ನಡಿಯದ ಏರ್‌ಟೆಲ್ ಆಟ: ವೇಗದ ಇಂಟೆರ್‌ನೆಟ್ ಪಟ್ಟ ಜಿಯೋಗೆ

ಟ್ರಾಯ್ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ಜೂನ್ ತಿಂಗಳಿನಲ್ಲಿ ಏರ್‌ಟೆಲ್ 4G ವೇಗವು ಭಾರಿ ಕುಸಿತ ಕಂಡಿದ್ದು, 8.91 mbps ವೇಗವನ್ನು ಹೊಂದಿದೆ ಎನ್ನಲಾಗಿದೆ.

|

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿಯೊಂದನ್ನು ಪ್ರಕಟಿಸಿದ್ದು, 4G ವೇಗದಲ್ಲಿ ಮತ್ತೊಮ್ಮೆ ಜಿಯೋಗೆ ನಂ.1 ಪಟ್ಟದೊರೆತಿದೆ. ಜಿಯೋ 18mbps ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದೆ.

ನಡಿಯದ ಏರ್‌ಟೆಲ್ ಆಟ: ವೇಗದ ಇಂಟೆರ್‌ನೆಟ್ ಪಟ್ಟ ಜಿಯೋಗೆ

ಓದಿರಿ: ಹೆದರಿದ ಶಿಯೋಮಿ, ಒಪ್ಪೋ: ಬಿಡುಗಡೆ ಆಯ್ತು ಭಾರತದ್ದೇ ಸ್ಮಾರ್ಟ್‌ಫೋನ್! ಯಾವುದು ಗೊತ್ತಾ?

ಟ್ರಾಯ್ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ಜೂನ್ ತಿಂಗಳಿನಲ್ಲಿ ಏರ್‌ಟೆಲ್ 4G ವೇಗವು ಭಾರಿ ಕುಸಿತ ಕಂಡಿದ್ದು, 8.91mbps ವೇಗವನ್ನು ಹೊಂದಿದೆ ಎನ್ನಲಾಗಿದೆ.

ತಿಂಗಳ ಆರಂಭದಲ್ಲಿ ಅತ್ಯಧಿಕ

ತಿಂಗಳ ಆರಂಭದಲ್ಲಿ ಅತ್ಯಧಿಕ

ತಿಂಗಳ ಪ್ರಾರಂಭದಲ್ಲಿ 19.12 mbps ಜಿಯೋ mbps ಸರಾಸರಿ ಡೌನ್ಲೋಡ್ ವೇಗ ಜೂನ್ ಅಂತ್ಯದ ವೇಳೆಗೆ ಅಲ್ಪಪ್ರಮಾಣದ ಇಳಿಕೆ ಕಂಡು 18.65 mbps ತಲುಪಿತ್ತು ಎನ್ನಲಾಗಿದೆ.

ವೊಡಾಫೋನ್ ಗಿಂತಲೂ ಹೆಚ್ಚು:

ವೊಡಾಫೋನ್ ಗಿಂತಲೂ ಹೆಚ್ಚು:

ಜಿಯೋ ಡೌನ್ಲೋಡ್ ವೇಗ ಸಮೀಪದ ಪ್ರತಿಸ್ಪರ್ಧಿ ವೋಡಾಫೋನ್ ಗಿಂತ ಸುಮಾರು ಶೇ. 68ರಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಜಿಯೋ ವೇಗಕ್ಕೆ ಕಡಿವಾಣವೇ ಇಲ್ಲ ಎನ್ನಲಾಗಿದೆ.

ಏಳು ತಿಂಗಳಿನಿಂದ ಜಿಯೋದೆ ಅಬ್ಬರ:

ಏಳು ತಿಂಗಳಿನಿಂದ ಜಿಯೋದೆ ಅಬ್ಬರ:

ಕಳೆದ ಏಳು ತಿಂಗಳಿನಿಂದ ಸತತವಾಗಿ ಜಿಯೋ ಅತ್ಯಂತ ಹೆಚ್ಚು 4ಜಿ ವೇಗವನ್ನು ದಾಖಲಿಸುತ್ತ ಬಂದಿದೆ. ಏರ್‌ಟೆಲ್ ಮತ್ತು ವೊಡಾಫೋನ್ ಜಾಹಿರಾತಿಗಗಳಲ್ಲಿ ಮಾತ್ರವೇ ತಮ್ಮದೇ ವೇಗದ ಇಂಟರ್‌ನೆಟ್ ಎಂದು ಬಿಲ್ಡಪ್ ತೋರಿಸುತ್ತಿವೆ.

ಬೇರೆ ಕಂಪನಿಗಳದ್ದು ಹೇಗಿದೆ ಸ್ಪೀಡ್:

ಬೇರೆ ಕಂಪನಿಗಳದ್ದು ಹೇಗಿದೆ ಸ್ಪೀಡ್:

ಟ್ರಾಯ್ ಪ್ರಕಟಿಸಿರುವ ಫಲಿತಾಂಶಗಳ ಪ್ರಕಾರ ಜೂನ್ ತಿಂಗಳ ಅಂತ್ಯದಲ್ಲಿ ವೋಡಾಫೋನ್ 11.07 mbps ಸರಾಸರಿ ಡೌನ್ಲೋಡ್ ವೇಗವನ್ನು ದಾಖಲಿಸಿದೆ. 9.46 mbps ಸರಾಸರಿ ವೇಗದೊಡನೆ ಐಡಿಯಾ ಸೆಲ್ಯುಲರ್ ಹಾಗೂ 8.91 mbps ವೇಗದ ಏರ್ಟೆಲ್ ನಂತರದ ಸ್ಥಾನಗಳಲ್ಲಿವೆ.

3G ಯಲ್ಲಿ ವೊಡಾಪೋನ್ ನಂ.01

3G ಯಲ್ಲಿ ವೊಡಾಪೋನ್ ನಂ.01

3G ವೇಗದಲ್ಲಿ 5.16 mbps ಡೌನ್ಲೋಡ್ ವೇಗದೊಡನೆ ವೋಡಾಫೋನ್ ಮೊದಲ ಸ್ಥಾನ ಪಡೆದಿದೆ. 3.56 ಎಂಬಿಪಿಎಸ್ ವೇಗದೊಡನೆ ಏರ್‌ಟೆಲ್, 2.94 mbps ವೇಗದೊಡನೆ ಐಡಿಯಾ, 2.39 mbps ಏರ್ಸೆಲ್ ಹಾಗೂ 1.65 mbps ಬಿಎಸ್ಎನ್ಎಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

Best Mobiles in India

Read more about:
English summary
The 18.654Mbps Jio 4G peak download speed in July is slightly lower than the 18.809Mbps it recorded the preceding month. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X