JioPhone Next ದೀಪಾವಳಿಗೆ ಲಭ್ಯ!..ಬೆಲೆ ಕೇಳಿ ಮೊಬೈಲ್‌ ಮಾರುಕಟ್ಟೆ ಗಡಗಡ!

|

ಜಿಯೋ ಮತ್ತು ಗೂಗಲ್ ಸಹಯೋಗದಲ್ಲಿ ಜಂಟಿಯಾಗಿ ವಿನ್ಯಾಸಗೊಳಿಸಲಾದ ಬಹುನಿರೀಕ್ಷಿತ ಮೇಡ್-ಫಾರ್-ಇಂಡಿಯಾ ಸ್ಮಾರ್ಟ್‌ಫೋನ್ ಆದ ಜಿಯೋಫೋನ್ ನೆಕ್ಸ್ಟ್ ಇದೇ ದೀಪಾವಳಿಯಿಂದ ಅಂಗಡಿಗಳಲ್ಲಿ ಲಭ್ಯವಿರಲಿದ್ದು, ದೇಶದಲ್ಲಿ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ ಎಂದು ಜಿಯೋ ಘೋಷಿಸಿವೆ. 1,999ರೂ. ಪ್ರಾರಂಭಿಕ ಬೆಲೆ ಹಾಗೂ ಉಳಿದ ಮೊತ್ತವನ್ನು 18/24 ತಿಂಗಳುಗಳಲ್ಲಿ ಸುಲಭ EMI ಮೂಲಕ ಪಾವತಿಸುವ ಆಯ್ಕೆಯೊಂದಿಗೆ ಇದು ಪ್ರಪಂಚದಾದ್ಯಂತ ಅತ್ಯಂತ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್ ಆಗಲಿದೆ.

JioPhone Next ದೀಪಾವಳಿಗೆ ಲಭ್ಯ!..ಬೆಲೆ ಕೇಳಿ ಮೊಬೈಲ್‌ ಮಾರುಕಟ್ಟೆ ಗಡಗಡ!

ಈ ವರ್ಗದಲ್ಲಿರುವ ಸಾಧನಕ್ಕಾಗಿ ಇದೇ ಮೊದಲ ಬಾರಿಗೆ ಈ ರೀತಿಯ ಅನನ್ಯ ಹಣಕಾಸು ಆಯ್ಕೆಯನ್ನು ಪರಿಚಯಿಸಲಾಗುತ್ತಿದ್ದು, ಆ ಮೂಲಕ ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ಇದರ ಪ್ರಯೋಜನವನ್ನು ವಿಸ್ತರಿಸಲಾಗುತ್ತಿದೆ. ಈ ವರ್ಗದ ಯಾವುದೇ ಫೋನ್‌ನಲ್ಲಿ ಅಭೂತಪೂರ್ವವೆನಿಸುವ ವೈಶಿಷ್ಟ್ಯಗಳೊಂದಿಗೆ, ದೇಶಾದ್ಯಂತ ರಿಲಯನ್ಸ್ ರಿಟೇಲ್‌ನ ವ್ಯಾಪಕವಾದ ಜಿಯೋಮಾರ್ಟ್ ಡಿಜಿಟಲ್ ರಿಟೇಲ್ ಲೊಕೇಶನ್‌ಗಳಲ್ಲಿ ಜಿಯೋಫೋನ್ ನೆಕ್ಸ್ಟ್ ಲಭ್ಯವಿರಲಿದೆ.

ಜಿಯೋಫೋನ್ ನೆಕ್ಸ್ಟ್‌ 1,999ರೂ ಮತ್ತು ಸುಲಭ EMIನಲ್ಲಿ ದೀಪಾವಳಿಯಿಂದ ಲಭ್ಯ

ಯಾವುದೇ ಸ್ಮಾರ್ಟ್‌ಫೋನ್‌ ಹೋಲಿಕೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆ:

* ಕೇವಲ ₹1,999ಕ್ಕೆ ಜಿಯೋಫೋನ್ ನೆಕ್ಸ್ಟ್ ಅನ್ನು ಪಡೆಯಿರಿ
* ಆಕರ್ಷಕ EMIನಲ್ಲಿ ಉಳಿದ ಮೊತ್ತವನ್ನು ಪಾವತಿಸಿ

ಜಿಯೋಫೋನ್ ನೆಕ್ಸ್ಟ್‌ ಗೂಗಲ್‌ನೊಂದಿಗೆ ನಿರ್ಮಿತ:
* ಜಿಯೋಫೋನ್‌ಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾದ ಪ್ರಗತಿ ಓಎಸ್‌ನಿಂದ ಸಶಕ್ತ
* ಜಿಯೋಫೋನ್ ನೆಕ್ಸ್ಟ್‌ನಲ್ಲಿ ತನ್ನ ವರ್ಗದಲ್ಲೇ ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಪಡೆದಿದೆ.

ಜಿಯೋಫೋನ್ ನೆಕ್ಸ್ಟ್‌ನ ಕೆಲವು ಪ್ರಮುಖ ಅಂಶಗಳು:
- 10 ಭಾರತೀಯ ಭಾಷೆಗಳ ಪೈಕಿ ನಿಮ್ಮ ಆಯ್ಕೆಯ ಭಾಷೆಯಲ್ಲಿ ಸುಲಭವಾಗಿ ಮಾಹಿತಿ ಪಡೆಯಿರಿ ಮತ್ತು ಬಳಸಿರಿ - ಬಟನ್‌ನ ಟ್ಯಾಪ್‌ ಮಾಡುವ ಮೂಲಕ, ಈಗ ಪರದೆಯ ಮೇಲೆ ಇರುವುದನ್ನು ಅನುವಾದಿಸಿ ಮತ್ತು ಅದನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಕೇಳಿ

- ಟ್ರಾನ್ಸ್‌ಲೇಟ್ ನೌ - ಯಾವುದೇ ಚಿತ್ರ ಅಥವಾ ಮೊಬೈಲ್ ಸ್ಕ್ರೀನ್ ಅನ್ನು (ಯಾವುದೇ ಆಪ್‌ನಲ್ಲಿ) ನಿಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿ

- ರೀಡ್ ಅಲೌಡ್ - ನಿಮ್ಮ ಮೊಬೈಲ್ ಪರದೆಯಲ್ಲಿರುವ ಯಾವುದೇ ಪಠ್ಯವನ್ನು ನಿಮ್ಮ ಭಾಷೆಯಲ್ಲಿ ಗಟ್ಟಿಯಾಗಿ ಓದಿಸಿ

- ಅತ್ಯುತ್ತಮ ಕ್ಯಾಮೆರಾ - ಬಿಲ್ಟ್-ಇನ್ ಫಿಲ್ಟರ್‌ಗಳು ಮತ್ತು ಉತ್ಕೃಷ್ಟ ನೈಟ್ ಫೋಟೋಗ್ರಫಿ

- ವಾಯ್ಸ್ ಫಸ್ಟ್ ಅನುಭವ - ನಿಮ್ಮ ಭಾಷೆಯಲ್ಲಿ ನಿಮ್ಮ ಜಿಯೋಫೋನ್‌ ನೆಕ್ಸ್ಟ್ ಜೊತೆ ಮಾತನಾಡುವ ಮೂಲಕ ಹೆಚ್ಚಿನ ಕೆಲಸಗಳನ್ನು ಸಾಧಿಸಿ

JioPhone Next ದೀಪಾವಳಿಗೆ ಲಭ್ಯ!..ಬೆಲೆ ಕೇಳಿ ಮೊಬೈಲ್‌ ಮಾರುಕಟ್ಟೆ ಗಡಗಡ!

ಜಿಯೋಫೋನ್ ನೆಕ್ಸ್ಟ್‌ನ ಲಭ್ಯತೆ:

* ನಿಮ್ಮ ಜಿಯೋಫೋನ್‌ ನೆಕ್ಸ್ಟ್‌ಗಾಗಿ ನೋಂದಾಯಿಸಿಕೊಳ್ಳಲು
* ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್‌ ಅನ್ನು ಭೇಟಿಮಾಡಿ
* ಅಥವಾ WWW.JIO.COM/NEXTಗೆ ಭೇಟಿ ನೀಡಿ
* ಅಥವಾ ವಾಟ್ಸಾಪ್‌ನಲ್ಲಿ - 70182-70182 ಸಂಖ್ಯೆಗೆ 'HI' ಎಂದು ಕಳುಹಿಸಿ

- ದೃಢೀಕರಣ ಬಂದ ನಂತರ, ನಿಮ್ಮ ಜಿಯೋಫೋನ್ ನೆಕ್ಸ್ಟ್ ಅನ್ನು ಪಡೆದುಕೊಳ್ಳಲು ಹತ್ತಿರದ ಜಿಯೋಮಾರ್ಟ್ ರೀಟೇಲರ್‌ ಅನ್ನು ಭೇಟಿಮಾಡಿ
- ಉತ್ಪನ್ನದ ವೈಶಿಷ್ಟ್ಯಗಳು ಮತ್ತು ಮೌಲ್ಯದ ವಿವರಗಳು ಇಲ್ಲಿವೆ. WWW.JIO.COM/NEXT

ಎಲ್ಲ ಭಾರತೀಯರಿಗೂ ಸಮಾನ ಅವಕಾಶ ಹಾಗೂ ಡಿಜಿಟಲ್ ತಂತ್ರಜ್ಞಾನಕ್ಕೆ ಸಮಾನ ಪ್ರವೇಶ ನೀಡುವ ಆಶಯ:

1. ಇದೇ ಮೊದಲ ಬಾರಿಗೆ, ಪ್ರವೇಶ ಮಟ್ಟದ ವರ್ಗದಲ್ಲಿರುವ ಫೋನ್ ಫೈನಾನ್ಸಿಂಗ್ ಸೌಲಭ್ಯವನ್ನು ಪಡೆಯುತ್ತಿದೆ.

2. ಇದು ಪ್ರಾರಂಭಿಕ ಬೆಲೆಯನ್ನು ಅತ್ಯಂತ ಸುಲಭವಾಗಿ ಕೈಗೆಟುಕುವಂತೆ ಮಾಡುತ್ತದೆ ಮತ್ತು ಫೀಚರ್ ಫೋನ್ ಬೆಲೆಗೆ ಬಹುತೇಕ ಸಮಾನವಾಗಿಸುತ್ತದೆ.

3. ಜಿಯೋಮಾರ್ಟ್ ಡಿಜಿಟಲ್‌ನ 30,000ಕ್ಕೂ ಹೆಚ್ಚು ರೀಟೇಲ್ ಪಾಲುದಾರರ ಜಾಲವು ಜಿಯೋಫೋನ್ ನೆಕ್ಸ್ಟ್ ಅನ್ನು ಕಾಗದರಹಿತ ಡಿಜಿಟಲ್ ಹಣಕಾಸು ಆಯ್ಕೆಯೊಂದಿಗೆ ಒದಗಿಸಲು ಸಶಕ್ತವಾಗಿದ್ದು, ಇದು ದೇಶದ ದೂರದ ಮೂಲೆ ಮೂಲೆಗಳವರೆಗೂ ವಿಸ್ತರಿಸಿರುವುದರಿಂದ ಭೌಗೋಳಿಕವಾಗಿ ಭಾರತೀಯರೆಲ್ಲರಿಗೂ ಪ್ರವೇಶಾವಕಾಶವನ್ನು ನೀಡುತ್ತದೆ.

4. ಜಿಯೋಮಾರ್ಟ್ ಡಿಜಿಟಲ್ ಈ ಚಿಲ್ಲರೆ ಪಾಲುದಾರರನ್ನು ಸಬಲರನ್ನಾಗಿಸುತ್ತಿದೆ ಹಾಗೂ ಜಿಯೋಮಾರ್ಟ್ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಅವರ ಮಾರಾಟ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಜಿಯೋಫೋನ್‌ ನೆಕ್ಸ್ಟ್‌ನ ಕೆಲವು ಆಕರ್ಷಕ ಫೀಚರ್ಸ್‌ಗಳು:

JioPhone Next ದೀಪಾವಳಿಗೆ ಲಭ್ಯ!..ಬೆಲೆ ಕೇಳಿ ಮೊಬೈಲ್‌ ಮಾರುಕಟ್ಟೆ ಗಡಗಡ!

1. ವಾಯ್ಸ್ ಫಸ್ಟ್ ಸಾಮರ್ಥ್ಯಗಳು
ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

2. ರೀಡ್ ಅಲೌಡ್
ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

3. ಟ್ರಾನ್ಸ್‌ಲೇಟ್ ನೌ
ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

4. ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ
ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ
ಕ್ಯಾಮೆರಾ ಒಳಗೊಂಡಿದೆ.

5. ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

6. ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು
ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

7. ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ
ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

Best Mobiles in India

English summary
JioPhone Next Available From Diwali at Rs.1,999 And Easy EMI. JioPhone Next Price In India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X