ಜಿಯೋ vs ಏರ್ ಟೆಲ್ vs ವಡಾಫೋನ್: 2ಜಿಬಿ ಡಾಟಾ ಪ್ರತಿದಿನ ಲಭ್ಯವಾಗುವ ಪ್ಲಾನ್

|

ಭಾರತದಲ್ಲಿ ಡಾಟಾ ಬಳಕೆಯು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು 2023 ರ ವೇಳೆಗೆ ಅದು 5 ಪಟ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.ಎರಿಕ್ಸನ್ ವರದಿಯ ಪ್ರಕಾರ ಪ್ರತಿ ತಿಂಗಳ ಮೊಬೈಲ್ ಡಾಟಾ ಟ್ರಾಫಿಕ್ ಮುಂದಿನ ಅಂದರೆ (2017-2023) ಕ್ಕೆ 11 ಪಟ್ಟು ಹೆಚ್ಚಾಗಬಹುದೆಂದು ತಿಳಿಸಿದ್ದು 2023ರ ವೇಳೆಗೆ ಅದು 1.3ಇಬಿ(ಎಕ್ಸಾಬೈಟ್) ನಿಂದ 14ಇಬಿ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಜಿಯೋ vs ಏರ್ ಟೆಲ್ vs ವಡಾಫೋನ್: 2ಜಿಬಿ ಡಾಟಾ ಪ್ರತಿದಿನ ಲಭ್ಯವಾಗುವ ಪ್ಲಾನ್

ನಮ್ಮ ದಿನನಿತ್ಯದ ಅಗತ್ಯತೆಗಳಿಗೆ ಡೈಲಿ ಡಾಟಾವನ್ನು ನಾವು ಅಧಿಕವಾಗಿ ಅವಲಂಬಿತರಾಗಿದ್ದೇವೆ. ಹಾಗಾಗಿ ನಮಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಡಾಟಾ ಪ್ಲಾನ್ ಗಳು ಯಾವುದು ಎಂದು ತಿಳಿಯುವುದು ಬಹಳ ಮುಖ್ಯ ವಿಚಾರವಾಗಿರುತ್ತದೆ.

ಎಲ್ಲಾ ರೀತಿಯ ಬಳಕೆದಾರರಿಗಾಗಿಯೂ ಕೂಡ ವಿಭಿನ್ನ ರೀತಿಯ ವಿಭಿನ್ನ ಶ್ರೇಣಿಯ ಡಾಟಾ ಪ್ಲಾನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. 4ಜಿಬಿ ಡಾಟಾವನ್ನು ಆಫರ್ ಮಾಡುವ ಡಾಟಾ ಪ್ಲಾನ್ ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದೇ ದಿನಕ್ಕೆ ಮತ್ತು ಒಂದು ವಾರಕ್ಕೆ ಡಾಟಾ ಪ್ಲಾನ್ ಗಳನ್ನು ನೀಡುವ ಪ್ಯಾಕ್ ಗಳು ಕೂಡ ಲಭ್ಯವಿದೆ. ಅನಿಯಮಿತ ಡಾಟಾಗಳನ್ನು ಪ್ರತಿ ತಿಂಗಳಿಗೆ ಆಫರ್ ಮಾಡುವ ಪ್ಲಾನ್ ಗಳು ಕೂಡ ಲಭ್ಯವಿದೆ.

