ಶೀಘ್ರದಲ್ಲೇ ಜಿಯೋ ಕಂಪೆನಿಯಿಂದ ಬರಲಿದೆ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌: ವರದಿ!

|

ಬಜೆಟ್‌ ಬೆಲೆಯಲ್ಲಿ ಜಿಯೋಫೋನ್‌ ಪರಿಚಯಿಸಿ ಯಶಸ್ಸು ಗಳಿಸಿರುವ ಜಿಯೋ ಕಂಪೆನಿ ಇದೀಗ ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ ಪರಿಚಯಿಸಲು ಮುಂದಾಗಿದೆ. ಬಜೆಟ್‌ ಬೆಲೆಯಲ್ಲಿ ಎಂಬೆಡೆಡ್ 4G ಸಿಮ್ ಕಾರ್ಡ್‌ ಬೆಂಬಲಿಸುವ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಇದಕ್ಕಾಗಿ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಮೂಹವು ಕ್ವಾಲ್‌ಕಾಮ್ ಮತ್ತು ಮೈಕ್ರೋಸಾಫ್ಟ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಎನ್ನಲಾಗಿದೆ. ಈ ಮೂಲಕ ಲ್ಯಾಪ್‌ಟಾಪ್‌ ವಲಯದಲ್ಲಿ ಜಿಯೋ ಕಂಪೆನಿ ಹೊಸ ಸಂಚಲನ ಮೂಡಿಸಿದೆ.

ರಿಲಯನ್ಸ್‌

ಹೌದು, ರಿಲಯನ್ಸ್‌ ಕಂಪೆನಿ ಶೀಘ್ರದಲ್ಲೇ ಭಾರತದಲ್ಲಿ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸಲಿದೆ. ಇದು ಎಂಬೆಡೆಡ್‌ 4G ಸಿಮ್‌ ಕಾರ್ಡ್‌ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಜಿಯೋ ಪರಿಚಯಿಸಲಿರುವ ಹೊಸ ಲ್ಯಾಪ್‌ಟಾಪ್ ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸೂಕ್ತವಾಗಿರಲಿದ್ದು, ಇದೇ ತಿಂಗಳಿನಿಂದ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಅಲ್ಲದೆ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಗ್ರಾಹಕ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ. ಜಿಯೋ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಬೀರುವ ಪ್ರಭಾವ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೇಟಾ

ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದ ದಿಕ್ಕನ್ನೇ ಬದಲಿಸಿದ ಜಿಯೋ ಇದೀಗ ಭಾರತದಲ್ಲಿ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಶೀಘ್ರದಲ್ಲೇ ಜಿಯೋ ಕಡಿಮೆ ಬೆಲೆಯಲ್ಲಿ ಎಂಬೆಡೆಡ್ 4G ಸಿಮ್ ಕಾರ್ಡ್‌ನೊಂದಿಗೆ 15,000ರೂ. ಬೆಲೆಯಲ್ಲಿ ಹೊಸ ಲ್ಯಾಪ್‌ಟಾಪ್‌ ಪರಿಚಯಿಸಲಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಜಿಯೋ ಕಂಪೆನಿ ಕ್ವಾಲ್‌ಕಾಮ್ ಮತ್ತು ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಕಂಪ್ಯೂಟಿಂಗ್

ಇದಲ್ಲದೆ ಕಂಪ್ಯೂಟಿಂಗ್ ಚಿಪ್‌ಗಳನ್ನು ಶಕ್ತಿಯುತಗೊಳಿಸುವುದರೊಂದಿಗೆ ಮತ್ತು ಕೆಲವು ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ಒದಗಿಸುವ ವಿಂಡೋಸ್ ಓಎಸ್ ತಯಾರಕರು ಕೂಡ ಇದ್ದಾರೆ ಎನ್ನಲಾಗಿದೆ. ಟೆಲಿಕಾಂ ವಲಯದಲ್ಲಿ 420 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಕಂಪೆನಿ ಮುಂದಿನ ಮೂರು ತಿಂಗಳೊಳಗೆ ಈ ಲ್ಯಾಪ್‌ಟಾಪ್‌ ಅನ್ನು ಗ್ರಾಹಕರ ಕೈ ಸೇರುವಂತೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಲ್ಯಾಪ್‌ಟಾಪ್‌

