ ಬಗ್ಗೆ ಜನ ಹೆಚ್ಚು ಆಸಕ್ತಿ ಹೊಂದಿರುತ್ತಾರೋ ಅಲ್ಲಿ ಜಿಯೋ ಗಿಗಾಫೈಬರ್ ಆರಂಭಿಸಲು ಜಿಯೋ ನಿರ್ಧರಿಸಿದೆ.

ನೆಟ್‌ವರ್ಕ್ ಸಾಮರ್ಥ್ಯ ದ್ವಿಗುಣ

ನೆಟ್‌ವರ್ಕ್ ಸಾಮರ್ಥ್ಯ ದ್ವಿಗುಣ

ರಿಲಾಯನ್ಸ್ ಜಿಯೋ ಬಳಕೆದಾರರು ಜಿಯೋ ನೆಟ್‌ವರ್ಕ್‌ನ್ನು ದಿನಕ್ಕೆ ಸುಮಾರು 290 ನಿಮಿಷಗಳಷ್ಟು ಬಳಸುತ್ತಾರೆ. ಕಳೆದ 12 ತಿಂಗಳಲ್ಲಿ ಜಿಯೋ ತನ್ನ ನೆಟ್‌ವರ್ಕ್‌ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು, ಜಿಯೋ ತನ್ನ ನೆಟ್‌ವರ್ಕ್‌ ಸಾಮರ್ಥ್ಯವನ್ನು ವಿಸ್ತರಿಸಿಕೊಮಡೊದ್ದರೂ, ಈ ಸಾಮರ್ಥ್ಯದ ಜಿಯೋ ನೆಟ್‌ವರ್ಕ್‌ ಅನ್ನು ಬಳಕೆ ಮಾಡುತ್ತಿರುವ ಪ್ರಮಾಣ ಶೇ.20ಕ್ಕಿಂತ ಕಡಿಮೆಯಿದೆ ಎಂದು ಜಿಯೋ ಹೇಳಿದೆ.

200+ ಜಿಯೊ ಮಿಲಿಯನ್ ಚಂದಾದಾರರ ಘೋಷಣೆ

200+ ಜಿಯೊ ಮಿಲಿಯನ್ ಚಂದಾದಾರರ ಘೋಷಣೆ

ಕೇವಲ 2 ವರ್ಷಗಳ ಪ್ರಾರಂಭದಲ್ಲಿ ಕೇವಲ 200 ದಶಲಕ್ಷ ಚಂದಾದಾರರನ್ನು ಜಿಯೋ ತಲುಪಿದೆ ಎಂದು ರಿಲಯನ್ಸ್ ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ 130 ಮಿಲಿಯನ್ ಚಂದಾದಾರರನ್ನು ದಾಟಿದ್ದಾರೆ ಎಂದು ಘೋಷಿಸಿದ್ದರು. ಈಗ 215 ದಶಲಕ್ಷ ಚಂದಾದಾರರೊಂದಿಗೆ, ಪ್ರತಿಸ್ಪರ್ಧಿ ವೊಡಾಫೋನ್ ಮತ್ತು ಏರ್ಟೆಲ್‌ ಅನ್ನು ಜಿಯೋ ಸಮೀಪಿಸುತ್ತಿದೆ.

ರಿಲಯನ್ಸ್ ಜಿಯೋ ಗಿಗಾರೂಟರ್ ಘೋಷಣೆ!!

ರಿಲಯನ್ಸ್ ಜಿಯೋ ಗಿಗಾರೂಟರ್ ಘೋಷಣೆ!!

ಟೆಲಿಕಾಂ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿರುವ ರಿಲಾಯನ್ಸ್ ಇಂದು 600 ಪ್ಲಸ್ ಚಾನೆಲ್‌ಗಳು, ಲಕ್ಷಾಂತರ ಹಾಡುಗಳು ಮತ್ತು 4K ರೆಸೊಲ್ಯೂಶನ್‌ನಲ್ಲಿ ಅಲ್ಟ್ರಾ ಹೆಚ್‌ಡಿಯಲ್ಲಿ ವೀಡಿಯೋ ವೀಕ್ಷಿಸಲು ಸಾಧ್ಯವಾಗುವ ಜಿಯೋ ಗಿಗಾರೂಟರ್ ಅನ್ನು ಇಂದು ಘೋಷಿಸಿದೆ. ಧ್ವನಿ ಕಮಾಂಡ್ ಮೂಲಕ ಟಿವಿಯಲ್ಲಿ ನಿಯಂತ್ರಿಸುವ ವೈಶಿಷ್ಟ್ಯವನ್ನು ಹೊಂದಿರುವ ಜಿಯೋ ಗಿಗಾ ಫೈಬರ್‌ಗೆ ಸಂಪರ್ಕಿಸಿದ ಪ್ರತಿಯೊಂದು ಟಿವಿಗೆ ವೀಡಿಯೊ ಕರೆ ಮಾಡಲು ಸಾಧ್ಯವಾಗುತ್ತದೆ.

ಮುಂದಿನ ಲೈವ್ ಅಪ್‌ಡೇಟ್ಸ್‌ಗಾಗಿ ಗಿಜ್‌ಬಾಟ್ ಕನ್ನಡವನ್ನು ತೆರೆದಿಡಿ.

Best Mobiles in India

Read more about:
English summary
JioPhone 2, GigaFiber to be available from August 15, here are the details. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X