ಜಿಯೋ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಲಭ್ಯ ಇರುವ ಚಾನೆಲ್‌ಗಳ ಲಿಸ್ಟ್‌ ಲೀಕ್!

|

ಟೆಲಿಕಾಂ ವಲಯದಲ್ಲಿ ದೂಳೆಬ್ಬಿಸಿದ ಜಿಯೋ ಸಂಸ್ಥೆ ಡಿ2ಎಚ್‌ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿರುವ ವಿಷಯ ಹೊಸದೆನಲ್ಲ. ಹಾಗೆಯೇ ಇತ್ತೀಚಿಗೆ ಸಂಸ್ಥೆಯು ಬಹುನಿರೀಕ್ಷಿತ 'ಜಿಯೋ ಗಿಗಾಫೈಬರ್' ಸೇವೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಆದರೆ ಗಿಗಾ ಫೈಬರ್ ಸೆಟ್‌ಟಾಪ್‌ ಬಾಕ್ಸ್ ಸೇವೆಯು ಗ್ರಾಹಕರಿಗೆ ಇನ್ನೂ ಲಭ್ಯವಾಗಬೇಕಿದೆ. ಈ ನಡುವೆ ಕೆಲವು ಗ್ರಾಹಕರಿಗೆ ಈಗಾಗಾಲೇ ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್ ಲಭ್ಯವಾಗಿದ್ದು, ಆ ಬಗ್ಗೆ ಕೆಲವು ಕುತೂಹಲಕರ ಮಾಹಿತಿ ತಿಳಿದು ಬಂದಿವೆ.

ಸೆಟ್‌ಟಾಪ್‌

ಹೌದು, ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್ IPTV ಆಧಾರಿತವಾಗಿದ್ದು, ಹೀಗಾಗಿ ಪ್ರತ್ಯೇಕ ಸೆಟ್‌ಟಾಪ್‌ ಬಾಕ್ಸ್ ಅಗತ್ಯವಿಲ್ಲ ಹಾಗೂ ಸೆಟ್‌ಟಾಪ್‌ ಬಾಕ್ಸ್ ಕೇಬಲ್ ಟಿವಿ ಕನೆಕ್ಷನ್‌ ಆಯ್ಕೆಯನ್ನು ಹೊಂದಿಲ್ಲ ಎನ್ನುವ ಸುದ್ದಿ ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗೆಯೇ ಜಿಯೋದ ಸೆಟ್‌ಟಾಪ್ ಬಾಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಪ್ಸ್‌ ಲಭ್ಯವಿದ್ದು, ಇತರೆ ಲಭ್ಯವಿರುವ ಟಿವಿ ಚಾನೆಲ್ಸ್‌ಗಳ ಬಗ್ಗೆಯೂ ಕೆಲ ಬಳಕೆದಾರರು ಮಾಹಿತಿ ಶೇರ್ ಮಾಡಿದ್ದಾರೆ.

ಇಂಟರ್ನೆಟ್‌

ಜಿಯೋ ಫೈಬರ್ ಬ್ರೋಂಜ್, ಸಿಲ್ವರ್, ಗೋಲ್ಡ್‌, ಡೈಮಂಡ್, ಪ್ಲಾಟಿನಂ ಮತ್ತು ಟೈಟಾನಿಂ ಪ್ಲ್ಯಾನ್‌ಗಳ ಆಯ್ಕೆ ಇದ್ದು, ಈ ಪ್ಲ್ಯಾನ್‌ಗಳಲ್ಲಿ ಇಂಟರ್ನೆಟ್‌ ಆಧಾರಿತವಾಗಿ ಟಿವಿ ಚಾನೆಲ್ಸ್‌ಗಳು ಲಭ್ಯವಾಗಲಿವೆ. ಟಿವಿ ಚಾನೆಲ್ಸ್‌ಗಳು ಇರುತ್ತವೆಯಾ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಮೂಡಿರುತ್ತದೆ. ಜಿಯೋ ಫೈಬರ್‌ನಲ್ಲಿ ಚಾನಲ್ಸ್‌ ವೀಕ್ಷಿಸಲು ಟಿವಿ ಆಪ್ಸ್‌ ಅಥವಾ ವೈಫೈ ಸಂಪರ್ಕ ಬಳಕೆ ಮಾಡಬೇಕಾಗುತ್ತದೆ ಎನ್ನಲಾಗಿದೆ.

ಜಿಯೋ ಫೈಬರ್

ಪ್ರತ್ಯೇಕ ಡಿ2ಎಚ್‌ ಕನೆಕ್ಷನ್ ಇಲ್ಲದೇ ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಲೈವ್ ಟಿವಿ ವೀಕ್ಷಿಸುವುದು ಹೇಗೆ ಎನ್ನುವ ಪ್ರಶ್ನೆ ಗ್ರಾಹಕರನ್ನು ಕಾಡಿರುತ್ತದೆ. ಆದ್ರೆ ಡ್ರಿಮ್ ಡಿಟಿಎಚ್‌ ಪ್ರಕಾರ ಜಿಯೋ ಟಿವಿ ಪ್ಲಸ್‌, ಹಾಟ್‌ಸ್ಟಾರ್, ವೂಟ್, ಯೂಟ್ಯೂಬ್ ಸೇರಿದಂತೆ ಕೆಲವು ಪ್ರಿ-ಇನ್‌ಸ್ಟಾಲ್‌ ಆಪ್ಸ್‌ಗಳಿದ್ದು, ಈ ಆಪ್ಸ್‌ಗಳ ಮೂಲಕ ಲೈವ್ ಟಿವಿ ವೀಕ್ಷಣೆ ಮಾಡಬಹುದಾಗಿದೆ. ಅವುಗಳಲ್ಲಿ ಜಿಯೋ ಟಿವಿ ಪ್ಲಸ್‌ ಆಪ್‌ ಒಂದರಲ್ಲಿಯೇ ಹಲವು ಕಂಟೆಂಟ್‌ ವೀಕ್ಷಣೆಗೆ ಲಭ್ಯವಾಗುತ್ತವೆ

ಜಿಯೋ ಸಿನಿಮಾ

ಹಾಗೆಯೇ ಜಿಯೋ ಫೈಬರ್ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಜಿಯೋ ಸಿನಿಮಾ, ಜೀಯೋ ಸಾವನ್ ಆಪ್ಸ್‌ಗಳು ಲಭ್ಯ ಇದ್ದು, ಇವುಗಳ ಜೊತೆಗೆ ಇನ್ನಷ್ಟು ಕಂಟೆಂಟ್‌ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಲಭ್ಯವಾಗುತ್ತವೆ. ಇವುಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಟೆಂಟ್‌ ಆಪ್ಸ್‌ ಮತ್ತು ಚಾನೆಲ್ಸ್‌ಗಳು ಜಿಯೋ ಫೈಬರ್‌ ಸೆಟ್‌ಟಾಪ್‌ ಸೇರ್ಪಡೆ ಆಗಲಿವೆ ಎನ್ನುವ ಮಾತುಗಳು ಸಹ ಇವೆ.

Best Mobiles in India

English summary
JioFiber set top box has apparently begun to roll-out according to a few consumers who are sharing their experience of using the services on public forums. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X