ಜಿಯೋ ವೈಫೈ ಸ್ಪೀಡ್ ನಲ್ಲಿ 50% ಕಡಿತ!

By Gizbot Bureau
|

ಈ ತಿಂಗಳ ಆರಂಭದಲ್ಲಿ ಅಧಿಕೃತವಾಗಿ ಜಿಯೋ ಫೈಬರ್ ನ ಬೆಲೆಯನ್ನು ಪ್ರಕಟಿಸಲಾಯಿತು. ಎಲ್ಲಾ ಪ್ಲಾನ್ ಗಳು ಪ್ರಕಟವಾದ ನಂತರ ಇದೀಗ ಮಾರುಕಟ್ಟೆಯಲ್ಲಿ ಇತರೆ ಬ್ರಾಡ್ ಬ್ಯಾಂಡ್ ಸೇವೆಗಳಿಗಿಂತ ಜಿಯೋ ಫೈಬರ್ ದುಬಾರಿಯಾಗುತ್ತದೆಯಾ ಅಥವಾ ಸಸ್ತಾ ಆಗುತ್ತದೆಯೋ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಅರ್ಧದಷ್ಟು ಇಂಟರ್ನೆಟ್ ಸ್ಪೀಡ್ ನೀಡುತ್ತಿರುವ ಜಿಯೋ

ಅರ್ಧದಷ್ಟು ಇಂಟರ್ನೆಟ್ ಸ್ಪೀಡ್ ನೀಡುತ್ತಿರುವ ಜಿಯೋ

ಆದರೆ, ಜಿಯೋ ಕನಿಷ್ಟ ನೆಟ್ ವರ್ಕ್ ಸ್ಪೀಡ್ 100Mbps ನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ ಎಂಬುದು ಹೆಚ್ಚಿನ ಖರೀದಿದಾರರ ಉತ್ತಮ ಅಭಿಪ್ರಾಯವಾಗಿದೆ. ಹೆಚ್ಚಿನವು ಕಡಿಮೆ ಸ್ಪೀಡ್ ಗೆ ಇದೇ ರೀತಿಯ ಬೆಲೆಯನ್ನು ನಿಗದಿಗೊಳಿಸಿವೆ. ಆದರೆ ಜಿಯೋ ಸರಿಯಾಗಿ ಡೆಲಿವರಿ ಮಾಡುತ್ತಿಲ್ಲ ಮತ್ತು 100Mbps ಸ್ಪೀಡ್ ನಲ್ಲಿ ಕೆಲವು ಸಮಸ್ಯೆಗಳಿವೆ ಎಂಬ ದೂರುಗಳು ಕೇಳಿಬರುತ್ತಿವೆ.

ಹೊಸ ಜಿಯೋ ಫೈಬರ್ ಕನೆಕ್ಷನ್

ಹೊಸ ಜಿಯೋ ಫೈಬರ್ ಕನೆಕ್ಷನ್ ನ್ನು ಪ್ರಕಟಣೆಯ ನಂತರದ ಬೆಲೆಯಲ್ಲಿ ಇನ್ಸ್ಟಾಲ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತಿದೆಯಷ್ಟೇ. ಆದರೆ ಈಗಾಗಲೇ ಪ್ರಿವ್ಯೂ ಆಫರ್ ನಲ್ಲಿ ಪಡೆದವರು ಜಿಯೋ ಫೈಬರ್ ನ್ನು ಎಂಜಾಯ್ ಮಾಡುತ್ತಿದ್ದಾರೆ. ಬಿಡುಗಡೆಗೂ ಮುನ್ನವೇ ಜಿಯೋ ಉಚಿತ ಸೇವೆಯನ್ನು ಆಫರ್ ಮಾಡಿತ್ತು ಆದರೆ 4,500 ರುಪಾಯಿಯ ಸೆಕ್ಯುರಿಟಿ ಡೆಪಾಸಿಟ್ ನ್ನು ಪಡೆಯಲಾಗಿತ್ತು ಇದು ಡುಯಲ್ ಬ್ಯಾಂಡ್ ಫೈವೈ ರೂಟರ್ ಗಾಗಿ ಪಡೆದ ಹಣವಾಗಿತ್ತು. ನಂತರ ಜಿಯೋ ಸೆಕ್ಯುರಿಟಿ ಡೆಪಾಸಿಟ್ ನ ಮೊತ್ತವನ್ನು ಕಡಿಮೆ ಮಾಡಿ 2,500 ರುಪಾಯಿ ಇಳಿಸಿತ್ತು.

ಸಿಂಗಲ್ ಬ್ಯಾಂಡ್ ವೈಫೈ ರೂಟರ್ ನಲ್ಲಿ ಪ್ರಾಬ್ಲಂ:

ಸಿಂಗಲ್ ಬ್ಯಾಂಡ್ ವೈಫೈ ರೂಟರ್ ನಲ್ಲಿ ಪ್ರಾಬ್ಲಂ:

ಆದರೆ ಸಿಂಗಲ್ ಬ್ಯಾಂಡ್ ವೈಫೈ ರೂಟರ್ ನ್ನು ಇದರಲ್ಲಿ ಪ್ರಾರಂಭಿಸಿತು. ಪ್ರಿವ್ಯೂ ಆಫರ್ ನಲ್ಲಿ ಯಾರು ಕಡಿಮೆ ಬೆಲೆಗೆ ಚಂದಾದಾರಿಕೆಯನ್ನು ಪಡೆದಿದ್ದರೋ ಅವರಿಗೆ ಇದೀಗ ಜಿಯೋ ಭರವಸೆ ನೀಡಿದ ಸ್ಪೀಡ್ ನಲ್ಲಿ ಇಂಟರ್ನೆಟ್ ಲಭ್ಯವಾಗುತ್ತಿಲ್ಲ ಮತ್ತು ಭರವಸೆ ನೀಡಿದ ಸ್ಪೀಡ್ ಗಿಂತ ಅರ್ಧದಷ್ಟು ಕಡಿಮೆ ಸ್ಪೀಡ್ ನಲ್ಲಿ ಜಿಯೋ ಸೇವೆ ಸಿಗುತ್ತಿದೆ.

91 ಮೊಬೈಲ್ಸ್ ವರದಿ:

91 ಮೊಬೈಲ್ಸ್ ವರದಿ:

91ಮೊಬೈಲ್ಸ್ ನ ವರದಿಯ ಪ್ರಕಾರ ಸಿಂಗಲ್ ಬ್ಯಾಂಡ್ ರೂಟರ್ ನಲ್ಲಿ ಜಿಯೋ ಸೇವೆಯನ್ನು ಪಡೆಯುತ್ತಿರುವ ಜಿಯೋ ಫೈಬರ್ ಚಂದಾದಾರರಿಗೆ ಇದೀಗ ಕೇವಲ 50Mbps ಸ್ಪೀಡ್ ನಲ್ಲಿ ಸೇವೆಯು ಲಭ್ಯವಾಗುತ್ತಿದೆ.ಅಂದರೆ ಅದು ಜಿಯೋ ನೀಡಿದ ಭರವಸೆಯ ಅರ್ಧದಷ್ಟು ಸ್ಪೀಡ್ ಇದಾಗಿದೆ. ಆದರೆ ಜಿಯೋ ಈಗಲೂ ಕೂಡ ಈತರ್ ನೆಟ್ ಕೇಬಲ್ ಮೂಲಕ ಯಾವ ಚಂದಾದಾರರು ಆಕ್ಸಿಸ್ ಮಾಡುತ್ತಾರೋ ಅವರಿಗೆ 100Mbps ಸ್ಪೀಡ್ ನ್ನೇ ಆಫರ್ ಮಾಡುತ್ತಿದೆ.

ಈಥರ್ ನೆಟ್ ಮೂಲಕ ಕನೆಕ್ಷನ್ ಮಾಡಿ:

ಈಥರ್ ನೆಟ್ ಮೂಲಕ ಕನೆಕ್ಷನ್ ಮಾಡಿ:

ಹಾಗಾಗಿ ಈಥರ್ ನೆಟ್ ಮೂಲಕ ನೀವು ಜಿಯೋ ಫೈಬರ್ ಕನೆಕ್ಷನ್ ನ್ನು ನಿಮ್ಮ ಲ್ಯಾಪ್ ಟಾಪ್ ಅಥವಾ ಪಿಸಿಗೆ ಕನೆಕ್ಟ್ ಮಾಡಿಕೊಂಡರೆ ನೀವು ಜಿಯೋ ಭರವಸೆ ನೀಡಿದ ಫುಲ್ 100Mbps ಸ್ಪೀಡ್ ನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.ಒಂದು ವೇಳೆ ನೀವು ವೈಫೈ ರೂಟರ್ ಮೂಲಕ ಇಂಟರ್ನೆಟ್ ನ್ನು ಆಕ್ಸಿಸ್ ಮಾಡಿದರೆ ಸ್ಪೀಡ್ 50Mbps ಗೆ ಇಳಿಮುಖವಾಗುತ್ತದೆ. ಅಂದರೆ ಅದು ನೆಟ್ ವರ್ಕ್ ಸ್ಪೀಡ್ ನ 50% ವನ್ನು ಇಳಿಸುತ್ತದೆ.

