ಜಿಯೋಫೈಬರ್‌ನ ಈ ಪ್ಲ್ಯಾನಿನಲ್ಲಿ ವೇಗದ ಇಂಟರ್ನೆಟ್‌ ಜೊತೆ ಅನಿಯಮಿತ ಡೇಟಾ!

|

ಸದ್ಯ ಅನೇಕ ಕೆಲಸಗಳಿಗೆ ಇಂಟರ್ನೆಟ್ ಅನಿವಾರ್ಯ ಆಗಿದ್ದು, ಜನರು ತಡೆರಹಿತ ಇಂಟರ್ನೆಟ್ ಸಂಪರ್ಕ ಬಯಸುತ್ತಾರೆ. ಈ ನಿಟ್ಟಿನಲ್ಲಿ ಜಿಯೋಫೈಬರ್, ಟಾಟಾಸ್ಕೈ, ಎಸಿಟಿ ಹಾಗೂ ಏರ್‌ಟೆಲ್‌ ಸೇರಿದಂತೆ ಇತರೆ ಬ್ರಾಡ್‌ಬ್ಯಾಂಡ್‌ ಪೂರೈಕೆದಾರ ಸಂಸ್ಥೆಗಳು ಆಕರ್ಷಕ ಯೋಜನೆಗಳ ಆಯ್ಕೆ ಒದಗಿಸಿವೆ. ಆ ಪೈಕಿ ರಿಲಯನ್ಸ್‌ ಜಿಯೋ ಫೈಬರ್ 1 Gbps ವೇಗದ ಯೋಜನೆಗಳು ಆಕರ್ಷಕ ಎನಿಸಿದ್ದು, ಆದ್ರೆ ಬೆಲೆ ದುಬಾರಿ ಎನಿಸಲಿದೆ.

ಜಿಯೋಫೈಬರ್

ಹೌದು, ಜನಪ್ರಿಯ ಜಿಯೋ ಫೈಬರ್ ಭಿನ್ನ ಬೆಲೆಯಲ್ಲಿ ಆಕರ್ಷಕ ಯೋಜನೆಗಳನ್ನು ಒಳಗೊಂಡಿದೆ. ಆ ಪೈಕಿ ಜಿಯೋಫೈಬರ್ 3999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್ 1 Gbps ವೇಗದ ಆಯ್ಕೆಗಳಲ್ಲಿ ಅತ್ಯುತ್ತಮ ಎನಿಸಿದೆ. ಈ ಯೋಜನೆಯಲ್ಲಿ ಅಪ್‌ಲೋಡಿಂಗ್ ವೇಗವು 1 Gbps ಆಗಿದ್ದು, ಡೌನ್‌ಲೋಡ್ ವೇಗವು ಸಹ 1 Gbps ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಅನಿಯಮಿತ ಡೇಟಾ ಪ್ರಯೋಜನ ಪಡೆದಿದೆ. ಹಾಗಾದರೇ ಜಿಯೋಫೈಬರ್ 3999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ಇತರೆ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋಫೈಬರ್ 3999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋಫೈಬರ್ 3999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್‌, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ. ಈ ಯೋಜನೆಯಲ್ಲಿ ಅಪ್‌ಲೋಡಿಂಗ್ ವೇಗವು 1 Gbps ಆಗಿದ್ದು, ಡೌನ್‌ಲೋಡ್ ವೇಗವು ಸಹ 1 Gbps ಸಾಮರ್ಥ್ಯದಲ್ಲಿ ಇದೆ. ಹೆಚ್ಚುವರಿಯಾಗಿ ಜಿಎಸ್‌ಟಿ ಶುಲ್ಕ ಸೇರ್ಪಡೆ ಆಗಲಿದೆ.

ಜಿಯೋಫೈಬರ್ 8499ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋಫೈಬರ್ 8499ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋ ಫೈಬರ್ 8499ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಸಹ 1 Gbps ಇಂಟರ್ನೆಟ್ ವೇಗವನ್ನು ಪಡೆದಿದೆ. ಈ ಯೋಜನೆಯು 6600 GB ಡೇಟಾ ಪ್ರಯೋಜನವನ್ನು ಹೊಂದಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್‌, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ. ಈ ಯೋಜನೆಯಲ್ಲಿ ಅಪ್‌ಲೋಡಿಂಗ್ ವೇಗವು 1 Gbps ಆಗಿದ್ದು, ಡೌನ್‌ಲೋಡ್ ವೇಗವು ಸಹ 1 Gbps ಸಾಮರ್ಥ್ಯದಲ್ಲಿ ಇದೆ. ಹೆಚ್ಚುವರಿಯಾಗಿ ಜಿಎಸ್‌ಟಿ ಶುಲ್ಕ ಸೇರ್ಪಡೆ ಆಗಲಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ ವಿಐಪಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದೆ. ಈ ಪ್ಲಾನ್‌ ಇದೀಗ 4X4 ರೂಟರ್‌ನೊಂದಿಗೆ ಬರುತ್ತದೆ, ಅದು ಬಳಕೆದಾರರಿಗೆ ಸಣ್ಣ ಮನೆಗಳು ಮತ್ತು ಕಚೇರಿಗಳಲ್ಲಿ 1Gbps ಕವರೇಜ್‌ನೊಂದಿಗೆ ವೈಫೈ ಕವರೇಜ್ ನೀಡುತ್ತದೆ. ಇದು 1 Gbps ವೇಗ, ಅನಿಯಮಿತ ಡೇಟಾವನ್ನು ತಿಂಗಳಿಗೆ 3.3TB ಅಥವಾ 3300GB ಮತ್ತು ತನ್ನ ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ವಾಯಿಸ್‌ ಕರೆಗಳನ್ನು ನೀಡುತ್ತದೆ. ಈ ಯೋಜನೆ ನೀಡುವ ಒಟಿಟಿ ಚಂದಾದಾರಿಕೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸೇರಿವೆ. ಹಾಗೆಯೇ ಆಂಡ್ರಾಯ್ಡ್ ಟಿವಿ ಆಧಾರಿತ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಯ್ಕೆ ಮಾಡುವ ಆಯ್ಕೆಯನ್ನು ಗ್ರಾಹಕರು ಪಡೆಯುತ್ತಾರೆ. ಎಕ್ಸ್‌ಸ್ಟ್ರೀಮ್ ಬಾಕ್ಸ್‌ನೊಂದಿಗೆ, ಬಳಕೆದಾರರು ಉಚಿತ ZEE5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳನ್ನು ಪಡೆಯುತ್ತಾರೆ.

Best Mobiles in India

English summary
JioFiber Rs 3999 Plan Offers Unlimited Data with 1Gbps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X