ಹೆದರಿದ ಶಿಯೋಮಿ, ಒಪ್ಪೋ: ಬಿಡುಗಡೆ ಆಯ್ತು ಭಾರತದ್ದೇ ಸ್ಮಾರ್ಟ್‌ಫೋನ್! ಯಾವುದು ಗೊತ್ತಾ?

ಚೀನಾ ಕಂಪನಿಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲು ಬರುತ್ತಿದೆ ಭಾರತೀಯ ಮೂಲದ ಕುಲ್ಟಿ ಕಂಪನಿ

|

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ನೂತನ ಕಂಪನಿಗಳಿಗೆ ತೆರೆದುಕೊಂಡಿದ್ದು, ಈಗಾಗಲೇ ಅನೇಕ ಹೊಸ ಕಂಪನಿಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದೇ ಸಾಲಿಗೆ ಸೇರಿಕೊಳ್ಳುತ್ತಿದೆ. ಚೀನಾ ಕಂಪನಿಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲು ಬರುತ್ತಿದೆ ಭಾರತೀಯ ಮೂಲದ ಕುಲ್ಟಿ ಕಂಪನಿ.

ಹೆದರಿದ ಶಿಯೋಮಿ, ಒಪ್ಪೋ: ಬಿಡುಗಡೆ ಆಯ್ತು ಭಾರತದ್ದೇ ಸ್ಮಾರ್ಟ್‌ಫೋನ್! ಯಾವುದು ಗೊತ

ಓದಿರಿ: ಜಿಯೋಫೋನ್‌ಗಾಗಿಯೇ ಸ್ಪೆಷಲ್ ವಾಟ್ಸ್‌ಆಪ್: ಏನಿದು..?

ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವ ಕೂಗು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಮೂಲಕದ ಕುಲ್ಟಿ ಕಂಪನಿಯೂ ಬಿಯಂಡ್ ಎನ್ನುವ ಸ್ಮಾರ್ಟ್‌ಫೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಫೋನ್ ಚೀನಾ ಕಂಪನಿಗಳಾದ ಶಿಯೋಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ವರ್ಧೆ ನೀಡುವುದಲ್ಲದೇ ಭಾರತೀಯರಿಗೆ ಕಡಿಮೆ ಬೆಲೆಗೆ ಉತ್ತಮ ಫೋನ್ ನೀಡುವ ಭರವಸೆಯನ್ನು ನೀಡಿದೆ.

ಚೀನಾ ಕಂಪನಿಗಳ ಕಥೆ ಮುಗಿದ ಹಾಗೆ..!!

ಚೀನಾ ಕಂಪನಿಗಳ ಕಥೆ ಮುಗಿದ ಹಾಗೆ..!!

ಚೀನಾ ಮೂಲಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದು, ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯುತ್ತಿದ್ದವು ಇದೇ ಮಾದರಿಯಲ್ಲಿ ಬಿಯಂಡ್ ಸ್ಮಾರ್ಟ್‌ಪೋನ್ ಕೇವಲ ರೂ.6,999ಕ್ಕೆ ಭರ್ಜರಿ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಅಮೆಜಾನ್ ನಲ್ಲಿ ಲಭ್ಯ:

ಅಮೆಜಾನ್ ನಲ್ಲಿ ಲಭ್ಯ:

ಮೊನ್ನೆ ತಾನೇ ಚೀನಾ ಮೂಲದ ಸ್ಮಾರ್ಟ್‌ಫೋನ್ ವೊಂದನ್ನು ಬ್ಯಾನ್ ಮಾಡಿದ್ದ ಅಮೆಜಾನ್ ಭಾರತೀಯ ಮೂಲದ ಈ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಕ್ಲೂಸಿವ್ ಆಗಿ ಮಾರಾಟ ಮಾಡುತ್ತಿದೆ. ಆಗಸ್ಟ್ 18 ರಿಂದ ಈ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. ಹೊಸ ಕೊಳ್ಳುವ ಪ್ಲಾನ್ ಮಾಡಿದ್ದರೇ ನೀವು ಒಮ್ಮೆ ಈ ಫೋನ್ ಕಡೆಗೂ ಗಮನ ಹರಿಸಬಹುದು.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಈ ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ 13 MP ಕ್ಯಾಮೆರಾ ನೀಡಲಾಗಿದ್ದು, ಇದರೊಂದಿಗೆ LED ಫ್ಲಾಷ್ ಸಹ ಇದೆ. ಇದರೊಂದಿಗೆ ಮುಂಭಾಗದಲ್ಲಿಯೂ 13 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅದರೊಂದಿಗೂ LED ಫ್ಲಾಷ್ ನೀಡಿದೆ.

ಡಿಸ್‌ಪ್ಲೇ ಹೇಗಿದೆ..?

ಡಿಸ್‌ಪ್ಲೇ ಹೇಗಿದೆ..?

5.2 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದಾಗಿದೆ. ಇಲ್ಲದೇ ಇದು HD ಗುಣಮಟ್ಟದಾಗಿದೆ. ಇದೊಂದಿಗೆ 2.5D ಕರ್ವಡ್ ಗ್ಲಾಸ್ ಸಹ ಇದೆ. ಒಟ್ಟಿನಲ್ಲಿ ವಿಡಿಯೋ ನೋಡಲು, ಗೇಮ್ ಆಡಲು ಇದು ಉತ್ತಮವಾಗಿದೆ.

ಪ್ರೋಸೆಸರ್ ಹೇಗಿದೆ?

ಪ್ರೋಸೆಸರ್ ಹೇಗಿದೆ?

ಈ ಫೋನಿನಲ್ಲಿ 1.25GHz ವೇಗದ ಕ್ವಾಡ್‌ಕೋರ್ ಪೋಸೆಸರ್ ಹೊಂದಿದ್ದು, ಗೇಮ್ ಆಡುವ ಸಲುವಾಗಿ ಮೆಲ್ ಗ್ರಾಫಿಕ್ ಚಿಪ್ ಸೆಟ್ ಸಹ ಅಳವಡಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಫಿಂಗರ್ ಪ್ರಿಂಟ್ ಸ್ಕ್ಯಾನರ್:

ಈ ಫೋನಿನೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ನೀಡಲಾಗಿದ್ದು, ಅದುವೇ ಹಿಂಭಾಗದಲ್ಲಿದೆ. ಜೊತೆಗೆ ಈ ಫೋನ್ 4G ಸಫೋರ್ಟ್ ಮಾಡಲಿದ್ದು, ಜಿಯೋ ಸಿಮ್ ಬಳಕೆ ಮಾಡಿಕೊಳ್ಳಬಹುದು. ಇದಲ್ಲದೇ 3000mAh ಬ್ಯಾಟರಿಯು ಇದರಲ್ಲಿ ಅಡಕವಾಗಿದೆ.

Best Mobiles in India

English summary
the company has launched its new smartphone, Kult Beyond, in the Indian market exclusively via Amazon at Rs 6,999. to know more visit kannada.gizbot. com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X