4G ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಅಗ್ರಸ್ಥಾನ: ಟ್ರಾಯ್

|

ಪ್ರತಿ ಸೆಕೆಂಡಿಗೆ ಸರಾಸರಿ 20.7 ಮೆಗಾಬೈಟ್ ಡೌನ್‌ಲೋಡ್ ವೇಗವನ್ನು ಹೊಂದಿರುವ ರಿಲಯನ್ಸ್ ಜಿಯೋ, 4ಜಿ ವಿಭಾಗದಲ್ಲಿ ತನ್ನ ಮುಂದಾಳತ್ವ ಕಾಯ್ದುಕೊಳ್ಳುವುದನ್ನು ಮುಂದುವರಿಸಿದೆ. ಮೇ ತಿಂಗಳಿನ ಪಟ್ಟಿಯಲ್ಲಿ ವೊಡಾಫೋನ್ ಐಡಿಯಾ 6.7 ಎಂಬಿಪಿಎಸ್ ಡೇಟಾ ವೇಗದೊಂದಿಗೆ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದೆ.

4G ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಅಗ್ರಸ್ಥಾನ: ಟ್ರಾಯ್

ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಅದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತಲೂ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ 6.3 ಎಂಬಿಪಿಎಸ್ ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿದೆ.

4G ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಅಗ್ರಸ್ಥಾನ: ಟ್ರಾಯ್

2018ರ ಆಗಸ್ಟ್‌ನಲ್ಲಿ ವೊಡಾಫೋನ್ ಮತ್ತು ಐಡಿಯಾಗಳು ವಿಲೀನಗೊಂಡ ಬಳಿಕ ಇದೇ ಮೊದಲ ಬಾರಿಗೆ ಟ್ರಾಯ್ ಈ ಕಂಪೆನಿಗಳ ನೆಟ್‌ವರ್ಕ್ ವೇಗವನ್ನು ಜತೆಗೂಡಿಸಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜೂನ್ 8ರಂದು ಪ್ರಕಟಿಸಿರುವ ವರದಿ ಪ್ರಕಾರ, ಸರಾಸರಿ 4.7 ಎಂಬಿಪಿಎಸ್ ವೇಗದೊಂದಿಗೆ ಏರ್‌ಟೆಲ್ ಅತ್ಯಂತ ಕಡಿಮೆ ವೇಗದ ಸ್ಥಾನ ಪಡೆದುಕೊಂಡಿದೆ.

ಡೌನ್‌ಲೋಡ್ ವೇಗವು ಗ್ರಾಹಕರು ಅಂತರ್ಜಾಲದಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಅಪ್‌ಲೋಡ್ ವೇಗವು ತಮ್ಮ ಸಂಪರ್ಕದಲ್ಲಿರುವವರಿಗೆ ಚಿತ್ರಗಳು ಅಥವಾ ವಿಡಿಯೋಗಳನ್ನು ರವಾನಿಸಲು ಸಹಾಯ ಮಾಡುತ್ತದೆ. ಟ್ರಾಯ್ ವರದಿ ಪ್ರಕಾರ, ವೊಡಾಫೋನ್ ಐಡಿಯಾ ಮೇ ತಿಂಗಳಲ್ಲಿ ಸರಾಸರಿ 6.3 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿತ್ತು. ರಿಲಯನ್ಸ್ ಜಿಯೋ 4.2 ಎಂಬಿಪಿಎಸ್‌ನೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್ 3.6 ಎಂಬಿಪಿಎಸ್ ಅಪ್‌ಲೋಡ್ ವೇಗ ಹೊಂದಿದೆ.

4G ಡೌನ್‌ಲೋಡ್ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಅಗ್ರಸ್ಥಾನ: ಟ್ರಾಯ್

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ ಆಯ್ದ ಪ್ರದೇಶಗಳಲ್ಲಿ 4ಜಿ ಸೇವೆ ಆರಂಭಿಸಿದ್ದರೂ, ಅದರ ನೆಟ್‌ವರ್ಕ್‌ ವೇಗವನ್ನು ಟ್ರಾಯ್ ಪಟ್ಟಿಯಲ್ಲಿ ನಮೂದಿಸಿಲ್ಲ. ತನ್ನ ಮೈ ಸ್ಪೀಡ್ ಆಪ್‌ನಲ್ಲಿನ ರಿಯಲ್ ಟೈಮ್ ಆಧಾರದಲ್ಲಿ ಭಾರತದಾದ್ಯಂತ ಸಂಗ್ರಹಿಸಿದ ದತ್ತಾಂಶಗಳ ಲೆಕ್ಕಾಚಾರದಲ್ಲಿ ಟ್ರಾಯ್, ಸರಾಸರಿ ವೇಗವನ್ನು ನಿರ್ಧರಿಸುತ್ತದೆ.

ಜಿಯೋ 5G
4Gಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಜಿಯೋ ದೃಷ್ಠಿ 5G ನೆಟವರ್ಕ್‌ನಲ್ಲಿದೆ. ಈ ನಿಟ್ಟಿನಲ್ಲಿ ಇತ್ತೀಚಿಗಷ್ಟೆ ಮುಂಬೈನಲ್ಲಿ ಪರೀಕ್ಷಾರ್ಥವಾಗಿ 5G ಶುರುಮಾಡಿದೆ. ಹಾಗೆಯೇ ಗುರುಗಾಂವ್‌ ನಲ್ಲಿ ಜಿಯೋ ಟ್ರಯಲ್ಸ್‌ ನಡೆಸಿದೆ. ಏರ್‌ಟೆಲ್‌ 3500MHz ಬ್ಯಾಂಡ್‌ನಲ್ಲಿ ನೆಟ್‌ವರ್ಕ್‌ಗಳನ್ನು ಪರೀಕ್ಷಿಸಲು ಟೆಲಿಕಾಂ ಆಪರೇಟರ್ ಎರಿಕ್ಸನ್ ಅವರೊಂದಿಗೆ ಕೈಜೋಡಿಸಿದೆ. ಪ್ರಯೋಗಗಳ ಸಮಯದಲ್ಲಿ ಎರಡೂ ಕಂಪನಿಗಳು 1 ಜಿಬಿಪಿಎಸ್ ವೇಗವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಮುಂಬೈ, ದೆಹಲಿ, ಎನ್‌ಸಿಆರ್, ಕೋಲ್ಕತಾ, ಮತ್ತು ಬೆಂಗಳೂರಿನಲ್ಲಿ ಪ್ರಯೋಗಗಳನ್ನು ನಡೆಸಲು ಏರ್‌ಟೆಲ್ 5G ಸ್ಪೆಕ್ಟ್ರಮ್ ಪಡೆದಿದೆ.

Best Mobiles in India

English summary
Jio tops in 4G Download Speed in May: Trai.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X