ಡುಯಲ್ ಬ್ಯಾಂಡ್ ರೂಟರ್ ಖರೀದಿಸಬೇಕಾಗುತ್ತದೆ:

ಡುಯಲ್ ಬ್ಯಾಂಡ್ ರೂಟರ್ ಖರೀದಿಸಬೇಕಾಗುತ್ತದೆ:

ಆದರೆ ಜಿಯೋ ಹೇಳುವ ಪ್ರಕಾರ ವೈಫೈ ಸ್ಪೀಡ್ ಇಳಿಮುಖವಾಗುತ್ತದೆ ಕಾರಣ ಸಿಂಗಲ್ ಬ್ಯಾಂಡ್ ರೂಟರ್ ಆಗಿದ್ದು ಅದನ್ನು ಪ್ಯಾಕೇಜ್ ನ ಭಾಗವಾಗಿ ನೀಡಲಾಗಿದೆ.ಸಿಂಗಲ್ ಬ್ಯಾಂಡ್ ರೂಟರ್ ಕೇವಲ 2.5GHz ಬ್ಯಾಂಡ್ ವಿಡ್ತ್ ನ್ನು ಮಾತ್ರವೇ ಬೆಂಬಲಿಸುತ್ತದೆ ಹಾಗಾಗಿ ಇದು ಸ್ವಲ್ಪ ನಿಧಾನವಾಗಿರುತ್ತದೆ ಎಂದು ಹೇಳಿದೆ. ಒಂದು ವೇಳೆ ಚಂದಾದಾರರು ಡುಯಲ್ ಬ್ಯಾಂಡ್ ರೂಟರ್ ನ್ನು ಪಡೆದರೆ 2.5GHZ ಮತ್ತು 5GHZ ಬ್ಯಾಂಡ್ ವಿಡ್ತ್ ಎರಡಕ್ಕೂ ಕೂಡ ಬೆಂಬಲ ಸಿಗುತ್ತದೆ. ಆಗ ವೈಫೈ ಸ್ಪೀಡ್ 100Mbps ವರೆಗೂ ಕೂಡ ತಲುಪುತ್ತದೆ. ಹಾಗಾಗಿ ಒಂದು ವೇಳೆ ನಿಮಗೆ ಫುಲ್ 100Mbps ಸ್ಪೀಡ್ ಸಿಗಬೇಕು ಎಂದಾದರೆ ನೀವು ಹೊಸ ವೈಫೈ ರೂಟರ್ ನ್ನು ನ್ನು ಖರೀದಿಸಬೇಕಾಗುತ್ತದೆ ಎಂದು ತಿಳಿಸಿದೆ.

ಹೊಸ ಕನೆಕ್ಷನ್ ನಲ್ಲಿ ಯಾವ ರೂಟರ್ ಎಂಬುದು ಖಾತ್ರಿಯಾಗಿಲ್ಲ:

ಹೊಸ ಕನೆಕ್ಷನ್ ನಲ್ಲಿ ಯಾವ ರೂಟರ್ ಎಂಬುದು ಖಾತ್ರಿಯಾಗಿಲ್ಲ:

ಬೆಲೆಯ ಪ್ರಕಟಣೆಯ ನಂತರದ ಹೊಸ ಕನೆಕ್ಷನ್ ಗಳಿಗೂ ಕೂಡ ಜಿಯೋ ಇದೇ ರೀತಿಯ ಸಿಂಗಲ್ ಬ್ಯಾಂಡ್ ವಿಡ್ತ್ ರೂಟರ್ ನ್ನು ಮುಂದುವರಿಸಲಿದೆಯಾ ಎಂಬ ಬಗ್ಗೆ ಇನ್ನು ಕೂಡ ಖಾತ್ರಿಯಾಗಿಲ್ಲ. ಒಂದು ವೇಳೆ ಹಾಗಾದಲ್ಲಿ ಜಿಯೋ ಫೈಬರ್ ಚಂದಾದಾರರು ಫುಲ್ ಇಂಟರ್ನೆಟ್ ಸ್ಪೀಡ್ ಪಡೆಯುವುದಕ್ಕಾಗಿ ಡುಯಲ್ ಬ್ಯಾಂಡ್ ವಿಡ್ತ್ ರೂಟರ್ ನ್ನು ಖರೀದಿಸಬೇಕಾಗುತ್ತದೆ.

Best Mobiles in India

Read more about:
English summary
Jio Wi-Fi Router Only Offers 50Mbps Speed: How To Unlock 100Mbps Speed

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X