ಜಿಯೋದಿಂದ ಎರಡು ಹೊಸ ಪ್ಲ್ಯಾನ್‌; ಡಬಲ್ ಪ್ರಯೋಜನ!

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಆಕರ್ಷಕ ಯೋಜನೆಗಳ ಮೂಲಕ ಗ್ರಾಹಕ ಬಳಗವನ್ನು ಹೆಚ್ಚಿಸಿಕೊಂಡಿದೆ. ಮುಖ್ಯವಾಗಿ ಸಂಸ್ಥೆಯ ಕೆಲವು ಯೋಜನೆಗಳು ದೈನಂದಿನ ಡೇಟಾ, ಅನಿಯಮಿತ ವಾಯಿಸ್‌ ಕರೆ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯಗಳಿಂದ ಗಮನ ಸೆಳೆದಿವೆ. ಇದೀಗ ಜಿಯೋ ಟೆಲಿಕಾಂ ತನ್ನ ಜಿಯೋಫೋನ್ ಪ್ರಿಪೇಯ್ಡ್ ಯೋಜನೆಗಳಿಗಾಗಿ 'ಬೈ 1, ಗೆಟ್ 1 ಫ್ರೀ' ಆಫರ್ ಘೋಷಿಸಿದ ಕೆಲವೇ ದಿನಗಳಲ್ಲಿ ರಿಲಯನ್ಸ್ ಜಿಯೋ ಜಿಯೋಫೋನ್ ಬಳಕೆದಾರರಿಗಾಗಿ 100ರೂ. ಪ್ರೈಸ್‌ನೊಳಗೆ ಹೊಸ ಆಲ್ ಇನ್ ಒನ್ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ನೂತನವಾಗಿ 39ರೂ ಮತ್ತು 69ರೂ ಬೆಲೆಯ ಎರಡು ಜಿಯೋಫೋನ್‌ ಪ್ರೀಪೇಯ್ಡ್‌ ಯೋಜನೆಗಳನ್ನು ಲಾಂಚ್ ಮಾಡಿದೆ. ಈ ಎರಡು ಯೋಜನೆಗಳು 14 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿವೆ. ಇದರೊಂದಿಗೆ ವಾಯಿಸ್‌ ಕರೆ ಸೌಲಭ್ಯ ಹಾಗೂ ಡೇಟಾ ಪ್ರಯೋಜನವನ್ನು ಒಳಗೊಂಡಿವೆ. ಹಾಗಾದರೇ ಜಿಯೋದ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 39ರೂ. ಪ್ರೀಪೇಯ್ಡ್ ಯೋಜನೆ

ಜಿಯೋ 39ರೂ. ಪ್ರೀಪೇಯ್ಡ್ ಯೋಜನೆ

ಜಿಯೋ 39ರೂ. ಪ್ರೀಪೇಯ್ಡ್ ಯೋಜನೆಯು 100 ಎಂಬಿ ಹೈಸ್ಪೀಡ್ ಡೇಟಾ ಪ್ರಯೋಜನ ಹೊಂದಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದ್ದು, ಒಟ್ಟು 14 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಈ ಯೋಜನೆಯು 14 ದಿನಗಳವರೆಗೆ 1400 ಎಂಬಿ ಡೇಟಾವನ್ನು ಒದಗಿಸುತ್ತದೆ. ನಿಗದಿತ ಹೆಚ್ಚಿನ ವೇಗದ ಡೇಟಾವನ್ನು ಖಾಲಿಯಾದ ನಂತರ ವೇಗವನ್ನು 64 ಕೆಬಿಪಿಎಸ್‌ಗೆ ಇಳಿಸುತ್ತದೆ.