ಏರ್ ಟೆಲ್, ಜಿಯೋ, ವಡಾಫೋನ್ ಇವು ಟಾಪ್ ಟೆಲಿಕಾಂ ಕಂಪೆನಿಗಳಾಗಿದ್ದು ಭಾರತದಲ್ಲಿ ಒಂದಕ್ಕೊಂದು ದೊಡ್ಡ ಸ್ಪರ್ಧೆಯನ್ನು ಒಡ್ಡಿಕೊಳ್ಳುತ್ತವೆ. ಈ ಕಂಪೆನಿಗಳು 1.5ಜಿಬಿ ಪ್ರತಿದಿನ ದಿಂದ 5ಜಿಬಿ ಡಾಟಾ ಪ್ರತಿದಿನ ಲಭ್ಯವಿರುವ ಪ್ಲಾನ್ ಗಳ ವರೆಗೆ ವಿಭಿನ್ನ ಪ್ಲಾನ್ ಗಳನ್ನು ಗ್ರಾಹಕರಿಗಾಗಿ ಪರಿಚಯಿಸಿದೆ. ನಾವಿಲ್ಲಿ ಟಾಪ್ 2ಜಿಬಿ ಪ್ಲಾನ್ ಗಳ ಬಗ್ಗೆ ಇಲ್ಲಿ ಚರ್ಚೆ ನಡೆಸೋಣ.

ಜಿಯೋ 2GB ಡಾಟಾ ಪ್ರತಿದಿನದ ಪ್ಲಾನ್ :

ಜಿಯೋ 2GB ಡಾಟಾ ಪ್ರತಿದಿನದ ಪ್ಲಾನ್ :

ಜಿಯೋ ರುಪಾಯಿ 198 ಪ್ಲಾನ್:

ಜಿಯೋ ರುಪಾಯಿ 198 ಅತ್ಯಂತ ಕಡಿಮೆ ಬೆಲೆಯ 2ಜಿಬಿ ಡಾಟಾ ಪ್ಲಾನ್ ಸದ್ಯ ಲಭ್ಯವಿದೆ. ಇದು ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿ ದಿನ, 2ಜಿಬಿ ಡಾಟಾ ಪ್ರತಿ ದಿನ ಮತ್ತು ಜಿಯೋ ಆಪ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು 28 ದಿನಗಳ ಅವಧಿಗೆ ನೀಡುತ್ತದೆ.

ಜಿಯೋ ರುಪಾಯಿ 398 ಪ್ಲಾನ್: ಜಿಯೋ ಈ ಪ್ಲಾನ್ ಅನಿಯಮಿತ ವಾಯ್ಸ್ ಕರೆಗಳು, 100 ಎಸ್ಎಂಎಸ್ ಪ್ರತಿ ದಿನ ಉಚಿತ, 2ಜಿಬಿ ಡಾಟಾ ಪ್ರತಿದಿನ ಮತ್ತು ಕಾಂಪ್ಲಿಮೆಂಟರಿ ಜಿಯೋ ಆಪ್ ಗಳಿಗೆ ಚಂದಾದಾರಿಕೆಯನ್ನು 70 ದಿನಗಳ ಅವಧಿಗೆ ನೀಡುತ್ತದೆ.

ಜಿಯೋ ರುಪಾಯಿ 448 ಪ್ಲಾನ್: ಜಿಯೋ ಈ ಪ್ಲಾನ್ ನಲ್ಲಿ ಅನಿಯಮಿತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ,2ಜಿಬಿ ಡಾಟಾ ಪ್ರತಿದಿನ ಮತ್ತು ಜಿಯೋ ಆಪ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು 84 ದಿನಗಳ ಅವಧಿಗೆ ನೀಡುತ್ತದೆ. ಇದರಲ್ಲಿ ನಿಮಗೆ ಒಠ್ಟು 168 ಜಿಬಿ ಡಾಟಾ ಲಭ್ಯವಾಗುತ್ತದೆ.

ಜಿಯೋ ರುಪಾಯಿ 498 ಪ್ಲಾನ್: ನಿಮಗೆ ಈ ಪ್ಲಾನ್ ನಲ್ಲಿ ಅನಿಯಮತ ವಾಯ್ಸ್ ಕರೆಗಳು, 100ಎಸ್ಎಂಎಸ್ ಪ್ರತಿದಿನ ಮತ್ತು ಜಿಯೋ ಆಪ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯು 91 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇದರಲ್ಲಿ ನಿಮಗೆ ಒಟ್ಟು 182 ಜಿಬಿ ಡಾಟಾ ಲಭ್ಯವಾಗುತ್ತದೆ.

