ಭಾರತಕ್ಕೆ ಮತ್ತೊಂದು ಭರ್ಜರಿ ಆಫರ್ ಘೋಷಿಸಿದ 'ಜಿಯೋ'!..ಜುಲೈ 21 ರಿಂದ ಚಾಲನೆ!!

  |

  ಇತ್ತೀಚಿಗಷ್ಟೆ ರಿಲಾಯನ್ಸ್ ಇಂಡಸ್ಟ್ರೀಸ್‌ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾನ್ಸೂನ್ ಆಫರ್‌ಗಳನ್ನು ಘೋಷಿಸಿದ್ದ ಜಿಯೋ ಇದೀಗ ಮತ್ತೊಂದು ಭರ್ಜರಿ ಆಫರ್ ಅನ್ನು ಘೋಷಿಸಿದೆ. ಇದೇ ತಿಂಗಳ 21 ರಿಂದ ಯಾವುದೇ ಫೀಚರ್ ಫೋನ್ ನೀಡಿ, ಅಪ್‌ಡೇಟ್ ಆಗಿರುವ ಜಿಯೋ ಫೋನ್ ಅನ್ನು ಪಡೆಯಬಹುದು ಎಂದು ಜಿಯೋ ಘೋಷಿಸಿದೆ.

  ಭಾರತಕ್ಕೆ ಮತ್ತೊಂದು ಭರ್ಜರಿ ಆಫರ್ ಘೋಷಿಸಿದ 'ಜಿಯೋ'!..ಜುಲೈ 21 ರಿಂದ ಚಾಲನೆ!!

  ಹೌದು, ಜಿಯೋಗೆ ಸಂಬಂಧಿಸಿದಂತೆ ಹಲವು ಘೋಷಣೆಗಳ ಜತೆಗೆ ಜಿಯೋಫೋನ್ ಅಪ್‌ಡೇಟ್ ವಿಷಯವು ಸಹ ನಿಮಗೆ ತಿಳಿದಿರಬಹುದು. ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಈಗ ಯಾವುದೇ ಒಂದು ಫೋನ್ ಅನ್ನು ಈ ಫೋನ್ ಜೊತೆಗೆ ಬದಲಿಸಿಕೊಳ್ಳಬಹುದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಜಿಯೋ ಪೋನ್ ಗೊಂದಲ ಪರಿಹಾರ!

  ಈ ವರೆಗೂ ಹುಟ್ಟಿಕೊಂಡಿದ್ದ ಗೊಂದಲಕ್ಕೆ ಜಿಯೋ ಸ್ಪಷ್ಟ ಉತ್ತರ ನೀಡಿದೆ. ಹಳೆಯ ಜಿಯೋ ಪೋನ್‌ಗೂ ಮತ್ತು ನೂತನ ಜಿಯೋ ಪೋನಿಗೂ ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ, ಈ ಎಕ್ಸ್‌ಚೇಂಜ್ ಮೇಳ ಕೇವಲ ಇತರೆ ಫೀಚರ್‌ಪೋನ್‌ಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಹಳೆ ಜಿಯೋ ಪೋನ್ ಬಳಕೆದಾರರಿಗೆ ಈ ಎಕ್ಸ್‌ಚೇಂಜ್ ಆಫರ್‌ಗೂ ಸಂಬಂಧವಿಲ್ಲ.!

  ಜುಲೈ 21 ರಿಂದ ಚಾಲನೆ!