ಜಿಯೋ 69ರೂ. ಪ್ರೀಪೇಯ್ಡ್ ಯೋಜನೆ

ಜಿಯೋ 69ರೂ. ಪ್ರೀಪೇಯ್ಡ್ ಯೋಜನೆ

ಜಿಯೋ 69ರೂ. ಪ್ರೀಪೇಯ್ಡ್ ಯೋಜನೆಯು 100 ಎಂಬಿ ಹೈಸ್ಪೀಡ್ ಡೇಟಾ ಪ್ರಯೋಜನ ಹೊಂದಿದೆ. ಹಾಗೆಯೇ ಟ್ರೂಲೀ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದ್ದು, ಒಟ್ಟು 14 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಂಡಿದೆ. ಈ ಯೋಜನೆಯು ಪ್ರತಿದಿನ 0.5 GB ಡೇಟಾ ಸೌಲಭ್ಯ ಹೊಂದಿದ್ದು, 14 ದಿನಗಳವರೆಗೆ 7GB ಡೇಟಾವನ್ನು ಒದಗಿಸುತ್ತದೆ. ನಿಗದಿತ ಹೆಚ್ಚಿನ ವೇಗದ ಡೇಟಾವನ್ನು ಖಾಲಿಯಾದ ನಂತರ ವೇಗವನ್ನು 64 ಕೆಬಿಪಿಎಸ್‌ಗೆ ಇಳಿಸುತ್ತದೆ.

ಫೌಂಡೇಶನ್

ಸದ್ಯದ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಜಿಯೋ ಯೋಜನೆಗಳನ್ನು ರೀಚಾರ್ಜ್ ಮಾಡಲು ಸಾಧ್ಯವಾಗದ ಜಿಯೋಫೋನ್ ಬಳಕೆದಾರರಿಗೆ ತಿಂಗಳಿಗೆ 300 ಉಚಿತ ನಿಮಿಷಗಳ ಹೊರಹೋಗುವ ಕರೆಗಳನ್ನು ನೀಡುವುದಾಗಿ ಜಿಯೋ ಘೋಷಿಸಿದೆ. ರಿಲಯನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಘೋಷಿಸಲಾದ ಉಪಕ್ರಮವು ಸಾಂಕ್ರಾಮಿಕ ರೋಗದ ಸಂಪೂರ್ಣ ಅವಧಿಗೆ ಮೇಲೆ ತಿಳಿಸಿದ ಜಿಯೋ ಬಳಕೆದಾರರಿಗೆ ದಿನಕ್ಕೆ 10 ನಿಮಿಷಗಳನ್ನು ನೀಡುತ್ತದೆ.

ಪ್ರಿಪೇಯ್ಡ್

ಹಾಗೆಯೇ ಜಿಯೋದ ಬೈ 1 ಗೆಟ್ 1 ಉಚಿತ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಯೋಜನೆಗಳು ಕ್ರಮವಾಗಿ ಬೆಲೆ 75ರೂ, 125ರೂ, 175ರೂ, 155ರೂ ಮತ್ತು 185ರೂ. ಆಗಿವೆ. ಎಲ್ಲಾ ಯೋಜನೆಗಳು 28 ದಿನಗಳ ಮಾನ್ಯತೆಯನ್ನು ಹೊಂದಿವೆ ಮತ್ತು ಕ್ರಮವಾಗಿ 0.1GB, 0.5GB, 1GB ಮತ್ತು 2GB ಡೇಟಾವನ್ನು ಪಡೆದಿವೆ. 75ರೂ. ಪ್ರಿಪೇಯ್ಡ್ ಯೋಜನೆ ದಿನಕ್ಕೆ 50 ಎಸ್‌ಎಂಎಸ್ ನೀಡಿದರೆ 25ರೂ. ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ 300 ಎಸ್‌ಎಂಎಸ್ ನೀಡುತ್ತದೆ. 155ರೂ. ಮತ್ತು 185ರೂ. ಯೋಜನೆಯು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಹೆಚ್ಚಿನ ವೇಗದ ಡೇಟಾದ ನಂತರ, ಮೇಲೆ ತಿಳಿಸಿದ ಎಲ್ಲಾ ಯೋಜನೆಗಳಲ್ಲಿನ ವೇಗವನ್ನು 64 ಕೆಬಿಪಿಎಸ್‌ಗೆ ಇಳಿಸಲಾಗುತ್ತದೆ.

Best Mobiles in India

English summary
These newly introduced JioPhone plans have a validity of 14 days and offer data and calling benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X