Subscribe to Gizbot

ಜಿಯೋ ಫೋನಿನಲ್ಲಿ ಜಿಯೋ ಮಾತ್ರವೇ ಕಾರ್ಯನಿರ್ವಹಿಸುವುದಂತೆ!

Written By: Lekhaka

ಭಾರೀ ಸದ್ದು ಮಾಡಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಲಾಂಚ್ ಮಾಡಿದ್ದ ಜಿಯೋ ಫೋನ್ ಕುರಿತಂತೆ ಒಂದೊಂದೆ ಅಂಶಗಳು ಹೊರಬರುತ್ತಿವೆ. ಮೂಲಗಳ ಪ್ರಕಾರ ಜಿಯೋ ಫೋನ್ ಕೇವಲ ಜಿಯೋ ಸಿಮ್ ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಜಿಯೋ ಫೋನಿನಲ್ಲಿ ಜಿಯೋ ಮಾತ್ರವೇ ಕಾರ್ಯನಿರ್ವಹಿಸುವುದಂತೆ!

ಮತ್ತೊಂದು ಮೂಲಗಳ ಪ್ರಕಾರ ಎರಡು ಸಿಮ್ ಹಾಕಿಕೊಳ್ಳುವ ಜಿಯೋ ಫೋನ್ ನಲ್ಲಿ ಒಂದು 4G VoLTE ಸಫೋರ್ಟ್ ಮಾಡಿದರೆ ಮತ್ತೊಂದು ಬೇರೆ ಕಂಪನಿಯ 2G ಸಿಮ್ ಬಳಕೆಗೆ ಮುಕ್ತವಾಗಿರಲಿದೆ ಎನ್ನಲಾಗಿದೆ. ಆದರೆ ಇನ್ನು ಹಲವರು ಕೇಲವ ಜಿಯೋ ಸಿಮ್ ಮಾತ್ರವೇ ಇದರಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದು ಹೇಳುತ್ತಿದ್ದಾರೆ.

ಈ ಕುರಿತು ವರದಿ ಮಾಡಿರುವ ಗ್ಯಾಜೆಟ್ 360 ವೆಬ್ ಸೈಟ್, ಜಿಯೋ ಫೋನಿನಲ್ಲಿ ಕೇಲವ ಜಿಯೋ ಸಿಮ್ ಮಾತ್ರವೇ ವರ್ಕ್ ಆಗಲಿದ್ದು, ಬೇರೆ ಸಿಮ್ ಗಳನ್ನು ಇದರಲ್ಲಿ ಕಾರ್ಯನಿರ್ವಹಿಸದಂತೆ ವಿನ್ಯಾಸ ಮಾಡಲಾಗಿದೆ ಎಂದಿದೆ. ಅಲ್ಲದೇ ಇದು 4G VoLET ಫೋನ್ ಆಗಿರಲಿದ್ದು, ಬೇರೆ 3G-2G ನೆಟ್ ವರ್ಕ್ ಗಳಿಗೆ ಸಪೋರ್ಟ್ ಮಾಡುವುದಿಲ್ಲ.

ಆನ್‌ಲೈನಿನಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವವರಿಗೆ ಶಾಕ್ ಕೊಟ್ಟ ಆದಾಯ ತೆರಿಗೆ ಇಲಾಖೆ.!!

ದೇಶದಲ್ಲಿ ಸದ್ಯ ಜಿಯೋ ಮಾತ್ರವೇ 4G VoLET ಸೇವೆಯನ್ನು ನೀಡುತ್ತಿದೆ. ಆದರೆ ಏರ್ ಟೆಲ್ ದೇಶದ ಪ್ರಮುಖ ನಗರಗಳಲ್ಲಿ ಈ ಸೇವೆಯ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಲು ಮುಂದಾಗಿದೆ. ಆದರೂ ಸಹ ಈ ಪೋನಿನಲ್ಲಿ ಜಿಯೋ ಬಿಟ್ಟರೆ ಬೇರೆ ಇನ್ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವೆ ಇಲ್ಲ ಎನ್ನಲಾಗಿದೆ.

ಜಿಯೋ ಫೋನ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದ್ದು, ಆಗಸ್ಟ್ 24 ರಂದು ಪ್ರಿ ಬುಕಿಂಗ್ ಆರಂಭವಾಗಲಿದೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಈ ಫೋನ್ ಬಳಕೆದಾರರಿಗೆ ಆದ್ಯತೆಯ ಮೇಲೆ ದೊರೆಯಲಿದೆ.

ನೀವು ಈ ಫೋನ್ ಪಡೆಯಬೇಕು ಎಂದರೆ ಜಿಯೋ ಆಪ್ ಇಲ್ಲವೇ ಜಿಯೋ ಸ್ಟೋರಿಗೆ ಭೇಟಿ ನೀಡುವ ಮೂಲಕ ಫೋನ್ ಬುಕ್ ಮಾಡಬಹುದಾಗಿದೆ.

English summary
JioPhone will be launched as a single SIM feature phone only. It is said to work with 4G VoLTE networks only.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot