ಮೂರು ಹೊಸ JioFi ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌: ಏನೆಲ್ಲಾ ಪ್ರಯೋಜನಗಳು ಲಭ್ಯ?

|

ರಿಲಯನ್ಸ್ ಜಿಯೋ ಟೆಲಿಕಾಂ ಆಪರೇಟರ್, ಭಾರತದಲ್ಲಿ ಜಿಯೋಫೈ (JioFi) ಗಾಗಿ ಮೂರು ಹೊಸ ಪೋಸ್ಟ್‌ಪೇಯ್ಡ್ ಮಾಸಿಕ ರೀಚಾರ್ಜ್ ಆಯ್ಕೆಗಳನ್ನು ಪರಿಚಯಿಸಿದೆ. ನೂತನ ಮೂರು ರೀಚಾರ್ಜ್ ಆಯ್ಕೆಗಳು ಜಿಯೋಫೈ (JioFi)4G ವೈರ್‌ಲೆಸ್ ಹಾಟ್‌ಸ್ಪಾಟ್ ಸಬ್‌ಸ್ಕ್ರಿಪ್ಶನ್‌ಗಳು ಕ್ರಮವಾಗಿ 249ರೂ, 299ರೂ ಮತ್ತು 349ರೂ. ಗಳ ಬೆಲೆಯಲ್ಲಿವೆ. ಹಾಗೆಯೇ ಈ ಯೋಜನೆಗಳು ಭಿನ್ನ ಡೇಟಾ ನಿರ್ಬಂಧಗಳನ್ನು ಹೊಂದಿವೆ.

ಮೂರು ಹೊಸ JioFi ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌: ಏನೆಲ್ಲಾ ಪ್ರಯೋಜನಗಳು ಲಭ್ಯ?

ಜಿಯೋ ಟೆಲಿಕಾಂನ ಈ ಹೊಸ ಸೇವೆಗಳನ್ನು ಜಿಯೋ ಹೈ-ಸ್ಪೀಡ್ 4G ಸಂಪರ್ಕವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವ ವ್ಯವಹಾರಗಳು ಅಥವಾ ಉದ್ಯಮಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, 4G ಮೋಡೆಮ್‌ಗಳನ್ನು ಬಳಕೆ ಮತ್ತು ಹಿಂತಿರುಗಿಸುವ ಆಧಾರದ ಮೇಲೆ ನೀಡಲಾಗುತ್ತದೆ. ಜಿಯೋದಿಂದ ಸಾಮಾನ್ಯ ಮೊಬೈಲ್ ರೀಚಾರ್ಜ್ ಯೋಜನೆಗಳಿಗಿಂತ ಭಿನ್ನವಾಗಿ, ಈ ಹೊಸ ಯೋಜನೆಗಳು ಕರೆ ಮತ್ತು ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ಕಳೆದುಕೊಳ್ಳುತ್ತವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ಟೆಲಿಕಾಂ ಪರಿಚಯಿಸಿದ ಮೂರು ಹೊಸ ಯೋಜನೆಗಳು ಮಾಸಿಕ 30GB ಡೇಟಾವನ್ನು ವಿತರಿಸುವ 249 ರೂ. ಆಯ್ಕೆಯನ್ನು ಒಳಗೊಂಡಿವೆ. 40GB ಡೇಟಾದೊಂದಿಗೆ 299 ರೂ. ಯೋಜನೆ ಮತ್ತು 50GB ಡೇಟಾವನ್ನು ನೀಡುವ 349 ರೂ. ಯೋಜನೆ ಒಂದು ತಿಂಗಳು ಇವೆ. ಒಮ್ಮೆ ತಿಂಗಳ ನಿಗದಿತ ಡೇಟಾ ಮಿತಿಯನ್ನು ಬಳಕೆ ಮಾಡಿದ ಬಳಿಕೆ, ಇಂಟರ್ನೆಟ್ ವೇಗವು 64Kbps ಗೆ ಕಡಿಮೆಯಾಗುತ್ತದೆ. ಇನ್ನು ಈ ರೀಚಾರ್ಜ್ ಆಯ್ಕೆಗಳು ಯಾವುದೇ ಧ್ವನಿ ಅಥವಾ ಎಸ್‌ಎಮ್‌ಎಸ್‌ ಸೌಲಭ್ಯಗಳನ್ನು ಹೊಂದಿಲ್ಲ. ಮತ್ತು 18-ತಿಂಗಳ ಲಾಕ್-ಇನ್ ಷರತ್ತು ಇದೆ. ಹೊಸ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ, ಜಿಯೋ ಉಚಿತ 4G ಹಾಟ್‌ಸ್ಪಾಟ್ ಗೇರ್, ಜಿಯೋಫೈ ಅನ್ನು ಬಳಕೆದಾರರಿಗೆ "ಬಳಕೆ ಮತ್ತು ಹಿಂತಿರುಗಿ" ಆಧಾರದ ಮೇಲೆ ಒದಗಿಸುತ್ತದೆ.

ಮೂರು ಹೊಸ JioFi ರೀಚಾರ್ಜ್‌ ಪ್ಲ್ಯಾನ್‌ ಲಾಂಚ್‌: ಏನೆಲ್ಲಾ ಪ್ರಯೋಜನಗಳು ಲಭ್ಯ?

ಜಿಯೋಫೈ (JioFi 4G) ವೈರ್‌ಲೆಸ್ ಹಾಟ್‌ಸ್ಪಾಟ್ Wi-Fi ಮೂಲಕ ಇಂಟರ್ನೆಟ್‌ಗೆ ಹತ್ತು ಸಾಧನಗಳನ್ನು ಮತ್ತು ಯುಎಸ್‌ಬಿ ಟೆಥರಿಂಗ್ ಮೂಲಕ ಒಂದು ಡಿವೈಸ್‌ ಅನ್ನು ಸಂಪರ್ಕಿಸಬಹುದು. ಗೇರ್ ಒಂದೇ ನ್ಯಾನೊ-ಸಿಮ್ ಅನ್ನು ಬೆಂಬಲಿಸುತ್ತದೆ ಮತ್ತು ಗರಿಷ್ಠ 150 Mbps ವೇಗದಲ್ಲಿ ಐದರಿಂದ ಆರು ಗಂಟೆಗಳವರೆಗೆ ಬ್ರೌಸಿಂಗ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಇದು 2,300mAh ಬ್ಯಾಟರಿ ಸೆಲ್, ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಕನೆಕ್ಟರ್ ಮತ್ತು ಸಂಪರ್ಕಕ್ಕಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಒಳಗೊಂಡಿದೆ. ಆಸಕ್ತ ಗ್ರಾಹಕರು ರಿಲಯನ್ಸ್ ಜಿಯೋವನ್ನು ಸಂಪರ್ಕಿಸಬಹುದು ಅಥವಾ ಉತ್ಪನ್ನದಲ್ಲಿ ಆಸಕ್ತಿಯನ್ನು ನೋಂದಾಯಿಸುವ ಕಂಪನಿಯ ಅಧಿಕೃತ ಪೋರ್ಟಲ್‌ನಲ್ಲಿ ಫಾರ್ಮ್ ಅನ್ನು ಸಲ್ಲಿಸಬಹುದು.

Best Mobiles in India

Read more about:
English summary
JioFi Recharge Plans Worth Rs 249, Rs 299, and Rs 349 Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X