ಏರ್ ಟೆಲ್ 2GB ಡಾಟಾ ಪ್ರತಿ ದಿನ ಪಡೆಯಬಹುದಾಗಿರುವ ಪ್ಲಾನ್

ಏರ್ ಟೆಲ್ 2GB ಡಾಟಾ ಪ್ರತಿ ದಿನ ಪಡೆಯಬಹುದಾಗಿರುವ ಪ್ಲಾನ್

ಏರ್ ಟೆಲ್ ರುಪಾಯಿ 249 ಪ್ಲಾನ್: ಏರ್ ಟೆಲ್ 2ಜಿಬಿ ಡಾಟಾ ಜೊತೆಗೆ ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ 249 ರುಪಾಯಿಗೆ ನೀಡುತ್ತದೆ. ನಾವು ಈ ಪ್ಲಾನ್ ನ್ನು ಪೇಟಿಎಂ ನಲ್ಲಿ ಪರೀಕ್ಷಿಸಿದ್ದೇವೆ ಮತ್ತು ಇದು ದೆಹಲಿಯ ಎಸ್ ಸಿಆರ್ ಸರ್ಕಲ್ ನಲ್ಲಿ ಲಭ್ಯವಿದೆ.

ಏರ್ ಟೆಲ್ ರುಪಾಯಿ 499 ಪ್ಲಾನ್: 2ಜಿಬಿ ಡಾಟಾ ಪ್ರತಿ ದಿನ ಮತ್ತು ಅನಿಯಮಿತ ಕರೆಗಳು ಮತ್ತು 100ಎಲ್ಎಂಎಸ್ ಗಳು ಏರ್ ಟೆಲ್ ನ 499 ರುಪಾಯಿ ಪ್ಲಾನ್ ನಲ್ಲಿ ಲಭ್ಯವಾಗುತ್ತದೆ. ಏರ್ ಟೆಲ್ ನಲ್ಲಿ 449 ರುಪಾಯಿ ಸಪರೇಟ್ ಪ್ಲಾನ್ ಕೂಡ ಲಭ್ಯವಿದ್ದು ಸೇಮ್ ಆಫರ್ ಗಳನ್ನು 70 ದಿನಗಳ ವ್ಯಾಲಿಡಿಟಿಗೆ ನೀಡಲಾಗುತ್ತದೆ.

ವಡಾಫೋನ್ 2GB ಡಾಟಾ ಪ್ರತಿ ದಿನ ಪಡೆಯಬಹುದಾಗಿರುವ ಪ್ಲಾನ್

ವಡಾಫೋನ್ 2GB ಡಾಟಾ ಪ್ರತಿ ದಿನ ಪಡೆಯಬಹುದಾಗಿರುವ ಪ್ಲಾನ್

ವಡಾಫೋನ್ ರುಪಾಯಿ 255 ಪ್ಲಾನ್: ವಡಾಫೋನ್ 2ಜಿಬಿ ಡಾಟಾ ಪ್ರತಿದಿನ ಜೊತೆಗೆ ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಉಚಿತವಾಗಿ 28 ದಿನಗಳ ಅವಧಿಗೆ ಈ 255 ರುಪಾಯಿ ಪ್ಲಾನ್ ನ ಅಡಿಯಲ್ಲಿ ನೀಡುತ್ತದೆ.

ವಡಾಫೋನ್ ರುಪಾಯಿ 511 ಪ್ಲಾನ್: 2 ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮತಿ ವಾಯ್ಸ್ ಕರೆಗಳು ಮತ್ತು ವಡಾಫೋನ್ ಪ್ಲೇ ಆಪ್ ಗಳಿಗೆ ಆಕ್ಸಿಸ್ ನ್ನು 84 ದಿನಗಳ ಅವಧಿಗೆ ಈ ಪ್ಲಾನ್ ನ ಅಡಿಯಲ್ಲಿ ನೀಡಲಾಗುತ್ತದೆ.

Best Mobiles in India

English summary
Jio Vs Airtel Vs Vodafone: Top 2GB data per day plans

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X