ಜಿಯೋ ಬಳಕೆದಾರರಿಗೆ ಬಿಗ್‌ ಶಾಕ್‌! ಫೋನ್‌ ಕಾಲ್‌ ಹೋಗ್ತಿಲ್ಲ! SMS ಬರ್ತಿಲ್ಲ!

|

ಜಿಯೋ ಟೆಲಿಕಾಂ ಬಳಕೆದಾರರು ಇಂದು ಬೆಳಿಗ್ಗೆಯಿಂದ ಎಸ್‌ಎಂಎಸ್‌ ಮತ್ತು ಕರೆ ಮಾಡುವುದಕ್ಕೆ ಸಾಧ್ಯವಾಗ್ತಿಲ್ಲ ಎಂದು ವರದಿಯಾಗಿದೆ. ಜಿಯೋ ನೆಟ್‌ವರ್ಕ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಎಸ್‌ಎಂಎಸ್‌ ಸೆಂಡ್‌ ಆಗ್ತಿಲ್ಲ ಎಂದು ಹೇಳಲಾಗ್ತಿದೆ. ಇದರ ಬಗ್ಗೆ ಜಿಯೋ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲವಾದರೂ ಸೊಶೀಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ವರದಿಯಾಗಿದೆ. ಅಲ್ಲದೆ ಕೆಲವು ಬಳಕೆದಾರರು ಜಿಯೋ ನೆಟ್‌ವರ್ಕ್‌ನಿಂದ ಕರೆ ಕೂಡ ಮಾಡಲಾಗ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಜಿಯೋ

ಹೌದು, ಜಿಯೋ ನೆಟ್‌ವರ್ಕ್‌ ಇಂದು ತಾಂತ್ರಿಕ ಸಮಸ್ಯೆಗೆ ಗುರಿಯಾಗಿದ್ದು ದೇಶದ ಹಲವು ಭಾಗಗಳಲ್ಲಿ ಬಳಕೆದಾರರು ತೊಂದರೆ ಅನುಭವಸಿತ್ತಿದ್ದಾರೆ. ಅಲ್ಲದೆ ಕೆಲವು ಜಿಯೋ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಜಿಯೋ 4G VoLTE ಚಿಹ್ನೆ ಕೂಡ ಮಾಯವಾಗಿದೆ ಎಂದು ಟ್ವಿಟರ್‌ನಲ್ಲಿ ವರದಿ ಮಾಡಿದ್ದಾರೆ. ಜಿಯೋದ ಈ ಸಮಸ್ಯೆಯ ಬಗ್ಗೆ ಸೊಶೀಯಲ್‌ ಮೀಡಿಯಾದಲ್ಲಿ ಬಗೆ ಬಗೆಯ ಮೇಮ್‌ಗಳನ್ನು ಶೇರ್‌ ಮಾಡುವ ಮೂಲಕ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಜಿಯೋದ ಈ ಸಮಸ್ಯೆಗೆ ಕಾರಣ ಏನು? ಎಲ್ಲೆಲ್ಲಿ ಸಮಸ್ಯೆ ಎದುರಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ನೆಟ್‌ವರ್ಕ್‌ ಸಮಸ್ಯೆಗೆ ಅಸಲಿ ಕಾರಣ ಏನು?

ಜಿಯೋ ನೆಟ್‌ವರ್ಕ್‌ ಸಮಸ್ಯೆಗೆ ಅಸಲಿ ಕಾರಣ ಏನು?

ಜಿಯೋ ಸಿಮ್‌ ಬಳಸುತ್ತಿರುವವರು ಇಂದು ಬೆಳ್ಳಿಗ್ಗೆಯಿಂದ ಯಾರಿಗೂ ಕರೆ ಮಾಡಲು ಆಗುತ್ತಿಲ್ಲ. ಅಲ್ಲದೆ ಎಸ್‌ಎಂಎಸ್‌ ಕೂಡ ಸೆಂಡ್‌ ಆಗ್ತಿಲ್ಲ ಎಂಬುದಾಗಿ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಈ ಸ್ಥಗಿತದ ಕುರಿತು ಜಿಯೋ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿಲ್ಲ. ಆದರೆ ಕರೆ ಮತ್ತು SMS ಸೇವೆಗಳು ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಬರುತ್ತವೆ ಎಂದು ಹೇಳಲಾಗ್ತಿದೆ. ಇದೇ ಸಮಯದಲ್ಲಿ ಬಳಕೆದಾರರು ಟ್ವಿಟರ್‌ನಲ್ಲಿ ವಿವಿಧ ರೀತಿಯಲ್ಲಿ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲೆಲ್ಲಿ ಸಮಸ್ಯೆಯಾಗಿದೆ?

