ರಿಲಯನ್ಸ್ ಜಿಯೋದಿಂದ 100 GB ಡೇಟಾ ಉಚಿತ: ಜೊತೆಗೆ ಮೂರು ತಿಂಗಳು ಉಚಿತ

Written By:

ದೇಶದ ಜನರ ಮೊಬೈಲ್ ಫೋನ್‌ಗಳಿಗೆ 4G ವೇಗದ ಇಂಟರ್ನೆಟ್ ಸೇವೆಯನ್ನು ನೀಡಿದ ಜಿಯೋ ಈಗ ಇದೇ ಮಾದರಿಯಲ್ಲಿ ದೇಶದ ಎಲ್ಲಾ ಮನೆಗಳಿಗೂ 100 Mbps ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದ್ದು, ಅದರಲ್ಲೂ ಪ್ರೀ ವ್ಯೂ ಆಫರ್ ಹೆಸರಿನಲ್ಲಿ ಮೊದಲಿಗೆ 100 Mbps ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ.

ರಿಲಯನ್ಸ್ ಜಿಯೋದಿಂದ 100 GB ಡೇಟಾ ಉಚಿತ: ಜೊತೆಗೆ ಮೂರು ತಿಂಗಳು ಉಚಿತ

4G ಸೇವೆಯನ್ನು ನೀಡಿದ ಮಾದರಿಯಲ್ಲೇ ಜಿಯೋ, ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ದೇಶದ ಹಲವು ನಗರಗಳಲ್ಲಿ ಪ್ರಾಯೋಗಿಕ ಸೇವೆಯನ್ನು ಆರಂಭಿಸಿದೆ. ಶೀಘ್ರವೇ ಪೂರ್ಣ ಪ್ರಮಾಣದ ಸೇವೆಯನ್ನು ಆರಂಭಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಫೈಬರ್ ವೆಲ್‌ಕಮ್ ಫೋನ್:

ಜಿಯೋ ಫೈಬರ್ ವೆಲ್‌ಕಮ್ ಫೋನ್:

ಜಿಯೋ ಫೈಬರ್ ಆರಂಭದಲ್ಲಿ ಪ್ರಿಪ್ಯೂ ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಮೊದಲ ಮೂರು ತಿಂಗಳು ಉಚಿತ ಸೇವೆಯು ದೊರೆಯಲಿದ್ದು, ಅದುವೇ 100 Mbps ವೇಗದ ಇಂಟರ್ನೆಟ್ ಬಳಕೆಗೆ ಮುಕ್ತವಾಗಲಿದೆ. ಪ್ರತಿ ತಿಂಗಳು 100 GB ಡೇಟಾ ಉಚಿತವಾಗಿರಲಿದೆ.

ಜಿಯೋ ಸೇವೆಗಳೆಲ್ಲವೂ ಉಚಿತ:

ಜಿಯೋ ಸೇವೆಗಳೆಲ್ಲವೂ ಉಚಿತ:

ಜಿಯೋ ಫೈಬರ್ ಸೇವೆಯ ಜೊತೆಗೆ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋ ನ್ಯೂಸ್, ಜಿಯೋ ಕ್ಲಾವ್ಡ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಅತೀ ವೇಗದ ಇಂಟರ್‌ನೆಟ್ ಸೇವೆ:

ಅತೀ ವೇಗದ ಇಂಟರ್‌ನೆಟ್ ಸೇವೆ:

ಜಿಯೋ ಉಚಿತ ಸೇವೆಯನ್ನು ನೀಡುತ್ತಿರುವ ಜಿಯೋ ಅತೀ ವೇಗದ ಇಂಟರ್‌ನೆಟ್ ಸೇವೆಯನ್ನು ನೀಡಲಿದೆ. ಅದುವೇ 100 Mbps ವೇಗದ ಇಂಟರ್ನೆಟ್. ಈಗಾಗಲೇ ಪ್ರಾಯೋಜಿಕ ಪರೀಕ್ಷೆಯಲ್ಲಿ ಇದೇ ವೇಗದ ಸೇವೆಯು ದೊರೆಯುತ್ತಿದೆ.

ಬೆಲೆ ಎಷ್ಟು:

ಬೆಲೆ ಎಷ್ಟು:

ಸದ್ಯ ಮಾರಕಟ್ಟೆಗೆ ಲಾಂಚ್ ಆಗಲಿರುವ ಜಿಯೋ ಫೈಬರ್ ಸೇವೆಯನ್ನು ಪಡೆಯಲು ರೂ. 4500 ಗಳನ್ನು ಕಟ್ಟಬೇಕಾಗಿದೆ. ಆದರೆ ಇದು ಹಿಂತಿರುಗಿಸುವ ಹಣವಾಗಿದ್ದು, ನಿಮಗೆ ಜಿಯೋ ಸೇವೆ ಬೇಡವಾದ ಸಂದರ್ಭದಲ್ಲಿ ಇದು ಹಿಂದಕ್ಕೆ ಬರಲಿದೆ. ಇದರಲ್ಲಿ ಡಬ್ಬಲ್ ರೌಟರ್ ಸಹ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Delhi, Mumbai and Chennai are the three major cities where the JioFiber trials are going right now. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot