ಕೇವಲ 150ರೂ. ಒಳಗೆ ಲಭ್ಯವಿರುವ ಅತ್ಯುತ್ತಮ ಪ್ರಿಪೇಯ್ಡ್‌ ಪ್ಲ್ಯಾನ್‌ಗಳು!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್‌ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಆ ಪೈಕಿ ಖಾಸಗಿ ಟೆಲಿಕಾಂಗಳು ಅಧಿಕ ಡೇಟಾ, ದೀರ್ಘಾವಧಿಯ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆಗಳಂತಹ ಪ್ರಯೋಜನಗಳನ್ನು ಪೈಪೋಟಿಯಲ್ಲಿ ನೀಡುತ್ತಿವೆ. ಅವುಗಳಲ್ಲಿ ಕೆಲವು ಪ್ಲ್ಯಾನ್‌ಗಳು ದುಬಾರಿ ಬೆಲೆಯಲ್ಲಿದ್ದರೇ, ಮತ್ತೆ ಕೆಲವು ಅಗ್ಗದ ಯೋಜನೆಗಳನ್ನು ಹೊಂದಿವೆ.

ಟೆಲಿಕಾಂ

ಹೌದು, ಜಿಯೋ, ಏರ್‌ಟೆಲ್‌ ಮತ್ತು ವಿ ಟೆಲಿಕಾಂ ಟೆಲಿಕಾಂಗಳು ಕಡಿಮೆ ದರದಲ್ಲಿ ಆರಂಭಿಕ ಪ್ರೀಪೇಯ್ಡ್‌ ಡೇಟಾ ರೀಚಾರ್ಜ್‌ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿವೆ. ಅವುಗಳು 150ರೂ. ಒಳಗಿವೆ. ಈ ಅಗ್ಗದ ಯೋಜನೆಗಳಲ್ಲಿ ಹೆಚ್ಚಿನ ಸೌಲಭ್ಯಗಳು ಲಭ್ಯವಾಗದಿದ್ದರೂ, ನಿಗದಿತ ಡೇಟಾ ಪ್ರಯೋಜನ ಲಭ್ಯವಾಗುವ ಜೊತೆಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ದೊರೆಯುತ್ತದೆ. ಹಾಗಾದರೇ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳ ಅಗ್ಗದ ಡೇಟಾ ರೀಚಾರ್ಜ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ 149ರೂ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ. ಪೂರ್ಣ ಅವಧಿಗೆ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗಲಿದೆ.

ಏರ್‌ಟೆಲ್‌ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್‌ ಟೆಲಿಕಾಂ 149ರೂ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 2GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 300 ಉಚಿತ ಎಸ್‌ಎಮ್ಎಸ್‌ಗಳು ಲಭ್ಯವಿದ್ದು. ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ಹೆಲ್ಲೊ ಟ್ಯೂನ್, ವೆಂಕ್ ಮ್ಯೂಸಿಕ್ ಸೇರಿದಂತೆ ಇನ್ನಷ್ಟು ಸೇವೆಗಳು ದೊರೆಯುತ್ತವೆ.

ವಿ ಟೆಲಿಕಾಂ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 149ರೂ. ಪ್ರಿಪೇಯ್ಡ್‌ ಪ್ಲ್ಯಾನ್

ವಿ ಟೆಲಿಕಾಂ 149ರೂ. ಈ ಪ್ರಿಪೇಯ್ಡ್‌ ಪ್ಲ್ಯಾನ್ ಸಹ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 2GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಒಟ್ಟು 300 ಉಚಿತ ಎಸ್‌ಎಮ್ಎಸ್‌ಗಳು ಲಭ್ಯವಿದ್ದು. ಜೊತೆಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಸಿಗಲಿದೆ. ಇದರೊಂದಿಗೆ ವಿ ಮೂವಿಸ್ ಹಾಗೂ ಟಿವಿ ಆಪ್‌ ಸೌಲಭ್ಯ ಸಿಗಲಿದೆ. ಹಾಗೆಯೇ ವೆಬ್‌ ಮೂಲಕ ಈ ಯೋಜನೆ ರೀಚಾರ್ಜ್ ಮಾಡಿದರೇ 1GB ಡೇಟಾ ಹೆಚ್ಚುವರಿಯಾಗಿ ಸಿಗಲಿದೆ.

129ರೂ. ಪ್ರೀಪೇಯ್ಡ್‌ ಪ್ಲಾನ್

129ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ, ಏರ್‌ಟೆಲ್‌ ಮತ್ತು ವಿ ಈ ಮೂರು ಟೆಲಿಕಾಂಗಳು 129ರೂ. ಪ್ರಿಪೇಯ್ಡ್‌ ಯೋಜನೆಯನ್ನು ಒಳಗೊಂಡಿವೆ. 129ರೂ. ಪ್ಲ್ಯಾನಿನಲ್ಲಿ ಬಹುತೇಕ ಸಾಮ್ಯತೆಯ ಪ್ರಯೋಜನಗಳನ್ನು ಒಳಗೊಂಡಿವೆ. ಜಿಯೋ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಕರೆ ಮತ್ತು ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ವಿ ಟೆಲಿಕಾಂ ಸಹ 129ರೂ. ಯೋಜನೆಯು 24 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ 2GB ಡೇಟಾ ಸೌಲಭ್ಯ ನೀಡುತ್ತದೆ. ಜೊತೆಗೆ ಎಸ್‌ಎಮ್‌ಎಸ್‌ ಹಾಗೂ ಕರೆಯ ಸೌಲಭ್ಯ ಲಭ್ಯ. ಇನ್ನು ಏರ್‌ಟೆಲ್‌ ತನ್ನ 129ರೂ. ಯೋಜನೆಯಲ್ಲಿ 24 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ 1GB ಡೇಟಾ ಸೌಲಭ್ಯ ನೀಡುತ್ತದೆ. ಜೊತೆಗೆ ಎಸ್‌ಎಮ್‌ಎಸ್‌ ಹಾಗೂ ಕರೆಯ ಸೌಲಭ್ಯ ಲಭ್ಯ.

Most Read Articles
Best Mobiles in India

English summary
Here's a quick look at the best budget recharge plans offered by these telecom operators.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X