ಜಿಯೋದಿಂದ ಮತ್ತೊಂದು ಬಿಗ್‌ ಆಫರ್‌..! ಶೇ.100ರಷ್ಟು ಕ್ಯಾಶ್‌ಬ್ಯಾಕ್‌..!

|

ಇದು ಹಬ್ಬದ ಸೀಸನ್ ಆಗಿರುವುದರಿಂದಾಗಿ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಚಂದಾದಾರರಿಗೆ ಹೊಸ ವಾರ್ಷಿಕ ಪ್ರೀಪೇಯ್ಡ್ ಪ್ಲಾನ್ ನ್ನು ಪರಿಚಯಿಸಿದೆ.ಈ ತಾರಿಫ್ ಪ್ಲಾನ್ ನ ಬೆಲೆ 1,699 ರುಪಾಯಿಗಳು ಮತ್ತು ಇದು 4ಜಿ 547.5ಜಿಬಿ ಡಾಟಾವನ್ನು ನೀಡುತ್ತದೆ. ಈ ಹೊಸ ಪ್ರೀಪೇಯ್ಡ್ ಪ್ಲಾನ್ 4,999 ರುಪಾಯಿ ಮತ್ತು 9,999 ರುಪಾಯಿಯ ಲಾಂಗ್ ಟರ್ಮ್ ಪ್ರೀಪೇಯ್ಡ್ ಪ್ಲಾನ್ ಗಳನ್ನೇ ಸೇರುತ್ತದೆ ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಇದು ಪ್ರತಿದಿನದ ಡಾಟಾ ಲಿಮಿಟ್ ನ್ನು ಹೊಂದಿದೆ.

ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!ಇನ್ಮುಂದೆ ಚೀನಾದಲ್ಲಿ ಕತ್ತಲೆಯೇ ಆಗಲ್ಲ..! 24 ಗಂಟೆಯೂ ಬೆಳಕೇ ಇರುತ್ತೇ..!

ಹೊಸ ಆಫರ್ ನಲ್ಲಿ ಏನಿದೆ?

ಹೊಸ ಆಫರ್ ನಲ್ಲಿ ಏನಿದೆ?

ಹೊಸದಾಗಿರುವ ರೂ.1,699 ರುಪಾಯಿ ಜಿಯೋ ಪ್ರೀಪೇಯ್ಡ್ ಪ್ಲಾನ್ ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ ಮತ್ತು 1.5 ಜಿಬಿ 4ಜಿ ಡಾಟಾವನ್ನು ಪ್ರತಿದಿನ 365 ದಿನಗಳ ಅವಧಿಗೆ ಹೊಂದಿರುತ್ತದೆ. ಅಂದರೆ ಈ ಆಫರ್ ಮೂಲಕ 547.5ಜಿಬಿ ಡಾಟಾವನ್ನು ನೀಡಲಾಗುತ್ತದೆ. ಇತರೆ ಪ್ರೀಪೇಯ್ಡ್ ಪ್ಲಾನ್ ಗಳಂತೆ ಈ ಆಫರ್ ನಲ್ಲೂ ಕೂಡ ಯಾವುದೇ FUP ಲಿಮಿಟ್ ಇಲ್ಲದೆಯೇ ಅನಿಯಮಿತ ವಾಯ್ಸ್ ಕರೆಗಳನ್ನು ನೀಡಲಾಗುತ್ತದೆ.

ದೇಶದ ಅತೀ ಕಡಿಮೆ ಮೊತ್ತದ ಆಫರ್:

ದೇಶದ ಅತೀ ಕಡಿಮೆ ಮೊತ್ತದ ಆಫರ್:

