ಜಿಯೋದಿಂದ ಸಣ್ಣ-ಮಧ್ಯಮ ಉದ್ದಿಮೆದಾರರಿಗೆ ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ ಲಾಂಚ್!‌

|

ಭಾರತದ 50 ಮಿಲಿಯನ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರ (MSMB)ಗಳ ಡಿಜಿಟಲ್ ಪರಿವರ್ತನೆಗೆ ಜಿಯೋ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಯೋ ಎಂಎಸ್‌ಎಂಬಿಗಳಿಗೆ ಇಂಟಿಗ್ರೇಟೆಡ್ ಫೈಬರ್ ಕನೆಕ್ಟಿವಿಟಿ ಮತ್ತು ಡಿಜಿಟಲ್ ಪರಿಹಾವನ್ನು ನೀಡಲಿದೆ 'ಜಿಯೋ ಬ್ಯುಸಿನೆಸ್'.

ಮಾತನಾಡಿದ

ಈ ಕುರಿತು ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಭಾರತೀಯ ಆರ್ಥಿಕತೆಯ ತಳಹದಿಯಾಗಿದೆ. ಪ್ರಸ್ತುತ, ಸಂಯೋಜಿತ ಡಿಜಿಟಲ್ ಸೇವೆ ಮತ್ತು ಸುಧಾರಿತ ಉದ್ಯಮದ ಸೇವೆಗಳನ್ನು ಅಳವಡಿಸಿಕೊಳ್ಳುವ ಮಾಹಿತಿಯ ಕೊರೆತೆಯಿಂದ ತಮ್ಮ ವ್ಯವಹಾರಗಳನ್ನು ಸಮರ್ಥವಾಗಿ ನಡೆಸಲು ಡಿಜಿಟಲ್ ತಂತ್ರಜ್ಞಾನಗಳ ಶಕ್ತಿಯನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.

ವ್ಯವಹಾರ

ಈಗ, ಜಿಯೋ ಬ್ಯುಸಿನೆಸ್ ಸಣ್ಣ ಉದ್ಯಮಗಳಿಗೆ ಸಮಗ್ರ ಎಂಟರ್ಪ್ರೈಸ್-ಗ್ರೇಡ್ ಧ್ವನಿ ಮತ್ತು ಡೇಟಾ ಸೇವೆಗಳು, ಡಿಜಿಟಲ್ ಪರಿಹಾರಗಳು ಮತ್ತು ಸಾಧನಗಳನ್ನು ಒದಗಿಸುವ ಮೂಲಕ ಈ ಅಂತರವನ್ನು ತುಂಬುತ್ತದೆ. ಬಳಸಲು ಸುಲಭವಾದ ಈ ಪರಿಹಾರಗಳು ತಮ್ಮ ವ್ಯವಹಾರವನ್ನು ಸಮರ್ಥವಾಗಿ ನಡೆಸಲು ಮತ್ತು ದೊಡ್ಡ ಉದ್ಯಮಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, ಸೂಕ್ಷ್ಮ ಮತ್ತು ಸಣ್ಣ ವ್ಯವಹಾರವು ಸಂಪರ್ಕ, ಉತ್ಪಾದಕತೆ ಮತ್ತು ಯಾಂತ್ರೀಕೃತಗೊಂಡ ಸಾಧನಗಳಿಗಾಗಿ ತಿಂಗಳಿಗೆ ರೂ.15,000 ದಿಂದ 20,000 ರವರೆಗೆ ಖರ್ಚು ಮಾಡುತ್ತದೆ. ಇಂದು, ನಮ್ಮ ಸಂಪರ್ಕದ ಜೊತೆಗೆ, 10/1 ದ ವೆಚ್ಚಕ್ಕಿಂತ ಕಡಿಮೆ, ಅಂದರೆ ತಿಂಗಳಿಗೆ ಒಂದು ಸಾವಿರ ರೂಪಾಯಿಗಳಿಗಿಂತ ಕಡಿಮೆ ದರದಲ್ಲಿ ಈ ಪರಿಹಾರಗಳನ್ನು ನೀಡುವ ಮೂಲಕ ನಾವು ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವ ಮೊದಲ ಹೆಜ್ಜೆ ಇಡುತ್ತಿದ್ದೇವೆ ಎಂದಿದ್ದಾರೆ.

ಜಿಯೋ ಬ್ಯುಸಿನೆಸ್ ಯೋಜನೆಗಳು: A. ಬ್ರಾಡ್‌ಬ್ಯಾಂಡ್ + ಧ್ವನಿ ಕೊಡುಗೆ

ಜಿಯೋ ಬ್ಯುಸಿನೆಸ್ ಯೋಜನೆಗಳು: A. ಬ್ರಾಡ್‌ಬ್ಯಾಂಡ್ + ಧ್ವನಿ ಕೊಡುಗೆ

ರೂ.901ಕ್ಕೆ ಒಂದು ತಿಂಗಳ ಪ್ಲಾನ್: ಇದರಲ್ಲಿ 100 mbps ವೇಗದ ಇಂಟರ್‌ನೆಟ್ ಸೇವೆಯೊಂದಿಗೆ ಅನ್‌ಲಿಮೆಟೆಡ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ದೊರೆಯಲಿದ್ದು, ಒಂದು ಲೈನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್‌ ಕರೆಗಳನ್ನು ಮಾಡುವ ಅವಕಾಶ ದೊಂದಿಗೆ ಮೊಬೈಲಿಟಿ ಸೇವೆಯು ದೊರೆಯಲಿದೆ. ಇದೆ ಬೇರೆ ನೆಟ್‌ವರ್ಕ್‌ಗಳಲ್ಲಿ ಪಡೆಯಲು ತಿಂಗಳಿಗೆ ರೂ.9900 ಪಾವತಿ ಮಾಡಬೇಕಾಗದೆ. ಹಾಗಾಗಿ ಜಿಯೋ 10/1 ಕಡಿಮೆ ವೆಚ್ಚದಲ್ಲಿ ಸೇವೆಯನ್ನು ನೀಡುತ್ತಿದೆ.

B. ಎಲ್ಲಾ ಜಿಯೋ ಡಿಜಿಟಲ್ ಸೆಲ್ಯೂಷನ್ ಗಳೊಂದಿಗೆ ಸಂಯೋಜನೆ

B. ಎಲ್ಲಾ ಜಿಯೋ ಡಿಜಿಟಲ್ ಸೆಲ್ಯೂಷನ್ ಗಳೊಂದಿಗೆ ಸಂಯೋಜನೆ

ಕನೆಕ್ಟಿವಿಟಿ: ರೂ. 5001 ಪಾವತಿ ಮಾಡಿದರೆ , 1 gbps ವೇಗದ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಯು ದೊರೆಯಲಿದ್ದು, ನಾಲ್ಕು ಲೈನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್‌ ಕರೆಗಳನ್ನು ಮಾಡುವ ಅವಕಾಶವು ದೊರೆಯಲಿದೆ. ಅಲ್ಲದೇ ಮೊಬೈಲಿಟಿ ಸೇವೆಯು ದೊರೆಯಲಿದೆ. ಜೊತೆಗೆ ಸ್ಟಾಟಿಕ್ ಐಪಿಯು ಸಿಗಲಿದೆ.


ಡಿಜಿಟಲ್ ಸೆಲ್ಯೂಷನ್: ಇದರೊಂದಿಗೆ ರೂ. 4000 ಮೌಲ್ಯದ ಡಿಜಿಟಲ್ ಸೆಲ್ಯೂಷನ್ ಗಳು ಸಹ ಹೆಚ್ಚುವರಿಗೆ ವೆಚ್ಚವಿಲ್ಲದೆ ಲಭ್ಯವಾಗಲಿದೆ.


ಪ್ರೋಡಕ್ಟಿವಿಗಾಗಿ: ಮೈಕ್ರೋಸಾಫ್ಟ್ ಆಫೀಸ್ 360 ಜೊತೆಗೆ ಆಫೀಸ್ ಆಪ್‌ಗಳು, ಔಟ್‌ಲುಕ್ ಇಮೇಲ್, ಓನ್‌ ಡೈವ್ ಮತ್ತು ಟೀಮ್ಸ್ ನ 10 ಲೈಸೆನ್ಸ್‌ಗಳು.