ಎಲ್ಲೆಲ್ಲಿ ಸಮಸ್ಯೆಯಾಗಿದೆ?

ದೇಶದ ಪ್ರಮುಖ ವಾಣಿಜ್ಯ ನಗರಗಳಾದ ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ಅನೇಕ ನಗರಗಳಲ್ಲಿ ಜಿಯೋ ಗ್ರಾಹಕರು ಸಮಸ್ಯೆಯನ್ನು ಎದುರಿಸಿದ್ದಾರೆ. ಇದರಿಂದ ಬಹುತೇಖ ಎಲ್ಲಾ ಪ್ರಮುಖ ನಗರಗಳ ಜಿಯೋ ಗ್ರಾಹಕರು ಕರೆ ಮಾಡಲು ಪರದಾಡುತ್ತಿದ್ದಾರೆ ಎಂದು ಔಟ್ಟೇಜ್ ಡಿಟೆಕ್ಷನ್ ವೆಬ್‌ಸೈಟ್ ಡೌನ್‌ಡೆಕ್ಟರ್ ತೋರಿಸಿದೆ. ಈ ಸಮಸ್ಯೆಗಳು ಈಗ ಸರಿಪಡಿಸಲ್ಪಟ್ಟಿವೆ ಎಂದು ತೋರುತ್ತಿದ್ದರೂ, ಅಡಚಣೆಗೆ ಅಸಲಿ ಕಾರಣ ಏನು ಅನ್ನೊದು ಬಹಿರಂಗವಾಗಿಲ್ಲ.

ಇದೇ ಮೊದಲೇನಲ್ಲ?

ಇದೇ ಮೊದಲೇನಲ್ಲ?

ಭಾರತದಲ್ಲಿ ಜಿಯೋ ಬಳಕೆದಾರರು ನೆಟ್‌ವರ್ಕ್‌ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಇದೇ ರೀತಿಯ ಅಡಚಣೆಗಳು ಈ ಹಿಂದೆ ಕೂಡ ವರದಿಯಾಗಿವೆ. ಅದರಲ್ಲೂ ಇದೇ ವರ್ಷ ಅಕ್ಟೋಬರ್, ಜೂನ್ ಮತ್ತು ಫೆಬ್ರವರಿಯಲ್ಲಿ ಕೂಡ ಸಮಸ್ಯೆಯನ್ನು ಎದುರಿಸಿತ್ತು. ಆ ಸಮಯದಲ್ಲಿಯೂ ಕೂಡ ಡೇಟಾ ಮತ್ತು ಕರೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದನ್ನು ನಾವು ನೆನಪುಮಾಡಿಕೊಳ್ಳಬಹುದು.

ಜಿಯೋ

ಇನ್ನು ಜಿಯೋ ಟೆಲಿಕಾಂ ಇತ್ತೀಚಿಗೆ ತನ್ನ ಎರಡು ಜನಪ್ರಿಯ ಪ್ರೀಪೇಯ್ಡ್‌ ಯೋಜನೆಗಳನ್ನು ಸಂಪೂರ್ಣವಾಗಿ (removed) ನಿಲ್ಲಿಸಿದೆ. ತನ್ನ ಪ್ಲ್ಯಾನ್‌ಗಳ ಲಿಸ್ಟ್‌ನಿಂದ ಜಿಯೋ 1499ರೂ ಮತ್ತು ಜಿಯೋ 4199ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ತೆಗೆದುಹಾಕಿದೆ. ಈ ಎರಡೂ ಯೋಜನೆಗಳು ಟೆಲಿಕಾಂನ ಅಧಿಕೃತ ವೆಬ್‌ಸೈಟ್ ಅಥವಾ ಜಿಯೋ ಮೊಬೈಲ್ ಆಪ್‌ನಲ್ಲಿ ಕಾಣಿಸುವುದಿಲ್ಲ. ಈ ಪ್ಲಾನ್‌ಗಳು ಡಿಸ್ನಿ+ ಹಾಟ್‌ಸ್ಟಾರ್‌ (Disney+ Hotstar) ಓಟಿಟಿ ಚಂದಾದಾರಿಕೆ ಸೌಲಭ್ಯ ಪಡೆದಿದ್ದು, ಜೊತೆಗೆ ದೈನಂದಿನ ಡೇಟಾ, ಎಸ್‌ಎಮ್‌ಎಸ್‌ ಪ್ರಯೋಜನ, ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯಗಳೊಂದಿಗೆ ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿವೆ.

Best Mobiles in India

English summary
Jio’s calling and SMS services are reportedly down as several users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X