ಏನಿದು ಡಿವೈಸ್‌ ಲಾಕ್‌ ಫೀಚರ್‌? ಡಿವೈಸ್‌ ಲಾಕ್‌ ಫೀಚರ್‌ ವಿಶೇಷತೆ ಏನು?

|

ಬಹು ನಿರೀಕ್ಷಿತ ಜಿಯೋಫೋನ್‌ ನೆಕ್ಸ್ಟ್‌ ಈಗಾಗಲೇ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಜಿಯೋ ಮತ್ತು ಗೂಗಲ್‌ ಸಹಯೋಗದಲ್ಲಿ ತಯಾರಾಗಿರುವ ಈ ಸ್ಮಾರ್ಟ್‌ಫೋನ್‌ ಅಗ್ಗದ ಬೆಲೆ ಹಾಗೂ ವಿಶೇಷ ಫೀಚರ್‌ಗಳ ಕಾರಣಕ್ಕೆ ಸಾಕಷ್ಟು ಸಂಚಲನ ಮೂಡಿಸಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ಪ್ರಿಯರ ಅನುಕೂಲಕ್ಕಾಗಿ ಜಿಯೋ ಕಂಪೆನಿ ಹಲವು ಆಯ್ಕೆಯ ಇಎಂಐ ಆಯ್ಕೆಗಳನ್ನು ಸಹ ನೀಡಿದೆ. ಇದರಿಂದ ಜಿಯೋಫೋನ್‌ನೆಕ್ಸ್ಟ್‌ ಮಾರುಕಟ್ಟೆಯಲ್ಲಿ ಭಾರಿ ಸೌಂಡ್‌ ಮಾಡ್ತಿದೆ.

ಜಿಯೋಫೋನ್‌

ಹೌದು, ಜಿಯೋಫೋನ್‌ ನೆಕ್ಸ್ಟ್‌ಸುಲಭ ಇಎಂಐ ಆಯ್ಕೆಗಳ ಕಾರಣದಿಂದ ಸಖತ್‌ ಸೌಂಡ್‌ ಮಾಡ್ತಿದೆ. ಅಗ್ಗದ ಬೆಲೆ ಹೊಂದಿದ್ದರೂ ಕೂಡ ಇಎಂಐ ಆಯ್ಕೆ ನೀಡಿರುವುದು ಇದರ ಮತ್ತೊಂದು ವಿಶೇಷ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಪ್ರಿಲೋಡ್‌ ಮಾಡಲಾಗಿರುವ ಲಾಕ್‌ ಫೀಚರ್‌ ಎಲ್ಲರ ಗಮನ ಸೆಳೆಯುತ್ತಿದೆ. ಏನಿದು ಲಾಕ್‌ ಫೀಚರ್‌ ಅನ್ನೊ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಇದೇ ಕಾರಣಕ್ಕೆ ನೀವು ಕೂಡ ಜಿಯೋಫೋನ್‌ ನೆಕ್ಸ್ಟ್‌ ಖರೀದಿಸುವ ಮುನ್ನ ಡಿವೈಸ್‌ ಲಾಕ್‌ ಫೀಚರ್‌ ಬಗ್ಗೆ ತಿಳಿಯುವುದು ಒಳ್ಳೆಯದು. ಹಾಗಾದ್ರೆ ಲಾಕ್‌ ಫೀಚರ್‌ ಅದರೆ ಏನು? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಫೋನ್‌ ನೆಕ್ಸ್‌

ಜಿಯೋಫೋನ್‌ನೆಕ್ಸ್‌ ಫೋನ್‌ ಖರೀದಿಸುವವರು ಗಮನಿಸಲೇಬೇಕಾದ ವಿಚಾರವೆಂದರೇ ಅದು ಲಾಕ್‌ಫೀಚರ್‌ ವಿಶೇಷ. ಜಿಯೋಫೋನ್‌ನೆಕ್ಸ್ಟ್‌ ಅನ್ನು ಯಾರು ಇಎಂಐ ಆಯ್ಕೆಯಲ್ಲಿ ಖರೀದಿಸುತ್ತಾರೋ ಅವರಿಗೆ ಮಾತ್ರ ಲಾಕ್‌ ಫೀಚರ್‌ ಲಭ್ಯವಿರಲಿದೆ. ಒಂದೇ ಭಾರಿ ಹಣಕೊಟ್ಟು ಖರೀದಿಸುವವರಿಗೆ ಲಾಕ್‌ಫೀಚರ್‌ ಲಭ್ಯವಿರುವುದಿಲ್ಲ. JioPhone Next ಫೋನ್ ಅನ್ನು EMI ಆಯ್ಕೆಯಲ್ಲಿ ಖರೀದಿಸಿದವರು ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡುತ್ತಿದ್ದಾರ ಅನ್ನೊದನ್ನ ಖಚಿತಪಡಿಸಿಕೊಳ್ಳಲು ಡಿವೈಸ್‌ ಲಾಕ್‌ ಫೀಚರ್‌ ಅನ್ನು ನೀಡಲಾಗಿದೆ.

ಜಿಯೋಫೋನ್‌ನೆಕ್ಸ್ಟ್‌

ಒಂದು ವೇಳೆ ಜಿಯೋಫೋನ್‌ನೆಕ್ಸ್ಟ್‌ ಖರೀದಿಸಿದ ಗ್ರಾಹಕರು ಸಮಯಕ್ಕೆ ಸರಿಯಾಗಿ ಇಎಂಐ ಪಾವತಿ ಮಾಡದಿದ್ದರೆ ಫೋನ್‌ ಬಳಸುವುದಕ್ಕೆ ಸಾಧ್ಯವಾಗದ ರೀತಿ ಡಿವೈಸ್‌ ಲಾಕ್ 'ಫೀಚರ್'ಮೂಲಕ ಲಾಕ್‌ ಆಗಲಿದೆ. ಈ ಫೀಚರ್ಸ್‌ ಅನ್ನು JioPhone ನೆಕ್ಸ್ಟ್‌ನಲ್ಲಿ ಮೀಸಲಾದ ಸಿಸ್ಟಮ್ ಅಪ್ಲಿಕೇಶನ್ ಮೂಲಕ ಕಾರ್ಯಗತಗೊಳಿಸಲಾಗಿರುತ್ತದೆ. ಇದು ಇಂಟರ್‌ಫೇಸ್‌ನಾದ್ಯಂತ "ಫೈನಾನ್ಸರ್ ಒದಗಿಸಿದ ಡಿವೈಸ್‌" ಬ್ಯಾನರ್‌ಗಳನ್ನು ಒಳಗೊಂಡಿರುತ್ತದೆ. ನೀವು ಪಾವತಿ ಮಾಡಿದರೆ ನಿಮ್ಮ ಫೋನ್‌ ನಿಮಗೆ ಪ್ರವೇಶ ನೀಡಲಿದೆ ಎಂಬ ಬರಹ ಕಾಣಿಸಿಕೊಳ್ಳಲಿದೆ.

ಪಾವತಿ

ಇಎಂಐ ಪಾವತಿ ಸರಿಯಾದ ಸಮಯಕ್ಕೆ ಪಾವತಿಯಾಗದ ಸಮಯದಲ್ಲಿ ಬ್ಯಾನರ್‌ಗಳು ಬಹು ಸ್ಥಳಗಳಲ್ಲಿ ಪಾಪ್ ಅಪ್ ಆಗುತ್ತದೆ. ನೀವು ಸಕಾಲಿಕ ಪಾವತಿಗಳನ್ನು ಮಾಡುತ್ತಿದ್ದರೂ ಕೆಲವೊಮ್ಮೆ ಈ ಬ್ಯಾನರ್‌ ಆಗಾಗ ಪಾಪ್‌ಆಪ್‌ ಆಗಲಿದೆ. ಅಕಾಲಿಕ ಪಾವತಿಗಳ ಸಂದರ್ಭದಲ್ಲಿ ಅಪ್ಲಿಕೇಶನ್ ಫೋನ್‌ನ ಸಂಪೂರ್ಣ ಲಾಕ್‌ ಮಾಡುತ್ತಾ ಅಥವಾ ಆಯ್ದ ಸೇವೆಗಳನ್ನು ನಿರ್ಬಂಧಿಸಲಾಗಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಹಣ ಪಾವತಿ ಮಾಡದೆ ಹೋದರೆ ನಿಮ್ಮ ಫೋನ್‌ ಲಾಕ್‌ ಆಗೋದು ಖಂಡಿತ.

ಫೋನ್‌

ಹಣ ಪಾವತಿ ಮಾಡದೇ ಹೋದರೆ ಫೋನ್‌ ಲಾಕ್‌ ಮಾಡುವ ಪ್ರಕ್ರಿಯೆ ಇದೇ ಮೋದಲಲ್ಲ. ಅಕಾಲಿಕ ಪಾವತಿಯ ಸಂದರ್ಭದಲ್ಲಿ ಕಂಪನಿಗಳು ತಮ್ಮ ಫೋನ್‌ಗಳಿಂದ ಬಳಕೆದಾರರನ್ನು ಲಾಕ್ ಮಾಡಲು ಸಹಾಯ ಮಾಡುವ ಸಾಲದಾತರಿಗಾಗಿ ಅಪ್ಲಿಕೇಶನ್ ಅನ್ನು ಗೂಗಲ್ ಸಹ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಈ ರೀತಿಯ ತಂತ್ರಜ್ಞಾನಗಳನ್ನು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇವೆ, ಅಲ್ಲಿ, ಸಾಧನವನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಬಳಕೆದಾರರು ಪಾವತಿ ಮಾಡದಿದ್ದರೆ, ಸ್ಮಾರ್ಟ್‌ಫೋನ್‌ ಅನ್ನು ಲಾಕ್ ಮಾಡಲಾಗುತ್ತದೆ.

ಜಿಯೋಫೋನ್‌ನೆಕ್ಸ್ಟ್

ಇನ್ನು ಜಿಯೋಫೋನ್‌ನೆಕ್ಸ್ಟ್ ಒಳಗೊಂಡಿರುವ ವಿಶೇಷ ಫೀಚರ್ಸ್‌ಗಳಲ್ಲಿ ಟ್ರಾನ್ಸ್‌ಲೇಟ್ ನೌ ಕೂಡ ಒಂದಾಗಿದೆ. ಈ ಫೀಚರ್ಸ್‌ ಮೂಲಕ ಯಾವುದೇ ಪರದೆಯ ಮೇಲಿನ ಬರಹವನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

ಜಿಯೋಫೋನ್‌ನೆಕ್ಸ್ಟ್‌

ಸದ್ಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವ ಜಿಯೋಫೋನ್‌ನೆಕ್ಸ್ಟ್‌ ಬೆಲೆ 6,499ರೂ. ಆಗಿದೆ. ಆದರೆ ಬಳಕೆದಾರರು ಇಎಂಐ ಆಯ್ಕೆಗಳ ಮೂಲಕ 501ರೂ. ಅನುಕೂಲಕರ ಶುಲ್ಕಗಳೊಂದಿಗೆ 1999ರೂ ಡೌನ್ ಪೇಮೆಂಟ್‌ ಮೂಲಕ ಖರೀದಿಸಬಹುದು. ಜೊತೆಗೆ ಇಎಂಐ ಆಯ್ಕೆಯಲ್ಲಿ ಖರೀದಿಸುವ ಗ್ರಾಹಕರು ವಾಯ್ಸ್‌ ಮತ್ತು ಡೇಟಾ ಸೇವೆಗಳನ್ನು ಒಳಗೊಂಡಿರುವ ಪ್ಲಾನ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

Best Mobiles in India

English summary
JioPhone Next Comes With Device Lock Feature: Company Could Disable Your Device.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X