  ಜುಲೈ 21 ರಿಂದ. ಅಂದರೆ, ನಾಳೆಯಿಂದ ಜಿಯೋ ಫೋನ್ ಎಕ್ಸ್‌ಚೇಂಜ್ ಆಫರ್‌ಗೆ ಚಾಲನೆ ಸಿಗುತ್ತಿದೆ. ದೇಶದಲ್ಲಿನ ಎಲ್ಲಾ ಜಿಯೋ ಸ್ಟೋರ್‌ಗಳಲ್ಲಿಯೂ ಸಹ ಜಿಯೋ ಫೋನ್ ಅನ್ನು ಹಳೆಯ ಫೀಚರ್ ಫೋನಿಗೆ ಬದಲಾಗಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದ್ದು, ಹಳೆಯ ಫೋನ್ ನೀಡಿ ಹೊಸ ಫೋನ್ ಪಡೆದುಕೊಳ್ಳಲು ಕೇವಲ 501 ರೂಪಾಯಿಗಳನ್ನು ಪಾವತಿಸಬೇಕಿದೆ.

  ಈ ಫೋನ್ ಕೂಡ ಉಚಿತ!

  ಹಳೆಯ ಫೀಚರ್ ಫೋನ್ ನೀಡಿ ನೂತನ ಜಿಯೋ ಫೋನ್‌ ಪಡೆಯುವಾಗ ಪಾವತಿಸುವ ಹಣವನ್ನು ಜಿಯೋ ಮತ್ತೆ ವಾಪಸ್ ಮಾಡುವುದಾಗಿ ತಿಳಿಸಿದೆ. ಈಗ ಪಾವತಿಸಿದ 501 ರೂಪಾಯಿಗಳನ್ನು ಡೆಪಾಸಿಟ್ ಎಂದು ಪರಿಗಣಿಸಲಾಗಿದ್ದು, ಮೂರು ವರ್ಷಗಳ ನಂತರ ಮತ್ತೆ 501 ರೂಪಾಯಿ ಹಣವನ್ನು ವಾಪಸ್ ನೀಡುವುದಾಗಿ ಜಿಯೋ ತಿಳಿಸಿದೆ.

  ಕೆಳಗಿನ ಷರತ್ತುಗಳನ್ನು ಪೂರೈಸಬೇಕಿದೆ.

  ಹೊಸ ಜಿಯೋ ಫೋನ್‌ಗೆ ನಿಮ್ಮ ಹಳೆಯ ಫೋನ್ ಅನ್ನು ಬದಲಾಯಸಲು ಈ ಷರತ್ತುಗಳನ್ನು ಪೂರೈಸಬೇಕಿದೆ. ನಿಮ್ಮ ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಕಳೆದ 3.5 ವರ್ಷಗಳ (2015) ಒಳಗೆ ಖರೀದಿಸಿದ ಮೊಬೈಲ್ ಆಗಿರಬೇಕು, ಅದು ಯಾವುದೇ 2ಜಿ, 3ಜಿ, 4ಜಿ (ನಾನ್-ವೋಲ್ಟ್) ಸಾಧನಗಳನ್ನು ವಿನಿಮಯಕ್ಕಾಗಿ ಒಪ್ಪಿಕೊಳ್ಳಲಾಗುತ್ತದೆ.

  ವಿನಿಮಯ ಮಾಡಿಕೊಳ್ಳಲು ನೆನಪಿಡಿ!

  ಹಳೆಯ ಫೀಚರ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಹೋಗುವ ಮುನ್ನ ನೀವು ಈ ಅಂಶಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಹಳೆಯ ಮೊಬೈಲ್ ಫೋನ್ ಕೆಲಸ ಮಾಡುತ್ತಿರಬೇಕು. ಹಳೆಯ ಫೋನ್ ಬ್ಯಾಟರಿ ಮತ್ತು ಚಾರ್ಜರ್ ಹೊಂದಿರಬೇಕು. MNP(ಮೊಬೈಲ್ ನಂಬರ್ ಪೋರ್ಟಬಲಿಟಿ)ಗೆ ಬದಲಾಗಲು ಹೊಸ MNP JIO ಸಂಖ್ಯೆಯಮನ್ನು ಹೊಂದಿರಬೇಕು.

  ಎಕ್ಸ್‌ಚೇಂಜ್ ನಂತರ ಮುಂದೇನು?

