ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಹೊಸತನಗಳಿಗೆ ಸಾಕ್ಷಿಯಾಗಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಜಿಯೋ ಫೈ ಡೇಟಾ ಕಾರ್ಡ್ ಹೊಸ ದಾಖಲೆಯನ್ನು ನಿರ್ಮಿಸಿದೆ ಎನ್ನಲಾಗಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಸರ್ವೆ ನಡೆಸಿರುವ ಸಿ ಎಂ ಆರ್ ಕಂಪನಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಡೇಟಾ ಕಾರ್ಟ್ ಮಾರುಕಟ್ಟೆಯೂ ದೇಶಿಯವಾಗಿ ಶೇ.151 ರಷ್ಟು ಬೆಳವಣಿಗೆಯನ್ನು ಹೊಂದಿದ್ದು, ಇದರಲ್ಲಿ ಜಿಯೋ ಫೈ ಪಾತ್ರವೂ ದೊಡ್ಡದಾಗಿದೆ ಎಂದು ತಿಳಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಜಿಯೊ ಫೈ ಬಳಕೆದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶೇ.85ರಷ್ಟು ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ. ಕಡಿಮೆ ಬೆಲೆಗೆ ದೊರೆಯುತ್ತಿದ್ದ ಜಿಯೋ ಫೈ ಸಾಮಾನ್ಯ ಬಳಕೆದಾರರ ಕೈಗೆಟುಕುವಂತೆ ಇದ್ದ ಕಾರಣಕ್ಕಾಗಿಯೇ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿತ್ತು.

ಅಲ್ಲದೇ ಜಿಯೋ ತನ್ನ ಡೇಟಾ ಕಾರ್ಡ್ ಹೊಂದಿದವರಿಗೆ ಆಪ್ ಬಳಕೆ ಮಾಡಿಕೊಂಡು ಉಚಿತವಾಗಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಟ್ಟ ಕಾರಣದಿಂದಾಗಿ 2G-3G ಸಪೋರ್ಟ್ ಮಾಡುವ ಸ್ಮಾರ್ಟ್ ಪೋನ್ ಬಳಕೆದಾರರು ಈ ಜಿಯೋ ಫೈ ಡಿವೈಸ್ ಬಳಕೆಗೆ ಹೆಚ್ಚಿನ ಒಲವು ತೋರಿಸಿದರು ಎನ್ನಲಾಗಿದೆ.
ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದ ಮಾದರಿಯಲ್ಲಿ ಜಿಯೋ, ಡೇಟಾ ಕಾರ್ಡ್ ಮಾರುಕಟ್ಟೆಯಲ್ಲಿಯೂ ಹುಟ್ಟುಹಾಕಿತ್ತು. ಇಷ್ಟು ದಿನ ಸುಮ್ಮನಿದ್ದ ಏರ್ಟೆಲ್ ಸಹ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ ಡೇಟಾ ಕಾರ್ಡ್ ಅನ್ನು ಮಾರಾಟಮಾಡಲು ಮುಂದೆ ಬಂದಿತು.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.