ಜಿಯೋ ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ; ಈ ಫೀಚರ್‌ ಇನ್ನು ಅಲಭ್ಯ!

|

ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯ ಪಡೆದಿರುವ ಫೀಚರ್‌ ಫೋನ್‌ಗಳ ಲಿಸ್ಟ್‌ನಲ್ಲಿ ಸದ್ಯ ಮೊದಲಿಗೆ ಕಾಣಿಸುವುದೇ ಜಿಯೋ ಫೋನ್‌ ಎಂದು ಹೇಳಬಹುದಾಗಿದೆ. ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರನ್ನು ಆಕರ್ಷಿಸಿರುವ ರಿಲಯನ್ಸ್‌ ಕಂಪನಿಯ ಜಿಯೋ ಫೋನ್ KioOS ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಈ ಫೀಚರ್‌ ಫೋನ್‌ ಗೂಗಲ್‌ನ ಕೆಲವು ಕೀ ಫೀಚರ್‌ ಬೆಂಬಲಿಸುವುದಿಲ್ಲ ಎನ್ನಲಾಗಿದೆ.

ಗೂಗಲ್‌

ಹೌದು, ಜನಪ್ರಿಯ ಜಿಯೋ ಫೋನ್‌ನಲ್ಲಿ ಗೂಗಲ್‌ನ ವರ್ಚುವಲ್ ಅಸಿಸ್ಟೆಂಟ್‌ನ ಕೆಲವು ಪ್ರಮುಖ ಫೀಚರ್ಸ್‌ಗಳನ್ನು KaiOS ಓಎಸ್‌ ಇನ್ನು ಮುಂದೆ ಸಪೋರ್ಟ್‌ ಮಾಡುವುದಿಲ್ಲ. KaiOS ನಲ್ಲಿನ ಗೂಗಲ್‌ ಅಸಿಸ್ಟಂಟ್‌ ಇನ್ನು ಮುಂದೆ ಟೆಕ್ಸ್ಟ್‌ ಮೆಸೆಜ್ ಸೆಂಡ್ ಮಾಡಲು ಮತ್ತು ವಾಯಿಸ್ ಕರೆಗಳನ್ನು ಮಾಡಲು ಬೆಂಬಲಿಸುವುದಿಲ್ಲ. ಅಂದಹಾಗೇ ಇದು ವಾಯಿಸ್‌ ಅಸಿಸ್ಟಂಟ್‌ ದೃಷ್ಠಿಯಿಂದ ಮಾತ್ರ. ಬಳಕೆದಾರರು ಕೈಯಿಂದ ಟೈಪ್‌ ಮಾಡಿ ಟೆಕ್ಸ್ಟ್‌ ಮೆಸೆಜ್ ಮತ್ತು ಕಾಂಟ್ಯಾಕ್ಟ್‌ ಲಿಸ್ಟ್‌ನ ಅಥವಾ ಡೈಯಲ್‌ ಮಾಡಿ ವಾಯಿಸ್‌ ಕರೆ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ.

ಫೋನ್‌

ಇನ್ನು ಜಿಯೋ ಫೋನ್‌ ಬಿಡುಗಡೆಯೊಂದಿಗೆ ಭಾರತದಲ್ಲಿ ಈ KioOS ಓಎಸ್‌ ಬಹಳ ಜನಪ್ರಿಯವಾಯಿತು. ಜಿಯೋ ಫೋನ್‌ ಸೇರಿದಂತೆ ಪ್ರಪಂಚದಾದ್ಯಂತದ ಇತರ ಕೆಲವು ಫೀಚರ್ ಫೋನ್‌ಗಳಲ್ಲಿ KioOS ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡುತ್ತಾರೆ. ಹಾಗೆಯೇ ಜಿಯೋ ಸಂಸ್ಥೆಯಿಂದ ಬರಲಿರುವ ಹೊಸ ಜಿಯೋಫೋನ್ ನೆಕ್ಸ್ಟ್ ಫೋನ್‌ ಖರೀದಿಸಲು ಸಜ್ಜಾಗಿರುವ ಗ್ರಾಹಕರು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೇ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 ಗೋ ಎಡಿಶನ್‌ನಲ್ಲಿ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ನಿಶ್ಚಿಂತೆಯಿಂದ ಜಿಯೋಫೋನ್ ನೆಕ್ಸ್ಟ್ ಖರೀದಿಸಬಹುದು