  ನಿಮ್ಮ ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡ ನಂತರ, ನಿಮಗೆ ಜಿಯೋ ಸ್ಟೋರ್‌ನಲ್ಲಿ ಹೊಸ ಸಿಮ್ ಅನ್ನು ನೀಡಲಾಗುತ್ತದೆ. ಒಂದು ವೇಳೆ ನಿಮ್ಮ ಹಳೆ ನಂಬರ್ ಅನ್ನು ನೀವು ಉಳಿಸಿಕೊಳ್ಳಲು ಬಯಸಿದರೆ, ನಿಮ್ಮ ಹಳೆಯ ನಂಬರ್‌ ಅನ್ನೇ ಜಿಯೋಗೆ ಪೋರ್ಟ್ ಮಾಡಲಾಗುತ್ತದೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

  ಏನೆಲ್ಲಾ ಆಫರ್‌ಗಳು ಲಭ್ಯ?

  ಹಳೆಯ ಫೋನ್ ಅನ್ನು ಹೊಸ ಜಿಯೋ ಫೋನ್‌ಗೆ ಬದಲಾಯಿಸಿಕೊಂಡವರಿಗೆ, ಮಾನ್ಸೂನ್ ಆಫರ್ ಅಂಗವಾಗಿ ಜಿಯೋ ಹೊಸದಾಗಿ ಎರಡು ಆಫರ್‌ಗಳನ್ನು ನೀಡಿದೆ.! ಜಿಯೋ 594 ರೂಪಾಯಿಗಳ ಆಫರ್ ಅಥವಾ ಜಿಯೋ 99 ರೂಪಾಯಿಗಳ ಆಫರ್‌ಗಳು ಕ್ರಮವಾಗಿ, ಒಂದು ತಿಂಗಳು ಮತ್ತು ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿವೆ.

  ಜಿಯೋ 594 ರೂ. ಆಫರ್!

  ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ 594 ರೂಪಾಯಿಗಳಿಗೆ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ನೀಡಿದೆ. ಒಮ್ಮೆ 594 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಂಡರೆ, ಆರು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಒಟ್ಟಾರೆ 90GB ಹೈಸ್ಪೀಡ್ ಡೇಟಾವನ್ನು ಒಳಗೊಂಡಿದೆ.

  ಜಿಯೋ 99 ರೂ. ಆಫರ್!

  ಎಕ್ಸ್‌ಚೇಂಜ್ ಜಿಯೋ ಫೋನ್ ಖರೀದಿಸಿದವರಿಗೆ ಜಿಯೋ ನೀಡಿರುವ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಆಫರ್ ಇದಾಗಿದೆ. 99 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಒಂದು ತಿಂಗಳು ಅನ್‌ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 0.5GB ಸ್ಪೀಡ್ ಡೇಟಾ ದೊರೆಯಲಿದೆ.

  ಆಗಸ್ಟ್ 15 ಕ್ಕೆ ಅಪ್‌ಡೇಟ್!!

  ಜನಪ್ರಿಯ ಆಪ್‌ಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಯೂಟ್ಯೂಬ್‌ಗಳನ್ನು ಸಹ ಈಗ ಜಿಯೋ ಫೋನಿನಲ್ಲಿ ಬಳಸಬಹುದಾಗಿದ್ದು, ಆಗಸ್ಟ್ 15 ಕ್ಕೆ ಜಿಯೋ ಫೋನ್ ಅಪ್‌ಡೇಟ್ ಆಗಲಿದೆ ಎಂದು ಜಿಯೋ ತಿಳಿಸಿದೆ. ಹಳೆಯ ಮತ್ತು ಈಗ ನೀಡಿರುವ ಎಲ್ಲಾ ಫೋನ್‌ಗಳಲ್ಲಿಯೂ ಹೊಸ ಅಪ್‌ಡೇಟ್ ಸಿಗಲಿದೆ ಎಂದು ಜಿಯೋ ಸ್ಪಷ್ಟಪಡಿಸಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  JioPhone Monsoon Hungama offer: JioPhone will be available for Rs 501 but there is a catch. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more