ಜಿಯೋ ಫೈಬರ್‌ನ ಹೊಸ ಆಫರ್‌ಗೆ ಬಳಕೆದಾರರು ಫುಲ್ ಖುಷ್!

|

ಜಿಯೋ ಸಂಸ್ಥೆಯ ಸಮಾಚಾರ ಬಂದರೇ ಸಾಕು ಬಹುತೇಕರಿಗೆ ಏನೋ ಒಂದು ಹೊಸ ಆಫರ್ ಇದ್ದೆ ಇರುತ್ತದೆ ಅನ್ನೋ ಫೀಲ್ ಬರುತ್ತೆ. ಹೀಗೆ ಜಿಯೋದ ಗಿಗಾ ಫೈಬರ್‌ ಬಗ್ಗೆಯು ಸಹ ಗ್ರಾಹಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಗ್ರಾಹಕರ ನಿರೀಕ್ಷೆಯಂತೆ ಜಿಯೋ ಕಡಿಮೆ ದರದಲ್ಲಿ ಗಿಗಾ ಫೈಬರ್ ಬಿಡುಗಡೆ ಮಾಡಿತ್ತು. ಇದೀಗ ಜಿಯೋ ತನ್ನ ಗಿಗಾ ಫೈಬರ್ ಗ್ರಾಹಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ.

ಜಿಯೋ ಸಂಸ್ಥೆ

ಹೌದು, ಜಿಯೋ ಸಂಸ್ಥೆಯು ತನ್ನ 849ರೂ. ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿಗ ಜನಪ್ರಿಯ OTT- ಇಂಟರ್ನೆಟ್ ಆಧಾರಿತ ಮನರಂಜನಾ ಸೇವೆಗಳ ಸೌಲಭ್ಯಗಳ ಚಂದಾದಾರಿಕೆ ಒದಗಿಸಲು ಮುಂದಾಗಿದೆ. ಜಿಯೋ ಫೈಬರ್‌ ಚಂದಾದಾರರಿಗೆ ಜಿಯೋದ OTT ಪ್ರಯೋಜನಗಳ ಜೊತೆಗೆ ಇತರೆ ಟಾಪ್‌ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳು ಸಹ ಲಭ್ಯವಾಗಲಿವೆ ಈ ಸೇವೆಗಳಿಗಾಗಿ ಚಂದಾದಾರರು ಯಾವುದೇ ಹೆಚ್ಚುವರಿ ಶುಲ್ಕ ತೆರಬೇಕಾಗಿಲ್ಲ.

ಆರಂಭಿಕ ಬ್ರಾಡ್‌ಬ್ಯಾಂಡ್

ಜಿಯೋದ ಆರಂಭಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ಜನಪ್ರಿಯ OTT ಸೇವೆಗಳ ಚಂದಾದಾರಿಕೆ ಅಲಭ್ಯವಾಗಿದ್ದವು. ಆದ್ರೆ ಇದೀಗ ಜಿಯೋ ಫೈಬರ್ ಬೇಸ್‌ ಪ್ಲ್ಯಾನಿನಲ್ಲಿಯೂ ಸಹ ಜಿಯೋ ಸಿನಿಮಾ, ಹಾಟ್‌ಸ್ಟಾರ್, ವೂಟ್, ಸೇರಿದಂತೆ ಇತ್ತೀಚಿನ ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳ ಸೇವೆಗಳ ಚಂದಾದಾರಿಕೆ ದೊರೆಯಲಿವೆ. ಹಾಗೆಯೇ ಜಿಯೋ ಸಂಸ್ಥೆಯು ಈಗ 4K ಸೆಟ್‌ಟಾಪ್ ಬಾಕ್ಸ್‌ ಅನ್ನು ಸಹ ಪರಿಚಯಿಸಲು ಮುಂದಾಗಿದೆ.

OTT ಸೇವೆಗಳು

ಜಿಯೋದ 699ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಮೊದಲ ಮೂರು ಬಾರಿ ಜಿಯೋ ಸಿನಿಮಾ, ಜಿಯೋ ಸಾವನ್ ಸೇವೆಗಳು ಲಭ್ಯ ಇವೆ. ಅದೇ ರೀತಿ ಜಿಯೋ 849ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಮೊದಲ ಮೂರು ಬಾರಿ ಎಲ್ಲ OTT ಸೇವೆಗಳು ಚಂದಾದಾರರಿಗೆ ಲಭ್ಯವಾಗಲಿವೆ. ಹಾಟ್‌ಸ್ಟಾರ್, ಸೋನಿಲೈವ್, ವೂಟ್ ಮತ್ತು ಜಿಯೋ ಸಿನಿಮಾ OTT ಸೇವೆಗಳು ಈಗ ಜಿಯೋ ಫೈಬರ್ ಸೇರಿಕೊಂಡಿವೆ.

200GB ಅಡಿ‍ಷನಲ್‌

ಹಾಗೆಯೇ ಮುಂದಿನ ದಿನಗಳಲ್ಲಿ ಜಿಯೋ ಫೈಬರ್‌ನಲ್ಲಿ ಸನ್‌ನೆಕ್ಟ್ಸ್‌, ಜೀ5 ಚಂದಾದಾರಿಕೆ ಸಹ ಲಭ್ಯವಾಗಲಿದೆ ಎನ್ನಲಾಗಿದೆ. ಇನ್ನು ಜಿಯೋದ 849ರೂ. ಪ್ಲ್ಯಾನ್‌ ನೋಡುವುದಾದರೇ, ಈ ಪ್ಲ್ಯಾನ್ 200GB ಡೇಟಾ ಸೌಲಭ್ಯ ಹೊಂದಿದೆ. ಆದರೆ ಹೊಸ ಗ್ರಾಹಕರಿದ್ದರೇ ಮೊದಲ ಆರು ತಿಂಗಳ 200GB ಅಡಿ‍ಷನಲ್‌ ಡೇಟಾ ಲಭ್ಯವಾಗಲಿದ್ದು, ಹೀಗಾಗಿ ಒಟ್ಟು 400GB ಸಿಗಲಿದೆ. ಇಂಟರ್ನೆಟ್‌ ವೇಗವು 100Mbps ಆಗಿದೆ. ಉಳಿದಂತೆ ಅನಿಯಮಿತ ಉಚಿತ ಲ್ಯಾಂಡ್‌ಲೈನ್ ಕರೆಗಳು ಹಾಗೂ ಉಚಿತ ಜಿಯೋ ಸಿನಿಮಾ, ಜಿಯೋ ಸಾವನ್, ಉಚಿತ OTT ಆಪ್ಸ್‌ಗಳ ಸೇವೆಯು ದೊರೆಯಲಿದೆ.

Most Read Articles
Best Mobiles in India

English summary
JioFiber is providing the OTT app subscriptions with plans priced over Rs 849. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X