ಜಿಯೋ ವೆಲ್ಕಮ್ ಆಫರ್ ಉಚಿತ ಡೇಟಾ, ಕರೆ ಡಿಸೆಂಬರ್‌ 3 ಕ್ಕೆ ಅಂತ್ಯ: ಕಂಪ್ಲೀಟ್ ಡೀಟೇಲ್ಸ್..!

ಎಷ್ಟು ಜನರಿಗೆ ಅನುಕೂಲವೋ, ಎಷ್ಟು ಜನರಿಗೆ ಅನಾನುಕೂಲವೋ ಗೊತ್ತಿಲ್ಲ. ಹಾಗಂತ ವೆಲ್ಕಮ್ ಆಫರ್ ಕೊನೆಗೊಳ್ಳುವಿಕೆಯಿಂದ ಉಚಿತ ಆಫರ್ ಕೊನೆ ಎಂದು ಅಲ್ಲ. ಹಲವು ರೀತಿಯ ಗೊಂದಲಗಳು ಹಳೆಯ ಮತ್ತು ಹೊಸ ಗ್ರಾಹಕರ ನಡುವೆ ಇವೆ.

By Suneel
|

ಡಿಸೆಂಬರ್ 3 ನಂತರ ಜಿಯೋ 4G ಯ ಯಾವುದೇ ಉಚಿತ ಸೇವೆ ಇಲ್ಲ. ರಿಲಾಯನ್ಸ್ ಜಿಯೋ ಸೆಪ್ಟೆಂಬರ್ 5 ರಂದು ವೆಲ್ಕಮ್ ಆಫರ್‌ನಲ್ಲಿ ನೀಡಿದ್ದ ಉಚಿತ ಡಾಟಾ ಮತ್ತು ಉಚಿತ ಕರೆ ಆಫರ್ ಡಿಸೆಂಬರ್ 31 ರಂದು ಕೊನೆಗೊಳ್ಳುತ್ತದೆ. ಈ ಸೇವೆಯಲ್ಲಿ ಸಿಮ್ ಬಳಸುತ್ತಿರುವವರು ಜಿಯೋದ ಉಚಿತ ಡಾಟಾ ಮತ್ತು ಉಚಿತ ಕರೆಯನ್ನು ಜಿಯೋ ನೆಟ್‌ವರ್ಕ್‌ನಲ್ಲಿ ಈ ವರ್ಷದ ಕೊನೆಯವರೆಗೆ ಪಡೆಯಬಹುದು.

ಫ್ಲ್ಯಾಶ್‌ ನ್ಯೂಸ್: ಜಿಯೋ ಸಿಮ್ ಇಲ್ಲದಿದ್ದರೂ ಜಿಯೋ ಆಪ್‌ ಉಚಿತ ಸೇವೆ ಲಭ್ಯ! ಹೇಗೆ?

ಜಿಯೋ ವೆಲ್ಕಮ್ ಆಫರ್ ಉಚಿತ ಡೇಟಾ/ಕರೆ Dec 3 ಕ್ಕೆ ಅಂತ್ಯ: ಕಂಪ್ಲೀಟ್ ಡೀಟೇಲ್ಸ್..!

ಆದರೆ ಟೆಲಿಕಾಂ ನಿಯಂತ್ರಕ ಟ್ರಾಯ್‌, ಪ್ರಮೋಶನಲ್ ಆಫರ್ ಅನ್ನು 90 ದಿನಗಳಿಗಿಂತ ಹೆಚ್ಚು ದಿನ ಆಫರ್‌ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಜಿಯೋ ವೆಲ್ಕಮ್ ಆಫರ್ ಡಿಸೆಂಬರ್ 3 ರಂದು ಕಡ್ಡಾಯವಾಗಿ ಕೊನೆಗೊಳ್ಳಲೇಬೇಕು ಎಂದು ಹೇಳಿದೆ.

ಎಷ್ಟು ಜನರಿಗೆ ಅನುಕೂಲವೋ, ಎಷ್ಟು ಜನರಿಗೆ ಅನಾನುಕೂಲವೋ ಗೊತ್ತಿಲ್ಲ. ಹಾಗಂತ ವೆಲ್ಕಮ್ ಆಫರ್ ಕೊನೆಗೊಳ್ಳುವಿಕೆಯಿಂದ ಉಚಿತ ಆಫರ್ ಕೊನೆ ಎಂದು ಅಲ್ಲ. ಹಲವು ರೀತಿಯ ಗೊಂದಲಗಳು ಹಳೆಯ ಮತ್ತು ಹೊಸ ಗ್ರಾಹಕರ ನಡುವೆ ಇವೆ. ಅವುಗಳನ್ನು ಇಂದಿನ ಲೇಖನದಲ್ಲಿ ಖಚಿತಪಡಿಸಿಕೊಳ್ಳಿ.

ಡಿಸೆಂಬರ್ 31 ರವರೆಗೆ ಜಿಯೋ ಹಳೆಯ ಗ್ರಾಹಕರಿಗೆ ಉಚಿತ ಡೇಟಾ

ಡಿಸೆಂಬರ್ 31 ರವರೆಗೆ ಜಿಯೋ ಹಳೆಯ ಗ್ರಾಹಕರಿಗೆ ಉಚಿತ ಡೇಟಾ

ರಿಲಾಯನ್ಸ್ ಜಿಯೋ ಆರಂಭದಲ್ಲೇ ತನ್ನ ಗ್ರಾಹಕರಿಗೆ ಡಿಸೆಂಬರ್ 31 ರವರೆಗೆ ಉಚಿತ ಡೇಟಾ ನೀಡುವ ಬಗ್ಗೆ ಭರವಸೆ ನೀಡಿದೆ. ಆದರೆ ಟ್ರಾಯ್ಸ್ ಮಾರ್ಗದರ್ಶನ ಪ್ರಕಾರ ಹೇಳುವುದಾದರೆ ಜಿಯೋ ತನ್ನ ಗ್ರಾಹಕರಿಗೆ ಅಸಹಾಯಕವಾಗಲಿದೆ. ಆದರೂ ಸಹ ಜಿಯೋ ತನ್ನ ಮಾತನ್ನು ಉಳಿಸಿಕೊಳ್ಳಲು ಇತರೆ ಮಾರ್ಗದಿಂದ ಯಾವುದಾದರೂ ಹೊಸ ಪ್ಲಾನ್‌ ಅನ್ನು ನೀಡಿ ಡಿಸೆಂಬರ್ ಅಂತ್ಯದವರೆಗೆ ಉಚಿತ ಡೇಟಾ ನೀಡಲಿದೆ.

ಆದರೆ ಈಗಾಗಲೇ ಹೇಳಿದಂತೆ, ಕಂಪನಿ ಟ್ರಾಯ್‌ನೊಂದಿಗೆ ವೆಲ್ಕಮ್ ಆಫರ್ ಬಗ್ಗೆ ವಿವರಣೆ ನೀಡಬೇಕಾದರೆ ಡಿಸೆಂಬರ್‌ 3 ರವರೆಗೆ ಸಬ್‌ಸ್ಕ್ರಿಪ್ಶನ್‌ ಪಡೆಯುವವರು ವೆಲ್ಕಮ್‌ ಕಡ್ಡಾಯವಾಗಿ ಪಡೆಯಲಿದ್ದು, ವೆಲ್ಕಮ್ ಆಫರ್ ಈ ವರ್ಷದ ಅಂತ್ಯದಲ್ಲಿ ಕೊನೆಗೊಳ್ಳುತ್ತದೆ ಎಂದು ನೆನಪಿಸಿದೆ. ಅಲ್ಲದೇ ಡಿಸೆಂಬರ್ 3 ರ ಒಳಗೆ ಯಾರು ಚಂದಾದಾರರಾಗುವುದಿಲ್ಲವೋ, ಅಂತಹವರು ನಂತರದ ಹೊಸ ಟ್ಯಾರಿಫ್ ಮತ್ತು ಆಫರ್‌ಗಳನ್ನು ಪಡೆಯಬಹುದು ಎಂದಿದೆ.

ಹೊಸ ಗ್ರಾಹಕರು ಹಣ ಪಾವತಿಸಲೇಬೇಕು

ಹೊಸ ಗ್ರಾಹಕರು ಹಣ ಪಾವತಿಸಲೇಬೇಕು

ಈಗಾಗಲೇ ವೆಲ್ಕಮ್‌ ಆಫರ್‌ನಲ್ಲಿ ಸಿಮ್‌ ಖರೀದಿಸಿರುವವರು ಡಿಸೆಂಬರ್ 31 ರವರೆಗೆ ಜಿಯೋ ಉಚಿತ ಸೇವೆ ಪಡೆಯಬಹುದು. ಆದರೆ ಡಿಸೆಂಬರ್ 3 ರ ನಂತರ ಸಿಮ್ ಪಡೆಯುವವರು ಜಿಯೋ ಸೇವೆಗೆ ಬಹುಶಃ ಹಣ ಪಾವತಿಸಲೇ ಬೇಕು. ಆದರೆ ಹೊಸ ಗ್ರಾಹಕರು ವಿಶೇಷ ಯೋಜನೆಯಲ್ಲಿ 4 ವಾರಗಳವರೆಗೆ ಉಚಿತ ಸೇವೆಯನ್ನು ಮತ್ತು ನಂತರದಲ್ಲಿ ಹಣ ಪಾವತಿಸುವ ಪ್ಲಾನ್‌ ಅನ್ನು ಪಡೆಯುವ ನಿರೀಕ್ಷೆ ಇದೆ.

ಮಾರ್ಚ್‌ 2017 ರವರೆಗೆ ಯಾರು ಹಣ ಪಾವತಿಸುವ ಅಗತ್ಯವಿಲ್ಲ

ಮಾರ್ಚ್‌ 2017 ರವರೆಗೆ ಯಾರು ಹಣ ಪಾವತಿಸುವ ಅಗತ್ಯವಿಲ್ಲ

ಇದೊಂದು ಕುತೂಹಲಕಾರಿ ಮಾಹಿತಿ. ಡಿಸೆಂಬರ್ 4 ರ ನಂತರ ಜಿಯೋ ತನ್ನ ಹಳೆಯ ಮತ್ತು ಹೊಸ ಗ್ರಾಹಕರಿಬ್ಬರಿಗೂ ಹೊಸ ಪ್ರಮೋಶನಲ್‌ ಆಫರ್ ಎಂದು ಪುನಃ 90 ದಿನಗಳ ಉಚಿತ ಸೇವೆ ನೀಡುವ ನಿರೀಕ್ಷೆ ಇದೆ. ಆದರೆ ಈ ಹೇಳಿಕೆಯಲ್ಲಿ ಹಲವು ಲೋಪದೋಷಗಳು ಇವೆ. ಕಾರಣ ಟ್ರಾಯ್‌ ಈಗಾಗಲೇ 90 ದಿನಗಳಿಗಿಂತ ಹೆಚ್ಚು ಪ್ರಮೋಶನಲ್ ಆಫರ್ ನೀಡುವಂತಿಲ್ಲ ಎಂದು ಹೇಳಿದೆ. ಆದರೆ ಭಾಗಶಃ ಉಚಿತ ಸೇವೆಯನ್ನು ರೀಲಾಂಚ್‌ ಮಾಡಬಹುದು.

ಜಿಯೋ ತನ್ನ ವೆಲ್ಕಮ್‌ ಆಫರ್ ಅನ್ನು ಡಿಸೆಂಬರ್ 31 ರ ತನಕ್ ನೀಡಲು ಇನ್ನೊಂದು ಕಾರಣವೆಂದರೆ, ಅನ್‌ಶುಮ್ಯಾನ್‌ ಟಾಕುರ್'ರವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದಂತೆ, ಟೆಲಿಕಾಂ ತನ್ನ ಸೇವೆಯನ್ನು ಉತ್ತಮ ಗುಣಮಟ್ಟದಲ್ಲಿ ನೀಡಲು ಅನುತ್ತೀರ್ಣಗೊಂಡರೆ ಚಾರ್ಜ್‌ ಮಾಡಲು ಆಗುವುದಿಲ್ಲ, ಅಂತಹ ಸಂದರ್ಭದಲ್ಲಿ ಉಚಿತವಾಗಿ ನೀಡಬಹುದು ಎಂದು ಹೇಳಿದ್ದರು. ಆದ್ದರಿಂದ ಇವರ ಹೇಳಿಕೆ ಪ್ರಕಾರ ಡಿಸೆಂಬರ್ ಒಳಗೆ ಜಿಯೋ ತನ್ನ ಉಚಿತ ಸೇವೆಯನ್ನು ವಿಸ್ತರಿಸಲು ಟ್ರಾಯ್‌ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ.

ಎಲ್ಲರೂ ಸಹ ಡಿಸೆಂಬರ್ 4 ರ ನಂತರ ಹಣ ಪಾವತಿಸಲೇಬೇಕು

ಎಲ್ಲರೂ ಸಹ ಡಿಸೆಂಬರ್ 4 ರ ನಂತರ ಹಣ ಪಾವತಿಸಲೇಬೇಕು

ಎಲ್ಲರೂ ಇಷ್ಟಪಡದ ಕ್ರಮ ಇದು. ಅಲ್ಲದೇ ಜಿಯೋ ಬ್ರ್ಯಾಂಡ್ ಅನ್ನು ನಂಬಲು ಸಾಧ್ಯವಾಗದ ಕ್ರಮವು ಹೌದು. ಕಾರಣ ಜಿಯೋ ವೆಲ್ಕಮ್‌ ಆಫರ್‌ನಲ್ಲಿ ಸಿಮ್‌ ಖರೀದಿಸಿದ ಎಲ್ಲರೂ ಸಹ ಉಚಿತ ಸೇವೆಯನ್ನು ಡಿಸೆಂಬರ್ 31 ರವರೆಗೆ ಪಡೆಯಬಹುದು ಎಂದು ಹೇಳಿದೆ. ಭರವಸೆಯನ್ನು ಅಳಿಸಲು ಸಾಧ್ಯವಿಲ್ಲ. ಅಥವಾ ಜಿಯೋ ಗ್ರಾಹಕರಲ್ಲಿ ಕ್ಷಮೆ ಕೇಳಿ, ನಮ್ಮ ಗ್ರಾಹಕರಿಗೆ ಚಾರ್ಜ್‌ ಮಾಡಲು ಒತ್ತಾಯಿಸುತ್ತಿದ್ದೀರಿ ಎಂದು ಟ್ರಾಯ್‌ ಅನ್ನು ಬೇಕಾದ್ರೆ ಬೈಯಲು ಶುರು ಮಾಡಲುಬಹುದು. ಟ್ರಾಯ್‌ ತನ್ನ ಸ್ವತಂತ್ರಕ್ಕೆ ಅಡ್ಡಿ ಮಾಡಿತು ಎಂದು ಹೇಳಿ, ಡಿಸೆಂಬರ್ 4 ರಿಂದ ತನ್ನ ಹಳೆಯ ಗ್ರಾಹಕರಿಗೆ ಹಣ ಪಾವತಿಸಿ ಸೇವೆ ಬಳಸುವ ಪ್ಲಾನ್ ಅನ್ನು ಆರಂಭಿಸಬಹುದು.

ಅಭಿಪ್ರಾಯ

ಅಭಿಪ್ರಾಯ

ನೀವು ಈಗಾಗಲೇ ವೆಲ್ಕಮ್ ಆಫರ್ ಪಡೆದ ಗ್ರಾಹಕರಾಗಿದ್ದಲ್ಲಿ, ನೀವು ಭಾಗಶಃ ಡಿಸೆಂಬರ್ 31 ರವರೆಗೆ ಉಚಿತ ಡೇಟಾ ಮತ್ತು ಉಚಿತ ಕರೆ ಆಫರ್ ಪಡೆಯುತ್ತೀರಿ. ಯಾವುದೇ ಭಯವಿಲ್ಲದೇ ಜಿಯೋ ಸಿಮ್‌ ಅನ್ನು ಬಳಸಲು ಮುಂದುವರೆಸಬಹುದು. ಹೇಗಿದ್ರು ಇನ್ನೂ ಸಹ ಉಚಿತ ಸೇವೆ ಇದೆ. ಆದರೆ ಡಿಸೆಂಬರ್ ನಂತರದಲ್ಲಿ ಈಗಿರುವ ನೆಟ್‌ವರ್ಕ್‌ ವೇಗವೇ ಇದ್ದರೇ ಹಣ ಪಾವತಿಸಿ ಸಿಮ್‌ ಬಳಸಬೇಕೋ, ಬೇಡವೋ ಎಂಬುದು ನಿಮ್ಮ ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.

Best Mobiles in India

Read more about:
English summary
Jio Welcome Offer for free data & calls ends on December 3: What happens next for Jio users. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X