ಜಿಯೋದಿಂದ ವೆಲ್‌ಕಮ್‌ ಆಫರ್ ಘೋಷಣೆ!..ಉಚಿತ 5G ಸೇವೆ ಲಭ್ಯ!

|

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಕೆಲವು ನಗರಗಳಲ್ಲಿ 5G ಸೇವೆಯನ್ನು ಪರಿಚಯಿಸಿ ಸದ್ದು ಮಾಡಿದೆ. ಇನ್ನು ಮುಂಬರುವ ದಿನಗಳಲ್ಲಿ ಇತರೆ ನಗರಗಳಿಗೂ ತನ್ನ 5G ಸೇವೆಗಳನ್ನು ತಲುಪಿಸಲಿದೆ. ಪ್ರಸ್ತುತ ದೆಹಲಿ - NCR, ಮುಂಬೈ, ಕೋಲ್ಕತ್ತಾ, ವಾರಣಾಸಿ, ಚೆನ್ನೈ, ಬೆಂಗಳೂರು, ನಾಥದ್ವಾರ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಿಯೋ ಟ್ರೂ 5G (Jio true 5G) ಸೇವೆಗಳನ್ನು ನೀಡುತ್ತಿದೆ. ಹಾಗೆಯೇ ಭರ್ಜರಿ ವೆಲ್‌ಕಮ್‌ ಆಫರ್‌ ಲಭ್ಯ ಮಾಡಿ, ಗಮನ ಸೆಳೆದಿದೆ.

ಜಿಯೋ ವೆಲ್‌ಕಮ್‌ ಆಫರ್

ಹೌದು, ಜಿಯೋ ಟೆಲಿಕಾಂ ತನ್ನ ಐದನೇ ತಲೆಮಾರಿನ ನೆಟ್‌ವರ್ಕ್ ಜಿಯೋ ಟ್ರೂ 5G ಅನ್ನು ಉಚಿತವಾಗಿ ಸಂಪರ್ಕಿಸಲು ಮತ್ತು ಆನಂದಿಸಲು ಗ್ರಾಹಕರಿಗೆ ವೆಲ್‌ಕಮ್ ಆಫರ್ ಅನ್ನು ಘೋಷಿಸಿದೆ. ಇನ್ನು ಜಿಯೋ ವೆಲ್‌ಕಮ್‌ ಆಫರ್ (Welcome Offer) ಆಯ್ದ ಜಿಯೋ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಸಂಸ್ಥೆಯ ಘೋಷಿಸಿದೆ. ಈ ಕೊಡುಗೆಯನ್ನು ಪಡೆಯಲು ಅರ್ಹತಾ ಮಾನದಂಡಗಳು ಸೇರಿವೆ.

5G ನೆಟ್‌ವರ್ಕ್ ಕವರೇಜ್

* ಬಳಕೆದಾರರು ಜಿಯೋ 5G ನೆಟ್‌ವರ್ಕ್ ಸಪೋರ್ಟ್‌ ಸ್ಮಾರ್ಟ್‌ಫೋನ್‌ ಅನ್ನು ಹೊಂದಿರಬೇಕು.
* ಜಿಯೋ 5G ನೆಟ್‌ವರ್ಕ್ ಕವರೇಜ್ ಲಭ್ಯವಿರುವ ನಗರದಲ್ಲಿ ಇರಬೇಕು .
* ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಬಳಕೆದಾರರು 239 ರೂ ಅಥವಾ ಅದಕ್ಕಿಂತ ಅಧಿಕ ಬೆಲೆಯ ಜಿಯೋ ಪ್ಲ್ಯಾನ್‌ಗಳನ್ನು ಹೊಂದಿರಬೇಕು.

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ - NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ.

ಜಿಯೋ 5G ಅನ್ನು ವೆಲ್‌ಕಮ್‌ ಆಫರ್ ಪಡೆಯುವುದು ಹೇಗೆ?

ಜಿಯೋ 5G ಅನ್ನು ವೆಲ್‌ಕಮ್‌ ಆಫರ್ ಪಡೆಯುವುದು ಹೇಗೆ?

ಜಿಯೋ ವೆಲ್‌ಕಮ್‌ ಆಫರ್ ಆಹ್ವಾನ ಆಧಾರಿತವಾಗಿದೆ. ಹಾಗಂತ ಜಿಯೋ 5G ಸಂಪರ್ಕದ ನಗರಗಳಲ್ಲಿರುವ ಎಲ್ಲರಿಗೂ ಆಹ್ವಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವರದಿಗಳ ಪ್ರಕಾರ, ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್‌ನಲ್ಲಿ 239ರೂ. ಪ್ಲಾನ್ ಅಥವಾ ಅದಕ್ಕಿಂತ ಹೆಚ್ಚಿನ ಸಕ್ರಿಯ ಯೋಜನೆಯನ್ನು ಹೊಂದಿರುವ ಬಳಕೆದಾರರಿಗೆ ಜಿಯೋ ಉಚಿತ 5G ಸೇವೆಗಳ ಆಹ್ವಾನವನ್ನು ಕಳುಹಿಸುತ್ತದೆ.

ನೂತನ 5G ಸಂಪರ್ಕ

5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ. ಸದ್ಯ ಬಳಕೆಯಲ್ಲಿರುವ ಜಿಯೋ 4G ಸಿಮ್, ನೂತನ 5G ಸಂಪರ್ಕವನ್ನು ಸಪೋರ್ಟ್ ಮಾಡಲಿದೆ. ಜಿಯೋ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಚೆಕ್ ಮಾಡಬಹುದು.

ಜಿಯೋ 5G - 2023 ರ ವೇಳೆಗೆ ಪ್ಯಾನ್ ಇಂಡಿಯಾ

ಜಿಯೋ 5G - 2023 ರ ವೇಳೆಗೆ ಪ್ಯಾನ್ ಇಂಡಿಯಾ

ಜಿಯೋ ಇನ್ನೂ ಯಾವುದೇ ಟ್ರೂ 5G ಸೇವೆಗೆ ನಿರ್ದಿಷ್ಟ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿಲ್ಲ. ಜಿಯೋ ತನ್ನ 5G ಸೇವೆಯನ್ನು ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ನಗರಗಳಿಗೆ ವಿಸ್ತರಿಸಿದ ಬಳಿಕ ಹೊಸ 5G ಪ್ಲ್ಯಾನ್‌ಗಳನ್ನು ಲಾಂಚ್ ಮಾಡಲಿದೆ. ಜಿಯೋ ಈ ವರ್ಷದ ಅಂತ್ಯದ ವೇಳೆಗೆ ಮಹತ್ವದ ನಗರಗಳನ್ನು ಮತ್ತು 2023 ರ ವೇಳೆಗೆ ಪ್ಯಾನ್ ಇಂಡಿಯಾವನ್ನು ತಲುಪುವ ಗುರಿಯನ್ನು ಹೊಂದಿದೆ.

Best Mobiles in India

English summary
Jio Welcome Offer rolling out for some users: How to get Jio 5G free of cost.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X