ಎಂಟ್ರಿ ಲೆವೆಲ್‌ ಫೋನ್‌ ಖರೀದಿಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಜಿಯೋ!

|

ರಿಲಯನ್ಸ್‌ ಜಿಯೋ ಪರಿಚಯಿಸಿರುವ ಇತ್ತೀಚಿನ ಜಿಯೋಫೋನ್‌ ನೆಕ್ಸ್ಟ್‌ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ ವಲಯದಲ್ಲಿ ಭಾರೀ ಸದ್ದು ಮಾಡಿದೆ. ಬೆಲೆಯೊಂದಿಗೆ ಅಷ್ಟೇ ಅಲ್ಲದೇ, ಎಂಟ್ರಿ ಲೆವೆಲ್‌ ಫೋನ್‌ ಆಗಿದ್ದರೂ ಕೆಲವೊಂದು ಆಕರ್ಷಕ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಇದೀಗ ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್ 6,499 ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಬಿಡುಗಡೆಯಾಗಿತ್ತು.

ಎಕ್ಸ್‌ಚೇಂಜ್

ಹೌದು, ಜಿಯೋಫೋನ್‌ ನೆಕ್ಸ್ಟ್‌ (JioPhone Next) ಸದ್ಯ ಅಮೆಜಾನ್ ಇಂಡಿಯಾದಲ್ಲಿ 4,599 ರೂ. ಗಳಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6,499 ರೂ. ದರದಲ್ಲಿ ಲಾಂಚ್ ಆಗಿತ್ತು. ಎಕ್ಸ್‌ಚೇಂಜ್ ಆಫರ್‌ನ ಅಡಿಯಲ್ಲಿ, ಬಳಕೆದಾರರು ಈ ಫೋನ್‌ ಅನ್ನು 4,499ರೂ. ಗೆ ಮಾತ್ರ ಪಡೆಯಬಹುದು ಎಂದು ಜಿಯೋ ಘೋಷಿಸಿತ್ತು. ಆದಾಗ್ಯೂ, ಅಮೆಜಾನ್ ಇಂಡಿಯಾದಲ್ಲಿ, ಆಕರ್ಷಕ ರಿಯಾಯಿತಿಯಲ್ಲಿ ಜಿಯೋಫೋನ್‌ ನೆಕ್ಸ್ಟ್‌ ಅನ್ನು ಪಡೆಯಲು ಬಳಕೆದಾರರು ತಮ್ಮ ಹಳೆಯ ಫೋನ್‌ ಅನ್ನು ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ.

ಸೇವೆಗಳನ್ನು

ಸ್ಮಾರ್ಟ್‌ಫೋನ್‌ಗಳ ತಯಾರಿಕೆಯ ವೆಚ್ಚ ಹೆಚ್ಚಾದಾಗಲೂ ಜಿಯೋಫೋನ್‌ ನೆಕ್ಸ್ಟ್‌ ಈಗ 5,000 ರೂ. ಗಿಂತ ಕಡಿಮೆಯಿರುವುದರಿಂದ ಬಳಕೆದಾರರಿಗೆ ಇದು ಉತ್ತಮ ಡೀಲ್‌ ಎನ್ನಬಹುದಾಗಿದೆ. 4G ಸೇವೆಗಳನ್ನು ಬಳಸಲು ಪ್ರೇರೇಪಿಸುವ ಉದ್ದೇಶದಿಂದ ಜಿಯೋಫೋನ್‌ ನೆಕ್ಸ್ಟ್‌ಅನ್ನು ರಿಲಯನ್ಸ್ ಜಿಯೋ ಪ್ರಾರಂಭಿಸಿದೆ. ಜಿಯೋಫೋನ್‌ ನೆಕ್ಸ್ಟ್ ಕ್ಯಾರಿಯರ್ ಲಾಕ್ ಆಗಿದೆ ಎಂಬುದನ್ನು ಗಮನಿಸಿ. ಇದರರ್ಥ ಬಳಕೆದಾರರು ಈ ಫೋನಿನಲ್ಲಿ ಮತ್ತೊಂದು ಕಂಪನಿಯ ಸಿಮ್ ಕಾರ್ಡ್ ಅನ್ನು ಸೇರಿಸಲು ಸಾಧ್ಯವಿಲ್ಲ. ಇದು ಭಾರತೀಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಪ್ರಗತಿ ಓಎಸ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಮೆಗಾ

ಜಿಯೋಫೋನ್‌ ನೆಕ್ಸ್ಟ್‌ 3500 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಆದರೆ ನಾವು ಸಾಧನವನ್ನು ಪರಿಶೀಲಿಸದ ಕಾರಣ, ತನ್ನ ವರ್ಗದಲ್ಲೇ ಉತ್ತಮ ಬ್ಯಾಟರಿ ಬ್ಯಾಕಪ್ ಇದಾಗಿದೆ ಎನ್ನಬಹುದು. ಇನ್ನು ಈ ಫೋನ್ ಸಿಂಗಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಹಿಂಭಾಗದಲ್ಲಿ 13 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜಿಯೋಫೋನ್‌ ನೆಕ್ಸ್ಟ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 215 SoC (Qualcomm Snapdragon 215 SoC) ಓಎಸ್‌ ಸಪೋರ್ಟ್‌ ಪಡೆದಿದೆ. ಇದರೊಂದಿಗೆ 2GB RAM ಮತ್ತು 32GB ಯ ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಒಳಗೊಂಡಿದೆ. ಕೆಲವು ಪ್ರಮುಖ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಾಯ್ಸ್ ಫಸ್ಟ್

ವಾಯ್ಸ್ ಫಸ್ಟ್

ವಾಯ್ಸ್ ಫಸ್ಟ್ ಸಾಮರ್ಥ್ಯಗಳು ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

ರೀಡ್ ಅಲೌಡ್ ಸೌಲಭ್ಯ

ರೀಡ್ ಅಲೌಡ್ ಸೌಲಭ್ಯ

ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

ಟ್ರಾನ್ಸ್‌ಲೇಟ್ ನೌ ಆಯ್ಕೆ

ಟ್ರಾನ್ಸ್‌ಲೇಟ್ ನೌ ಆಯ್ಕೆ

ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ

ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ

ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.

ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ

ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ

ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು

ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು

ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ

ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ

ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

ಜಿಯೋ ಫೋನ್ 75ರೂ. ರೀಚಾರ್ಜ್

ಜಿಯೋ ಫೋನ್ 75ರೂ. ರೀಚಾರ್ಜ್

ಇದು ಜಿಯೋ ಫೋನ್ ಗ್ರಾಹಕರಿಗೆ ಅತ್ಯಂತ ಮೂಲಭೂತ ಯೋಜನೆಯಾಗಿದೆ ಆದರೆ ಈಗ ಇದು ಕೇವಲ 23 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ರೂ 75 ಜಿಯೋ ಫೋನ್ ರೀಚಾರ್ಜ್ ಯೋಜನೆಯು ಒಟ್ಟು 2.5GB ಡೇಟಾವನ್ನು (0.1GB/ ದಿನ + 200 MB), ಉಚಿತ ಧ್ವನಿ ಕರೆಗಳು ಮತ್ತು 50 ಪಠ್ಯ ಸಂದೇಶಗಳನ್ನು ನೀಡುತ್ತದೆ. ಜಿಯೋ ತನ್ನ ಅಪ್ಲಿಕೇಶನ್‌ಗಳಾದ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಹೆಚ್ಚಿನವುಗಳಿಗೆ ಗ್ರಾಹಕರಿಗೆ ಪೂರಕ ಪ್ರವೇಶವನ್ನು ಒದಗಿಸುತ್ತಿದೆ.

ಜಿಯೋ ಫೋನ್ 91ರೂ. ರೀಚಾರ್ಜ್

ಜಿಯೋ ಫೋನ್ 91ರೂ. ರೀಚಾರ್ಜ್

ಹಿಂದಿನ ರೂ 75 ಪ್ಲಾನ್ ಈಗ ಜಿಯೋ ಫೋನ್ ಗ್ರಾಹಕರಿಗೆ ರೂ 91 ಆಗಿದೆ. 28 ದಿನಗಳವರೆಗೆ ಮಾನ್ಯವಾಗಿರುವ ಈ ಜಿಯೋ ಫೋನ್ ರೀಚಾರ್ಜ್ ಯೋಜನೆಯು ಒಟ್ಟು 3GB ಡೇಟಾವನ್ನು (0.1GB/ ದಿನ + 200MB), ಉಚಿತ ಧ್ವನಿ ಕರೆಗಳು ಮತ್ತು 50 ಪಠ್ಯ ಸಂದೇಶಗಳನ್ನು ನೀಡುತ್ತದೆ. ಜಿಯೋ ತನ್ನ ಅಪ್ಲಿಕೇಶನ್‌ಗಳಾದಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಹೆಚ್ಚಿನವುಗಳಿಗೆ ಗ್ರಾಹಕರಿಗೆ ಪೂರಕ ಪ್ರವೇಶವನ್ನು ಒದಗಿಸುತ್ತಿದೆ.

Best Mobiles in India

English summary
JioPhone Next Available With Huge Price Cut: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X