ಜಿಯೋ ಅಟೆಂಡೆನ್ಸ್‌: ಎಲ್ಲಿಂದಾರೂ ನೌಕರರ ಅಟೆಂಡೆನ್ಸ್‌ ತೆಗೆದುಕೊಳ್ಳಲು 20 ಲೈಸೆನ್ಸ್‌ಗಳು


ಮಾರ್ಕೆಟಿಂಗ್‌ ಗಾಗಿ : ಜಿಯೋ ಆನ್‌ಲೈನ್‌ ಪ್ರೋ ಲೈಸೆನ್ಸ್‌ ದೊರೆಯಲಿದೆ.


ಕಾನ್‌ಫರೆನ್ಸ್‌ ಗಾಗಿ: ಜಿಯೋ ಮಿಟ್ ಮತ್ತು ಟೀಮ್‌ 24 ಗಂಟೆಗಳ ಉಚಿತ ಸೇವೆ ದೊರೆಯಲಿದೆ.


ಡಿವೈಸ್‌: ರಿಲಯನ್ಸ್‌ ಡಿಜಿಟಲ್‌ನಲ್ಲಿ ಸ್ಪೇಷಲ್ ಡಿವೈಸ್‌ ಆಫರ್‌ಗಳು ಸಹ ದೊರೆಯಲಿದೆ.

ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಜಿಯೋ ಬಿಸಿನೆಸ್  ನೀಡಲಾಗುವ ಭಿನ್ನತೆ:

ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಜಿಯೋ ಬಿಸಿನೆಸ್ ನೀಡಲಾಗುವ ಭಿನ್ನತೆ:

ಒನ್-ಸ್ಟಾಪ್-ಶಾಪ್ ಸೆಲ್ಯೂಷನ್ : ಕನೆಕ್ಟಿವಿಟಿ ಮತ್ತು ಡಿಜಿಟಲ್ ಸೆಲ್ಯೂಷನ್ ಒಂದೇ ಸ್ಥಳದಲ್ಲಿ.

ಬಳಸಲು ಸಿದ್ಧ: ಡಿಜಿಟಲ್ ಸೆಲ್ಯೂಷನ್ ಗಳು ಬಳಸಲು ಸಿದ್ಧವಾಗಿದೆ, ಅವುಗಳನ್ನು ನಿರ್ವಹಿಸಲು ತಜ್ಞರ ಅಗತ್ಯವಿಲ್ಲ.

ಮಾರಾಟದ ನೆರವು ಮತ್ತು ಆನ್-ಬೋರ್ಡಿಂಗ್: SMB ಗೆ ಇನ್ನೂ ಸಹಾಯದ ಅಗತ್ಯವಿದ್ದಲ್ಲಿ, ಸರಿಯಾದ ಯೋಜನೆಗಳು / ಪರಿಹಾರಗಳ ಆಯ್ಕೆ, ಆನ್-ಬೋರ್ಡಿಂಗ್ ಮತ್ತು ಡಿಜಿಟಲ್ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ವ್ಯವಹಾರಗಳಿಗೆ ಮಾರ್ಗದರ್ಶನ ನೀಡಲು ವಿಶೇಷ ಡಿಜಿಟಲ್ ಸಲಹೆಗಾರರು.

ಜಿಯೋ ಸೆಲ್ಯೂಷನ್  ಹೇಗೆ ಪಡೆಯುವುದು:

ಜಿಯೋ ಸೆಲ್ಯೂಷನ್ ಹೇಗೆ ಪಡೆಯುವುದು:

* ನೀವು www.jio.com/business ಭೇಟಿ ನೀಡಬೇಕು

* ನಿಮ್ಮ ಸಂಪರ್ಕ ವಿವರಗಳನ್ನು ‘ಆಸಕ್ತ' ವಿಭಾಗದಲ್ಲಿ ದಾಖಲಿಸಿ

Best Mobiles in India

English summary
Jio to Digitally Transform 50 million Micro, Small & Medium businesses (MSMB) in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X