ಈ ಲ್ಯಾಪ್‌ಟಾಪ್‌ ಎಂಬೆಡೆಡ್ 4G ಸಿಮ್ ಕಾರ್ಡ್‌ನೊಂದಿಗೆ ಬರಲಿದೆ. ಆದರೆ ಜಿಯೋಫೋನ್‌ ಮಾದರಿಯಲ್ಲಿ 5G-ಸಕ್ರಿಯಗೊಳಿಸಿದ ಆವೃತ್ತಿಯನ್ನು ಅನುಸರಿಸಲಿದೆ. ಇನ್ನು ಈ ಜಿಯೋಬುಕ್‌ ಲ್ಯಾಪ್‌ಟಾಪ್‌ ಜಿಯೋಫೋನ್‌ ಮಾದರಿಯ ವಿನ್ಯಾಸವನ್ನು ಹೊಂದಿರಲಿದ್ದು, ಫೋನ್‌ಗಿಂತ ದೊಡ್ಡ ಗಾತ್ರವನ್ನು ಪಡೆದಿರಲಿದೆ. ಇನ್ನು ಜಿಯೋ ಲ್ಯಾಪ್‌ಟಾಪ್ Jio ನ ಸ್ವಂತ JioOS ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಅಲ್ಲದೆ ಅಪ್ಲಿಕೇಶನ್‌ಗಳನ್ನು ಜಿಯೋಸ್ಟೋರ್‌ ನಿಂದ ಡೌನ್‌ಲೋಡ್ ಮಾಡಬಹುದು.

ಜಿಯೋಬುಕ್‌

ಇದಲ್ಲದೆ ಈ ಜಿಯೋಬುಕ್‌ ಅನ್ನು ಸ್ಥಳೀಯವಾಗಿ ಗುತ್ತಿಗೆ ತಯಾರಕ ಫ್ಲೆಕ್ಸ್‌ ನಿಂದ ಉತ್ಪಾದಿಸಲಾಗುವುದು. ಅಲ್ಲದೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದರ "ಹಂಡ್ರೆಡ್ಸ್‌ ಆಫ್‌ ಥೌಸಂಡ್ಸ್‌" ಯೂನಿಟ್‌ಗಳನ್ನು ಸೇಲ್‌ ಮಾಡುವ ಗುರಿಯನ್ನು ಜಿಯೋ ಕಂಪೆನಿ ಹೊಂದಿದೆ. ಸಂಶೋಧನಾ ಸಂಸ್ಥೆ IDC ಪ್ರಕಾರ, ಭಾರತದಲ್ಲಿ ಒಟ್ಟಾರೆ PC ಸಾಗಣೆಗಳು ಕಳೆದ ವರ್ಷ 14.8 ಮಿಲಿಯನ್ ಯುನಿಟ್‌ ಇದೆ. ಇದರಲ್ಲಿ HP, Dell ಮತ್ತು Lenovo ಬ್ರ್ಯಾಂಡ್‌ಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ.

ಜಿಯೋಬುಕ್‌

ಜಿಯೋಬುಕ್‌ ಬಿಡುಗಡೆಯಾದ ನಂತರ ಲ್ಯಾಪ್‌ಟಾಪ್ ಮಾರುಕಟ್ಟೆ ವಿಭಾಗವನ್ನು ಕನಿಷ್ಠ 15% ವಿಸ್ತರಿಸುತ್ತದೆ ಎಂದು ಕೌಂಟರ್‌ಪಾಯಿಂಟ್ ವಿಶ್ಲೇಷಕ ತರುಣ್ ಪಾಠಕ್ ಹೇಳಿದ್ದಾರೆ. ಅಗ್ಗದ ಬೆಲೆಯಲ್ಲಿ ಈ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುವುದರಿಂದ ಜಿಯೋ ಲ್ಯಾಪ್‌ಟಾಪ್‌ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ. ಅದರಲ್ಲೂ ವಿದ್ಯಾರ್ಥಿ ಸಮೂಹ ಜಿಯೋಬುಕ್‌ ಅನ್ನು ಇಷ್ಟ ಪಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Best Mobiles in India

Read more about:
English summary
Jio's budget laptop to come with embedded 4G SIM card

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X