ನಿಶ್ಚಿಂತೆಯಿಂದ ಜಿಯೋಫೋನ್ ನೆಕ್ಸ್ಟ್ ಖರೀದಿಸಬಹುದು

ಬಿಡುಗಡೆಗೆ ಸಜ್ಜಾಗಿರುವ ಹೊಸ ಜಿಯೋಫೋನ್ ನೆಕ್ಸ್ಟ್ ಫೋನ್‌ ಖರೀದಿಸಲು ಸಜ್ಜಾಗಿರುವ ಗ್ರಾಹಕರು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೇ ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 ಗೋ ಎಡಿಶನ್‌ನಲ್ಲಿ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆಂಡ್ರಾಯ್ಡ್ ಓಎಸ್‌ಗೂ ಮತ್ತು KioOS ಓಎಸ್‌ಗೂ ಸಾಕಷ್ಟು ಭಿನ್ನತೆಗಳಿವೆ. KioOS ಓಎಸ್‌ ಬರೀ ಫೀಚರ್ ಫೋನ್‌ಗಳಿಗಾಗಿ ಬಳಕೆ ಮಾಡಲಾಗುತ್ತದೆ. ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳಿಗಾಗಿ ಇದೆ.

ಜಿಯೋ ಫೋನ್ ನೆಕ್ಟ್ ಫೀಚರ್ಸ್‌

ಜಿಯೋ ಫೋನ್ ನೆಕ್ಟ್ ಫೀಚರ್ಸ್‌

ಆನ್‌ಲೈನ್‌ ಲೀಕ್ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೋಡೆಮ್‌

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ 64-ಬಿಟ್, ಕ್ವಾಡ್ ಕೋರ್ ಕ್ವಾಲ್ಕಮ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ಫೀಚರ್

ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆದ್ದರೆ, ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋ ಫೀಚರ್ ಹೊಂದಿರುವ ಹೊಸ ವರ್ಷನ್ ಪ್ರಿ ಇನ್ಸ್‌ಟಾಲ್ ಆಗಿ ಬರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೇಳಿಕೊಂಡಿದೆ

ರಿಲಯನ್ಸ್ ಕಂಪನಿ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಕೈಗೆಟುಕುವ ದರದಲ್ಲಿ ನೀಡಲಿದೆ ಎಂದು ಹೇಳಲಾಗುತ್ತಿದೆಯಾದರೂ, ನಿಖರವಾಗಿ ಅದರ ಬೆಲೆ ಎಷ್ಟಿರಲಿದೆ ಎಂಬುದನ್ನು ಕಂಪನಿಯೂ ಇದುವರೆಗೂ ಮಾಹಿತಿ ನೀಡಿಲ್ಲ. ಭಾರತ ಮಾತ್ರವಲ್ಲದೇ ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಲಿದೆ ಎಂದು ಜಿಯೋ ಹೇಳಿಕೊಂಡಿದೆ. ಕೆಲವು ಟಿಪ್ಸ ಸ್ಟಾರ್‌ಗಳ ಪ್ರಕಾರ, ಈ ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಬೆಲೆ ಅಂದಾಜು 3,499 ರೂ. ಇರಬಹುದು ಎಂದು ಹೇಳಲಾಗುತ್ತದೆ. ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ.

Best Mobiles in India

English summary
JioPhone KaiOS Loses These Few Features of Google.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X