ಈ ಎಲ್ಲಾ ಬೆನಿಫಿಟ್ ಗಳ ಜೊತೆಗೆ ಇದು ದೇಶದಲ್ಲೇ ಇರುವ ಅತೀ ಕಡಿಮೆ ಬೆಲೆಯ ಪ್ರೀಪ್ಲೇಯ್ಡ್ ಪ್ಲಾನ್ ಆಗಿದೆ. ಈ ಮುಂಚೆ ಬಿಎಸ್ಎನ್ಎಲ್ 2000 ರುಪಾಯಿ ಬೆಲೆಯ ಕೆಲವು ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಜಿಯೋ ಆಫರ್ ಮಾಡಿರುವ ಪ್ಲಾನ್ ಉಳಿದೆಲ್ಲ ತಾರಿಫ್ ಪ್ಲಾನ್ ಗಳಿಗಿಂತ ಅಧ್ಬುತವಾಗಿರುವ ಮತ್ತು ಲಾಭದಾಯಕವಾಗಿರುವ ಪ್ಲಾನ್ ಆಗಿದೆ.

ರಿಲಯನ್ಸ್ ಜಿಯೋ ದೀಪಾವಳಿ ಆಫರ್

ರಿಲಯನ್ಸ್ ಜಿಯೋ ದೀಪಾವಳಿ ಆಫರ್

ರಿಲಯನ್ಸ್ ಜಿಯೋ ಹೊಸ ದೀಪಾವಳಿ ಆಫರ್ ನ್ನು ನೀಡುತ್ತಿದ್ದು, ಇದು ಯಾವುದೇ ರೀಚಾರ್ಜ್ ಪ್ಯಾಕ್ ಗೂ ಕೂಡ 100 ಶೇ ರಿಯಾಯಿತಿಯನ್ನು ನೀಡುತ್ತದೆ.100 ರೂಪಾಯಿ ಮೇಲಿ ಎಲ್ಲಾ ಪ್ರೀಪೇಯ್ಡ್ ಪ್ಲಾನ್ ಗಳಿಗೂ ಕೂಡ ಇದು ಅನ್ವಯಿಸುತ್ತದೆ. ಹಾಗಾಗಿ, ಬಳಕೆದಾರರು ಯಾವುದೇ 149 ರೂಪಾಯಿಯಿಂದ 9,999 ರುಪಾಯಿ ವರೆಗಿನ ರೀಚಾರ್ಜ್ ಮಾಡಿಸಿಕೊಂಡರೆ ಶೇ.100 ಕ್ಯಾಷ್ ಬ್ಯಾಕ್ ಪಡೆಯಬಹುದು.

ಮೂರು ವೋಚರ್ ಗಳಲ್ಲಿ ಕ್ಯಾಷ್ ಬ್ಯಾಕ್:

ಮೂರು ವೋಚರ್ ಗಳಲ್ಲಿ ಕ್ಯಾಷ್ ಬ್ಯಾಕ್:

ಹೊಸದಾಗಿ ಬಿಡುಗಡೆಗೊಂಡಿರುವ 1,699 ರುಪಾಯಿ ರೀಚಾರ್ಜ್ ಮಾಡಿದರೆ ಬಳಕೆದಾರರು ರೂ.500 ರ ಮೂರು ವೋಚರ್ ನ್ನು ಮತ್ತು 200 ರುಪಾಯಿ ಬೆಲೆಬಾಳುವ ವೋಚರ್ ನ್ನು ಪಡೆಯಿದ್ದಾರೆ.

ಕಡ್ಡಾಯವಾಗಿ 5,000 ರುಪಾಯಿ ಖರೀದಿ:

ಕಡ್ಡಾಯವಾಗಿ 5,000 ರುಪಾಯಿ ಖರೀದಿ:

ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್ ನಲ್ಲಿ ಈ 100% ರಿಯಾಯಿತಿ ಕ್ಯಾಷ್ ಬ್ಯಾಕ್ ವೋಚರ್ ನ್ನು ಬಳಸಿಕೊಳ್ಳಬಹುದಾಗಿದ್ದು ಅದಕ್ಕಾಗಿ ಗ್ರಾಹಕರು 5000 ರುಪಾಯಿ ಖರೀದಿಯನ್ನು ಸ್ಟೋರ್ ನಲ್ಲಿ ಕಡ್ಡಾಯವಾಗಿ ಮಾಡಬೇಕಾಗುತ್ತದೆ.ಆದರೆ, ಒಂದು ಟ್ರಾನ್ಸ್ಯಾಕ್ಷನ್ ನಲ್ಲಿ ಬಳಕೆದಾರರು ಎರಡು ವೋಚರ್ ನ್ನು ಬಳಸುವಂತಿಲ್ಲ. ಡಿಸೆಂಬರ್ 31,2018 ಕ್ಕೆ ಈ ವೋಚರ್ ನ ಅವಧಿಯು ಮುಕ್ತಾಯವಾಗುತ್ತದೆ.

ಎಲ್ಲಾ ವಸ್ತುಗಳಿಗೂ ವೋಚರ್ ಬಳಕೆ ಅಸಾಧ್ಯ:

ಎಲ್ಲಾ ವಸ್ತುಗಳಿಗೂ ವೋಚರ್ ಬಳಕೆ ಅಸಾಧ್ಯ:

ಆದರೆ ರಿಲಯನ್ಸ್ ಮಳಿಗೆಗಳಿಗೆ ಖರೀದಿಸುವ ಕೆಲವು ವಸ್ತುಗಳಿಗೆ ಈ ವೋಚರ್ ಗಳನ್ನು ಬಳಸುವಂತಿಲ್ಲ. ಗಿಫ್ಟ್ ವೋಚರ್ ಗಳು, ಬುಕ್ ಮೈ ಶೋಗೆ ಗಿಫ್ಟ್ ಕಾರ್ಡ್ಸ್ ಗಳು ಗೂಗಲ್ ಪ್ಲೇ, ಕ್ಲಿಯರ್ ಟ್ರಿಪ್ ಮತ್ತು ಗೂಗಲ್ ಐಟಂಗಳು ಇದರಲ್ಲಿ ಸೇರಿವೆ. ಇನ್ನು ವೆರ್ಸ್ಟರ್ನ್ ಡಿಜಿಟಲ್ ನ ಹಾರ್ಡ್ ಡಿಸ್ಕ್ ಗಳು, ಸೋನಿ ಟ್ಯಾಬ್ಲೆಟ್ ಗಳು ಮತ್ತು ಲೆನೋವಾ ಮತ್ತು ಶಿಯೋಮಿ ಸ್ಮಾರ್ಟ್ ಫೋನ್ ಗಳನ್ನು ಈ ವೋಚರ್ ಗಳಿಂದ ಖರೀದಿಸುವಂತಿಲ್ಲ.

250 ಮಿಲಿಯನ್ ಚಂದಾದಾರರು :

250 ಮಿಲಿಯನ್ ಚಂದಾದಾರರು :

ಫೆಸ್ಟೀವ್ ಸೀಸನ್ ಸೇಲ್ ಆಫರ್ ನ್ನು ರಿಲಯನ್ಸ್ ಜಿಯೋ ಪ್ರಕಟಿಸಿದ ಕೂಡಲೇ ಚಂದಾದಾರರ ಸಂಖ್ಯೆ ಅಧಿಕಗೊಂಡಿದೆಯಂತೆ.ಅಂಕಿಅಂಶಗಳ ಮೂಲಕವೇ ಹೇಳುವುದಾದರೆ ಇದೀಗ ರಿಲಯನ್ಸ್ ಜಿಯೋ ಸುಮಾರು 250 ಮಿಲಿಯನ್ ಚಂದಾದಾರರನ್ನು ಕೇವಲ 25 ತಿಂಗಳ ಅವಧಿಯಲ್ಲಿ ಹೊಂದಿದೆ. ಅಂದರೆ ಜನಸಾಮಾನ್ಯರಿಗೆ ಸೇವೆ ಆರಂಭಿಸಿದ ಕೇವಲ 2 ವರ್ಷದ ಅವಧಿಯಲ್ಲಿ ಜಿಯೋ ಅಸಾಧಾರಣ ಮೊತ್ತದ ಚಂದಾದಾರರನ್ನು ಪಡೆದುಕೊಂಡಿದೆ.

Most Read Articles
Best Mobiles in India

English summary
Jio Rs. 1,699 prepaid plan offers 1.5GB data for 365 days; 100% cashback offer announced. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X